ವಾರಣಾಸಿಯಲ್ಲಿ ರಾಷ್ಟ್ರಮಟ್ಟದ ’ಯುಗದರ್ಶಿನಿ ರತ್ನ’ ಪ್ರಶಸ್ತಿ ಪ್ರಧಾನ ಸಮಾರಂಭ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಾರಣಾಸಿಯಲ್ಲಿ ರಾಷ್ಟ್ರಮಟ್ಟದ ’ಯುಗದರ್ಶಿನಿ ರತ್ನ’ ಪ್ರಶಸ್ತಿ ಪ್ರಧಾನ ಸಮಾರಂಭವು ಇತ್ತೀಚಿಗೆ ಜರುಗಿತು.
ಈ ಸಂದರ್ಭದಲ್ಲಿ ನಗರದ ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುಧಾ ರಬಿನಾಳ, ನ್ಯಾಯವಾದಿ ಶ್ರೀಶೈಲ ಗಬ್ಬೂರ ಇವರಿಗೆ ಕಾಶಿಯಲ್ಲಿ ರಾಷ್ಟ್ರಮಟ್ಟದ ’ಯುಗದರ್ಶಿನಿ ರತ್ನ’ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ವಾರಣಾಸಿ ಬನಾರಸ (ಕಾಶಿ) ಹಿಂದೂ ವಿಶ್ವವಿದ್ಯಾಲಯದಲ್ಲಿ ಅಖಿಲ ಭಾರತ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಕೇಂದ್ರ ಪಶು ಸಂಗೋಪನ ಸಚಿವೆ ರೇಣುದೇವಿ ಹಾಗೂ ಇದರ ಮುಖ್ಯಸ್ಥೆ, ಸಾಹಿತಿ ಡಾ.ಸರಸ್ವತಿ ಚಿಮ್ಮಲಗಿ, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ, ಚಲನಚಿತ್ರ ನಟಿ ಪ್ರೇಮಾ, ಚೇತನಾ ಪೂಜಾರಿ, ವಿಜಯ ಪೂಜಾರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕೃತರಿಗೆ ಮಹಾನಗರ ಪಾಲಿಕೆ ಸದಸ್ಯ ಕುಮಾರ ಗಡಗಿ, ವೀರಶೈವ ಲಿಂಗಾಯತ ಸೇವಾ ಟ್ರಸ್ಟ್ ಉಪಾಧ್ಯಕ್ಷ ಚನಬಸಯ್ಯ ಹಿರೇಮಠ, ಈಶ್ವರ ಹೂಗಾರ, ಸಾಯಿಬಣ್ಣ ಕಮತಗಿ, ಆರ್.ಎಸ್. ವಾಲೀಕಾರ, ಎಂ.ಐ.ಬಿರಾದಾರ, ಸಿದ್ದು ಇಜೇರಿ, ಪ್ರದೀಮ ಮಸ್ಕಿನ, ಬಳ್ಳೂರ ಸರ್ ಹಾಗೂ ನವಲಿ ಸರ್ ಇತರರು ಅಭಿನಂದಿಸಿದ್ದಾರೆ.

ಆಪ್ತ ಸ್ನೇಹಿತೆಯರ ಅಭಿನಂದನೆ
ಇತ್ತೀಚೆಗೆ ವಾರಣಾಸಿಯಲ್ಲಿ ರಾಷ್ಟ್ರಮಟ್ಟದ ’ಯುಗದರ್ಶಿನಿ ರತ್ನ’ ಪ್ರಶಸ್ತಿ ಪುರಸ್ಕೃತರಾದ ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುಧಾ ರಬಿನಾಳ ಅವರಿಗೆ ಅವರ ಆಪ್ತ ಸ್ನೇಹಿತೆಯರಾದ ಬೆಂಗಳೂರಿನ ಹೊಟೇಲ ಉದ್ಯಮಿ, ಗಾಯಕಿ ಶ್ರೀಮತಿ ಗುರುಪ್ರಿಯಾ ಶಿವಲಿಂಗಯ್ಯ ಪುರಾಣಿಕ ಹಾಗೂ ನಗರದ ’ಉದಯರಶ್ಮಿ’ ದಿನಪತ್ರಿಕೆ ಪ್ರಕಾಶಕಿ ಶ್ರೀಮತಿ ಶೈಲಾ ಇಂದುಶೇಖರ ಮಣೂರ ಅಭಿನಂದಿಸಿದ್ದಾರೆ.
ಈಗಾಗಲೆ ತನ್ನ ದಕ್ಷ ಆಡಳಿತ ವೈಖರಿಯಿಂದ ಹೆಸರುವಾಸಿಯಾಗಿರುವ ಆಪ್ತ ಸ್ನೇಹಿತೆ ಸುಧಾ ರಬಿನಾಳ ತನ್ನ ಕ್ಷೇತ್ರದಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿ ಇನ್ನೂ ಹೆಚ್ಚಿನ ಸ್ಥಾನಮಾನಗಳಿಗೆ ಭಾಜನರಾಗಲಿ ಎಂದು ಅವರು ಶುಭ ಹಾರೈಸಿದ್ದಾರೆ.

