ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ರಾಜ್ಯದ ಐತಿಹಾಸಿಕ ಸ್ಥಳಗಳನ್ನು ವೀಕ್ಷಣೆ ಮಾಡಿದಾಗ ಚಿಣ್ಣರ ಚಿಲಿಪಿಲಿ ಕಲರವ ವೃದ್ಧಿಯಾಗಿ ಉತ್ತಮ ಭವಿಷ್ಯಕ್ಕೆ ಭದ್ರ ಬುನಾದಿಯಾಗುತ್ತದೆ ಎಂದು ಮಾಜಿ ಪುರಸಭೆ ಸದಸ್ಯ ಮಹಿಪಾಲರಡ್ಡಿ ಡಿಗ್ಗಾವಿ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ “ಚಿಣ್ಣರ ಕರ್ನಾಟಕ ದರ್ಶನ” ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕಲಿಕೆಗೆ ಶೈಕ್ಷಣಿಕ ಪ್ರವಾಸ ಪೂರಕವಾಗಲಿದ್ದು, ವಿದ್ಯಾರ್ಥಿಗಳು ಕೋಶ ಓದುವುದರ ಜೊತೆಗೆ ದೇಶ ಸುತ್ತಬೇಕು ಎಂಬ ನಾಣ್ಣುಡಿಯಂತೆ ಕರ್ನಾಟಕ ದರ್ಶನಕ್ಕೆ ತೆರಳುತ್ತಿರುವ ವಿದ್ಯಾರ್ಥಿಗಳು ವೀಕ್ಷಿಸಿದ ಸ್ಥಳಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ದಾಖಲಿಸಿಕೊಂಡು ಮುಂದಿನ ದಿನಗಳಲ್ಲಿ ಪ್ರವಾಸ ಕಥನ ಬೆರೆಯಲು ಮುಂದಾಗುವಂತೆ ಸಲಹೆ ನೀಡಿದರು.
ಇದೇ ವೇಳೆ ಸಿ ಆರ್ ಪಿ ಬಂದೇನವಾಜ್ ನಾಲತವಾಡ, ಇಸಿಒ ಶಿವಪುತ್ರಪ್ಪ, ಎಚ್ಎಮ್ ಎಮ್.ಬಿ ಪಾಟೀಲ, ಕೆಆರ್ ಪಾಟೀಲ್, ಸಂಗೀತ ಶಿಕ್ಷಕ ಯಮನೇಶ ಯಾಳಗಿ, ಚಿತ್ರಕಲೆ ಶಿಕ್ಷಕ ಶಶಿಧರ, ರಂಗಪ್ಪ ವಡ್ಡರ ಸೇರಿದಂತೆ ಇತರರು ಉಪಸ್ಥಿತರಿದ್ದು ಶುಭಹಾರೈಸಿ ಬೀಳ್ಕೊಟ್ಟರು.

