Author: editor.udayarashmi@gmail.com

ಜಯ್ ನುಡಿ(ವ್ಯಕ್ತಿತ್ವ ವಿಕಸನ ಲೇಖನ ಮಾಲಿಕೆ) ಲೇಖನ-ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಮನಸ್ಸಿನಷ್ಟು ಕುತೂಹಲ ಹುಟ್ಟಿಸುವ ಅತ್ಯದ್ಭುತ ವಸ್ತು ಮತ್ತೊಂದಿಲ್ಲ ಅನಿಸುತ್ತದೆ. ಅದರ ತಾಕತ್ತು ಅಗಾಧ. ಅದನ್ನು ಒಂದೆಡೆ ಕಟ್ಟಿಹಾಕಿದರೆ ಅಸಾಧ್ಯವೆನಿಸುವ ಕೆಲಸಗಳನ್ನು ಸಹ ಲೀಲಾಜಾಲವಾಗಿ ಮಾಡಿ ಮುಗಿಸುತ್ತದೆ. ಹಾಗೇ ಬಿಟ್ಟು ಬಿಟ್ಟರೆ ಸಣ್ಣವೆನಿಸುವ ಕಾರ್ಯಗಳು ಸಹ ಗುಡ್ಡದಂತೆ ಗೋಚರಿಸುತ್ತವೆ. ಮನಸ್ಸು ಇರುವುದೇ ಚಂಚಲ ಅಷ್ಟೇ ಅಲ್ಲ ಮಂಗನಂತೆ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹಾರುತ್ತಲೇ ಇರುತ್ತದೆ. ಅದು ಒಂದು ಕಡೆ ಜಾಸ್ತಿ ಹೊತ್ತು ನಿಲ್ಲುವುದೇ ಇಲ್ಲ. ಚಂಚಲತೆ ಎಲ್ಲರಲ್ಲೂ ಸಹಜವಾಗಿ ಇರುವ ಸ್ಥಿತಿ. ಅದು ಒಂದು ತರಹ ಪುಟ್ಟ ಮಗುವಿನಂತೆ ಒಂದಾದ ಮೇಲೆ ಒಂದು ವಿಷಯದ ಬಗ್ಗೆ ಹಟ ಹಿಡಿಯುತ್ತದೆ. ಅದನ್ನು ಹಿಡಿದು ಒಂದೇ ವಿಷಯದ ಮೇಲೆ ನಿಲ್ಲಿಸುವುದು ಸಾಹಸದ ಕೆಲಸವೇ ಸರಿ. ಸಾಹಸದ ಕಾರ್ಯ ಅಂತ ಬಿಟ್ಟರೆ ಯಾವುದನ್ನೂ ಮಾಡಲು ಆಗುವುದಿಲ್ಲ. ಮನಸ್ಸನ್ನು ಹೇಗೆ ಕಟ್ಟಿ ಹಾಕುವುದು ಅಂತ ಒಂದು ಸಲ ತಿಳಿದರೆ ಸಾಕು ಅಂದುಕೊಂಡ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ವಿಜಯಪುರದ ಇಟ್ಟಂಗಿ ಭಟ್ಟಿಯಲ್ಲಿ ಕಾರ್ಮಿಕರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ತಪ್ಪಿತಸ್ಥ ಸ್ಥಾನದಲ್ಲಿರುವ ಖೇಮು ರಾಠೋಡ ಹಾಗೂ ಸಹಚರರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು, ನೊಂದ ಕುಟುಂಬಕ್ಕೆ ಸರ್ಕಾರದಿಂದ ೨೦ ಲಕ್ಷ ರೂ ಪರಿಹಾರ ಧನ ನೀಡಬೇಕು, ನೊಂದ ಕುಟುಂಬದವರನ್ನು ಸರ್ಕಾರಿ ಸೇವೆಗೆ ತೆಗೆದುಕೊಳ್ಳಬೇಕು, ಇಟ್ಟಂಗಿ ಭಟ್ಟಿಯ ಮಾಲೀಕನ ಪರವಾನಗಿಯನ್ನು ರದ್ದು ಪಡಿಸಬೇಕು ಮತ್ತು ನೊಂದ ಕುಟುಂಸ್ಥರ ಮನೆಗೆ ಪೊಲೀಸ್ ಇಲಾಖೆ ಪ್ರತಿ ತಿಂಗಳು ಭೇಟಿ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಮಾದಿಗ ಜನ ಸಂಘ ಹೋರಾಟ ಸಮಿತಿ ಹಾಗೂ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ತಾಲೂಕು ಘಟಕದ ವತಿಯಿಂದ ಮುಖ್ಯ ಮಂತ್ರಿಗೆ ತಹಸೀಲ್ದಾರ ಮೂಲಕ ಮನವಿ ಸಲ್ಲಿಸಿದರು.ಈ ವೇಳೆ ಮುಖಂಡ ಬಸವರಾಜ ಸಿದ್ದಾಪೂರ ಮಾತನಾಡಿ, ಕಾರ್ಮಿಕರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಇಡೀ ದೇಶವೇ ತಲೆ ತಗ್ಗಿಸುವಂಥದ್ದು. ಬಂಧಿತ ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದಲ್ಲಿ ಕಾರ್ಮಿಕರ ಮೇಲೆ ಮತ್ತೆ ಹಲ್ಲೆ ಮಾಡುವ ಸಂಭವಗಳು ಇವೆ. ಹಾಗಾಗಿ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಾತಿಹಾಳ ಗ್ರಾಮದ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಾಹೇಬಗೌಡ ಮದ್ದರಕಿ ಉಪಾಧ್ಯಕ್ಷರಾಗಿ ಈರಪ್ಪ ಪಡಗಾನೂರ ಅವಿರೋಧವಾಗಿ ಆಯ್ಕೆಯಾದರು.ತಾಲ್ಲೂಕಿನ ಸಾತಿಹಾಳ ವಿ.ಪ್ರಾ.ಗ್ರಾ.ಕೃ.ಸ.ಸಂಘದ ಆವರಣದಲ್ಲಿ ಸೋಮವಾರ ಜರುಗಿದ ಸಾತಿಹಾಳ, ಮಾರ್ಕಬ್ಬಿನಳ್ಳಿ ಹಾಗೂ ಬೊಮ್ಮನಳ್ಳಿ ಗ್ರಾಮಗಳ ವ್ಯಾಪ್ತಿಯ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆಯಿತು. ನಂತರ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಸಹಿತ ನಿರ್ದೇಶಕರಾದ ಅಶ್ವಿನಿ ವಾಲೀಕಾರ, ರೇಖಾ ಬಾವೂರ, ಶಿವಪ್ಪ ಮದಭಾವಿ, ಮಕ್ತುಮಸಾಬ ಕೂಡಗಿ, ಗುರುಪಾದ ಗಣಿಯಾರ, ವಿರುಪಾಕ್ಷಿ ವಾಲಿ, ಸದಾಶಿವ ಸಜ್ಜನ, ಸೋಮಶೇಖರ ಬಡಿಗೇರ, ದೇವೆಂದ್ರ ಹಾದಿಮನಿ, ರಾಮು ಪವಾರ ಅವರನ್ನು ಸನ್ಮಾನಿಸಲಾಯಿತು.ಚುನಾವಣಾಧಿಕಾರಿ ಎಸ್.ಎಸ್. ಇನಾಮದಾರ, ಕಾರ್ಯನಿರ್ವಹಣಾಧಿಕಾರಿ ಎನ್.ಬಿ.ಬಜಂತ್ರಿ, ಹೂವಿನಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳನಗೌಡ ಪಾಟೀಲ, ಅಶೋಕಗೌಡ ಪಾಟೀಲ, ಕೋನಪ್ಪಗೌಡ ಪಾಟೀಲ, ಎಂ.ಆರ್.ಪಾಟೀಲ, ರಾಮಚಂದ್ರ ವಾಲೀಕಾರ ಮಹಿಬೂಬಸಾಬ್ ಬೀಳಗಿ, ಚಿದಾನಂದ ಡೋಣೂರ, ಸಂತೋಷ ಪಾಟೀಲ, ನಜೀರಸಾಬ್ ನಾಯ್ಕೋಡಿ, ಬಾಲಪ್ಪ ಹಾದಿಮನಿ ಸುನೀಲ ಮಾಗಿ, ಈರಣ್ಣ ಅವಟಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಿಜಯಪುರ ವತಿಯಿಂದ ಜನೆವರಿ ೨೩ ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಕಂದಗಲ್ಲ ಶ್ರೀ ಹನಮಂತರಾಯ ರಂಗಮಂದಿರದಲ್ಲಿ ರಸ್ತೆ ಸುರಕ್ಷತಾ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ .ಅಟೋಚಲಕರ ಸಂಘ, ಮ್ಯಾಕ್ಷಿಕ್ಯಾಬ, ಟ್ಯಾಕ್ಸಿ, ಲಾರಿ ಮಾಲಿಕರ ಸಂಘಗಳ ಪದಾಧಿಕಾರಿಗಳು ಇನ್ನೀತರ ಎಲ್ಲಾ ವಾಹನಗಳ ಸವಾರರು ಮತ್ತು ರೋಟರಿ ಕ್ಲಬ್‌, ರೆಡ್ ಕ್ರಾಸ ಸಂಸ್ಥೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರಿಗಾಗಿ ಭಾಗವಹಸಿ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಮ್ ಪಿಟ್ನೆಸ್ ಮತ್ತು ನಿರೂಪಣಾ ಮತ್ತು ವಾರ್ತಾ ವಾಚಕ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ೧೫ ದಿನಗಳ ಜಿಮ್ ತರಬೇತಿ ಇದ್ದು, ಜನೆವರಿ ೨೭ರಿಂದ ಫೆಬ್ರವರಿ ೧೦ರ ವರೆಗೆ ನಡೆಯಲಿದೆ. ದ್ವೀತೀಯ ಪಿ.ಯು.ಸಿ ಪಾಸ್/ಫೇಲ್ ಆದ ೧೮ವರ್ಷದಿಂದ ೪೦ ವರ್ಷದೊಳಗಿನ ಪ.ಜಾತಿ ಯುವಕ/ ಯುವತಿಯರು ಅರ್ಜಿಗಳನ್ನು ಸಲ್ಲಿಸಬಹುದು. ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ತರಬೇತಿ ನಡೆಯಲಿದೆ.ನಿರೂಪಣಾ ಮತ್ತು ವಾರ್ತಾ ವಾಚಕ ತರಬೇತಿ ಅರ್ಜಿ ಸಲ್ಲಿಸಬಯಸುವವರು ದಿನಾಂಕ ೧೧ ಫೆಬ್ರವರಿಯಿಂದ ೧೮ ಫೆಬ್ರವರಿ ವರೆಗೆ ೮ ದಿನಗಳ ತರಬೇತಿ ನಡೆಯಲಿದೆ. ದ್ವೀತೀಯ ಪಿ.ಯು.ಸಿ ತೇರ್ಗಡೆ ಹೊಂದಿದ ೧೮ವರ್ಷದಿಂದ ೪೦ ವರ್ಷದೊಳಗಿನ ಪ.ಜಾತಿ ಯುವಕ/ ಯುವತಿಯರು ಅರ್ಜಿಗಳನ್ನು ಸಲ್ಲಿಸಬಹುದು. ಯುವನಿಕ ಸಭಾಂಗಣ ಆಯುಕ್ತರ ಕಚೇರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಜ್ಯ ಯುವ ಕೇಂದ್ರ ನೃಪತುಂಗ ರಸ್ತೆ ಬೆಂಗಳೂರು ಇಲ್ಲಿ ತರಬೇತಿ ನಡೆಯಲಿದೆ.ಆಸಕ್ತರು ಜನವರಿ ೨೩ರ ಸಾಯಂಕಾಲ ೫ಗಂಟೆ ವರೆಗೆ ಅರ್ಜಿಗಳನ್ನು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ೨೦೨೩ರ ಜ.೧ ರಿಂದ ೨೦೨೫ ಫೆ.೮ರ ವರೆಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಸೇನಾ ಸಿಬ್ಬಂದಿ ಮತ್ತು ಮಾಜಿ ಸೈನಿಕರ ಅವಲಂಬಿತ ಮಕ್ಕಳಿಗೆ ಕ್ರೀಡಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ದಾಖಲಾತಿಗಳನ್ನು ಭರ್ತಿ ಮಾಡಿ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ ಕಛೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ. ೦೮೩೫೨-೨೫೦೯೧೩ಗೆ ಸಂಪರ್ಕಿಸಬಹದು ಎಂದು ಪ್ರಕಟಣೆ ತಿಳಿಸಿದೆ.

Read More

ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಸೊಮಲಿಂಗ ಗೆಣ್ಣೂರು ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮಾಜಕ್ಕೆ ಅಂಟಿಕೊಂಡಂತಹ ರೋಗಗಳ ನಾಶಕ್ಕೆ ಅಂಬಿಗರ ಚೌಡಯ್ಯರ ವಚನಗಳು ಮದ್ದುಗಳಾಗಿದ್ದವು ಎಂದು ಅಪರ ಜಿಲ್ಲಾಧಿಕಾರಿ ಸೊಮ್ಮಲಿಂಗ ಗೆಣ್ಣೂರು ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಿಜ ಶರಣ ಅಂಬಿಗರ ಚೌಡಯ್ಯ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಅಂಕುಡೊಂಕುಗಳನ್ನು ನೇರ, ನಿಷ್ಠುರವಾಗಿ ತಮ್ಮ ವಚನಗಳಲ್ಲಿ ಅಂಬಿಗರ ಚೌಡಯ್ಯನವರು ಹೇಳಿ ಸಮಾಜಕ್ಕೆ ಬೆಳಕಾಗಿದ್ದಾರೆ. ಮೂಡನಂಬಿಕೆಗಳು ಸಮಾಜಕ್ಕೆ ಆಘಾತಕಾರಿ ಅಂತಹ ಮೂಡನಂಬಿಕೆಗಳ ವಿರುದ್ಧ ನೇರವಾಗಿ ಮಾತನಾಡಿದ ಶಿವಶರಣ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂದಿನ ಸಮಾಜದಲ್ಲಿನ ಮೌಢ್ಯಗಳ ನಿರ್ಮೂಲನೆಗಾಗಿ ಶ್ರಮಿಸಿದವರು. ಮಹಿಳೆಯರು ಮತ್ತು ಪುರುಷ ಸಮಾನರೆಂದು ಪ್ರತಿಪಾದಿಸಿದ ತತ್ವನಿಷ್ಟ ಶ್ರೇಷ್ಟ ತತ್ವಜ್ಞಾನಿ, ವಚನಕಾರರಾಗಿದ್ದರು. ಅವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಅವರು ಹೇಳಿದರು.ನಿಜ ಶರಣ ಅಂಬಿಗರ ಚೌಡಯ್ಯ ಅವರ ಕುರಿತು ಸಾಹಿತಿ…

Read More

25 ಅಡಿ ಎತ್ತರದ ಬಾಪೂಜಿಯ ಕಂಚಿನ ಪುತ್ಥಳಿ | ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೋಕಾರ್ಪಣೆ | ವಿಪಕ್ಷ ನಾಯಕ ರಾಹುಲ್ ಗಾಂಧಿ ಗೈರು ಬೆಳಗಾವಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ಸುವರ್ಣ ವಿಧಾನಸೌಧ ಮುಂದೆ ಮಹಾತ್ಮ ಗಾಂಧೀಜಿ ಕಂಚಿನ ಪುತ್ಥಳಿ ಅನಾವರಣಗೊಂಡಿತು.25 ಅಡಿ ಎತ್ತರದ ಬಾಪೂಜಿ ಪುತ್ಥಳಿಯನ್ನು ಚರಕ ನೇಯ್ಯುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೋಕಾರ್ಪಣೆಗೊಳಿಸಿದರು.ಈ ವೇಳೆ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ವಿಧಾನಸಭೆ ಸಭಾಧ್ಯಕ್ಷ ಯು.ಟಿ‌. ಖಾದರ್, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಡಿಸಿಎಂ ಡಿ.ಕೆ. ಶಿವಕುಮಾರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ‌. ವೇಣುಗೋಪಾಲ್, ರಣದೀಪ ಸಿಂಗ್ ಸುರ್ಜೇವಾಲ, ಸಚಿವರಾದ ಹೆಚ್.ಕೆ. ಪಾಟೀಲ, ಡಾ. ಜಿ. ಪರಮೇಶ್ವರ, ಸತೀಶ ಜಾರಕಿಹೊಳಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅನಾರೋಗ್ಯದಿಂದ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಗಾಂಧೀಜಿ ಪ್ರತಿಮೆ ಉದ್ಘಾಟನೆ ಆಗುತ್ತಿದ್ದಂತೆ ಇತ್ತ ಸುವರ್ಣಸೌಧದ…

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ರಾಷ್ಟ್ರೀಕೃತ ಬ್ಯಾಂಕುಗಳು, ಖಾಸಗಿ ರಂಗದ ಬ್ಯಾಂಕುಗಳು, ಸಹಕಾರಿ ಸಂಘಗಳು, ಫೈನಾನ್ಸ್ ಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪಿಎಸ್ಐ ಅಮೋಜ್ ಕಾಂಬ್ಳೆ ಹೇಳಿದರು.ಪಟ್ಟಣದ ಪೋಲೀಸ್ ಠಾಣೆಯಲ್ಲಿ ಸೋಮವಾರ ಸಾಯಂಕಾಲ ಸಾರ್ವಜನಿಕ ಸ್ವಾಮ್ಯದ ಹಣಕಾಸು ಸಂಸ್ಥೆಗಳ ಮುಖ್ಯಸ್ಥರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ ಬೀದರ ಬ್ಯಾಂಕ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ಹಾಗೂ ಮಂಗಳೂರಿನ ಉಲ್ಲಾಳದ ಕೋಟೆಕಾರು ಸಹಕಾರಿ ಬ್ಯಾಂಕ್​ ದರೋಡೆ ಪ್ರಕರಣಗಳು ರಾಜ್ಯವನೇ ಬೆಚ್ಚಿಬೀಳಿಸುವಂತೆ ಮಾಡಿದ್ದು. ಸಾರ್ವಜನಿಕರ ಹಿತದೃಷ್ಟಿಯಿಂದ ಸಾರ್ವಜನಿಕ ಸುರಕ್ಷತೆ ಅಧಿನಿಯಮ -2017 ಅಡಿಯಲ್ಲಿ ಬ್ಯಾಂಕುಗಳು, ಸಹಕಾರಿ ಸಂಘಗಳು ಫೈನಾನ್ಸ್ ಗಳ ಮುಖ್ಯಸ್ಥರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದವರು, ಗ್ರಾಹಕರ ಹಿತರಕ್ಷಣೆಗೆ ತರಬೇತಿ ಹೊಂದಿದ ಶಸ್ತ್ರ ಸಜ್ಜಿತ ಹಗಲು ರಾತ್ರಿ ಕಾವಲು ಕರ್ತವ್ಯ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬೇಕು. ಡಿವಿಆರ್, ಸಿಸಿಟಿವಿ, ಸೈರನ್, ಸ್ಟ್ರಾಂಗ್ ರೂಮ್, ಹೆಚ್ಡಿಸಿಸಿ ಕ್ಯಾಮೆರಾ, ನೋಟಿಸ್ ಬೋರ್ಡ್, ಇತ್ಯಾದಿ ಸೌಲಭ್ಯಗಳನ್ನು ಅಳವಡಿಸಿಕೊಂಡು ಮುಂದೆ ಆಗಬಹುದಾದ ಅನಾಹುತಗಳ ತಪ್ಪಿಸುವಲ್ಲಿ…

Read More

ಕರ್ನಾಟಕ ನಾಮಕರಣ ಸುರ್ವಣ ಮಹೋತ್ಸವ ಸ್ಮರಣೆ | ಕವಿಗೋಷ್ಠಿ | ಕಾವ್ಯಗಾಯನ | ನೃತ್ಯ ನಮನ | ಸುವರ್ಣಸಿರಿ ಸಮ್ಮಾನ ಉದಯರಶ್ಮಿ ದಿನಪತ್ರಿಕೆ ಧಾರವಾಡ: ಪಂ.ಪುಟ್ಟರಾಜ ಗವಾಯಿಗಳ ಆಶಯದಂತೆ ಸಂಗೀತ, ಸಾಹಿತ್ಯ ಸೇವೆ ನಿರಂತರವಾಗಿ ನಡೆಸುತ್ತಾ, ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಿ ಕೊಟ್ಟು, ಅವರ ಕಲಾಪ್ರದರ್ಶನ ಸಾರ್ವತ್ರಿಕ ಗೊಳಿಸುತ್ತಿರುವ ಡಾ. ಪಂ.ಪುಟ್ಟರಾಜ ಸೇವಾ ಸಮಿತಿಯ ನಾಡ ನುಡಿಯ ಸೇವೆ ಅನನ್ಯ ಎಂದು ಮನ್ಸೂರಿನ ರೇವಣಸಿದ್ಧೇಶ್ವರ ಮಠದ ಡಾ. ಬಸವರಾಜ ದೇವರು ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಮನ್ಸೂರ ಗ್ರಾಮದ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಮಠದ ಸಭಾಭವನದಲ್ಲಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಜೊತೆಯಾಗಿ ಹಮ್ಮಿಕೊಂಡಿದ್ದ ಕರ್ನಾಟಕ ನಾಮಕರಣ ಸುರ್ವಣ ಮಹೊತ್ಸವ ಸ್ಮರಣೆಯಲ್ಲಿ ಹೆಸರಾಯಿತು ಕರ್ನಾಟಕ ಕವಿಗೋಷ್ಠಿ, ಕಾವ್ಯಗಾಯನ, ನೃತ್ಯ ನಮನ ಮತ್ತು ಸುವರ್ಣಸಿರಿ ಸಮ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಹೆಸರಾಯಿತು ಕರ್ನಾಟಕ ಉಪನ್ಯಾಸ ನೀಡಿದ ಸುರೇಶ ಕಡೆಮನಿಯವರು, ಕನ್ನಡ ಭಾಷೆಯ ಪ್ರಾಚೀನತೆ,ಇತಿಹಾಸ ಕರ್ನಾಟಕ ಏಕೀಕರಣದ ಹೋರಾಟ…

Read More