ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಸ್ಥಾವರದಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರ ಅಭ್ಯುದಯಕ್ಕಾಗಿ ನಮ್ಮ ಸಂಘಟನೆಯ ಅಳಿಲು ಸೇವೆ ಸದಾಕಾಲವೂ ಇರಲಿದೆ ಎಂದು ಎನ್‌ಟಿಪಿಸಿ ಮಿಥಾಲಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಅಂಜು ಝಾ ಹೇಳಿದರು.
ತಾಲೂಕಿನ ಕೂಡಗಿ ಎನ್‌ಟಿಪಿಸಿ ಮಿಥಾಲಿ ಮಹಿಳಾ ಸಂಘಟನೆಯ ವತಿಯಿಂದ ೫೦ ಮಹಿಳೆಯರಿಗೆ ಟ್ರಾಲಿ ಬ್ಯಾಗ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬ್ಯಾಗ್ ವಿತರಣೆಯ ಜತೆಗೆ ಎನ್‌ಟಿಪಿಸಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಮಹಿಳೆಯರಿಗೆ ಆಹಾರದ ಪೊಟ್ಟಣವನ್ನೂ ನೀಡಲಾಗಿದೆ. ಇದಲ್ಲದೇ ಈ ಹಿಂದೆ ಎನ್‌ಟಿಪಿಸಿ ವ್ಯಾಪ್ತಿಯ ೩೫ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ. ೧೫ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಗುರಿ ಸಾಧಿಸಲು ವಿದ್ಯಾರ್ಥಿ ವೇತನವನ್ನೂ ನಾವು ನೀಡಿದ್ದೇವೆ ಎಂದರು.
ಈ ವೇಳೆ ಸಂಘಟನೆಯ ಉಪಾಧ್ಯಕ್ಷೆ ಪದ್ಮಾಲಯ ಹೋಟಾ, ಸದಸ್ಯರಾದ ಪೂಜಾ ಪಾಂಡೆ, ಅಲ್ಕಾ ಜೈನ್, ಸುಧಾ ಶ್ರೀನಿವಾಸ ಮತ್ತಿತರರು ಸದಸ್ಯರು ಇದ್ದರು.

