ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ವಿಜಯಪುರದ ಇಟ್ಟಂಗಿ ಭಟ್ಟಿಯಲ್ಲಿ ಕಾರ್ಮಿಕರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ತಪ್ಪಿತಸ್ಥ ಸ್ಥಾನದಲ್ಲಿರುವ ಖೇಮು ರಾಠೋಡ ಹಾಗೂ ಸಹಚರರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು, ನೊಂದ ಕುಟುಂಬಕ್ಕೆ ಸರ್ಕಾರದಿಂದ ೨೦ ಲಕ್ಷ ರೂ ಪರಿಹಾರ ಧನ ನೀಡಬೇಕು, ನೊಂದ ಕುಟುಂಬದವರನ್ನು ಸರ್ಕಾರಿ ಸೇವೆಗೆ ತೆಗೆದುಕೊಳ್ಳಬೇಕು, ಇಟ್ಟಂಗಿ ಭಟ್ಟಿಯ ಮಾಲೀಕನ ಪರವಾನಗಿಯನ್ನು ರದ್ದು ಪಡಿಸಬೇಕು ಮತ್ತು ನೊಂದ ಕುಟುಂಸ್ಥರ ಮನೆಗೆ ಪೊಲೀಸ್ ಇಲಾಖೆ ಪ್ರತಿ ತಿಂಗಳು ಭೇಟಿ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಮಾದಿಗ ಜನ ಸಂಘ ಹೋರಾಟ ಸಮಿತಿ ಹಾಗೂ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ತಾಲೂಕು ಘಟಕದ ವತಿಯಿಂದ ಮುಖ್ಯ ಮಂತ್ರಿಗೆ ತಹಸೀಲ್ದಾರ ಮೂಲಕ ಮನವಿ ಸಲ್ಲಿಸಿದರು.
ಈ ವೇಳೆ ಮುಖಂಡ ಬಸವರಾಜ ಸಿದ್ದಾಪೂರ ಮಾತನಾಡಿ, ಕಾರ್ಮಿಕರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಇಡೀ ದೇಶವೇ ತಲೆ ತಗ್ಗಿಸುವಂಥದ್ದು. ಬಂಧಿತ ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದಲ್ಲಿ ಕಾರ್ಮಿಕರ ಮೇಲೆ ಮತ್ತೆ ಹಲ್ಲೆ ಮಾಡುವ ಸಂಭವಗಳು ಇವೆ. ಹಾಗಾಗಿ ಅವರಿಗೆ ಜಾಮೀನಾದ ಮಾಹಿತಿ ತಿಳಿಯುತ್ತಿದ್ದಂತೆ ರಾಜ್ಯದಿಂದ ಗಡಿಪಾರು ಮಾಡಬೇಕು. ತಪ್ಪಿದಲ್ಲಿ ರಾಜ್ಯದ ಎಲ್ಲ ವಿವಿಧ ದಲಿತ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸುವದಾಗಿ ಎಚ್ಚರಿಸಿದರು.
ಮುತ್ತಪ್ಪ ಮಾದರ, ದುರಗಪ್ಪ ಅಮರಗೋಳ, ರಾಜು ಅಮರಗೋಳ, ಬಾಲು ಅಮರಗೋಳ, ಸಂತೋಷ ಅಮರಗೋಳ, ಅಭಿಲಾಷ ಅಮರಗೋಳ, ಶ್ರೀಕಾಂತ ಹಂಡರಗಲ್ಲ, ಮಲ್ಲು ಮೂಲಿಮನಿ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ

