ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪೂಜ್ಯ ಶ್ರೀಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ಸಾರಂಗಮಠ-ಗಚ್ಚಿನಮಠದ ವತಿಯಿಂದ ೩೩೮ನೆಯ ಸದ್ವಿಚಾರಗೋಷ್ಠಿಯನ್ನು ಜ.೧೩ರ ಬನದ ಹುಣ್ಣಿಮೆ ದಿನದಂದು ಸಾಯಂಕಾಲ ೬:೩೦ಗಂಟೆಗೆ ಶ್ರೀಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮ ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯುರ ದಿವ್ಯ ಸಾನಿಧ್ಯದಲ್ಲಿ ವಹಿಸಿಕೊಳ್ಳಲಿದ್ದಾರೆ. ಹಾಗೂ ಶ್ರೀಪದ್ಮರಾಜ ಮಹಿಳಾ ಮಹಾವಿದ್ಯಾಲಯದ ರಾಜ್ಯಶಾಸ್ತç ಉಪನ್ಯಾಸಕ ಗಿರೀಶ ಎಸ್.ಕುಲಕರ್ಣಿ ಮಕರ ಸಂಕ್ರಮಣದ ಮಹತ್ವ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಬಿ.ಎಸ್.ಡಬ್ಲೂö್ಯ ಪರೀಕ್ಷೆಯಲ್ಲಿ ರ‍್ಯಾಂಕ ಬಂದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ೩ನೆಯ ರ‍್ಯಾಂಕ ಪಡೆದ ಐಶ್ವರ್ಯ ತಮದೊಡ್ಡಿ, ೪ನೆಯ ರ‍್ಯಾಂಕ ಪಡೆದ ವಿದ್ಯಾಶ್ರೀ ಪಡಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು. ಕಾರಣ ತಾಲೂಕಿನ ಶ್ರೀಮಠದ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ದಾಸೋಹ ಸೇವೆಯನ್ನು ಲಿಂ.ಹೊನ್ನಪ್ಪಗೌಡ ಬಿರಾದಾರ ಅವರ ಸ್ಮರಣಾರ್ಥ ದಯಾನಂದಗೌಡ ಬಿರಾದಾರ, ಲಿಂ.ಬಸಪ್ಪ ಲೋಣಿ ಅವರ ಸ್ಮರಣಾರ್ಥ ಬಂಡೆಪ್ಪ ಲೋಣಿ, ಲಿಂ.ಶಂಭುಲಿಂಗಯ್ಯ ಮಠ ಹಾಗೂ ಧರ್ಮಪತ್ನಿ ವಿಮಲಾ ಮಠ ಅವರ ಸ್ಮರಣಾರ್ಥ ಸುಧಾರಾಣಿ ಮಠ ಅವರು ಮಾಡಲಿದ್ದಾರೆ ಎಂದು ಪೂಜ್ಯ ಶ್ರೀ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನದ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

