ಉದಯರಶ್ಮಿ ದಿನಪತ್ರಿಕೆ
ಯಡ್ರಾಮಿ: ಪಟ್ಟಣದ ವಿರಕ್ತಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಯಡ್ರಾಮಿಯಿಂದ ಶ್ರೀಶೈಲ ಪಾದಯಾತ್ರೆಯ ಪ್ರಥಮ ದಿನವಾದ ಬುಧವಾರದಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಚಾಲನೆ ನೀಡಿದರು.
ನಂತರ ಸುಂಬಡ ಮಾರ್ಗವಾಗಿ ತೆರಳಿ, ಹಂಗರಗಾ(ಕೆ) ಗ್ರಾಮದ ಸದ್ಭಕ್ತರಾದ ಶ್ರೀ ಸಿದ್ದಣ್ಣ ಸಾಹು ಹೂಗಾರ ಅವರ ಮನೆಯಲ್ಲಿ ಎಲ್ಲ ಪಾದಯಾತ್ರಿಗಳು ಪ್ರಸಾದ ಸ್ವೀಕರಿಸಿದರು.
ನಂತರ ಬಳಬಟ್ಟಿ, ಅಂಬರಖೇಡ ಮಾರ್ಗವಾಗಿ ತೆರಳಿ ಉಕ್ಕನಾಳ ಗ್ರಾಮದಲ್ಲಿ ವಾಸ್ತವ್ಯ ಮಾಡಲಾಯಿತು.
ಈ ವೇಳೆ ಮಹಾನಿಂಗಪ್ಪಗೌಡ ಬಂಡೆಪ್ಪಗೌಡ್ರ, ಚಂದ್ರಶೇಖರ ಪುರಾಣಿಕ, ಎನ್.ಆರ್.ಪಾಟೀಲ, ನಾಗಣ್ಣ ಹಾಗರಗುಂಡಗಿ, ಬಸವರಾಜ ಹೂಗಾರ, ಸಿದ್ರಾಮಪ್ಪಗೌಡ ಮಾಲಿಪಾಟೀಲ, ದೇವಿಂದ್ರಪ್ಪಗೌಡ ಸರಕಾರ, ತಿಪ್ಪಣ್ಣ ಸಾಹು ಹೆಬ್ಬಾಳ, ಮಲ್ಲಿಕಾರ್ಜುನ ಹಲಕರ್ಟಿ, ಶಂಬುಲಿಂಗ ಸಾಹು ತಾಳಿಕೋಟಿ, ಇಬ್ರಾಹಿಂಸಾಬ್ ಉಸ್ತಾದ್, ರಾಜಶೇಖರ ಡಗ್ಗಾ, ರೇವಣಸಿದ್ದ ಅಂಕಲಕೋಟಿ, ಅದಾಮ, ಆನಂದ ಯತ್ನಾಳ, ಶಾಂತಗೌಡ ಜವಳಗಿ, ಚನ್ನವೀರಪ್ಪಗೌಡ ಬಂಡೆಪ್ಪಗೌಡ್ರ, ಬಸ್ಸಯ್ಯಸ್ವಾಮಿ ಹೊರಗಿನಮಠ, ಮಂಜುನಾಥ ಕುಲಕರ್ಣಿ, ನದೀಮ ಮಳ್ಳೀಕರ ಇದ್ದರು.

