ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಅಡಿ ನಡೆಯುವ ಸಿಂದಗಿ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯವು ೨೦೨೪-೨೩ನೆಯ ಸಾಲಿನ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯ ಕೊಡ ಮಾಡುವ ಐದು ರ‍್ಯಾಂಕಗಳಲ್ಲಿ ಬಿ.ಎಸ್.ಡಬ್ಲೂö್ಯ ವಿಭಾಗದ ವಿದ್ಯಾರ್ಥಿನಿಯರಾದ ಐಶ್ವರ್ಯ ತಮದೊಡ್ಡಿ ರಾಜ್ಯಕ್ಕೆ ಮೂರನೆಯ ರ‍್ಯಾಂಕ್, ವಿದ್ಯಾಶ್ರೀ ಪಡಶೆಟ್ಟಿ ನಾಲ್ಕನೆಯ ರ‍್ಯಾಂಕ್ ಪಡೆದುಕೊಂಡು ಮಹಾವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿದ್ಯಾರ್ಥಿನಿಯರ ಕಠಿಣ ಪರಿಶ್ರಮ, ಕಾಲೇಜಿನ ಉಪನ್ಯಾಸಕರ ಅತ್ಯುತ್ತಮ ಭೋಧನೆ ಇಷ್ಟೊಂದು ರ‍್ಯಾಂಕ್‌ಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ಶ್ರೀಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಚೇರಮನ್‌ರಾದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಪ್ರತಿಕ್ರಿಯಿಸಿ, ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದ್ದಾರೆ.
ವಿದ್ಯಾರ್ಥಿನಿಯರ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು, ಪ್ರಾಚಾರ್ಯ ಎಸ್.ಎಂ.ಪೂಜಾರಿ, ಉಪನ್ಯಾಸಕ, ಪತ್ರಿಕಾ ಪ್ರತಿನಿಧಿ ಮಹಾಂತೇಶ ನೂಲಾನವರ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿನಿಯರಿಗೆ ಶುಭ ಕೋರಿದ್ದಾರೆ.

