ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಹಿರೇಮಠಕ್ಕೆ ಮಂಗಳವಾರ ರಾತ್ರಿ ಭೇಟಿ ನೀಡಿದ ನ್ಯೂಯಾರ್ಕ್ ರಾಜ್ಯದ ರೋಚೆಸ್ಟ್ ಜಿಲ್ಲೆಯ ಪಿಡ್ಸ್‌ಪೋರ್ಡ್ ಕೌನ್ಸಿಲರ್‌ಯಾಗಿ ಆಯ್ಕೆಯಾದ ನವೀನ ಹಾವಣ್ಣವರ ಅವರನ್ನು ಶ್ರೀಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ನವೀನ ಹಾವಣ್ಣವರ ಮೂಲತಃ ಮನಗೂಳಿ ಪಟ್ಟಣದವರು. ರೈತ ಕುಟುಂಬದಲ್ಲಿ ಜನಿಸಿದ ಇವರು ತಮ್ಮ ಕ್ರಿಯಾಶೀಲತೆಯಿಂದಾಗಿ ಇಂದು ಅಮೇರಿಕಾದ ನ್ಯೂಯಾರ್ಕ್ ರಾಜ್ಯದ ರೋಚೆಸ್ಟ್ ಜಿಲ್ಲೆಯ ಪಿಡ್ಸ್‌ಪೋರ್ಡ್‌ಕ್ಕೆ ೩೩ ಮತಗಳನ್ನು ಪಡೆದು ಕೌನ್ಸಿಲರ್‌ಯಾಗಿ ಆಯ್ಕೆಯಾಗಿರುವದು ಮನಗೂಳಿ ಪಟ್ಟಣಕ್ಕೆ ಹೆಮ್ಮೆಯ ಸಂಗತಿ. ಪ್ರತಿಯೊಬ್ಬ ರೈತನ ಮಕ್ಕಳು ಏನಾದರೂ ಸಾಧನೆ ಮಾಡಬೇಕೆಂಬುವದಕ್ಕೆ ಇವರು ಪ್ರೇರಣೆಯಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಶ್ರೀಶೈಲ ಮನಗೂಳಿ, ಶ್ರವಣ ಕೊಟ್ಯಾಳ, ರಮೇಶ ಹಾವಣ್ಣವರ, ಮಂಜು ಬನಸೋಡೆ, ಮಹಾಂತೇಶ ಮನಗೂಳಿ, ಭೀಮು ಬನ್ನೂರ ಇತರರು ಇದ್ದರು.

