ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳ ನುಡಿ ನಮನ ಕಾರ್ಯಕ್ರಮದಲ್ಲಿ ಅದೃಶ್ಯ ಕಾಡಸಿದ್ದೇಶ್ವರ ಶ್ರೀ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಹೊನವಾಡ: ಭಾರತೀಯರಾದ ನಾವು ಬಹುದೊಡ್ಡ ಸಂಸ್ಕೃತಿಯ ವಾರಸುದಾರರಾಗಿದ್ದೇವೆ ಎಂದು ಕೊಲ್ಲಾಪುರದ ಸಿದ್ಧಗಿರಿ ಸಂಸ್ಥಾನ ಮಠ ಕನ್ಹೆರಿಯ ಜಗದ್ಗುರು ಅದೃಷ್ಟ ಕಾಡಸಿದ್ದೇಶ್ವರ ಸ್ವಾಮಿಗಳು ಮಾತನಾಡಿದರು.
ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ಪ್ರಥಮ ಫೌಂಡೇಶನ್ ವತಿಯಿಂದ ಜ್ಞಾನಯೋಗಿ ಪರಮಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳ ನುಡಿ ನಮನ ಕಾರ್ಯಕ್ರಮ ಹಾಗೂ ಪೊನ್ನಂಬಾಡು ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.
ಕೃಷಿ-ಋಷಿ ಪರಂಪರೆಯನ್ನು ಸಮನ್ವಯಗೊಳಿಸಿದ ಅನರ್ಘ್ಯ ಸಂತ. ಸಿದ್ಧೇಶ್ವರ ಶ್ರೀಗಳ ಜೀವನವೇ ಶ್ರೇಷ್ಠ ಮಾದರಿ ಮಾರ್ಗ ಎಂದು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಮಾತನಾಡಿದರು.
ನುಡಿದಂತೆ ನಡೆದ ಸರಳತೆಯ ಸಂತರಾಗಿದ್ದ ಸಿದ್ಧೇಶ್ವರ ಕೇವಲ ತಮ್ಮ ನಡೆ, ನುಡಿಗಳಿಂದಲೇ ಜಗತ್ತಿನ ಆಕರ್ಷಣೆಯಾಗಿದ್ದ ಸಿದ್ಧೇಶ್ವರರು ಕೋಟ್ಯಂತರ ಭಕ್ತರ ಹೃದಯ ಗೆದ್ದ ಬಹು ದೊಡ್ಡ ಸಂತ ಎನಿಸಿದ್ದರು ಎಂದು ಹೊನವಾಡದ ಬಾಬುರಾವ ಮಹಾರಾಜರು ಪ್ರಾಸ್ತಾವಿಕವಾಗಿ ಮಾತನಾಡಿದರು
ಇದೆ ಸಂದರ್ಭದಲ್ಲಿ ಪ್ರಥಮ ಫೌಂಡೇಶನ್ ಕೊಡ ಮಾಡಲ್ಪಡುವ ಪ್ರಶಸ್ತಿಗಳನ್ನು ನೀಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಟಿ ಆರ್ ಬಡಿಗೇರ್, ಸಾಹಿತ್ಯ ಕ್ಷೇತ್ರದಲ್ಲಿ ಎಸ್ ಎನ್ ಮಂಗೊಂಡ, ಕೃಷಿ ಕ್ಷೇತ್ರದಲ್ಲಿ ಭೀಮಣ್ಣ ಧನಗೊಂಡ, ಸಮಾಜ ಸೇವೆಯಲ್ಲಿ ಶಂಕರ ಕಟೆ ಮತ್ತು ಕಲಾ ಕ್ಷೇತ್ರದಲ್ಲಿ ಶ್ರೀಮತಿ ವಿಜಯಲಕ್ಷ್ಮಿ ಜಾಧವರವರಿಗೆ ಕಾಡಸಿದ್ದೇಶ್ವರ ಸಮ್ಮುಖದಲ್ಲಿ ಪೊನ್ನಂಬಾಡು ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀ ಸಿದ್ದೇಶ್ವರ ಸ್ವಾಮಿಗಳು ಪರಿಪೂರ್ಣ ಜ್ಞಾನವನ್ನು ಹೊಂದಿದ್ದರು. ಸುಲಭವಾದ ಉಪಾಯಗಳನ್ನು ಸರಳವಾಗಿ ತಿಳಿಸಿ ಅವರು ಮನಸ್ಸಿನ ಆತಂಕವನ್ನು ನಿವಾರಿಸುತ್ತಿದ್ದರು. ಅವರ ಬದುಕಿನಲ್ಲಿ ಯಾವುದೇ ದಾವಂತ ಇರಲಿಲ್ಲ, ಅತ್ಯಂತ ಶಾಂತ ಮೂರ್ತಿ ಅವರು, ಜ್ಞಾನಿ, ಸಂತ , ಯೋಗಿ ಕೋಟಿಗೊಬ್ಬರು, ಶ್ರೀಗಳು ಬಯಲಲ್ಲಿ ಬಯಲಾಗಿ ಎರಡು ವರ್ಷ ಕಳೆಯುತ್ತಾ ಬಂದಿದೆ ಎಂದು ಪ್ರಶಸ್ತಿ ಸ್ವೀಕರಿಸಿ ಎಸ್ ಎನ್ ಮಂಗೊಂಡ ಮಾತನಾಡಿದರು.
ಈ ಸಂದರ್ಭದಲ್ಲಿ ಕಕಮರಿಯ ಆತ್ಮರಾಮ್ ಪೂಜ್ಯರು, ತಿಕೋಟಾದ ಮಲ್ಲಿಕಾರ್ಜುನ ಸ್ವಾಮಿಗಳು, ಡಿ ಬಿ ಡೆಂಬ್ರೆ, ವಿಜಯಕುಮಾರ್ ಹಿರೇಮಠ್, ಎಸ್ ಜಿ ಲಕ್ಕುಂಡಿಮಠ, ಧರೆಪ್ಪ ಗುಗ್ಗರಿ, ಧರೆಪ್ಪ ಹಡಪದ (HD) ಲಿಂಗರಾಜ ಪಾಟೀಲ, ಬಿ ದೇವನಾಯಕ, ಕೃಷ್ಣಾಜಿ ಬುಯಿನ್, ಮುತ್ತು ಹಿರೇಮಠ, ತುಕಾರಾಮ ದಡಕೆ, ಪ್ರಥಮ ಫೌಂಡೇಶನ್ ಅಧ್ಯಕ್ಷರಾದ ಬೀರಪ್ಪ ಖಂಡೆಕಾರ ಇದ್ದರು,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇ ಸಿ ಪಾಟೀಲ ವಹಿಸಿದ್ದರು.
ಆರ್ ಎಂ ಸಕ್ರಿ ನಿರೂಪಿಸಿದರು. ಧರೆಪ್ಪ ಸಿದ್ನಾಥ ಸ್ವಾಗತಿಸಿದರು. ಲಕ್ಷ್ಮೀ ಕಾತ್ರಾಳ ವಂದಿಸಿದರು.

