Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದಲ್ಲಿ ಫೆ. ೪ ರಂದು ಐತಿಹಾಸಿಕವಾಗಿ ಜರುಗಲಿರುವ ಕ್ರಾಂತಿವೀರ ಬ್ರಿಗೇಡ್ ಕರ್ನಾಟಕ ಉದ್ಘಾಟನೆ ಕಾರ್ಯಕ್ರಮದ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಸೋಮವಾರ ಬಸವೇಶ್ವರ ದೇವಸ್ಥಾನ ಮುಂಭಾಗ ಮಖನಾಪೂರದ ಸೋಮಲಿಂಗ ಮಹಾರಾಜರು,ಜಕ್ಕನೂರಿನ ಡಾ. ಮಾದುಲಿಂಗ ಮಹಾರಾಜರು, ಅರಳಿಚಂಡಿಯ ಪರಮಾನಂದ ಮಹಾರಾಜರು ಸೇರಿದಂತೆ ವಿವಿಧ ಶ್ರೀಗಳು, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಭವ್ಯರಥ ಯಾತ್ರೆಗೆ ಚಾಲನೆ ನೀಡಿದರು.ಭವ್ಯ ರಥ ಯಾತ್ರೆಗೆ ಚಾಲನೆ ನೀಡುವ ಮೊದಲು ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ ದೇವರಿಗೆ ಕ್ರಾಂತಿವೀರ ಬ್ರಿಗೇಡ್ ಸಂಸ್ಥಾಪಕ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಿವಿಧ ಶ್ರೀಗಳೊಂದಿಗೆ ಪೂಜೆ, ಮಂಗಳಾರತಿ ನೆರವೇರಿಸಿದರು. ಭವ್ಯ ರಥಯಾತ್ರೆ ಚಾಲನೆಗೊಂಡ ನಂತರ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದು ಧರ್ಮ ಹಾಗೂ ದೇಶದ ರಕ್ಷಣೆ, ಹಿಂದುಳಿದ ವರ್ಗ ಸೇರಿದಂತೆ ಎಲ್ಲ ಜನರಿಗೂ ನ್ಯಾಯ ಒದಗಿಸುವದು ಕ್ರಾಂತಿವೀರ ಬ್ರಿಗೇಡ್ ಸಂಘಟನೆಯ ಉದ್ದೇಶವಾಗಿದೆ. ಈ ಸಂಘಟನೆಯು ಜಾತ್ಯಾತೀತ, ಪಕ್ಷಾತೀತವಾಗಿದೆ. ಬಸವೇಶ್ವರ ಜನ್ಮಸ್ಥಳ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಸಮೀಪದ ನಿವರಗಿ ಗ್ರಾಮದ ಸಂಗಮೇಶ್ವರಪ್ರೌಢ ಶಾಲೆಯ ವಿದ್ಯಾರ್ಥಿಗಳು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಶಾಲಾ ವಿದ್ಯಾರ್ಥಿಗಳಿಗಾಗಿ 2024ನೇ ಸಾಲಿನಲ್ಲಿ ಸ್ವಾತಂತ್ರ್ಯ ಚಳುವಳಿಗೆ ವಿಷಯಕ್ಕೆ ಸಂಬಂಧಿಸಿದಂತೆ ಆನ್‌ಲೈನ್ ಮೂಲಕ ನಡೆಸಿದ ಮೂರನೇ ವರ್ಷದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಂಗಮೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ರವಿಶಂಕರ ಪೋಲಾದಿ ಜಿಲ್ಲೆಗೆ ಪ್ರಥಮ, ಸಂಗಮೇಶ ವಿಠ್ಠಲ್ ತೇಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ.ವಿದ್ಯಾರ್ಥಿಗಳ ಇವರ ಸಾಧನೆಗೆ , ಶಾಲೆಯ ಆಡಳಿತ ಮಂಡಳಿ, ಮುಖ್ಯ ಗುರುಗಳು, ಸಿಬ್ಬಂದಿ ವರ್ಗ ಮತ್ತು ಊರಿನ ಗ್ರಾಮಸ್ಥರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜ.20 ಸೋಮವಾರ ರಂದು ಸಂಜೆ ನಗರದ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ರಾಮನಗೌಡ ಹಟ್ಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು (ಅಪರಾಧ), ಸುನೀಲ್ ಕಾಂಬಳೆ, ಡಿಎಸ್‌ಪಿ ಸಿ.ಇ.ಎನ್ ಪೊಲೀಸ್ ಠಾಣೆ ಹಾಗೂ ನರೇಂದ್ರ ಬಾಬು, ಲೀಡ್ ಬ್ಯಾಂಕ್ ಮ್ಯಾನೇಜರ್ ವಿಜಯಪುರ ಇವರ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯ ಎಲ್ಲ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಬ್ಯಾಂಕ್‌ಗಳಲ್ಲಿ ಭದ್ರತೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.ಈ ಕಾರ್ಯಾಗಾರದಲ್ಲಿ ಬ್ಯಾಂಕ್‌ಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು, ಎ.ಟಿ.ಎಮ್ ಗಳಿಗೆ ಭದ್ರತೆ, ಬ್ಯಾಂಕ್ ಗ್ರಾಹಕರಿಗೆ ಜಾಗೃತಿ ಮೂಡಿಸುವುದು ಸೇರಿದಂತೆ ಇನ್ನಿತರ ಸೂಚನೆಗಳನ್ನು ನೀಡಲಾಯಿತು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಗರದ ಖೇಮು ರಾಠೋಡ ಎಂಬುವವರ ಮಾಲೀಕತ್ವದ ಇಟ್ಟಂಗಿ ಭಟ್ಟಿಯಲ್ಲಿ ಕಾರ್ಮಿಕರಾಗಿ, ಅಲ್ಲಿರೇ ವಾಸವಾಗಿದ್ದ ಸದಾಶಿವ ಬಸಪ್ಪ ಮಾದರ ಸದಾಶಿವ ಚಂದ್ರಪ್ಪ ಬಬಲಾದಿ ಹಾಗೂ ಉಮೇಶ ಮಾಳಪ್ಪ ಮಾದರ ಅವರ ಮೇಲೆ ಮನಸೋಯಿಚ್ಛೆ ಥಳಿಸಿ, ಮಾರಣಾಂತಿಕ ಹಲ್ಲೆಗೈದ ಮಾಲೀಕ ಖೇಮು ರಾಠೋಡ ಸೇರಿದಂತೆ ಐವರು ಆರೋಪಗಳನ್ನು ಪೋಲೀಸರು ಸೋಮವಾರ ಬಂಧಿಸಿದ್ದಾರೆ.ಘಟನೆ ಹಿನ್ನೆಲೆ: ಜ.13ರಂದು ಸಂಕ್ರಮಣ ಹಬ್ಬದ ನಿಮಿತ್ಯ ಎಲ್ಲ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಿದ್ದರು. ಜ.15 ರಂದು ಇಟ್ಟಂಗಿ ಭಟ್ಟಿ ಮಾಲೀಕರು ಕಾರ್ಮಿಕರಿಗೆ ಫೋನ್ ಮಾಡಿ ಕೆಲಸಕ್ಕೆ ಮರಳಿ ಬರುವಂತೆ ತಿಳಿಸಿದ್ದು, ಆಗ ಕಾರ್ಮಿಕರು ಹಬ್ಬದ ಖರ್ಚಿಗೆ 10 ಸಾವಿರ ಹಣ ಕೇಳಿದ್ದು, ಮಾಲೀಕ ಕೊಡುತ್ತೇನೆ ಅಂತಾ ಹೇಳಿ ಇಟ್ಟಂಗಿ ಭಟ್ಟಿಗೆ ಬರಲು ಹೇಳಿದ್ದು, ಅದರಂತೆ ಮೂವರು ಕಾರ್ಮಿಕರು ಜ.15 ರಂದು ಬೆಳಗ್ಗೆ ಇಟ್ಟಂಗಿ ಭಟ್ಟಿಗೆ ಬಂದಿದ್ದರು. ಆಗ ಮಾಲೀಕ ಖೇಮು ರಾಠೋಡ, ಆತನ ಮಗ ರೋಹನ ರಾಠೋಡ ಹಾಗೂ ಇನ್ನೂ…

Read More

ಪಕ್ಷಕ್ಕಾಗಿ ತ್ಯಾಗ ಮಾಡಿಕೊಂಡೇ ಬಂದಿದ್ದೇನೆ, ಮುಂದೆಯೂ ಮಾಡುತ್ತೇನೆ | ಪಕ್ಷವನ್ನು ಉಳಿಸುವುದು, ನನ್ನ ಕರ್ತವ್ಯ | ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ ಬೆಳಗಾವಿ: ಪಕ್ಷದ ಒಳಜಗಳ ಅಥವಾ ಯಾರೊಂದಿಗೂ ನನಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಹೇಳಿದ್ದಾರೆ.ಕಾಂಗ್ರೆಸ್‌ನಲ್ಲಿ ಒಳಜಗಳದ ಕುರಿತು ವರದಿಗಾರರಿಗೆ ಪ್ರತಿಕ್ರಿಯಿಸಿದ ಡಿಕೆಶಿ, ಪಕ್ಷವನ್ನು ಉಳಿಸುವುದು, ಸರ್ಕಾರವನ್ನು ಭದ್ರವಾಗಿಡುವುದೇ ನನ್ನ ಕರ್ತವ್ಯ. ಇದರ ಹೊರತಾಗಿ ನನಗೆ ಬೇರೆ ಯಾವುದೇ ಕರ್ತವ್ಯಗಳಿಲ್ಲ. ನನಗೆ ಯಾರ ಜೊತೆಯೂ ಭಿನ್ನಾಭಿಪ್ರಾಯವಿಲ್ಲ ಎಂದರು.“ನಾನು ಆರಂಭದಿಂದಲೂ ಪಕ್ಷಕ್ಕಾಗಿ ಹಲವು ಸಂದರ್ಭಗಳಲ್ಲಿ ತ್ಯಾಗಗಳನ್ನು ಮಾಡಿದ್ದೇನೆ. ದಿ. ಎನ್. ಧರಂ ಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ತ್ಯಾಗ ಮಾಡಿದ್ದೇನೆ ಎಂದರು.“ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯ ಸಮಯದಲ್ಲಿಯೂ ಸಹ, ನಾನು ಹಿಂದೆ ಸರಿದು ತ್ಯಾಗ ಮಾಡಿದ್ದೇನೆ. ನನಗೆ ಪಕ್ಷವೇ ಮುಖ್ಯ. ನಾನು ಪಕ್ಷದಿಂದ ಬೆಳೆದವನು. ವಿದ್ಯಾರ್ಥಿ ನಾಯಕನಾಗಿದ್ದ ನನ್ನನ್ನು ಗುರುತಿಸಿ ಪಕ್ಷ ಟಿಕೆಟ್ ನೀಡಿತ್ತು. ಮಾಧ್ಯಮದವರು ಯಾರ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಸರಣಿಗಳ್ಳತನ ಮಾಡುತ್ತಿರುವ ಧರೋಡೆಕೋರರನ್ನು ಪತ್ತೆಹಚ್ಚಿ ಬಂಧಿಸಿ ಹೋರಾಡಿದ ಪೊಲೀಸ್ ತಂಡಕ್ಕೆ ನಾಗರಿಕರಿಂದ ಹೃದಯಸ್ಪರ್ಶಿ ಸನ್ಮಾನ ನಡೆಯಿತು.ರವಿವಾರ ವಿಜಯಪುರ ಗೋಲಗುಂಬಜ್ ಸರ್ಕಲ್ ಇನ್ಸ್ಪೆಕ್ಟರ್ ಕಾರ್ಯಾಲಯದಲ್ಲಿ ವಾರ್ಡ್ನಂ ೨೧ ಲಕ್ಷ್ಮಿ ನಗರ, ಗಣೇಶ, ವೆಂಕಟೇಶ್ ನಗರ ಹಿರಿಯರು, ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ, ಕವಿ ಸಾಹಿತಿ ಮಲ್ಲಿಕಾರ್ಜುನ ಭೃಂಗಿಮಠ ಇವರೊಂದಿಗೆ ನಾಗರಿಕ ಸನ್ಮಾನ ಸಮಾರಂಭ ಜರುಗಿತು.ಗೋಲಗುಂಬಜ್ ಠಾಣೆಯ ಪಿ.ಸಿ ಭೀಮಾಶಂಕರ ಮಖಣಾಪೂರ, ಗೋಲಗುಂಬಜ್ ಪಿಎಸ್‌ಐ ಎಮ್.ಡಿ. ಗೋರಿ, ಜಲನಗರ ಪಿಎಸ್‌ಐ ಡಿ.ಎಮ್. ಸಂಗಾಪೂರ, ಆದರ್ಶನಗರದ ಪಿಎಸ್‌ಐಗಳು ಆದಂತ ಶ್ರೀಮತಿ ಪ್ರೇಮಾ ಎಸ್. ಕುಚಬಾಳ, ಹಾಗೂ ಸೀತರಾಮ ಲಮಾಣಿ, ಎಪಿಎಮ್‌ಸಿ ಪಿಎಸ್‌ಐ ಆದಂತಹ ಶ್ರೀಮತಿ ಜ್ಯೋತಿ ಕೋತ್, ಸಿಪಿಐ ಆದಂತಹ ಮಲ್ಲಯ್ಯ ಮಠಪತಿ ಹಾಗೂ ಹೆಡ್‌ಕಾನ್‌ಸ್ಟೇಬಲ್ ಆದಂತಹ ರವಿ ಹಂಗರಗಿ ಇವರುಗಳಿಗೆ ಪೊಲೀಸ್ ಅಣ್ಣಾ ಅಂತಾ ಗೀತೆ ಹಾಡುವುದರೊಂದಿಗೆ ಸನ್ಮಾನ ಸಮಾರಂಭ ಜರುಗಿತು.ನಮ್ಮ ವಿಜಯಪುರ ಜಿಲ್ಲಾ ಪೊಲೀಸ್ ವರೀಷ್ಠಾಧೀಕಾರಿಗಳು ಹಾಗೂ ಹೆಚ್ಚುವರಿ ಪೊಲೀಸ್ ವರೀಷ್ಠಾಧಿಕಾರಿಗಳು, ಹಾಗೂ ಡಿವೈಎಸ್‌ಪಿ ಇವರ ಮಾರ್ಗದರ್ಶನದಂತೆ ದರೋಢೆಕೋರರನ್ನು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಹೊರವಲಯ ಮಹಾತ್ಮ ಗಾಂಧಿನಗರ, ಸ್ಟಾರ್‌ಚೌಕ್ ಹತ್ತಿರ ಇಟ್ಟಗೆಬಟ್ಟಿಯಲ್ಲಿ ಹೊಟ್ಟೆಪಾಡಿಗಾಗಿ ಕೆಲಸಕೆ ಬಂದ ಕಾರ್ಮಿಕರಾದ ಜಮಖಂಡಿ ತಾಲೂಕಿ ಚಿಕ್ಕಲಕಿ ಕ್ರಾಸ್‌ನ ಸದಾಶಿವ ಮಾದರ, ಉಮೇಶ ಮಾದರ, ಸದಾಶಿವ ಬಬಲಾದಿ ಇವರನ್ನು ಮರ‍್ನಾಲ್ಕು ದಿನ ಕೂಡಿ ಹಾಕಿ ಅಮಾನವೀಯವಾಗಿ ಥಳಿಸಿರುವುದು ಅತ್ಯಂತ ಹೀನ ಕೃತ್ಯವಾಗಿದ್ದು, ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ಇಟ್ಟಿಗೆ ಬಟ್ಟೆ ಮಾಲೀಕ ಹಾಗೂ ಗುಂಡಾ ವರ್ತನೆ ತೋರಿದ ಇತರರನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ನ್ಯಾಯವಾದಿ ದಾನೇಶ ಅವಟಿ ಒತ್ತಾಯಿಸಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂರು ಜನರಿಗೆ ಹಣ್ಣು ಹಂಪಲು ವಿತರಿಸಿ ಸಾಂತ್ವಾನ ಹೇಳಿ ಮಾತನಾಡಿದರು.ನಗರದಲ್ಲಿ ದಿನಂಪ್ರತಿ ಕಳ್ಳತನ, ದರೋಡನೆ, ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಗುಂಡಾ ಸಾಮ್ರಾಜ್ಯ ನೆಲೆಯೂರಿದಂತಾಗಿದೆ. ಕಾರಣ ನಾಗರೀಕರು ಭಯಭೀತರಾಗಿದ್ದಾರೆ. ಇಂಥಹ ದುಷ್ಕೃತ್ಯ ಎಸಗುವುದನ್ನು ಬಂಧಿಸಿ ಕೂಡಲೇ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ.ನ್ಯಾಯವಾದಿ ಬಾಬು ಹಿಪ್ಪರಗಿ ಮಾತನಾಡಿ, ಇದೊಂದು ಅಮಾನವೀಯ ಕೃತ್ಯವಾಗಿದ್ದು, ಕಾನೂನಿನ ಸುವ್ಯವಸ್ಥೆ ಹದಗೆಟ್ಟಂತಾದಗಿದೆ. ಹತ್ತಾರು ಜನ…

Read More

ಉದಯರಶ್ಮಿ ದಿನಪತ್ರಿಕೆ ಹೊನವಾಡ: ಹೊನವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ ರವಿವಾರದಂದು ನಡೆಯಿತುಅದೇ ದಿನ ತಡ ರಾತ್ರಿ ಫಲಿತಾಂಶವೂ ಪ್ರಕಟಗೊಂಡಿದ್ದು, ಸಾಲಗಾರರ ಮತ ಕ್ಷೇತ್ರದಿಂದ 11 ಸ್ಥಾನ ಹಾಗೂ ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದ ಒಂದು ಸ್ಥಾನಕ್ಕೆ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ಜರುಗಿತು ಕಣದಲ್ಲಿ ಒಟ್ಟು 22 ಅಭ್ಯರ್ಥಿಗಳು ಸ್ಪರ್ಧಿಸಿದ್ದರುಆಯ್ಕೆಯಾದವರು:ಬ ವರ್ಗದ ಸಾಲಗಾರ ಚನ್ನಪ್ಪ ಕೋಟಿ 302ಮತಗಳು,ಅ ವರ್ಗ ದೇವೇಂದ್ರ ಪತ್ತಾರ 300,ಪರಿಶಿಷ್ಟ ಜಾತಿ,ಶ್ಯಾಮು ಬಡಳ್ಳಿ -310ಪರಿಶಿಷ್ಟ ಪಂಗಡಅಭ್ಯರ್ಥಿ ಶಂಕರ ತಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಹಿಳಾ ಕ್ಷೇತ್ರದಲ್ಲಿ -ಮಹಾನಂದಾ ಗೂಗವಾಡ – 294ಸರೋಜನಿ ಪಾಂಡೆಗಾಂವಿ – 287ಮತ ಪಡೆದು ಜಯಗಳಿಸಿದ್ದಾರೆ. ಸಾಮಾನ್ಯ ಕ್ಷೇತ್ರದಲ್ಲಿ ವಿಜೇತರಾದವರು ಆನಂದ ಕೋರಬು 284, ಪಾಂಡು ಶಿಂಧೆ 292, ಮಲ್ಲಪ್ಪ ಆಕಳೆ 300, ಮಹಾಂತೇಶ ಮಾಲಗಾರ 282, ಮೀರಾಸಾಬ ಗೌಂಡಿ 285 ಮತ ಪಡೆದುಕೊಂಡಿದ್ದಾರೆ, ಸಾಲಗಾರರಲ್ಲದ ಕ್ಷೇತ್ರದಲ್ಲಿ ಅಮಸಿದ್ದ ಪೂಜಾರಿ ಮತ್ತು ಅರವಿಂದ ಮಸಳಿಯವರಿಗೆ ಸಮಾನ ಮತಗಳನ್ನು ಪಡೆದುಕೊಂಡರು ಅಂತಿಮವಾಗಿ ಅಭ್ಯರ್ಥಿಗಳ ಒಪ್ಪಂದದ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಸಮೀಪದ ನಿವರಗಿ ಗ್ರಾಮದ ಶ್ರೀ ಸಂಗಮೇಶ್ವರ ಪ್ರೌಢಶಾಲೆಯ ಆದರ್ಶ ಮುಖ್ಯೋಪಾಧ್ಯಾಯ ರವಿಕುಮಾರ ನಾಯಕ.ಬಿ ಇವರಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ (ರಿ) ಬೆಂಗಳೂರು ಜಿಲ್ಲಾ ಘಟಕ ವಿಜಯಪುರ ಇವರು ಹಮ್ಮಿಕೊಂಡ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ಸ್ಮರಣಾರ್ಥವಾಗಿ ರಾಜ್ಯಮಟ್ಟದ ಮುಖ್ಯೋಪಾಧ್ಯಾಯರು ಪ್ರಶಸ್ತಿ ನೀಡಿ ಗೌರವಿಸಿರುವರು.ಜಾಣ ವಿದ್ಯಾರ್ಥಿಗಳ ತಾಣ ಎಂದೇ ಹೆಸರಾದ ನಿವರಗಿ ಗ್ರಾಮದ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ೨೩ ವರ್ಷಗಳಿಂದ ವಿಜ್ಞಾನ ಶಿಕ್ಷಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವರು. ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಸರಳವಾಗಿ ಬೋಧನೆ ಮಾಡುವ ಪರಿಣಿತರು. ವಿದ್ಯಾರ್ಥಿಗಳಿಗೆ ತಮ್ಮದೇ ಶೈಲಿಯಲ್ಲಿ ವಿದ್ಯಾರ್ಜನೆ ಮಾಡಿಸಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿರುವರು. ನಮ್ಮ ವಿದ್ಯಾರ್ಥಿಗಳು ಎ.ಪಿ.ಜೆಅಬ್ದುಲ ಕಲಾಂರಂತೆ ವಿಜ್ಞಾನಿಗಳಾಗಬೇಕೆಂಬ ಹಿರಿಯಾಸೆ ನಮ್ಮದು. ಸರಳ ಸೌಮ್ಯ ಸ್ವಭಾವದ ಇವರು ಎಲ್ಲರಿಗೂ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ. ಸರಳ ಬೋಧನೆ ಮಾಡಿ ವಿದ್ಯಾರ್ಥಿಗಳ ಜ್ಞಾನ ವೃದ್ಧಿಸುವ ಚತುರರು. ಬೋಧನೆಯಲ್ಲಿ ಅಲಕ್ಷ ಮಾಡಬಾರದು. ವಿದ್ಯಾರ್ಥಿಗಳನ್ನು ಜಾಣ ಮಾಡುವ ಸಂಕಲ್ಪ ನಮ್ಮದಾಗಬೇಕೆಂದು ಹೇಳುವರು. ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು,…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಭಗವಂತ ನೀಡಿದ ಕಣ್ಣನ್ನು ಪ್ರತಿಯೊಬ್ಬರೂ ರಕ್ಷಣೆ ಮಾಡುವುದು ಕರ್ತವ್ಯ ಎಂದು ಶ್ರೀಮಠದ ಪೀಠಾಧಿಪತಿ ನಾಗರತ್ನ ರಾಜಯೋಗಿ ವೀರರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.ಸಿಂದಗಿ ಪಟ್ಟಣದ ಬಸ್‌ಡಿಪೋ ಹತ್ತಿರದಲ್ಲಿರುವ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ ಆವರಣದಲ್ಲಿ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ ೨೯ನೆಯ ಜಾತ್ರಾ ಮಹೋತ್ಸವ-ಧರ್ಮಸಭೆ ಕಾರ್ಯಕ್ರಮ ನಿಮಿತ್ಯ ಹಮ್ಮಿಕೊಂಡ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಕಾರ್ಯಕ್ರಮಕ್ಕೆ ಚಾಲನೆ ನಿಡಿ ಮಾತನಾಡಿದ ಅವರು, ಜನನದಿಂದಲೇ ದೃಷ್ಠಿಯನ್ನು ಕಳೆದುಕೊಂಡವರು ಪ್ರಪಂಚವನ್ನು ನೋಡುವ ಭಾಗ್ಯದಿಂದ ವಮಚಿತರಾಗಿದ್ದಾರೆ. ಆದರೆ ಬಹಳಷ್ಟು ಜನ ತಮ್ಮ ನಿರ್ಲಕ್ಷö್ಯ ತನದಿಂದ ಕಣ್ಣು ಕಳೆದುಕೊಂಡಿದ್ದಾರೆ. ಆದಕಾರಣ ದೃಷ್ಟಿ ಇದ್ದವರು ಕಣ್ಣಿನ ಸಂರಕ್ಷಣೆ ಮಾಡಿಕೊಳ್ಳುವುದು ಅತ್ಯವಶ್ಯಕ ಎಂದರು.ಈ ವೇಳೆ ಕಾನಿಪ ಧ್ವನಿ ಸಂಘದ ಅದ್ಯಕ್ಷ ಪಂಡಿತ ಯಂಪೂರೆ, ಡಾ ಮಹಾಂತೇಶ ಹಿರೇಮಠ ಮಾತನಾಡಿ, ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರಭುಗೌಡ ಬಿರಾದಾರ ಅವರು ಬಡವರ ಸಾಮಾಜಿಕ ಸೇವೆಯಲ್ಲಿ ದೇವರನ್ನು ಕಾಣಲು ಹೊರಟಿದ್ದಾರೆ. ಅವರ ಕುಟುಂಬದಲ್ಲಿ ಸುಮಾರು ೮ಜನ ಕಣ್ಣಿನ…

Read More