ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಭಗವಂತ ನೀಡಿದ ಕಣ್ಣನ್ನು ಪ್ರತಿಯೊಬ್ಬರೂ ರಕ್ಷಣೆ ಮಾಡುವುದು ಕರ್ತವ್ಯ ಎಂದು ಶ್ರೀಮಠದ ಪೀಠಾಧಿಪತಿ ನಾಗರತ್ನ ರಾಜಯೋಗಿ ವೀರರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಸಿಂದಗಿ ಪಟ್ಟಣದ ಬಸ್‌ಡಿಪೋ ಹತ್ತಿರದಲ್ಲಿರುವ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ ಆವರಣದಲ್ಲಿ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ ೨೯ನೆಯ ಜಾತ್ರಾ ಮಹೋತ್ಸವ-ಧರ್ಮಸಭೆ ಕಾರ್ಯಕ್ರಮ ನಿಮಿತ್ಯ ಹಮ್ಮಿಕೊಂಡ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಕಾರ್ಯಕ್ರಮಕ್ಕೆ ಚಾಲನೆ ನಿಡಿ ಮಾತನಾಡಿದ ಅವರು, ಜನನದಿಂದಲೇ ದೃಷ್ಠಿಯನ್ನು ಕಳೆದುಕೊಂಡವರು ಪ್ರಪಂಚವನ್ನು ನೋಡುವ ಭಾಗ್ಯದಿಂದ ವಮಚಿತರಾಗಿದ್ದಾರೆ. ಆದರೆ ಬಹಳಷ್ಟು ಜನ ತಮ್ಮ ನಿರ್ಲಕ್ಷö್ಯ ತನದಿಂದ ಕಣ್ಣು ಕಳೆದುಕೊಂಡಿದ್ದಾರೆ. ಆದಕಾರಣ ದೃಷ್ಟಿ ಇದ್ದವರು ಕಣ್ಣಿನ ಸಂರಕ್ಷಣೆ ಮಾಡಿಕೊಳ್ಳುವುದು ಅತ್ಯವಶ್ಯಕ ಎಂದರು.
ಈ ವೇಳೆ ಕಾನಿಪ ಧ್ವನಿ ಸಂಘದ ಅದ್ಯಕ್ಷ ಪಂಡಿತ ಯಂಪೂರೆ, ಡಾ ಮಹಾಂತೇಶ ಹಿರೇಮಠ ಮಾತನಾಡಿ, ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರಭುಗೌಡ ಬಿರಾದಾರ ಅವರು ಬಡವರ ಸಾಮಾಜಿಕ ಸೇವೆಯಲ್ಲಿ ದೇವರನ್ನು ಕಾಣಲು ಹೊರಟಿದ್ದಾರೆ. ಅವರ ಕುಟುಂಬದಲ್ಲಿ ಸುಮಾರು ೮ಜನ ಕಣ್ಣಿನ ತಜ್ಞರಿದ್ದಾರೆ ಅವರೆಲ್ಲರೂ ಬಡಜನರ ಸೇವೆಗೆ ಪಣ ತೊಟ್ಟಿದ್ದಾರೆ. ಅವರ ಕುಟುಂಬಕ್ಕೆ ಆದಿಶೇಷ ಸಂಸ್ಥಾನ ಮಠದ ಆಶೀರ್ವಾದ ಸದಾ ಇರಲಿ ಎಂದರು.
ಈ ಶಿಬಿರದಲ್ಲಿ ೫೦ಕ್ಕೂ ಅಧಿಕ ಜನರು ತಪಾಷಣೆ ಪಡೆದುಕೊಂಡರೆ ೧೫ ಜನರು ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದಾರೆ ಅವರನ್ನು ಜ.೨೭ ರಂದು ಚಿಕಿತ್ಸೆಗೆ ದಿನಾಂಕ ನಿಗದಿ ಪಡಿಸಲಾಗಿದೆ. ದಿವ್ಯ ಸಾನಿಧ್ಯವನ್ನು ನಾಲವಾರ ಶ್ರೀಮಠದ ಶಿವಯೋಗಿ ಡಾ.ಚಂದ್ರಶೇಖರ ಸ್ವಾಮಿಗಳು ವಹಿಸಿದ್ದರು.
ರಾಮನಗೌಡ ಮೊರಟಗಿ ಸ್ವಾಗತಿಸಿದರು. ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ಇದ್ದರು.

