ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ದೇಶ ಕಂಡ ಮಹಾನ್ ಚೇತನ, ಮನುಕುಲದ ಒಳಿತಿಗಾಗಿ ಶ್ರಮಿಸಿದ 15 ನೇ ಶತಮಾನದ ವಚನಕಾರ ಶ್ರೀ ಮಹಾಯೋಗಿ ವೇಮನರ ಆದರ್ಶಗಳು ನಮ್ಮೆಲ್ಲರ ಬದುಕಿಗೆ ದಾರಿದೀಪ ಎಂದು ಹೇಮರೆಡ್ಡಿ ಮಲ್ಲಮ್ಮ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಹಾಗೂ ಆಶ್ರಯ ಕಮಿಟಿ ಅಧ್ಯಕ್ಷ ಶರಣಬಸವ ಕಾಕಾ ಡಿಗ್ಗಾವಿ ಹೇಳಿದರು.
ಪಟ್ಟಣದ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸೌಹಾರ್ದ ಪತ್ತಿನ ಸಹಕಾರಿ ಸಂಘ (ನಿ) ಕಾರ್ಯಾಲಯದಲ್ಲಿ ರವಿವಾರ ಬೆಳಗ್ಗೆ ಹಮ್ಮಿಕೊಂಡಿದ್ದ ಶ್ರೀ ಮಹಾಯೋಗಿ ವೇಮನರ 613 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಮಹಾಯೋಗಿ ವೇಮನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ಕನ್ನಡದಲ್ಲಿ ಸರ್ವಜ್ಞ, ತಮಿಳಿನಲ್ಲಿ ತಿರುವಳ್ಳುವರ್, ಅವರಂತೆ ತೆಲುಗಿಗೆ ವೇಮನ ವಚನಕಾರರು ಎಂದವರು, ಜನಸಾಮಾನ್ಯರ ಕವಿಯಾಗಿ, ಕಾವ್ಯದ ಮೂಲಕ ಅಸಮಾನತೆಯನ್ನು ಧಿಕ್ಕರಿಸಿದ ಶ್ರೇಷ್ಠ ಸಂತ ಶ್ರೀ ಮಹಾಯೋಗಿ ವೇಮನರ ಬದುಕು ಬರಹಗಳನ್ನು ಇಂದಿನ ಯುವಜನತೆ ಅಳವಡಿಸಿಕೊಂಡು ಉತ್ತಮ ವ್ಯಕ್ತಿಗಳಾಗಿ, ಸಮಾಜದ ಶಕ್ತಿಯಾಗಿ ಬಾಳುವಂತೆ ಕರೆ ನೀಡಿದರು.
ಸಂಸ್ಥೆಯ ನಿರ್ದೇಶಕರಾದ, ರಾಮನಗೌಡ ವಂದಗನೂರು, ವೈ ಟಿ ಪಾಟೀಲ, ರವೀಂದ್ರ ಧರಿ, ಉಪನ್ಯಾಸಕ ಡಾ ಯಂಕನಗೌಡ ಎಸ್ ಪಾಟೀಲ, ಮುಖ್ಯ ಕಾರ್ಯನಿರ್ವಾಹಕ ಸುರೇಶ ಯಾಳಗಿ, ಸಿಬ್ಬಂದಿಗಳಾದ ಶ್ಯಾಮಸುಂದರ ನಾಡಿಗೇರ, ಚಂದುಸಿಂಗ್ ಯಾಳಗಿ, ಶಿವು ಪತ್ತೇಪುರ, ಚಂದ್ರಶೇಖರ ಪತ್ತೇಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

