Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026

ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ

ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಶರಣರ ಸಂಸ್ಕೃತಿ, ಬಸವಣ್ಣನವರನ್ನು ಉಳಿಸಿಕೊಳ್ಳಲು ಹೋರಾಡಬೇಕಿದೆ
(ರಾಜ್ಯ ) ಜಿಲ್ಲೆ

ಶರಣರ ಸಂಸ್ಕೃತಿ, ಬಸವಣ್ಣನವರನ್ನು ಉಳಿಸಿಕೊಳ್ಳಲು ಹೋರಾಡಬೇಕಿದೆ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನೆ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಅಭಿಮತ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಇತ್ತೀಚಿಗೆ ಪೇಜಾವರ ಶ್ರೀಗಳು ಮಂಗಳೂರಿನಲ್ಲಿ ಆಯೋಜಿಸಿದ ವಚನ ಸಾಹಿತ್ಯ ಸಮ್ಮೇಳನದಲ್ಲಿ ಬಸವ ಸಮಿತಿಯ ಅಧ್ಯಕ್ಷ ಡಾ ಅರವಿಂದಣ್ಣ ಜತ್ತಿ ಅವರು ಪಾಲ್ಗೊಂಡಿದ್ದು ದುರಂತದ ಸಂಗತಿ. 900 ವರ್ಷಗಳ ಮೇಲೆ ವೈದಿಕರಿಗೆ ಬಸವಣ್ಣವರನ್ನು ತಮ್ಮ ಸಭೆ ಸಮಾರಂಭದಲ್ಲಿ ತರುವ ಚಿಂತಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ, ಬಸವ ಭಕ್ತರು ಯಾವ ಆಚಾರ್ಯತ್ರಯರ ವಿರೋಧಿಗಳಲ್ಲ, ಆದರೆ ಅವರ ತತ್ವ ಸಿದ್ಧಾಂತಗಳನ್ನು ಒಪ್ಪುವುದಿಲ್ಲ. ಆದರೆ ಪೌರೋಹಿತ್ಯ ಪ್ರಧಾನವಾದ ವೈದಿಕರು ಬಸವಣ್ಣನವರನ್ನು ಒಪ್ಪುವದಿಲ್ಲ ಮತ್ತು ಶರಣರ ತತ್ವ ಸಿದ್ಧಾಂತಗಳನ್ನು ದ್ವೇಷಿಸುತ್ತಾರೆ ವಿರೋಧಿಸುತ್ತಾರೆ. ಹೀಗಿದ್ದಾಗ ವೇದಿಕೆಯ ಮೇಲೆ ಪೇಜಾವರ ಶ್ರೀಗಳು ವಚನಗಳು ವೇದ ಶಾಸ್ತ್ರಗಳ ಕನ್ನಡೀಕರಣವಾಗಿದೆ ಎಂದು ಹೇಳಿದಾಗ ತುಟಿ ಪಿಟಕ್ಕೆನ್ನದೆ ಮೌನವಾಗಿದ್ದ ಡಾ ಅರವಿಂದ ಜತ್ತಿ ಅವರ ನಡೆಯು ಅನೇಕರಲ್ಲಿ ಸಂಶಯ ಮೂಡಿಸಿದೆ ಎಂದು ಬಸವ ತಿಳುವಳಿಕೆ ಮತ್ತು ಸಂಶೋಧನೆ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬುಧವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಪೂಜ್ಯ ಪೇಚಾವರ ಶ್ರೀಗಳೇ ಮಂಗಳೂರಿನಲ್ಲಿ ನಡದ ವಚನ ಸಾಹಿತ್ಯ ಸಮ್ಮೇಳನದಲ್ಲಿ ಶರಣರು ಶಾಸ್ತ್ರಗಳಲ್ಲಿ ಇರುವುದನ್ನೇ ಕನ್ನಡದಲ್ಲಿ ಮನೆಮನೆಗೆ ತಲುಪಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಪೂಜ್ಯ ಪೇಜಾವರ ಶ್ರೀಗಳಿಗೆ ಕೆಲವು ವಚನಗಳ ಅರ್ಥ ಗೊತ್ತಾಗುತ್ತಿಲ್ಲ ಅಂತ ಕಾಣಿಸುತ್ತದೆ.
ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ ವೇದ ನಾಡು ನಡುಗಿತ್ತು ಎಂಬ ಬಸವಣ್ಣನವರ ಆಶಯ ವಚನ ಅರ್ಥವಾಗುವದಿಲ್ಲವೇ ?
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವ, ಆಗಮದ ಮೂಗ ಕೊಯಿವೆ, ನೋಡಯ್ಯಾ. ಮಹಾದಾನಿ ಕೂಡಲಸಂಗಮದೇವಾ, ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.
ವೇದಂಗಳೆಲ್ಲ ಬ್ರಹ್ಮನೆಂಜಲು, ಶಾಸ್ತ್ರಂಗಳೆಲ್ಲ ಸರಸ್ವತಿಯೆಂಜಲು, ಆಗಮಂಗಳೆಲ್ಲ ರುದ್ರನೆಂಜಲು, ಪುರಾಣಂಗಳೆಲ್ಲ ವಿಷ್ಣುವಿನೆಂಜಲು, ನಾದಬಿಂದುಕಳೆಗಳೆಂಬವು ಅಕ್ಷರತ್ರಯದೆಂಜಲು, ಅಕ್ಷರತ್ರಯಂಗಳು ಪ್ರಕೃತಿಯ ಎಂಜಲು. ಇಂತಿವೆಲ್ಲವ ಹೇಳುವರು ಕೇಳುವರು ಪುಣ್ಯಪಾಪಂಗಳೆಂಜಲೆಂದಾತನಂಬಿಗರ ಚೌಡಯ್ಯ.
ನಾಲ್ಕು ವೇದವನೋದಿದನಂತರ ಮನೆಯ ಬೋನವ ಶಿವಭಕ್ತರ ಮನೆಯಲ್ಲಿರುವ ನಾಯಿ ಮೂಸಿ ನೋಡಲಾಗದು. ಸಾಮವೇದಿ ಹೋಗುತ್ತಿರಲು ಶ್ವಪಚಯ್ಯಗಳು ತಮ್ಮ ಪಾದುಕದಿಂದ ಪಾಕವ ಮುಚ್ಚಿದರು. `ಶ್ವಾನೋ ಶ್ರೇಷವೆಂದು ಇಕ್ಕಿದೆನು ಮುಂಡಿಗೆಯ. ಎತ್ತಿರೋ ಜಗದ ಸಂತೆಯ ಸೂಳೆಯ ಮಕ್ಕಳು. ಜಗಕ್ಕೆ ಪಿತನೊಬ್ಬನಲ್ಲದೆ ಇಬ್ಬರೆಂದು ಬೊಗಳುವರ ಮೋರೆಯ ಮೇಲೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು. ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ, ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ, ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ ! ತೊಟ್ಟಿಲು ಮುರಿದು ನೇಣು ಹರಿದು, ಜೋಗುಳ ನಿಂದಲ್ಲದೆ, ಗುಹೇಶ್ವರನೆಂಬ ಲಿಂಗವ ಕಾಣಬಾರದು ವೇದ ಘನವೆಂಬುದೊಂದು ಸಂಪಾದನೆ. ಶಾಸ್ತ್ರ ಘನವೆಂಬುದೊಂದು ಸಂಪಾದನೆ. ಪುರಾಣ ಘನವೆಂಬುದೊಂದು ಸಂಪಾದನೆ. ಆಗಮ ಘನವೆಂಬುದೊಂದು ಸಂಪಾದನೆ. ಅಹುದೆಂಬುದೊಂದು ಸಂಪಾದನೆ. ಅಲ್ಲವೆಂಬುದೊಂದು ಸಂಪಾದನೆ. ಗುಹೇಶ್ವರನೆಂಬ ಮಹಾಘನದ ನಿಜಾನುಭಾವಸಂಪಾದನೆಯ ಅರಿಯದ ಕಾರಣ ಹಲವು ಸಂಪಾದನೆಗಳಾದವು. ವೇದವೆಂಬುದು ಓದಿನ ಮಾತು; ಶಾಸ್ತ್ರವೆಂಬುದು ಸಂತೆಯ ಸುದ್ದಿ. ಪುರಾಣವೆಂಬುದು ಪುಂಡರ ಗೋಷಿ, ತರ್ಕವೆಂಬುದು ತಗರ ಹೋರಟೆ. ಭಕ್ತಿ ಎಂಬುದು ತೋರಿ ಉಂಬ ಲಾಭ. ಗುಹೇಶ್ವರನೆಂಬುದು ಮೀರಿದ ಘನವು
ವೇದ ವೇಧಿಸಲರಿಯದೆ ಕೆಟ್ಟವು, ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು, ಪುರಾಣ ಪೂರೈಸಲರಿಯದೆ ಕೆಟ್ಟವು. ಹಿರಿಯರು ತಮ್ಮ ತಮ್ಮ(ತಾವು ?) ಅರಿಯದೆ ಕೆಟ್ಟರು: ತಮ್ಮ ಬುದ್ಧಿ ತಮ್ಮನ್ನೇ ತಿಂದಿತ್ತು. ನಿಮ್ಮನೆತ್ತ ಬಲ್ಲರೊ ಗುಹೇಶ್ವರಾ ?
ವೇದಂಗಳೆಂಬವು ಬ್ರಹ್ಮನ ಬೂತಾಟ. ಶಾಸ್ತ್ರಂಗಳೆಂಬವು ಸರಸ್ವತಿಯ ಗೊಡ್ಡಾಟ. ಆಗಮಗಳೆಂಬವು ಋಷಿಯ ಮರುಳಾಟ. ಪುರಾಣಗಳೆಂಬವು ಪೂರ್ವದವರ ಗೊಡ್ಡಾಟ (ಒದ್ದಾಟ?) ಇಂತು ಇವನು ಅರಿದವರ ನೇತಿಗಳೆದು ನಿಜದಲ್ಲಿ ನಿಂದಿಪ್ಪಾತನೆ ಗುಹೇಶ್ವರನಲ್ಲಿ ಅಚ್ಚಲಿಂಗೈಕ್ಯನು !
ವೇದಂಗಳ ಹಿಂದೆ ಹರಿಯದಿರು ಹರಿಯದಿರು. ಶಾಸ್ತ್ರಂಗಳ ಹಿಂದೆ ಸುಳಿಯದಿರು ಸುಳಿಯದಿರು. ಪುರಾಣಂಗಳ ಹಿಂದೆ ಬಳಸದಿರು ಬಳಸದಿರು. ಆಗಮಂಗಳ ಹಿಂದೆ ತೊಳಲದಿರು ತೊಳಲದಿರು. ಸೌರಾಷ್ಟ್ರ ಸೋಮೇಶ್ವರನ ಕೈವಿಡಿದು ಶಬ್ದಜಾಲಂಗಳಿಗೆ ಬಳಲದಿರು, ಬಳಲದಿರು.
ಶಾಸ್ತ್ರವೆಂಬುದು ಮನ್ಮಥಶಸ್ತ್ರವಯ್ಯಾ. ವೇದಾಂತವೆಂಬುದು ಮೂಲ ಮನೋವ್ಯಾಧಿಯಯ್ಯಾ. ಪುರಾಣವೆಂಬುದು ಮೃತವಾದವರ ಗಿರಾಣವಯ್ಯಾ. ತರ್ಕವೆಂಬುದು ಮರ್ಕಟಾಟವಯ್ಯಾ. ಆಗಮವೆಂಬುದು ಯೋಗದ ಘೋರವಯ್ಯಾ. ಇತಿಹಾಸವೆಂಬುದು ರಾಜರ ಕಥಾಭಾಗವಯ್ಯಾ. ಸ್ಮøತಿಯೆಂಬುದು ಪಾಪಪುಣ್ಯವಿಚಾರವಯ್ಯಾ. ಆದ್ಯರ ವಚನವೆಂಬುದು ಬಹುವೇದ್ಯವಯ್ಯಾ, ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ತಿಳಿಯಕ್ಕೆ.
ನಮ್ಮ ನಡಾವಳಿಗೆ ನಮ್ಮ ಪುರಾತರ ನುಡಿಯೆ ಇಷ್ಟವಯ್ಯಾ.ಸ್ಮೃತಿಗಳು ಸಮುದ್ರದ ಪಾಲಾಗಲಿ; ಶ್ರುತಿಗಳು ವೈಕುಂಠವ ಸೇರಲಿ; ಪುರಾಣಗಳು ಅಗ್ನಿಯ ಸೇರಲಿ; ಆಗಮಗಳು ವಾಯುವ ಹೊಂದಲಿ. ಎಮ್ಮ ನುಡಿ, ಕಪಿಲಸಿದ್ಧಮಲ್ಲಿಕಾರ್ಜುನ ಮಹಾಲಿಂಗದ ಹೃದಯದೊಳು ಗ್ರಂಥಿಯಾಗಿರಲಿ.
ಇಂಥಹ ಐದುನೂರು ಅಧಿಕ ವಚನಗಳು ನಾವು ಕಾಣುತ್ತೇವೆ ದಯವಿಟ್ಟು ನಿಮ್ಮ ನಿಮ್ಮ ವೈದಿಕ ಧರ್ಮದ ಪ್ರಸಾರ ಮಾಡಿ ವಚನಗಳು ವೇದಗಳು ಇಂದಿಗೂ ಒಟ್ಟಿಗೆ ಹೋಗುವದಿಲ್ಲ ಅವರೆಡರ ಮಾರ್ಗವೇ ಬೇರೆ ಬೇರೆ ಎಂದಿದ್ದಾರೆ.
ಲಿಂಗಾಯತ ಮಠಗಳೂ ಇಂದು ವೈದಿಕ ವ್ಯವಸ್ಥೆಯ ಪ್ರಭಾವಕ್ಕೆ ಒಳಪಟ್ಟಿವೆ. ಯಾವೊಬ್ಬ ಬಸವ ಪ್ರಣೀತ ಸ್ವಾಮೀಜಿ ರಾಜಕಾರಣಿ ಇಂತಹ ನಡೆಯನ್ನು ಖಂಡಿಸಿಲ್ಲ, ಅರವಿಂದಣ್ಣವರ ಆರೋಗ್ಯ ಸುಧಾರಿಸಲಿ, ಬಸವ ಸಮಿತಿಯಲ್ಲಿ ಆಚಾರ್ಯರ ವೃಂದಾವನ ಸ್ಥಾಪಿಸ ಬಹುದು. ಪೇಜಾವರ ಶ್ರೀಗಳು ಮೊದಲು ವಚನ ಸಾಹಿತ್ಯವನ್ನು ಗಂಭೀರವಾಗಿ ಓದಲಿ, ಅವರೂ ಪರಿವರ್ತನೆಗೊಂಡು ಎಲ್ಲ ಸಾಂಪ್ರದಾಯಿಕ ಆಚರಣೆಗಳನ್ನು ಬಿಟ್ಟು ಬಸವಣ್ಣನವರಂತೆ
ಅಸಮಾನತೆಯ ವಿರುದ್ಧ ಹೋರಾಡಲಿ, ತಮ್ಮ ಶ್ರೀ ಮಠದಲ್ಲಿ ವಚನಸಾಹಿತ್ಯ ಲೈಬ್ರರಿ ಮತ್ತು ಅಧ್ಯಯನ ಕೇಂದ್ರ ಆರಂಭಿಸಲಿ, ಸಾಧ್ಯವಾದರೆ ಬಸವಣ್ಣವರ ಪುತ್ತಳಿ ಇಲ್ಲವೇ ಅವರ ಭಾವ ಚಿತ್ರವನ್ನು ಗೌರವಪೂರ್ವಕ ಸ್ಥಾನದಲ್ಲಿಡಲು ಮನವಿ ಮಾಡಿದ್ದಾರೆ.
ಲಿಂಗಾಯತ ಇದು ಶ್ರಮಿಕರ, ದಲಿತರ, ಶೋಷಿತರ, ಕಾರ್ಮಿಕರ, ರೈತರ, ಮಹಿಳೆಯರ ಮೂಲ ನಿವಾಸಿಗಳ, ದಮನಿತರ ಚಳುವಳಿ, ಬುದ್ಧ ಭಾರತ ಬಿಟ್ಟು ಹೋದಂತೆ ಮಹಾವೀರರನ್ನು ಆಪೋಶನಗೊಳಿಸಿದಂತೆ, ಬಸವಣ್ಣನವರನ್ನು ನೀವು ಯಾಮಾರಿಸಲಾರಿರಿ. ಬಸವಣ್ಣ ಜಗವು ಕಂಡ ಅಪ್ರತಿಮ ಬಂಡುಕೋರ ಮತ್ತು ಸಮಾಜವಾದಿ ಚಿಂತಕ.
ಬಂಧುಗಳೇ ವಚನದರ್ಶನ ಎಂಬ ಅತ್ಯಂತ ವಿವಾದಾಸ್ಪದ ಕೃತಿಯನ್ನು ಪ್ರಕಟ ಮಾಡಿದರು, ಯಾವ ಪರಿಣಾಮ ಬೀರಲಿಲ್ಲ, ಶರಣರ ಶಕ್ತಿ ಎಂಬ ಅತ್ಯಂತ ಕಳಪೆ ಚಲನ ಚಿತ್ರವನ್ನು ಇವೆ ಮನಸ್ಸುಗಳು ಸಿದ್ಧ ಪಡಿಸಿದವು, ಎಲ್ಲಾ ಪ್ರಯತ್ನಗಳು ಸೋತು ಸುಣ್ಣವಾದಾಗ ಈಗ ವೈದಿಕರ ಅಂಗಳದಲ್ಲಿ ವಚನ ಸಾಹಿತ್ಯ ಸಮ್ಮೇಳನ ಅದೂ ಬಸವ ಸಮಿತಿಯ ಅರವಿಂದ ಜತ್ತಿ ಅವರ ಸಮ್ಮುಖದಲ್ಲಿ ನಡೆಸುತ್ತಿರುವುದು ಅತ್ಯಂತ ನೋವಿನ ಸೂಕ್ಷ್ಮ ವಿಚಾರವಾಗಿದೆ. ಬಸವ ಭಕ್ತರು ಅಂದು ಕಲ್ಯಾಣ ಕ್ರಾಂತಿಯಲ್ಲಿ ಶರಣರು ತಮ್ಮ ಜೀವದ ಹಂಗು ತೊರೆದು ವಚನಗಳನ್ನು ಸಂರಕ್ಷಿಸಿದಂತೆ ಇಂದು ಪ್ರತಿಯೊಬ್ಬರೂ ನಮ್ಮ ಶರಣರ ಸಂಸ್ಕೃತಿ ಬಸವಣ್ಣನವರನ್ನು ಉಳಿಸಿಕೊಳ್ಳಲು ಹೋರಾಡಬೇಕಿದೆ ಎಂದು ಡಾ.ಶಶಿಕಾಂತ ಪಟ್ಟಣ ಅಭಿಪ್ರಾಯಪಟ್ಟಿದ್ದಾರೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026

ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ

ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ

ಏ.15 ರಿಂದ ಬಸವ ಜಯಂತಿ ಕಾರ್ಯಕ್ರಮ & ಓಲೆಮಠದ ಜಾತ್ರಾ ಮಹೋತ್ಸವ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026
    In ದಿನಪತ್ರಿಕೆ
  • ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ
    In (ರಾಜ್ಯ ) ಜಿಲ್ಲೆ
  • ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ
    In (ರಾಜ್ಯ ) ಜಿಲ್ಲೆ
  • ಏ.15 ರಿಂದ ಬಸವ ಜಯಂತಿ ಕಾರ್ಯಕ್ರಮ & ಓಲೆಮಠದ ಜಾತ್ರಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ಕಲಾಶ್ರೀ ಚವ್ಹಾಣ ಗೆ ಅಭಿನಂದಿಸಿದ ಡಾ.ಸುರೇಖಾ
    In (ರಾಜ್ಯ ) ಜಿಲ್ಲೆ
  • ಸಚಿವ ಎಂ. ಬಿ. ಪಾಟೀಲ ಅವರ ಪ್ರವಾಸ ವಿವರ
    In (ರಾಜ್ಯ ) ಜಿಲ್ಲೆ
  • ನ್ಯಾಯ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುವ ನಿಖರ ತನಿಖೆ & ದೃಢ ಸಾಕ್ಷಿ
    In (ರಾಜ್ಯ ) ಜಿಲ್ಲೆ
  • ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾದಪೊಲೀಸ್ ಅಧಿಕಾರಿಗಳು
    In (ರಾಜ್ಯ ) ಜಿಲ್ಲೆ
  • ಯಡ್ರಾಮಿ ಬಸವೇಶ್ವರ ಜಾತ್ರೆಯ ಅದ್ದೂರಿ ರಥೋತ್ಸವ ಸಂಪನ್ನ
    In (ರಾಜ್ಯ ) ಜಿಲ್ಲೆ
  • ಪರೀಕ್ಷಾ ಪ್ರಕ್ರಿಯೆಯ ಪ್ರತಿ ಹಂತ ವೀಕ್ಷಿಸಿದ ಜಿ.ಪಂ. ಸಿಇಒ ರಿಷಿ ಆನಂದ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.