ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತಾರೆ ಅನ್ನೋ ಭಾವನೆ ಕಾಂಗ್ರೆಸ್ ನಾಯಕರಲ್ಲಿ ಸೃಷ್ಟಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ತಾಲೂಕಿನ ಕುಂಟೋಜಿ ಗ್ರಾಮಕ್ಕೆ ಆಗಮಿಸಿದ ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಸಿದ್ಧರಾಮಯ್ಯನವರೇ ೫ ವರ್ಷಗಳ ಕಾಲ ಮುಖ್ಯ ಮಂತ್ರಿ ಅಂತಾ ಡಿಕೆಶಿ, ಸುರೇಶ ಮತ್ತು ಜಾರಕಿಹೊಳಿ ಕೂಡ ಹೇಳ್ತಾರೆ. ಪುನಃ ಅವರವರೇ ಮೀಟಿಂಗ್ ಮಾಡ್ತಾರೆ. ಒಂದೆಡೆ ಒಕ್ಕಲಿಗರ ಮೀಟಿಂಗ್, ಇನ್ನೊಂದೆಡೆ ಹಿಂದುಳಿದವರ ದಲಿತರ ಮೀಟಿಂಗ್ ಹಿಗೆ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಜಾತಿಯ ವಿಷಬೀಜ ಬಿತ್ತುತ್ತಿದೆ ಎಂದರು.
ಈ ವೇಳೆ ಮಲಕೇಂದ್ರಗೌಡ ಪಾಟೀಲ, ಕೆಂಚಪ್ಪಣ್ಣ ಬಿರಾದಾರ, ಮುತ್ತಣ್ಣ ಹುಗ್ಗಿ, ಸಂಗಮ್ಮ ದೇವರಳ್ಳಿ, ಶಿಲ್ಪಾ ಕುದರಗೊಂಡ ಸೇರಿದಂತೆ ಹಲವರು ಇದ್ದರು.

