ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಕರ್ನಾಟಕ ಕೋ ಆಫ್ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಚನ್ನಪ್ಪಗೌಡ ಲಕ್ಕನಗೌಡ ಬಿರಾದಾರ ಹಾಗೂ ಉಪಾಧ್ಯಕ್ಷರಾಗಿ ಗುರಲಿಂಗಪ್ಪಗೌಡ ಭಿಕ್ಷಪ್ಪ ಪಾಟೀಲ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಆಯ್ಕೆ ಪ್ರಕ್ರಿಯೆಯ ಬಳಿಕ ಊರಿನ ಹಿರಿಯರು, ವರ್ತಕರು, ಉದ್ಯಮಿಗಳು, ಹಿಂದಿನ ಆಡಳಿತ ಸಮಿತಿಯ ಸದಸ್ಯರು ಮತ್ತು ಸ್ನೇಹಿತರು ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸುವ ಮೂಲಕ ಶುಭ ಹಾರೈಸಿದರು.
ಆಡಳಿತ ಸಮಿತಿಯ ಸದಸ್ಯರಾದ ಪ್ರಭುದೇವ ಕಲಬುರ್ಗಿ, ಸತೀಶ ಓಸ್ವಾಲ, ಸಂಗನಗೌಡ ಬಿರಾದಾರ, ರಾಜಶೇಖರ ಕರಡ್ಡಿ, ಚಂದ್ರಶೇಖರ ಸಜ್ಜನ, ಅಜಿತ ನಾಗಠಾಣ, ನಿಂಗಪ್ಪ ಚಟ್ಟೇರ, ಶ್ರೀಕಾಂತ ಛಲವಾದಿ, ಶ್ರೀಶೈಲ ಪೂಜಾರಿ, ರಕ್ಷಿತಾ ಬಿದರಕುಂದಿ, ವಿಜಯಲಕ್ಷ್ಮಿ ಬೂದಿಹಾಳಮಠ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿದರಕುಂದಿ, ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಗಣ್ಯರಾದ ಮಹಾಂತಪ್ಪ ನಾವದಗಿ, ಬಸನಗೌಡ ಪಾಟೀಲ್, ದಾನಪ್ಪ ನಾಗಠಾಣ, ರಮೇಶ ಕುಮಾರ ಓಸ್ವಾಲ್, ಭೀಮಣ್ಣ ಬಿರಾದಾರ, ಗುಲಾಬಚಂದ ಒಸ್ವಾಲ್, ನಿಂಗರಡ್ಡಿ ಮಂಗ್ಯಾಳ, ಪ್ರಭುಗೌಡ ಬಿರಾದಾರ, ಆರ್.ಬಿ. ಪಾಟೀಲ, ಮುತ್ತಣ್ಣ ಪ್ಯಾಟಿಗೌಡರ ಸೇರಿದಂತೆ ಮತ್ತೀತರರು ಇದ್ದರು.

