Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಫೆ೧೫ ರಿಂದ ೨೦ರ ಒಳಗೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ನಿರ್ಧರಿಸಿದ್ದೇವೆ. ಎಲ್ಲ ಸಾಹಿತಿಗಳು ಸಾಹಿತ್ಯಾಸಕ್ತರು ಸೂಕ್ತ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಸಮ್ಮೇಳನದ ಯಶಸ್ವಿಗೆ ಶ್ರಮಿಸಬೇಕು ಎಂದು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ವಿನಂತಿಸಿದರು.ಪಟ್ಟಣದ ಶಾರದಾ ವಿದ್ಯಾಮಂದಿರದಲ್ಲಿ ಈ ಕುರಿತು ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಅವಧಿ ಕಡಿಮೆ ಇರುವದರಿಂದ ಸಮಿತಿ ರಚನೆ, ಲಾಂಛನ ಸಿದ್ಧಪಡಿಸುವಿಕೆ, ಕವಿಗೋಷ್ಟಿಗಳಿಗೆ ಹೆಸರುಗಳ ಬಿಡುಗಡೆ, ಸಂಪನ್ಮೂಲ ಕ್ರೂಢಿಕರಣ ಹೀಗೆ ಹಲವು ಕಾರ್ಯಗಳು ತುರ್ತಾಗಿ ಆಗಬೇಕಾಗಿರುವದರಿಂದ ಎಲ್ಲ ಹಿರಿಯ ಸಾಹಿತಿಗಳ, ಅನುಭವಿಗಳ ಮಾರ್ಗದರ್ಶನ, ಸಲಹೆಗಳು ಅತೀ ಅವಶ್ಯ. ಪೂರ್ವಭಾವಿ ಸಭೆ ಕರೆದಾಗ ಎಲ್ಲರೂ ತಪ್ಪದೇ ಆಗಮಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದಲ್ಲಿ ಮಾತ್ರ ಸಮ್ಮೇಳನವನ್ನು ಯಶಸ್ವಿಗೊಳಿಸಲು ಸಾಧ್ಯ. ಬರುವ ದಿನಗಳಲ್ಲಿ ಮತ್ತೊಮ್ಮೆ ಪೂರ್ವಭಾವಿ ಸಭೆ ಕರೆಯಲಾಗುವದು. ತಪ್ಪದೇ ಭಾಗಿಯಾಗುವಂತೆ ಮನವಿ ಮಾಡಿಕೊಂಡರು.ಈ ವೇಳೆ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ, ಮಾಜಿ ಕಸಾಪ ಅಧ್ಯಕ್ಷ ಎಂ.ಬಿ.ನಾವದಗಿ, ಹಿರಿಯ ಸಾಹಿತಿಗಳಾದ…

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ದೇಶ ಕಂಡ ಮಹಾನ್ ಚೇತನ, ಮನುಕುಲದ ಒಳಿತಿಗಾಗಿ ಶ್ರಮಿಸಿದ 15 ನೇ ಶತಮಾನದ ವಚನಕಾರ ಶ್ರೀ ‌ ಮಹಾಯೋಗಿ ವೇಮನರ ಆದರ್ಶಗಳು ನಮ್ಮೆಲ್ಲರ ಬದುಕಿಗೆ ದಾರಿದೀಪ ಎಂದು ಹೇಮರೆಡ್ಡಿ ಮಲ್ಲಮ್ಮ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಹಾಗೂ ಆಶ್ರಯ ಕಮಿಟಿ ಅಧ್ಯಕ್ಷ ಶರಣಬಸವ ಕಾಕಾ ಡಿಗ್ಗಾವಿ ಹೇಳಿದರು.ಪಟ್ಟಣದ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸೌಹಾರ್ದ ಪತ್ತಿನ ಸಹಕಾರಿ ಸಂಘ (ನಿ) ಕಾರ್ಯಾಲಯದಲ್ಲಿ ರವಿವಾರ ಬೆಳಗ್ಗೆ ಹಮ್ಮಿಕೊಂಡಿದ್ದ ಶ್ರೀ ಮಹಾಯೋಗಿ ವೇಮನರ 613 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಮಹಾಯೋಗಿ ವೇಮನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ಕನ್ನಡದಲ್ಲಿ ಸರ್ವಜ್ಞ, ತಮಿಳಿನಲ್ಲಿ ತಿರುವಳ್ಳುವರ್, ಅವರಂತೆ ತೆಲುಗಿಗೆ ವೇಮನ ವಚನಕಾರರು ಎಂದವರು, ಜನಸಾಮಾನ್ಯರ ಕವಿಯಾಗಿ, ಕಾವ್ಯದ ಮೂಲಕ ಅಸಮಾನತೆಯನ್ನು ಧಿಕ್ಕರಿಸಿದ ಶ್ರೇಷ್ಠ ಸಂತ ಶ್ರೀ ಮಹಾಯೋಗಿ ವೇಮನರ ಬದುಕು ಬರಹಗಳನ್ನು ಇಂದಿನ ಯುವಜನತೆ ಅಳವಡಿಸಿಕೊಂಡು ಉತ್ತಮ ವ್ಯಕ್ತಿಗಳಾಗಿ, ಸಮಾಜದ ಶಕ್ತಿಯಾಗಿ ಬಾಳುವಂತೆ ಕರೆ…

Read More

ಇಂದು ಜನವರಿ 21 ನಿಜ ಶರಣ ಅಂಬಿಗರ ಚೌಡಯ್ಯ ಅವರ ಜಯಂತಿ ನಿಮಿತ್ತ ಈ ವಿಶೇಷ ಲೇಖನ ಲೇಖನ- ಶ್ರೀಮತಿ ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿ, ಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಅದೊಂದು ಸೋಮವಾರದ ದಿನ ಮಂತ್ರಿಮಂಡಲಕ್ಕೆ ರಜೆ. ಅಣ್ಣ ಬಸವಣ್ಣನವರು ತಮ್ಮ ಇಬ್ಬರು ಪತ್ನಿಯರನ್ನು ಕರೆದು ಇಂದು ಹೊಳೆಯ ಆಚೆಗಿನ ಶಿವ ದೇವಾಲಯಕ್ಕೆ ಹೋಗಿ ಬರೋಣ ಎಂದು ಹೇಳಿದರು. ಸಪತ್ರಿಕರಾಗಿ ಶಿವ ದೇವಾಲಯಕ್ಕೆ ಹೊರಟ ಬಸವಣ್ಣನವರು ಹೊಳೆಯ ಈಚೆ ಬದಿಯಲ್ಲಿ ಬಿಜ್ಜಳ ಮಹಾರಾಜನು ಕಟ್ಟಿಸುತ್ತಿದ್ದ ಅರಮನೆಯನ್ನು ವೀಕ್ಷಿಸಿದರು. ನಂತರ ಹೊಳೆಯ ಬಳಿ ಸಾಗಿ ತೆಪ್ಪ ನಡೆಸುವ ಅಂಬಿಗನನ್ನು ಹೊಳೆಯಾಚೆಗಿನ ಶಿವ ದೇವಾಲಯಕ್ಕೆ ಬರುವಿರಾ ಎಂದು ಕೇಳಿದಾಗ ಆತ ಅತ್ಯಂತ ಅದ್ಭುತವಾಗಿ ಈ ಹೊಳೆಯನ್ನು ನಾನು ದಾಟಿಸಬಲ್ಲೆ, ಭವದ ಹೊಳೆಯಲ್ಲ ಎಂದು ಹೇಳಿದನು. ಆತನ ಮಾತಿನಿಂದ ಚಕಿತರಾದ ಬಸವಣ್ಣನವರು ಆತನ ನಿರ್ಭಿಡೆಯ ವ್ಯಕ್ತಿತ್ವ, ಬಿರುಸಾದ ಮಾತುಗಳು ಒಂದು ಕ್ಷಣ ಅವನನ್ನೇ ದಿಟ್ಟಿಸಿ ನೋಡುವಂತೆ ಮಾಡಿದವು. ಮುಂದೆ ಲೋಕಾಭಿರಾಮದ ಮಾತುಗಳನ್ನಾಡುತ್ತಾ ಆಚೆ ದಡ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತಾರೆ ಅನ್ನೋ ಭಾವನೆ ಕಾಂಗ್ರೆಸ್ ನಾಯಕರಲ್ಲಿ ಸೃಷ್ಟಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.ತಾಲೂಕಿನ ಕುಂಟೋಜಿ ಗ್ರಾಮಕ್ಕೆ ಆಗಮಿಸಿದ ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಸಿದ್ಧರಾಮಯ್ಯನವರೇ ೫ ವರ್ಷಗಳ ಕಾಲ ಮುಖ್ಯ ಮಂತ್ರಿ ಅಂತಾ ಡಿಕೆಶಿ, ಸುರೇಶ ಮತ್ತು ಜಾರಕಿಹೊಳಿ ಕೂಡ ಹೇಳ್ತಾರೆ. ಪುನಃ ಅವರವರೇ ಮೀಟಿಂಗ್ ಮಾಡ್ತಾರೆ. ಒಂದೆಡೆ ಒಕ್ಕಲಿಗರ ಮೀಟಿಂಗ್, ಇನ್ನೊಂದೆಡೆ ಹಿಂದುಳಿದವರ ದಲಿತರ ಮೀಟಿಂಗ್ ಹಿಗೆ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಜಾತಿಯ ವಿಷಬೀಜ ಬಿತ್ತುತ್ತಿದೆ ಎಂದರು.ಈ ವೇಳೆ ಮಲಕೇಂದ್ರಗೌಡ ಪಾಟೀಲ, ಕೆಂಚಪ್ಪಣ್ಣ ಬಿರಾದಾರ, ಮುತ್ತಣ್ಣ ಹುಗ್ಗಿ, ಸಂಗಮ್ಮ ದೇವರಳ್ಳಿ, ಶಿಲ್ಪಾ ಕುದರಗೊಂಡ ಸೇರಿದಂತೆ ಹಲವರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಮಹಾತ್ಮಾ ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವ ಸಂದರ್ಭದಲ್ಲಿ ದೇಶ ಸ್ವತಂತ್ರವಾದ ನಂತರ ಗೋ ಹತ್ಯೆ ನಿಷೇಧ ನಮ್ಮ ಮೊದಲನೇ ಕಾನೂನು ಆಗಿರುತ್ತೆ ಅಂತ ಹೇಳಿದ್ರು. ಸಧ್ಯ ಅವರೇನಾದ್ರು ಬದುಕಿದ್ರೆ ಗೋವಿನ ಬಗ್ಗೆ ಈ ಕಾಂಗ್ರೇಸ್ ನವರು ನಡೆಸಿಕೊಳ್ಳೋ ರೂಪ ನೋಡಿದ್ರೆ ನೇಣು ಹಾಕಿಕೊಂಡು ಸತ್ತೇ ಹೋಗತಿದ್ರು ಎಂದು ಮಾಜಿ ಉಪ ಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ಸರ್ಕಾರಕ್ಕೆ ಕುಟುಕಿದರು.ತಾಲೂಕಿನ ಕುಂಟೋಜಿ ಗ್ರಾಮ ವ್ಯಾಪ್ತಿಯಲ್ಲಿ ನಡೆದ ಕ್ರಾಂತಿವೀರ ಬ್ರಿಗೇಡ್ ಕರ್ನಾಟಕದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಗೋವನ್ನ ಪ್ರತಿದಿನ ಕೊಲ್ಲಲಾಗುತ್ತಿದೆ. ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ ಮಂಜುನಾಥ ಸ್ವಾಮಿಯ ದರ್ಶನಕ್ಕೆಂದು ತೆರಳುವ ಭಕ್ತರಿಗೆ ಹಸುವಿನ ತಲೆ, ಚರ್ಮದ ದರ್ಶನವಾಗುತ್ತಿದೆ. ಇದರ ಹಿಂದೆ ಈ ದೇಶದ ಹಿಂದೂಗಳಿಗೆ ನೋವಾಗಲಿ ಎನ್ನುವ ಉದ್ದೇಶ ಇದೆ. ಸರ್ಕಾರ ಇದಕ್ಕೆ ಯಾರೊಬ್ಬ ಆರೋಪಿಯನ್ನು ಬಂಧಿಸಿಲ್ಲ. ಹಿಂದೆ ನಮ್ಮ ಸರ್ಕಾರದಲ್ಲಿ ಎಲ್ಲ ಜಿಲ್ಲೆಗಳಿಗೆ ಗೋ ಶಾಲೆ ತೆರೆಯಲು ಬಜೆಟ್ ನಲ್ಲಿ ದುಡ್ಡಿಡಲಾಗಿತ್ತು. ೧೪ ಜಿಲ್ಲೆಗಳಲ್ಲಿ ಗೋ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಜ೨೧ ರಂದು ಬೆಳಗಾವಿಯಲ್ಲಿ ನಡೆಯಲಿರುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗೋಣ ಎಂದು ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಕರೆ ನೀಡಿದರು.ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಗಾಂಧೀಜಿಯವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ನೂರು ವರ್ಷ ತುಂಬಿದ ಹಿನ್ನೆಲೆ, ಅವರ ನೆನಪುಗಳನ್ನು ಜನತೆಗೆ ಮುಟ್ಟಿಸುವ ಮೂಲಕ ಗಾಂಧಿ ತತ್ವಗಳನ್ನು ಅಳವಡಿಸಿಕೊಂಡಲ್ಲಿ ರಾಜಕಾರಣದಲ್ಲಿ ಬದಲಾವಣೆಯನ್ನು ತರಲು ಸಾಧ್ಯ ಎನ್ನುವ ಉದ್ದೇಶದಿಂದ ಈ ಸಮಾವೇಶವನ್ನು ಆಯೋಜಿಸಲಾಗಿದೆ. ಅಂದಾಜು ಒಂದೂವರೆ ಲಕ್ಷ ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಅನ್ನೋದು ಸಂಕಲ್ಪವಾಗಿದೆ. ವಿಶೇಶವಾಗಿ ಪಂಚಾಯತ ಸದಸ್ಯರುಗಳು, ಮುಖಂಡರುಗಳು, ಕೇಂದ್ರ ಕಾರ್ಯಕರ್ತರು ಮತ್ತು ಗಣ್ಯ ಮಾನ್ಯರು ಕಡ್ಡಾಯವಾಗಿ ಭಾಗುವಂತೆ ಕಟ್ಟಪ್ಪಣೆ ನೀಡಲಾಗಿದೆ ಎಂದರು.ಅಂದು ಬೆಳಿಗ್ಗೆ ೧೧ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗುವದು. ಯಾವುದೇ ವಿಳಂಬವಾಗುದಿಲ್ಲ ಎಂದು ತಿಳಿಸಲಾಗಿದೆ. ಹೊರಡುವ ದಿನ ವಾಹನಗಳು ತಯಾರಿಯಲ್ಲಿರುತ್ತವೆ. ಮಹಿಳಾ ಕಾರ್ಯಕರ್ತರಿಗೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಸುನಿತಾ ಬಿ ಅವರು ಸಲ್ಲಿಸಿದ್ದ “ಎ ಸ್ಟಡಿ ಆನ್ ಫೀಜಿಕೊ-ಕೆಮಿಕಲ್ ಪ್ರಾಫರ್ಟಿಸ್, ಆಂಟಿಆಕ್ಸಿಡೇಂಟ್ ಎಫಿಕಸಿ, ಸ್ಟೋರೆಜ್ ಆಂಡ್ ಸೆನ್ಸರಿ ಇವ್ಹಾಲ್ಯೂಯೇಶನ್ ಆಫ್ ಫ್ರೇಶ್ ಆಂಡ್ ಡ್ರೆöÊಡ್ ಕರೊಂಡ (ಕರೀಸಾ ಕರಂದಸ್)” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.ಸುನಿತಾ ಬಿ ಅವರು ಆಹಾರ ಸಂಸ್ಕರಣೆ ಮತ್ತು ಪೋಷಣೆ ವಿಭಾಗದ ಪ್ರೊ.ರೇಣುಕಾ ಮೇಟಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಸುನಿತಾ ಬಿ ಅವರನ್ನು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಖರ ಅಭಿನಂದಿಸಿದ್ದಾರೆ.

Read More

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಗುಡುಗು ಬೆಳಗಾವಿ: ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ನಿಮ್ಮಪ್ಪನ ಮುಖ್ಯಮಂತ್ರಿ ಮಾಡಲು ನಾನು ಶಾಸಕ ಸ್ಥಾನ ತ್ಯಾಗ ಮಾಡಿದ್ದೆ ಎಂದು ಶನಿವಾರ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ನಾಲಿಗೆ ಬಿಗಿ ಹಿಡಿದು ಮಾತಾಡಿ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ತಿರುಗೇಟು ನೀಡಿದ್ದಾರೆ.ಶನಿವಾರ ಬೆಳಗಾವಿ ಜಿಲ್ಲೆಯ ಅಂಕಲಗಿ ಗ್ರಾಮದಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದ ರಮೇಶ್ ಜಾರಕಿಹೊಳಿ, ನಾನು ನಿಮ್ಮಪ್ಪನ್ನೇ ಸಿಎಂ ಮಾಡೋದಕ್ಕೆ ಬಿಜೆಪಿಗೆ ಬಂದಿದ್ದು ವಿಜಯೇಂದ್ರಾ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.ವಿಜಯೇಂದ್ರ ನೀನು ಇನ್ನೂ ಬಚ್ಚಾ ಇದ್ದೀಯಾ ರಾಜ್ಯಾಧ್ಯಕ್ಷ ಆಗೋದಕ್ಕೆ ನೀನಗೆ ಯೋಗ್ಯತೆಯಿಲ್ಲ. ಯಡಿಯೂರಪ್ಪ ಬಗ್ಗೆ ನನಗೆ ಈಗಲೂ ಗೌರವವಿದೆ. ಅಗೌರವದಿಂದ ಮಾತನಾಡಿಲ್ಲ. ಈಗಲೂ ಯಡಿಯೂರಪ್ಪ ನಮ್ಮ‌ ನಾಯಕರಿದ್ದಾರೆ ಎಂದರು.ವಿಜಯೇಂದ್ರ ನೀನೆ ಡೇಟ್ ಫಿಕ್ಸ್ ಮಾಡು, ನಾನು ಶಿಕಾರಿಪುರದಲ್ಲಿ ನಿಮ್ಮ ಮನೆ ಮುಂದಿನಿಂದಲೇ ರಾಜ್ಯ ಪ್ರವಾಸ ಶುರುಮಾಡುತ್ತೇನೆ. ನಿನ್ನ ಸವಾಲನ್ನು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯರಾದ ಬಿಲ್ಕೀಸ್ ಬಾನೋ ಇಂದು ಸಿಕ್ಯಾಬ್ ಸಂಸ್ಥೆಗೆ ಭೇಟಿ ನೀಡಿ ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳನ್ನು ಹಾಗೂ ಸಾಧನೆಗಳನ್ನು ಶ್ಲಾಘಿಸಿದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಸ್. ಎ. ಪುಣೇಕರ್ ಅವರ ಪರಿಶ್ರಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕೌಶಲ್ಯ ಬೆಳೆಸಿ ಕೊಳ್ಳಬೇಕೆಂದು ಹೇಳಿದರು.ಅದರಲ್ಲೂ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಶೈಕ್ಷಣಿಕವಾಗಿ ಮುಂದುವರೆಯುತ್ತಿರುವ ಬೆಳವಣಿಗೆಯು ಸಮಾಜದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಅಭಿಪ್ರಾಯ ಪಟ್ಟರು. ಸರ್ಕಾರದಿಂದಾಗುವಶೈಕ್ಷಣಿಕ ಯೋಜನೆಗಳು ಸೌಲಭ್ಯಗಳನ್ನು ನೀಡುವ ಬಗ್ಗೆ ಭರವಸೆ ನೀಡಿದರು.ಸಭೆಯಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಪದಾಧಿಕಾರಿಗಳು ಮತ್ತು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಸ್.ಎ.ಪುಣೇಕರ, ನಿರ್ದೇಶಕರಾದ ಸಲಾವುದ್ದೀನ್ ಪುಣೇಕರ್, ಸಂಸ್ಥೆಯ ಕಾರ್ಯದರ್ಶಿ ಎ.ಎಸ್. ಪಾಟೀಲ, ಇಂಜಿನಿಯರಿಂಗ್ ಕಾಲೇಜ್ ಪ್ರಾಂಶುಪಾಲರಾದ ಸೈಯದ್ ಅಬ್ಬಾಸ್ ಅಲಿ,ಪಿಯು ಕಾಲೇಜಿಗಳ ಡೀನ್ ಎನ್. ಎಸ್. ಭೂಸನೂರ, ಎ ಆರ್ ಎಸ್ ಇನಾಮದಾರ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್. ಕೆ. ಯಡಹಳ್ಳಿ,…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಇಂದಿರಾ ನಗರದ ಯುವತಿ ಅಪ್ಸಾನಾ ಬೇಗಂ ರಾಜಿಭಾಯಿ ಕಾಣೆಯಾದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜ೧೭ ರಂದು ನಸುಕಿನ ಜಾವ ೨ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಇರುವ ಟಾಯಲೆಟ್ ಗೆ ಹೋಗಿ ಬರುವದಾಗಿ ಹೇಳಿ ಹೋಗಿದ್ದು ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾಳೆ ಎಂದು ಯುವತಿಯ ತಂದೆ ಮೌಲಾಸಾಬ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

Read More