Author: editor.udayarashmi@gmail.com

ವಿಜಯಪುರ ನಗರಾದ್ಯಂತ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲಾ ಮಕ್ಕಳಿಗೂ ವಿಮೆ | ಮಕ್ಕಳ ಬದುಕಿನಲ್ಲಿ ಹೊಸ ಭಾಷ್ಯ ಬರೆಯುವ ಸುಂದರ ಕ್ಷಣಕ್ಕೆ ಸಾಕ್ಷಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯದಲ್ಲೇ ಪ್ರಥಮ ಹಾಗೂ ವಿನೂತನವಾಗಿ ಶಾಲಾ ಮಕ್ಕಳಿಗೆ ಗುಂಪು ವಿಮೆಗೆ ಒಳಪಡಿಸುವ ಮಹತ್ತರ ಕಾರ್ಯಕ್ರಮಕ್ಕೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣವು ಶನಿವಾರ ಸಾಕ್ಷಿ ಆಯಿತು.ಮಕ್ಕಳು ಅಪಘಾತ, ವಿದ್ಯುತ್ ಶಾಕ್, ಹಾವು, ಚೇಳು ಕಡಿತ ಮತ್ತಿತರೆ ಕಾರಣಗಳಿಂದ ಮೃತಪಟ್ಟರೆ, ಅವರನ್ನೇ ನಂಬಿದ್ದ ಆ ಮನೆಯೇ ಕತ್ತಲಾಗಲಿದೆ. ಈ ವಿಮೆ ಸೌಲಭ್ಯದಿಂದ ಅಂತಹ ಪಾಲಕರಿಗೆ ಆರ್ಥಿಕವಾಗಿ ನೆರವಾಗಲು (ರೂ.2 ಲಕ್ಷ ಪರಿಹಾರ), ಗಂಭೀರವಾಗಿ ಗಾಯಗೊಂಡ ಮಕ್ಕಳ ಚಿಕಿತ್ಸೆಗೆ (ರೂ.1 ಲಕ್ಷ ಪರಿಹಾರ) ಅನುಕೂಲ ಕಲ್ಪಿಸುವ ಸದುದ್ದೇಶದಿಂದ ನಮ್ಮ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಮಾ ಖಾತೆಗೆ ಹಣ ಭರಣಾ ಮಾಡಿ, ವಿಜಯಪುರ ನಗರ ಮತಕ್ಷೇತ್ರದದಲ್ಲಿ ಬರುವ 128 ಪ್ರಾಥಮಿಕ ಶಾಲೆಗಳು ಹಾಗೂ 7 ಪ್ರೌಢ ಶಾಲೆಗಳಲ್ಲಿ ವ್ಯಾಸಂಗ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ವಿಶ್ವ ದಾಸೋಹ ದಿನಾಚರಣೆಯ ಅಂಗವಾಗಿ ಜ.೨೧ ರಂದು ಬೆಳಿಗ್ಗೆ ೧೦:೩೦ ಕ್ಕೆ ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಹೇಮರೆಡ್ಡಿ ಮಲ್ಲಮ್ಮ ವೃತ್ತದ ಬಳಿಯ ಗಾರ್ಡನ್ ಜಾಗೆಯಲ್ಲಿ ಲಿಂ.ಹಾನಗಲ್ಲ ಕುಮಾರೇಶ್ವರ ಮಹಾಸ್ವಾಮಿಗಳು, ಸಿದ್ಧಗಂಗಾ ಮಠದ ಲಿಂ.ಶಿವಕುಮಾರ ಮಹಾಸ್ವಾಮಿಗಳು ಮತ್ತು ತಾಲೂಕಿನ ಮಡಿಕೇಶ್ವರ ಗ್ರಾಮದ ಲಿಂ.ಚನ್ನಣ್ಣ ದೇಸಾಯಿ ಅವರ ಪುಣ್ಯ ಸ್ಮರಣೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.ಸಾನಿಧ್ಯವನ್ನು ಕಪ್ಪತ್ತಗುಡ್ಡದ ನಂದಿವೇರಿ ಮಠದ ಶಿವಕುಮಾರ ಮಹಾಸ್ವಾಮಿಗಳು, ಕಮತಗಿಯ ಹೊಳೆಹುಚ್ಚೇಶ್ವರ ಸಂಸ್ಥಾನ ಮಠದ ಹುಚ್ಚೇಶ್ವರ ಮಹಾಸ್ವಾಮಿಗಳು, ಮಸೂತಿಯ ಪ್ರಭುಕುಮಾರೇಶ್ವರ ಮಠದ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು, ಗುಳೆದಗುಡ್ಡ ಮುರುಘಾ ಮಠದ ಕಾಶೀನಾಥ ಮಹಾಸ್ವಾಮಿಗಳು, ಗುಳೇದಗುಡ್ಡ ಮರಡಿ ಮಠದ ಖಾಡಸಿದ್ದೇಶ್ವರ ಮಹಾಸ್ವಾಮಿಗಳು, ಕುಂಟೋಜಿ ಸಂಸ್ಥಾನ ಭಾವೈಕ್ಯತಾ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ವಹಿಸುವರು. ಮುಖ್ಯ ಅತಿಥಿಗಳಾಗಿ ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಆಗಮಿಸಲಿದ್ದಾರೆ. ಸಮಾರಂಭದ ಬಳಿಕ ಅನ್ನಸಂತರ್ಪಣೆ ಇರಲಿದೆ. ಎಲ್ಲ ಮಾತೆಯರು ಮತ್ತು ಮಹನೀಯರು ಆಗಮಿಸುವಂತೆ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ವೀರಶೈವ…

Read More

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಿವಕಾಂತಮ್ಮ (ಕಾಂತಾ) ನಾಯಕ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪುರುಷರಿಗೆ ಸರಿಸಮಾನವಾಗಿ ಮಹಿಳೆಯು ಸಹ ಕೌಶಲ್ಯ ಕಲಿಯುವುದರಲ್ಲಿ ಸಕ್ಷಮವಾಗಿರುವಳು ಎಂಬ ಉದ್ದೇಶದಿಂದ ಮಹಿಳೆಯರಿಗೆ “ನಲ್-ಜಲ್ ಮಿತ್ರ” ತರಬೇತಿ ನೀಡಲಾಗುತ್ತಿದೆ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಿವಕಾಂತಮ್ಮ (ಕಾಂತಾ) ನಾಯಕ ಹೇಳಿದರು.ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಮ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ, ಎನ್‌ಆರ್‌ಎಲ್‌ಎಂ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ನಡೆದ ಕೇಂದ್ರ ಸರ್ಕಾರದ ಪ್ರಮುಖ ಯೋಜನೆ ಜಲ್ ಜೀವನ್ ಮಿಷನ್ ಅಡಿ “ನಲ್ ಜಲ್ ಮಿತ್ರ” ೧೭ ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳೆಯು ಸಶಕ್ತಳಾಗಬೇಕೆಂಬುವುದು “ನಲ್-ಜಲ್ ಮಿತ್ರ” ತರಬೇತಿಯ ಉದ್ದೇಶವಾಗಿದೆ. ಪೈಪ್‌ಗಳ ದುರಸ್ಥಿ, ಕೊಳಾಯಿ ಜೋಡಣೆ,…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕ್ರೀಡೆಯು ಹೆಚ್ಚು ಸಕ್ರಿಯ ಮತ್ತು ಆರೋಗ್ಯಕರವಾಗಿರುತ್ತದೆ ಬೊಜ್ಜು, ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಚಿಕ್ಕಸಿಂದಗಿ ಶಾಲಾ ದೈಹಿಕ ಶಿಕ್ಷಕ ಎಂ ಕೆ ಬಿರಾದಾರ ಹೇಳಿದರು.ಜ್ಯೋತಿ ನಗರದ ಲಿಟಲ್ ವಿಂಗ್ಸ್ ಪ್ರಿ ಸ್ಕೂಲ್ ಆವರಣದಲ್ಲಿ ಶನಿವಾರ ಜರುಗಿದ ಪಾಲಕರ ಕ್ರೀಡಾಕೂಟದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು, ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ. ಟೀಮ್‌ವರ್ಕ್, ಶಿಸ್ತು, ಗಮನ, ವಿನೋದ, ಆಲೋಚನಾ ಕೌಶಲ್ಯ ಮತ್ತು ದೈಹಿಕ ಸಮನ್ವಯವನ್ನು ಸುಧಾರಿಸುತ್ತದೆ ಎಂದರುಈ ಸಂದರ್ಭದಲ್ಲಿ ಅತಿಯಾಗಿ ಮಾತನಾಡಿದ ಶಿಕ್ಷಕ ಸಿದ್ದಲಿಂಗ ಚೌದರಿ ಮಾನವನ ವ್ಯಕ್ತಿತ್ವದ ರೂಪುರೇಖೆಯು ಅವನ ಬಾಲ್ಯದಿಂದ ಅವನ ಸುತ್ತಮುತ್ತಲಿರುವ ಶಿಕ್ಷಕರ, ಪಾಲಕರ ಹಾಗೂ ಸಮಾಜದ ಜನರ ಪ್ರಭಾವದಿಂದ ಆಗಿರುತ್ತದೆ. ವ್ಯಕ್ತಿಗೆ ಬರೀ ಶಿಕ್ಷಣವೊಂದೇ ಸಿಕ್ಕರೆ ಸಾಲದು, ಅದರ ಜೊತೆ ಇನ್ನು ಅನೇಕ ಅಂಶಗಳನ್ನು ಬಾಲ್ಯದಿಂದ ರೂಢಿಸಿಕೊಂಡರೆ ಆತ ಯಶಸ್ವಿ ಪುರುಷನೆನ್ನಿಸಿಕೊಳ್ಳುತ್ತಾನೆ ಎಂದರು.ಶಿಕ್ಷಕ ರವಿಕುಮಾರ ಪಾಟೀಲ, ವರ್ತಕರಾದ ಪರಮೇಶ್ವರ ಮಲ್ಲೇದ, ಸಂತೋಷ ಶಿರಕನಳ್ಳಿ ವೇದಿಕೆ…

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ರಾಜ್ಯದ ಐತಿಹಾಸಿಕ ಸ್ಥಳಗಳನ್ನು ವೀಕ್ಷಣೆ ಮಾಡಿದಾಗ ಚಿಣ್ಣರ ಚಿಲಿಪಿಲಿ ಕಲರವ ವೃದ್ಧಿಯಾಗಿ ಉತ್ತಮ ಭವಿಷ್ಯಕ್ಕೆ ಭದ್ರ ಬುನಾದಿಯಾಗುತ್ತದೆ ಎಂದು ಮಾಜಿ ಪುರಸಭೆ ಸದಸ್ಯ ಮಹಿಪಾಲರಡ್ಡಿ ಡಿಗ್ಗಾವಿ ಹೇಳಿದರು.ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ “ಚಿಣ್ಣರ ಕರ್ನಾಟಕ ದರ್ಶನ” ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕಲಿಕೆಗೆ ಶೈಕ್ಷಣಿಕ ಪ್ರವಾಸ ಪೂರಕವಾಗಲಿದ್ದು, ವಿದ್ಯಾರ್ಥಿಗಳು ಕೋಶ ಓದುವುದರ ಜೊತೆಗೆ ದೇಶ ಸುತ್ತಬೇಕು ಎಂಬ ನಾಣ್ಣುಡಿಯಂತೆ ಕರ್ನಾಟಕ ದರ್ಶನಕ್ಕೆ ತೆರಳುತ್ತಿರುವ ವಿದ್ಯಾರ್ಥಿಗಳು ವೀಕ್ಷಿಸಿದ ಸ್ಥಳಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ದಾಖಲಿಸಿಕೊಂಡು ಮುಂದಿನ ದಿನಗಳಲ್ಲಿ ಪ್ರವಾಸ ಕಥನ ಬೆರೆಯಲು ಮುಂದಾಗುವಂತೆ ಸಲಹೆ ನೀಡಿದರು.ಇದೇ ವೇಳೆ ಸಿ ಆರ್ ಪಿ ಬಂದೇನವಾಜ್ ನಾಲತವಾಡ, ಇಸಿಒ ಶಿವಪುತ್ರಪ್ಪ, ಎಚ್ಎಮ್ ಎಮ್.ಬಿ ಪಾಟೀಲ, ಕೆಆರ್ ಪಾಟೀಲ್, ಸಂಗೀತ ಶಿಕ್ಷಕ ಯಮನೇಶ ಯಾಳಗಿ, ಚಿತ್ರಕಲೆ ಶಿಕ್ಷಕ ಶಶಿಧರ, ರಂಗಪ್ಪ ವಡ್ಡರ ಸೇರಿದಂತೆ ಇತರರು ಉಪಸ್ಥಿತರಿದ್ದು ಶುಭಹಾರೈಸಿ ಬೀಳ್ಕೊಟ್ಟರು.

Read More

ತುಮಕೂರಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಕರ್ತರ 39ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ ಉದಯರಶ್ಮಿ ದಿನಪತ್ರಿಕೆ ತುಮಕೂರು: ವರದಿಗಾರಿಕೆ ವೃತ್ತಿಪರವಾಗಿದ್ದಾಗ ಸಮಾಜದ ಪರವಾಗಿರುತ್ತದೆ. ಪತ್ರಿಕಾ ವೃತ್ತಿ ಉದ್ಯಮ ಆದ ಕೂಡಲೇ ಇದರ ಉದ್ದೇಶಗಳು ಬದಲಾಗುತ್ತವೆ. ವಸ್ತು ಸ್ಥಿತಿ ಜೊತೆಗೆ ಮೌಲ್ಯಧಾರಿತ ಸುದ್ದಿ ಇಂದಿನ ಅಗತ್ಯ. ಊಹಾ (ಕಲ್ಪಿತ) ಪತ್ರಿಕೋದ್ಯಮ ಅಪಾಯಕಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.ಶನಿವಾರ ತುಮಕೂರಿ ಸಿದ್ಧಾರ್ಥ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ರಾಜ್ಯ ಪತ್ರಕರ್ತರ 39ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಂವಿಧಾನದ ಆಶಯಗಳನ್ನು ಈಡೇರಿಸುವುದೇ ಪತ್ರಿಕಾ ವೃತ್ತಿಯ ಕರ್ತವ್ಯ. ಧ್ವನಿ ಇಲ್ಲದವರ ಪರವಾಗಿ ವೃತ್ತಿ ಇದ್ದಾಗ ಸಮಾಜಕ್ಕೆ ಅನುಕೂಲ. ಸಮಾಜದಲ್ಲಿರುವ ಮೇಲು, ಕೆಳ ಜಾತಿಗಳ ನಡುವಿನ ತಾರತಮ್ಯ ಮತ್ತು ಅಸಮಾನತೆ ಕೊನೆಯಾಗುವ ದಿಕ್ಕಿನಲ್ಲಿ ಕರ್ತವ್ಯ ನಿರ್ವಹಿಸಿ ಕರೆ ನೀಡಿದರು.ನಿಮ್ಮ ವಿಶೇಷ ಸಂಚಿಕೆ ನೀವೂ ಓದಿ: ಈಗ ವೇದಿಕೆಯಲ್ಲಿ ಬಿಡುಗಡೆಯಾದ ನಿಮ್ಮದೇ ವಿಶೇಷ ಸಂಚಿಕೆ ನೀವೂ ಓದಬೇಕು. ಅದರಲ್ಲಿ…

Read More

ರಚನೆ- ಡಾ.ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಎಲ್ಲವೂ ಇದೆಈ ನೆಲದರಾಷ್ಟ್ರದಲ್ಲಿಅಚ್ಚ ಹಸಿರು ಕಾಶ್ಮೀರಕಣಿವೆ ಕಾಡುಗಿರಿ ಬೆಟ್ಟಗಳಮಧ್ಯೆ ಹರಿವನದಿ ನೀರು ಇನ್ನೊಂದೆಡೆಗೆಮರ ಭೂಮಿಕುಡಿಯಲುನೀರಿಲ್ಲದ ಬಳಲಿಕೆಹಸಿವು ಬಡತನಕೆಲಸವಿಲ್ಲದ ಕೈಗಳುಸೋಮಾಲಿಯದಕ್ರೂರ ಚಿತ್ರಣ ಹುಟ್ಟಿದ್ದಾರೆ ಇಲ್ಲಿಬುದ್ಧ ಬಸವ ಬಾಪುಜಗದ ಮಹಾ ಜಾಣಅಂಬೇಡ್ಕರಸಂಚು ಮಾಡಿಕೊಂದ ಗೋಡ್ಸೆಗಳುಸತ್ಯ ಸಮತೆ ಪ್ರೀತಿಅರಳಿ ಮುದಡಿದ್ದು ಇಲ್ಲಿ ಜಗವು ಬಳಲುವುದುದುಷ್ಟರ ಕ್ರೂರರಹಿಂಸೆಯಿಂದಲ್ಲಶಿಷ್ಟರ ಮೌನದಿಂದಈಗಲಾದರೂ ಎದ್ದೇಳಿಹೆಜ್ಜೆ ಹಾಕಿ ವಿಶ್ವ ಪಥಕೆಮೌಢ್ಯ ಮೆಟ್ಟಿಮೌಲ್ಯ ಬೆಳೆಯುವ ಇಲ್ಲಿ ಎಲ್ಲವೂ ಇದೆ

Read More

ಜನವರಿ ೧೯ ಮಹಾಕವಿ ವೇಮನ ರ ಜಯಂತಿಯ ನಿಮಿತ್ತ ಈ ವಿಶೇಷ ಲೇಖನ – ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿ, ಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ದಾನ ಕೇಳುವವನು ಧರಣಿಗಧಮನುದಾನ ಕೇಳದವನು ದೈವಸಮನುದಾನ ಕೊಡದಿರುವವ ಧನ್ಯನಲ್ಲ ನೋಡುವಿಶ್ವದಾಭಿರಾಮ ಕೇಳು ವೇಮ ಎಂದು ಜಗದ ಜನರ ಮನಸ್ಥಿತಿಯನ್ನುಚಾಟಿಯೇಟಿನಂತೆ ಖಂಡಿಸಿದವನು ಮಹಾಕವಿ ವೇಮನ. ಉಳ್ಳವರು ದಾನ ಮಾಡಿದರೆ ತಪ್ಪಲ್ಲ ದಾನ ಕೇಳದಿದ್ದರೆ ಅವರು ಒಳ್ಳೆಯವರು, ದಾನ ಕೇಳುವವನು ಭೂಮಿಯಲ್ಲಿ ಪಾಪಿಷ್ಟನು ಎಂದು ಮಹಾಕವಿ ವೇಮನ ಅತ್ಯಂತ ಮಾರ್ಮಿಕವಾಗಿ ಹೇಳಿದ್ದಾನೆ. ವೇಮನ ಕನ್ನಡದ ಸರ್ವಜ್ಞ ಕವಿ ತಮಿಳಿನ ತಿರುವಳ್ಳುವರನಂತೆ ಆಂಧ್ರದ ಸಮಾಜ ಚಿಂತಕ, ತತ್ವಜ್ಞಾನಿ, ಮಹಾಕವಿ ಎಂದೆನಿಸಿದವನುವೇಮನನನ್ನು ರೆಡ್ಡಿ ಕುಲದ ಮಹಾತಾಯಿ ಮಲ್ಲಮ್ಮಾಂಬೆಯ ಮೈದುನ ಎಂಬ ಹಿನ್ನೆಲೆಯಲ್ಲಿ ನೋಡಿದಾಗ ವೇಮನ 15ನೇ ಶತಮಾನದಲ್ಲಿ ಇಂದಿನ ಆಂಧ್ರಪ್ರದೇಶದ ಕುಮಾರಗಿರಿಯ ಸಿದ್ದಾಪುರದಲ್ಲಿ ಜನಿಸಿದನು. ತಂದೆ ವೇಮರೆಡ್ಡಿ. ವೇಮನ ಕುರಿತು ಸಂಶೋಧಿಸಿದ ಸಿ. ಪಿ . ಬ್ರೌನ್ ರ ಪ್ರಕಾರ ವೇಮನ 17ನೇ ಶತಮಾನದವನು ಎಂದು ಕೂಡ ಹೇಳುತ್ತಾರೆ.ತಾಯಿ ಮತ್ತು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಜರುಗಿದ ಜಿಲ್ಲಾ ಕೃಷಿಕ ಸಮಾಜದ ಚುನಾವಣೆಯಲ್ಲಿ ವಿಜಯಪುರ ಜಿಲ್ಲಾ ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷರಾಗಿ ಬಸವನಬಾಗೇವಾಡಿಯ ಶಿವನಗೌಡ ಎಸ್ ಬಿರಾದಾರ ಹಾಗೂ ರಾಜ್ಯ ಪ್ರತಿನಿಧಿಯಾಗಿ ಶ್ರೀ ಸಂಜುಗೌಡ ಬಿ.ಪಾಟೀಲ(ಕನಮಡಿ) ಉಪಾಧ್ಯಕ್ಷರಾಗಿ ಗುರುಪಾದಪ್ಪ ನೆಲ್ಲಗಿ ಪ್ರಧಾನ ಕಾರ್ಯದರ್ಶಿಯಾಗಿ ರಮೇಶ ಪೂಜಾರಿ ಖಜಾಂಚಿಯಾಗಿ ಮಹಾದೇವ ಹಿರೇಕುರಬರ ಅವರು ಇಂದು ನಡೆದ ೫ ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು ಎಂದು ಜಂಟಿ ಕೃಷಿ ನಿರ್ದೇಶಕರಾದ ಶ್ರೀಮತಿ ರೂಪಾ.ಎಲ್ ಘೋಷಣೆ ಮಾಡಿದರು ಕೃಷಿಕ ಸಮಾಜದ ಮಾಜಿ ಜಿಲ್ಲಾ ಅಧ್ಯಕ್ಷ ದಾನಮ್ಮಗೌಡತಿ ಪಾಟೀಲ ಶಿವಪ್ಪಗೌಡ ಪಾಟೀಲ ರಾಮನಗೌಡ ಪಾಟೀಲ(ಹೆಬ್ಬಾಳ)ಶಂಕರ ರೇವಡಿ ಎಸ್ ಎಂ ಆನಂದಿ ಶಂಕರಗೌಡ ಪಾಟೀಲ(ಇಂಡಿ) ಅಯ್ಯನಗೌಡ ಪಾಟೀಲ(ಸೋಮನಾಳ) ಬಸವರಾಜ ಸೋಂಪುರ(ಮನಗೂಳಿ)ಬಸನಗೌಡ ಮಾಡಗಿ ಮಲ್ಲಣ್ಣ ಅಣ್ಣೆಪ್ಪನವರ ವಿ ಎಸ್ ಪಾಟೀಲ ಸಂಗನಗೌಡ ಪಾಟೀಲ ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ನಿಂಗನಗೌಡ ಸೋಲಾಪುರ ಚನ್ನಬಸು ದೇಸಾಯಿ ನಿಂಗನಗೌಡ ಕಚನೂರ ಮಲ್ಲಣ್ಣ ಹರನಾಳ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಗೋಳಸಾರ ಮಠಕ್ಕೆ ಧನಕ್ಕಿಂತಲೂ ಧರ್ಮ ಮತ್ತು ದೇಶಾಭಿಮಾನ ಬೆಳೆಸುವ ಕಾರ್ಯ ಮುಖ್ಯವಾಗಿದೆ. ಸಾಮಾಜಿಕ, ಶೈಕ್ಷಣಿಕ ಸಾಂಸ್ಕೃತಿಕ ಕಾರ್ಯ ಮಾಡುವ ಮೂಲಕ ಗೋಳಸಾರ ಮಠದ ಕಾರ್ಯ ಶ್ಲಾಘನೀಯ ಎಂದು ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ಡಾ|| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.ತಾಲೂಕಿನ ಗೋಳಸಾರದ ಪೂಜ್ಯ ಪುಂಡಲಿಂಗ ಶಿವಯೋಗಿಗಳ ಮಠದಲ್ಲಿ ನಡೆದ ಸಾಮೂಹಿಕ ವಿವಾಹ, ಧರ್ಮಸಭೆ ಮತ್ತು ಸದ್ಗುರು ಚಿನ್ಮಯ ಮೂರ್ತಿ ತ್ರಿಮೂರ್ತಿ ಶ್ರೀಗಳ ೩೧ ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಗೋಳಸಾರ ಮಠ ಸ್ವ ಧರ್ಮ ನಿಷ್ಠೆಯಾಗಿ, ಪರ ಧರ್ಮದ ಸಹಿಷ್ಠುತೆಯಾಗಿ ಪ್ರೀತಿಯಿಂದ ಧರ್ಮ ಮಾರ್ಗದಲ್ಲಿ ಧೇಶಾಭಿಮಾನ ಬೆಳೆಸುವ ಸಂಸ್ಕೃತಿ ಉಳಿಸುವ ಬೆಳೆಸುವ ಕಾರ್ಯ ಮಾಡುತ್ತಿದೆ ಎಂದರು.ಗೋಳಸಾರ ಮಠ ಪಂಚ ಪೀಠಗಳ ಅಥವಾ ಯಾವದೇ ಪರಂಪರೆಯ ಶಾಖಾ ಮಠ ಅಲ್ಲ. ಶ್ರೀಶೈಲ ಪೀಠದ ಶಾಖಾ ಮಠವೂ ಅಲ್ಲ, ಆದರೆ ಎಲ್ಲ ಪರಂಪರೆಯನ್ನು ಪ್ರೀತಿಸುವ ಶ್ರೀಶೈಲ ಪೀಠದ ಖಾಸಾ ಮಠವಾಗಿದೆ ಎಂದು ಪ್ರಶಂಸಿದರು.ಇಂದು ಸಾಮೂಹಿಕ ವಿವಾಹದಲ್ಲಿ ೩೫ ಜೋಡಿಗಳು…

Read More