ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ಹಾಗೂ ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿ ಓರ್ವ ಸಾವಿಗೀಡಾದ ದುರ್ಘಟನೆ ಜರುಗಿದೆ.
ಹುಬ್ಬಳ್ಳಿ ವಿಜಯಪುರ ರಾಷ್ಟ್ರೀಯ ಹೆದ್ದಾರಿ 218ರ ಬಸವೇಶ್ವರ ಸಕ್ಕರೆ ಕಾರ್ಖಾನೆ ಸಮೀಪದ ತಾಲೂಕಿನ ಮುಳವಾಡ ತಾಂಡಾ ಕ್ರಾಸ್ ಹತ್ತಿರ ಶುಕ್ರವಾರ ಬೆಳಗಿನ ಜಾವ ಅಶೋಕ್ ಲೈಲ್ಯಾಂಡ ಗೂಡ್ಸ್ ವಾಹನ ಹಾಗೂ ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಣ್ಣಾಗರ ಗ್ರಾಮದ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನದ ಚಾಲಕ ರವಿ ಮಹದೇವಪ್ಪ ಮಾದರ (25) ಮೃತಪಟ್ಟಿದ್ದಾನೆ.
ಮನಗೂಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

