ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕ್ರೀಡೆಯು ಹೆಚ್ಚು ಸಕ್ರಿಯ ಮತ್ತು ಆರೋಗ್ಯಕರವಾಗಿರುತ್ತದೆ ಬೊಜ್ಜು, ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಚಿಕ್ಕಸಿಂದಗಿ ಶಾಲಾ ದೈಹಿಕ ಶಿಕ್ಷಕ ಎಂ ಕೆ ಬಿರಾದಾರ ಹೇಳಿದರು.
ಜ್ಯೋತಿ ನಗರದ ಲಿಟಲ್ ವಿಂಗ್ಸ್ ಪ್ರಿ ಸ್ಕೂಲ್ ಆವರಣದಲ್ಲಿ ಶನಿವಾರ ಜರುಗಿದ ಪಾಲಕರ ಕ್ರೀಡಾಕೂಟದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು, ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ. ಟೀಮ್‌ವರ್ಕ್, ಶಿಸ್ತು, ಗಮನ, ವಿನೋದ, ಆಲೋಚನಾ ಕೌಶಲ್ಯ ಮತ್ತು ದೈಹಿಕ ಸಮನ್ವಯವನ್ನು ಸುಧಾರಿಸುತ್ತದೆ ಎಂದರು
ಈ ಸಂದರ್ಭದಲ್ಲಿ ಅತಿಯಾಗಿ ಮಾತನಾಡಿದ ಶಿಕ್ಷಕ ಸಿದ್ದಲಿಂಗ ಚೌದರಿ ಮಾನವನ ವ್ಯಕ್ತಿತ್ವದ ರೂಪುರೇಖೆಯು ಅವನ ಬಾಲ್ಯದಿಂದ ಅವನ ಸುತ್ತಮುತ್ತಲಿರುವ ಶಿಕ್ಷಕರ, ಪಾಲಕರ ಹಾಗೂ ಸಮಾಜದ ಜನರ ಪ್ರಭಾವದಿಂದ ಆಗಿರುತ್ತದೆ. ವ್ಯಕ್ತಿಗೆ ಬರೀ ಶಿಕ್ಷಣವೊಂದೇ ಸಿಕ್ಕರೆ ಸಾಲದು, ಅದರ ಜೊತೆ ಇನ್ನು ಅನೇಕ ಅಂಶಗಳನ್ನು ಬಾಲ್ಯದಿಂದ ರೂಢಿಸಿಕೊಂಡರೆ ಆತ ಯಶಸ್ವಿ ಪುರುಷನೆನ್ನಿಸಿಕೊಳ್ಳುತ್ತಾನೆ ಎಂದರು.
ಶಿಕ್ಷಕ ರವಿಕುಮಾರ ಪಾಟೀಲ, ವರ್ತಕರಾದ ಪರಮೇಶ್ವರ ಮಲ್ಲೇದ, ಸಂತೋಷ ಶಿರಕನಳ್ಳಿ ವೇದಿಕೆ ಸಂಸ್ಥೆ ಅಧ್ಯಕ್ಷೆ ಭಾರತಿ ಚೌಧರಿ ಮೇಲಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಪೂಜಾ ಗಾಯಕವಾಡ ಸ್ವಾಗತಿಸಿದರು. ಶಿಕ್ಷಕ ದೇವರಾಜ ಗತ್ತಿ ಪ್ರಾರ್ಥಿಸಿದರು ಶಿಕ್ಷಕಿ ನಗ್ಮಾ ಪಾಟೀಲ ನಿರೂಪಿಸಿದರು. ಬಾಗ್ಯ ಕೋತಂಬರಿ ವಂದಿಸಿದರು
ಅಭಿಷೇಕ್ ಚೌಧರಿ, ಸುಮಾ ಬಿರಾದಾರ, ಸುಷ್ಮಾ ಚೌದರಿ, ಪ್ರೀತಿ ಸೂರ್ಯವಂಶಿ,ಮಹೇಶ್ವರಿ ಶ್ರೀಧರ್, ಖುಷಿ ಪಾಟೀಲ ಪೂರ್ಣಿಮಾ ಪಾಟೀಲ, ದರೇಶ ಕುಂಬಾರ ಹೇಮಲತಾ ನಾಯಕೋಡಿ, ನೀಲಮ್ಮ ಅಗಸರ
ಸೇರಿದಂತೆ ಅನೇಕರು ಉಪಸ್ಥಿತರಿದ್ದರು

