Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಇಂಡಿ: ಅಂಚೆ ಇಲಾಖೆ ಹಲವು ವರ್ಷಗಳಿಂದ ಕೇವಲ ಸಂವಹನ ಹಾಗೂ ಪತ್ರವ್ಯವಹಾರಗಳ ನಿರ್ವಹಣೆಗೆ ಸೀಮಿತವಾಗಿತ್ತು. ಆದರೆ ಇಂದು ಬ್ಯಾಂಕ್‌ಗಳಂತೆ ಭ್ರಷ್ಟಾಚಾರರಹಿತ, ಸಾರ್ವಜನಿಕ ಆರ್ಥಿಕತೆ ವ್ಯವಹಾರಗಳ, ಜನಸ್ನೇಹಿ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿದೆ, ಎಂದು ವಿಜಯಪೂರ ಜಿಲ್ಲೆಯ ಅಂಚೆ ಅಧೀಕ್ಷಕ ಎಂ ಕುಮಾರಸ್ವಾಮಿ ಹೇಳಿದರು.ತಾಲೂಕೀನ ತಡವಲಗಾ ಗ್ರಾಮದ ಅಂಚೆ ಕಛೇರಿ ಆವರಣದಲ್ಲಿ ನಡೆದ ತಡವಲಗಾ ಉಪ ಅಂಚೆ ಕಛೇರಿಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಡವಲಗಾ ಗ್ರಾಮದಲ್ಲಿ ಉಪ ಅಂಚೆ ಕಛೇರಿಯಾಗಿ ಒಂದು ವರ್ಷವಾಗಿದೆ. ಲಿಂಗದಳ್ಳಿ, ನಿಂಬಾಳ ಹಂಜರಗಿ, ಹಿರೇರೂಗಿ, ಗುಂಡು ತಂಡಾ, ಹೀಗೆ ಆರು ಬ್ರ್ಯಾಂಚ್ ಅಂಚೆ ಕಚೇರಿಗಳು ಈ ಗ್ರಾಮದ ಉಪ ಅಂಚೆ ಕಛೇರಿಯ ವ್ಯಾಪ್ತಿಯಲ್ಲಿ ಬರುತ್ತವೆ. ಇದರಿಂದ ಸಾರ್ವಜನಿಕರು ಕಛೇರಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಜಿಲ್ಲಾ ಅಂಚೆ ಕಛೇರಿಯ ಉಪ ಅಧೀಕ್ಷಕರಾದ ಬಿ.ಎಸ್. ದಾಸರ ಮಾತನಾಡಿ, ಭಾರತ ಸರಕಾರ ಬಡವರ ಹಾಗೂ ಕೂಲಿ ಕಾರ್ಮಿಕರಿಗೆ ಮತ್ತು ರೈತರಿಗೆ ಪ್ರಧಾನ ಮಂತ್ರಿ ಜೀವ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದ ಭಕ್ತಶ್ರೇಷ್ಠ ಕನಕದಾಸರ ತತ್ವಾದರ್ಶಗಳು ಎಲ್ಲರಿಗೂ ಸದಾ ದಾರಿದೀಪವಾಗಿವೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದಲ್ಲಿ ಸೋಮವಾರ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅವರು ಕನಕದಾಸ ಭಾವಚಿತ್ರಕ್ಕೆ ಪೂಜೆ ಪುಷ್ಪಾರ್ಚನೆ ಮೂಲಕ ನಮನ ಸಲ್ಲಿಸಿದ ಬಳಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. .ಭಕ್ತಿ ಪಂಥದ ಕಾಲದಲ್ಲಿ ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರು ಮುಂಚೂಣಿಯಲ್ಲಿದ್ದರು. ಕನ್ನಡ ಸಾಹಿತ್ಯದ ಮೂಲಕ ಅವರು ಜಾತಿ ವ್ಯವಸ್ಥೆಯ ಅಂಕುಡೊಂಕುಗಳನ್ನು ತಿದ್ದಿದ್ದಾರೆ. ಕನಕದಾಸರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾಗಿಲ್ಲ. ಅವರಿಗೆ ಸರ್ವ ಸಮುದಾಯಗಳಲ್ಲಿ ಭಕ್ತರಿದ್ದಾರೆ. ಇಂಥ ಮಹಾನ್ ಸಂತರ ಬಗ್ಗೆ ನಾವೆಲ್ಲರೂ ಇನ್ನೂ ಹೆಚ್ಚಿನ ಮಟ್ಟದಲ್ಲಿ ಪ್ರಚಾರ ಮಾಡುವ ಮೂಲಕ ಅವರ ತತ್ವಗಳು ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸುವ ಕೆಲಸ ಮಾಡಬೇಕಿದೆ ಎಂದು ಸುನೀಲಗೌಡ ಪಾಟೀಲ ಹೇಳಿದರು.ಈ ಸಂದರ್ಭದಲ್ಲಿ ಬಬಲಾದಿಯ ಶ್ರೀ ಅಪ್ಪಾಜಿ ಹಿರೇಮಠ, ಮುಖಂಡರಾದ ಬಸವರಾಜ ಲೋಕುರಿ, ವಿ. ಎಸ್. ಪಾಟೀಲ,…

Read More

ಸಿಎಂ ಜೊತೆಗೆ ಸಭೆ | ನಿರ್ಧಾರ ವಾಪಸ್ ಪಡೆದ ಫೆಡರೇಷನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಫೆಡರೇಷನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್‌ ಕರ್ನಾಟಕ ನಾಳೆ ಕರೆ ನೀಡಿದ್ದ ಮದ್ಯ ಮಾರಾಟ ಬಂದ್ ಕರೆಯನ್ನು ವಾಪಸ್ ಪಡೆದುಕೊಂಡಿದೆ. ಸಿಎಂ ಸಿದ್ದರಾಮಯ್ಯ ಸಂಘದ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದ್ದಾರೆ.ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಸೇರಿದಂತೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಸೋಸಿಯೇಷನ್ ಒಂದು ದಿನ ಪ್ರತಿಭಟನೆ ನಡೆಸಲು ಮಂದಾಗಿತ್ತು. ಬಂದ್‌ಗೂ ಮುನ್ನಾ ದಿನವಾದ ಇಂದು ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಸಂಘದ ಸದಸ್ಯರನ್ನು ಭೇಟಿಯಾಗಿ ಸಿದ್ದರಾಮಯ್ಯ ಮಾತುಕತೆ ನಡೆಸಿದರು.ಈ ವೇಳೆ ಸಂಘದವರ ಬೇಡಿಕೆಗಳನ್ನು ಈಡೇರಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.ಪ್ರತಿಭಟನೆಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದ ರಾಜ್ ಹೆಗ್ಡೆ ತಿಳಿಸಿದರು.ಅಸೋಸಿಯೇಷನ್ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಲಾಗುವುದು, ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುವಲ್ಲಿ ಲಿಕ್ಕರ್ ಮಾರಾಟಗಾರರನ್ನು ಬೆಂಬಲಿಸಲು ಸೂಕ್ತ ಕ್ರಮ…

Read More

ಲಿಂ.ಕಾಯಕಯೋಗಿ ಚೆನ್ನವೀರ ಮಹಾಸ್ವಾಮೀಜಿಯವರ ೧೩೧ನೇಯ ಜಯಂತೋತ್ಸವ | ಸಾರಂಗಶ್ರೀ ಕೃಷಿ ಪ್ರಶಸ್ತಿ ಪ್ರಧಾನ | ಸುನೀಲ ನಾರಾಯಣಕರ ಗೆ ಪ್ರಶಸ್ತಿ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಲಿಂ.ಚೆನ್ನವೀರ ಮಹಾಸ್ವಾಮಿಗಳು ತಮ್ಮ ಬದುಕಿನುದ್ದಕ್ಕೂ ಕೃಷಿಯ ಜೀವನವನ್ನು ಮೈಗೂಡಿಸಿಕೊಂಡವರು. ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯವನ್ನು ಮಾಡುವುದರ ಜೊತೆಗೆ ಕೃಷಿ ಕ್ಷೇತ್ರಕ್ಕೂ ಹೆಚ್ಚು ಒತ್ತು ನೀಡುವ ಮೂಲಕ ಕಾಯಕಯೋಗಿ ಯಾದವರು ಎಂದು ಮರೆಗುದ್ದಿ ಅಡವಿ ಸಿದ್ದೇಶ್ವರ ಮಠದ ಡಾ.ನಿರುಪಾಧೀಶ್ವರ ಮಹಾಸ್ವಾಮಿಗಳು ಹೇಳದರು.ಸಿಂದಗಿಯ ಸಾರಂಗಮಠದ ಪರಮಪೂಜ್ಯ ಲಿಂಗೈಕ್ಯ ಕಾಯಕಯೋಗಿ ಚೆನ್ನವೀರ ಮಹಾಸ್ವಾಮೀಜಿಯವರ ೧೩೧ನೇಯ ಜಯಂತೋತ್ಸವ ನಿಮಿತ್ಯವಾಗಿ ಲಿಂಗೈಕ್ಯ ಶ್ರೀಗಳ ಹೆಸರಿನ ಮೇಲೆ ಕೊಡಮಾಡುವ ಸಾರಂಗಶ್ರೀ ಕೃಷಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶ್ರೀಗಳ ಬದುಕು ನಿಜವಾಗಲೂ ಒಂದು ಇತಿಹಾಸ. ಅವರ ವ್ಯಕ್ತಿತ್ವದ ಬಗ್ಗೆ ಅವರ ಕಾರ್ಯದ ಬಗ್ಗೆ ನಾವು ಸದಾ ಸ್ಮರಿಸಿಕೊಂಡು ಅವರ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ತತ್ವ ಸಿದ್ದಾಂತಗಳನ್ನು ಇಂದಿನ ಯುವ ಪೀಳಿಗೆಗೆ ಪಸರಿಸುವ ಕಾರ್ಯ ಶ್ರೀಮಠದಿಂದ…

Read More

ಓತಿಹಾಳ ಗ್ರಾಮದ ಪಿಕೆಪಿಎಸ್ ಬ್ಯಾಂಕಿನಲ್ಲಿ ನಡೆದ ಘಟನೆ | ಆಡಳಿತ ಮಂಡಳಿ ಅವ್ಯವಹಾರ ತನಿಖೆಗೆ ಆಗ್ರಹ | ಶಿವಾಜಿ ಮೆಟಗಾರ ಆರೋಪ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಓತಿಹಾಳ ಗ್ರಾಮದ ಪಿಕೆಪಿಎಸ್ ಬ್ಯಾಂಕಿನಲ್ಲಿ ೨೦೨೪ರ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿಯಾಗಿ ಸಂಗಮ್ಮ ಕೊರಬು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಸದರಿ ಸಂಘದ ಅಧ್ಯಕ್ಷರನ್ನು ಒಳಗೊಂಡು ನಿರ್ದೇಶಕರು ಸಂಘದ ಸಭೆಯಲ್ಲಿ ದುರಾಡಳಿತದಿಂದ ೧೫.೧೧.೨೦೨೪ರ ತುರ್ತು ಸಭೆಯಲ್ಲಿ ಹಣ ದುರುಪಯೋಗ ಮಾಡಿಕೊಂಡಿದಲ್ಲದೆ ವಜಾಗೊಂಡಿದ್ದ ಕಾರ್ಯದರ್ಶಿ ಅಂಬಣ್ಣ ಹೂಗಾರ ಅವರನ್ನು ಕಾರ್ಯದರ್ಶಿಯಾಗಿ ಮರು ನೇಮಕ ಮಾಡಿಕೊಳ್ಳಲು ಸಭೆಯ ನಕಲಿ ಠರಾವು ಪಾಸ್ ಮಾಡಿದ್ದಾರೆ ಎಂದು ತಳವಾರ ಸಮಾಜದ ರಾಜ್ಯ ಮಹಾಸಭಾ ಅಧ್ಯಕ್ಷ ಶಿವಾಜಿ ಮೆಟಗಾರ ಆರೋಪಿಸಿದರು.ಸಿಂದಗಿ ತಾಲೂಕಿನ ಓತಿಹಾಳ ಗ್ರಾಮದ ಪಿಕೆಪಿಎಸ್ ಬ್ಯಾಂಕಿನಲ್ಲಿ ನಡೆಯುತ್ತಿರುವ ಆಡಳಿತ ಮಂಡಳಿಯ ಅವ್ಯವಹಾರವನ್ನು ಕೂಡಲೇ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ತಳವಾರ ಸಮಾಜದ ರಾಜ್ಯ ಮಹಾಸಭಾದಿಂದ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕಾನೂನಾತ್ಮಕವಾಗಿ ನಿರ್ದೇಶಕರಾಗಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಅಂದದ ಶೌಚಾಲಯ-ಆನಂದದ ಜೀವನ ಎಂಬ ಘೋಷವಾಕ್ಯದೊಂದಿಗೆ ನ.೧೯ರಿಂದ ಡಿ.೧೨ರವರೆಗೆ ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳುವ ಕುರಿತು ಮಂಗಳವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆ ಜರುಗಿತು.ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ವಿವಿಧ ಅನುಷ್ಠಾನ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಂಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ದಿನಾಂಕ: ೧೯.೧೧.೨೦೨೪ ರಿಂದ ದಿನಾಂಕ:೧೦.೧೨.೨೦೨೪ ರವರೆಗೆ ನಿರಂತರವಾಗಿ “ನಮ್ಮ ಶೌಚಾಲಯ -ನಮ್ಮ ಗೌರವ” ಎಂಬ ಶಿರ್ಷಿಕೆ ಹಾಗೂ “ಅಂದದ ಶೌಚಾಲಯ-ಆನಂದದ ಜೀವನ” ಎಂಬ ಘೋಷವಾಕ್ಯದೊಂದಿಗೆ ವಿಶೇಷ ಆಂದೋಲನವನ್ನು ಆಯೋಜನೆ ಮಾಡಲು ಸೂಚಿಸಿದರು.ಸಭೆಯಲ್ಲಿ ಮಹಿಳಾ…

Read More

ತೊರವಿಯಲ್ಲಿ ನಮ್ಮ ಶೌಚಾಲಯ-ನಮ್ಮ ಗೌರವ ಧ್ಯೇಯವಾಕ್ಯದೊಂದಿಗೆ ವಿಶ್ವ ಶೌಚಾಲಯ ದಿನಾಚರಣೆ-೨೦೨೪ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಪಂಚಾಯತಿ ವತಿಯಿಂದ ಜಿಲ್ಲೆಯ ತಿಕೋಟಾ ತಾಲೂಕಿನ ತೊರವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಂಗಳವಾರ ನಮ್ಮ ಶೌಚಾಲಯ-ನಮ್ಮ ಗೌರವ ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವ ಶೌಚಾಲಯ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರು ಮತ್ತು ಶಾಲಾ ಮಕ್ಕಳನ್ನು ಒಳಗೊಂಡಂತೆ “ವಿಶ್ವ ಶೌಚಾಲಯ ದಿನಾಚರಣೆ”ಯ ಮಹತ್ವ ಸಾರುವ ಅಭಿಯಾನವನ್ನು ನ.೧೯ ರಿಂದ ಡಿ.೧೨ರವರೆಗೆ ಹಮ್ಮಿಕೊಳ್ಳಲಾಗಿದೆ. ಪ್ರತಿ ಮನೆ ಮನೆಯಲ್ಲಿಯೂ ಶೌಚಾಲಯ ಕಟ್ಟಿಸಿಕೊಂಡು ಪ್ರತಿಯೊಬ್ಬರು ಶೌಚಾಲಯವನ್ನು ಬಳಸಬೇಕು, ಸ್ವಚ್ಛತೆಯಿಂದ ನಿರ್ವಹಣೆ ಮಾಡಬೇಕು. ಈ ಮೂಲಕ ಬಯಲು ಬರ್ಹಿದೆಸೆ ಮುಕ್ತ ಗ್ರಾಮವನ್ನಾಗಿ ಮಾಡಬೇಕೆಂದು ಹೇಳಿದರು.ಪ್ರತಿಯೊಬ್ಬರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಬಯಲು ಶೌಚಾಲಯ ತ್ಯಜಿಸಿ, ಉತ್ತಮ ಹಾಗೂ ಸ್ಚಚ್ಚವಾದ ಶೌಚಾಲಯಗಳನ್ನು ಬಳಸಬೇಕು. ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಮನವಿ ಮಾಡಿದ ಅವರು, ಶೌಚಾಲಯ ಹೊಂದಿಲ್ಲದವರು “ಸಿಟಿಜನ್ ಪೋರ್ಟಲ್” ಮೂಲಕ ಅರ್ಜಿಗಳನ್ನು ಸಲ್ಲಿಸಿ…

Read More

ದೇವರಹಿಪ್ಪರಗಿಯಲ್ಲಿ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಗಳು ಕೇವಲ ತಮ್ಮ ಲಾಭಕ್ಕಾಗಿ ಕಾರ್ಯನಿರ್ವಹಿಸದೇ ರೈತರು ಹಾಗೂ ಜನತೆಯ ಏಳಿಗೆಗಾಗಿ ಶ್ರಮ ವಹಿಸುತ್ತಿವೆ ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹೇಳಿದರು.ಪಟ್ಟಣದ ಸದಯ್ಯನಮಠದಲ್ಲಿ ಮಂಗಳವಾರ ವಿಜಯಪುರ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಹಾಗೂ ವಿ.ಪ್ರಾ.ಗ್ರಾ.ಕೃ.ಸ.ಸಂಘಗಳು ಚಟ್ಟರಕಿ, ಮುಳಸಾವಳಗಿ, ಕೋರವಾರ, ಬಮ್ಮನಜೋಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಅಂದು ಸಹಕಾರ ಸಂಘಗಳು ಆರಂಭದಲ್ಲಿ ಕೆಲವೇ ಬಂಡವಾಳದೊಂದಿಗೆ ಆರಂಭಗೊಂಡು ಇಂದು ಬೃಹತ್ ಬ್ಯಾಂಕ್‌ಗಳಾಗಿ ಬೆಳೆದಿವೆ. ಜಿಲ್ಲೆಯಲ್ಲಿ ಸಹಕಾರ ಸಂಘಗಳು ಬೆಳೆಯಬೇಕು ಅದರಲ್ಲಿ ರಾಜಕಾರಣ ಬೇಡ ಎಂದರು.ಕರ್ನಾಟಕ ರಾಜ್ಯ ಸಹಕಾರ ವಿಮಾ ಮಹಾಮಂಡಳದ ಅಧ್ಯಕ್ಷ ಶಿವನಗೌಡ ಬಿರಾದಾರ, ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಸಂಗನಬಸಪ್ಪ ತಳೇವಾಡ, ಸಹಾಯಕ ನಿಬಂಧಕ ಕೆ.ಎಚ್.ವಡ್ಡರ, ಡಾ. ಆರ್.ಆರ್.ನಾಯಿಕ್, ಸಂಗಮೇಶ ಛಾಯಾಗೋಳ, ಸಂಗನಗೌಡ ಬಿರಾದಾರ, ಎಂ.ಎಸ್.ಪಾಟೀಲ(ಕೋರಳ್ಳಿ),…

Read More

ಮದಭಾವಿ ಅರಣ್ಯ ಹುಲ್ಲುಗಾವಲಿನಲ್ಲಿ ಅಕ್ರಮವಾಗಿ ಮುರ್ಮ(ಗರಚು) ಸಾಗಾಣೆಗೆ ತಡೆಗೆ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕವಲಗಿ ಮದಭಾವಿ ಅರಣ್ಯ ಹುಲ್ಲುಗಾವಲಿನಲ್ಲಿ ಅಕ್ರಮವಾಗಿ ಮುರ್ಮ(ಗರಚು) ಸಾಗಾಣೆಯೂ ಕಳೆದ ಕೆಲವು ತಿಂಗಳಿನಿಂದ ಎಗ್ಗಿಲ್ಲದೇ ನಡೆಯುತ್ತಿದ್ದು, ತಲಾಟಿ ಹಾಗೂ ತಹಶಿಲ್ದಾರರ ಗಮನಕ್ಕೆ ಮೌಕೀಕವಾಗಿ ತಿಳಿಸಿದರೂ ಯಾರೂ ತಲೆಕೆಡಿಸಿಕೊಂಡಿಲ್ಲ, ಇದರಿಂದಾಗಿ ಅರಣ್ಯ ಸಂಪತ್ತು ನಾಶವಾಗುವುದರಲ್ಲಿ ಸಂಶಯವಿಲ್ಲ, ಇದು ನಿರಂತರವಾದರೆ ಅರಣ್ಯದ ಜೊತೆ ರಸ್ತೆ ಕೂಡಾ ಹಾಳಾಗುತ್ತಿದೆ ಅಂತಹ ಭೂಗಳ್ಳರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.ರೈತಸಂಘ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮನವಿ ಸಲ್ಲಿಸಿ ಜೆ.ಸಿ.ಪಿಗಳಲ್ಲಿ ದೊಡ್ಡ ದೊಡ್ಡ ಭಾರತಬೆಂಚ್ ವಾಹನಗಳ ಮೂಲಕ ಅಕ್ರಮವಾಗಿ ಮುರ್ಮ(ಗರಚು) ಸಾಗಾಣೆ ಮಾಡುತ್ತಿರುವುದರಿಂದ ಒಳ್ಳೆಯ ಡಾಂಬರ ರಸ್ತೆಗಳು ಸಂಪೂರ್ಣ ಹಾಳಾಗುತ್ತಿವೆ, ಇದರಿಂದ ಜನಸಾಮಾನ್ಯರಿಗೂ ಹಾಗೂ ಸರಕಾರಕ್ಕೆ ದೊಡ್ಡ ನಷ್ಟ ಉಂಟಾಗುತಿದೆ, ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ಮಾಡಿ ಅಕ್ರಮ ಮುರ್ಮ(ಗರಚು)…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುಂದಿನ ಅವಧಿಗೆ ಮೇಯರ್ ಮತ್ತು ಉಪಮೇಯರ್ ಭಾರತೀಯ ಜನತಾ ಪಾರ್ಟಿಯವರೆ ಆಗಬೇಕೆಂದು ಪಟ ತೊಟ್ಟಿದ್ದೇವೆ. ಹೀಗಾಗಿ ಸ್ವಾಭಿಮಾನದಿಂದ ಬಿಜೆಪಿಗೆ ಮತ ನೀಡಿ, ನಮ್ಮ ಅಭ್ಯರ್ಥಿ ಗೆಲ್ಲಿಸುವ ಶಪಥ ಮಾಡಬೇಕು ಎಂದು ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ಮಹಾನಗರ ಪಾಲಿಕೆ ವಾರ್ಡ್ ನಂ.29 ರ ಉಪಚುನಾವಣೆ ಪ್ರಚಾರಾರ್ಥವಾಗಿ ಸೋಮವಾರ ಸಂಜೆ ಬಿಜೆಪಿ ಅಭ್ಯರ್ಥಿ ಪರವಾಗಿ ರಾಜಾಜಿನಗರ ಮತ್ತಿತರೆ ಕಡೆ ಮತಯಾಚನೆ ಮಾಡಿ, ನಂತರ ಆಂಜನೇಯ ದೇವಸ್ಥಾನ ಹತ್ತಿರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.ಸದ್ಯ ಮಹಾನಗರ ಪಾಲಿಕೆಯಲ್ಲಿ ಲೂಟಿ ನಡೆದಿದ್ದು, ನಮ್ಮವರನ್ನು ಮೇಯರ್ ಮಾಡಿ, ಅದನ್ನು ತಡೆಯುತ್ತೇವೆ. ಸಾಕಷ್ಟು ಅನುದಾನ ಕೂಡ ಬರುವುದಿದೆ. ಉಳಿದ ಅಭಿವೃದ್ಧಿ ಕೆಲಸಗಳನ್ನು ಮುಗಿಸಿ ನಗರವನ್ನು ಮಾದರಿ ನಗರವನ್ನಾಗಿ ಮಾಡಲಾಗುವುದು. ಹೀಗಾಗಿ ನಮ್ಮ ಅಭ್ಯರ್ಥಿಗೆ ಹೆಚ್ಚಿನ ಮತಗಳಿಂದ ಗೆಲ್ಲಿಸಲು ಶೇ 100 ರಷ್ಟು ಮತದಾನ ಮಾಡಬೇಕು. ಕನಿಷ್ಠ 4 ಸಾವಿರ ಮತಗಳ ಲೀಡ್ ಕೊಡಬೇಕು. ತಾವುಗಳು ನಿರಂತರವಾಗಿ ಮತ ನೀಡಿದರೆ, ನಾನು ಮತ್ತು ನಮ್ಮ…

Read More