ಉದಯರಶ್ಮಿ ದಿನಪತ್ರಿಕೆ
ಹೊನವಾಡ: ಹೊನವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ ರವಿವಾರದಂದು ನಡೆಯಿತು
ಅದೇ ದಿನ ತಡ ರಾತ್ರಿ ಫಲಿತಾಂಶವೂ ಪ್ರಕಟಗೊಂಡಿದ್ದು, ಸಾಲಗಾರರ ಮತ ಕ್ಷೇತ್ರದಿಂದ 11 ಸ್ಥಾನ ಹಾಗೂ ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದ ಒಂದು ಸ್ಥಾನಕ್ಕೆ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ಜರುಗಿತು ಕಣದಲ್ಲಿ ಒಟ್ಟು 22 ಅಭ್ಯರ್ಥಿಗಳು ಸ್ಪರ್ಧಿಸಿದ್ದರು
ಆಯ್ಕೆಯಾದವರು:
ಬ ವರ್ಗದ ಸಾಲಗಾರ ಚನ್ನಪ್ಪ ಕೋಟಿ 302ಮತಗಳು,
ಅ ವರ್ಗ ದೇವೇಂದ್ರ ಪತ್ತಾರ 300,
ಪರಿಶಿಷ್ಟ ಜಾತಿ,
ಶ್ಯಾಮು ಬಡಳ್ಳಿ -310
ಪರಿಶಿಷ್ಟ ಪಂಗಡ
ಅಭ್ಯರ್ಥಿ ಶಂಕರ ತಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಹಿಳಾ ಕ್ಷೇತ್ರದಲ್ಲಿ -ಮಹಾನಂದಾ ಗೂಗವಾಡ – 294
ಸರೋಜನಿ ಪಾಂಡೆಗಾಂವಿ – 287ಮತ ಪಡೆದು ಜಯಗಳಿಸಿದ್ದಾರೆ. ಸಾಮಾನ್ಯ ಕ್ಷೇತ್ರದಲ್ಲಿ ವಿಜೇತರಾದವರು ಆನಂದ ಕೋರಬು 284, ಪಾಂಡು ಶಿಂಧೆ 292, ಮಲ್ಲಪ್ಪ ಆಕಳೆ 300, ಮಹಾಂತೇಶ ಮಾಲಗಾರ 282, ಮೀರಾಸಾಬ ಗೌಂಡಿ 285 ಮತ ಪಡೆದುಕೊಂಡಿದ್ದಾರೆ, ಸಾಲಗಾರರಲ್ಲದ ಕ್ಷೇತ್ರದಲ್ಲಿ ಅಮಸಿದ್ದ ಪೂಜಾರಿ ಮತ್ತು ಅರವಿಂದ ಮಸಳಿಯವರಿಗೆ ಸಮಾನ ಮತಗಳನ್ನು ಪಡೆದುಕೊಂಡರು ಅಂತಿಮವಾಗಿ ಅಭ್ಯರ್ಥಿಗಳ ಒಪ್ಪಂದದ ಮೇರೆಗೆ ಹಾಗೂ ಪಂಚರ ಕ್ಷಮ ಕ್ಷಮವಾಗಿ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು ಅಂತಿಮ ಫಲಿತಾಂಶ ಅರವಿಂದ್ ಮಸಳಿಯವರ ಪರವಾಗಿ ಬಂದು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು ಈ ಮೇಲಿನ ಎಲ್ಲ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆಂದು ಚುನಾವಣಾಧಿಕಾರಿ ಗುರುಶಾಂತ ಎಸ್ ಕಾಪ್ಸೆ ತಿಳಿಸಿದ್ದಾರೆ.
ಮಾಳಪ್ಪ ಗುಗ್ಗರಿ ಲಿಂಗರಾಜ್ ಪಾಟೀಲ ಮಾಣಿಕ್ ಶಿಂಧೆ ಮೊನೇಶ್ ಪತ್ತಾರ್ ಮಾಯಪ್ಪ ಪೂಜಾರಿ ಸಿದ್ರಾಮ್ ತಳಕೇರಿ ಅರವಿಂದ್ ಮಾಲಗಾರ ಮಲ್ಲಪ್ಪ ಮಸಳಿ ಇದ್ದರು.
ಸಮಸ್ತ ಹೊನವಾಡದ ಜನರು ಹರ್ಷ ವ್ಯಕ್ತಪಡಿಸಿದರು.