ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಜರುಗಿದ ಜಿಲ್ಲಾ ಕೃಷಿಕ ಸಮಾಜದ ಚುನಾವಣೆಯಲ್ಲಿ ವಿಜಯಪುರ ಜಿಲ್ಲಾ ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷರಾಗಿ ಬಸವನಬಾಗೇವಾಡಿಯ ಶಿವನಗೌಡ ಎಸ್ ಬಿರಾದಾರ ಹಾಗೂ ರಾಜ್ಯ ಪ್ರತಿನಿಧಿಯಾಗಿ ಶ್ರೀ ಸಂಜುಗೌಡ ಬಿ.ಪಾಟೀಲ(ಕನಮಡಿ) ಉಪಾಧ್ಯಕ್ಷರಾಗಿ ಗುರುಪಾದಪ್ಪ ನೆಲ್ಲಗಿ ಪ್ರಧಾನ ಕಾರ್ಯದರ್ಶಿಯಾಗಿ ರಮೇಶ ಪೂಜಾರಿ ಖಜಾಂಚಿಯಾಗಿ ಮಹಾದೇವ ಹಿರೇಕುರಬರ ಅವರು ಇಂದು ನಡೆದ ೫ ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು ಎಂದು ಜಂಟಿ ಕೃಷಿ ನಿರ್ದೇಶಕರಾದ ಶ್ರೀಮತಿ ರೂಪಾ.ಎಲ್ ಘೋಷಣೆ ಮಾಡಿದರು ಕೃಷಿಕ ಸಮಾಜದ ಮಾಜಿ ಜಿಲ್ಲಾ ಅಧ್ಯಕ್ಷ ದಾನಮ್ಮಗೌಡತಿ ಪಾಟೀಲ ಶಿವಪ್ಪಗೌಡ ಪಾಟೀಲ ರಾಮನಗೌಡ ಪಾಟೀಲ(ಹೆಬ್ಬಾಳ)ಶಂಕರ ರೇವಡಿ ಎಸ್ ಎಂ ಆನಂದಿ ಶಂಕರಗೌಡ ಪಾಟೀಲ(ಇಂಡಿ) ಅಯ್ಯನಗೌಡ ಪಾಟೀಲ(ಸೋಮನಾಳ) ಬಸವರಾಜ ಸೋಂಪುರ(ಮನಗೂಳಿ)ಬಸನಗೌಡ ಮಾಡಗಿ ಮಲ್ಲಣ್ಣ ಅಣ್ಣೆಪ್ಪನವರ ವಿ ಎಸ್ ಪಾಟೀಲ ಸಂಗನಗೌಡ ಪಾಟೀಲ ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ನಿಂಗನಗೌಡ ಸೋಲಾಪುರ ಚನ್ನಬಸು ದೇಸಾಯಿ ನಿಂಗನಗೌಡ ಕಚನೂರ ಮಲ್ಲಣ್ಣ ಹರನಾಳ ಶ್ರೀಶೈಲಗೌಡ ಪಾಟೀಲ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕಿನ ಕೃಷಿಕ ಸಮಾಜದ ತಾಲೂಕ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರತಿನಿಧಿಗಳು ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
