ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಮ್ ಪಿಟ್ನೆಸ್ ಮತ್ತು ನಿರೂಪಣಾ ಮತ್ತು ವಾರ್ತಾ ವಾಚಕ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ೧೫ ದಿನಗಳ ಜಿಮ್ ತರಬೇತಿ ಇದ್ದು, ಜನೆವರಿ ೨೭ರಿಂದ ಫೆಬ್ರವರಿ ೧೦ರ ವರೆಗೆ ನಡೆಯಲಿದೆ. ದ್ವೀತೀಯ ಪಿ.ಯು.ಸಿ ಪಾಸ್/ಫೇಲ್ ಆದ ೧೮ವರ್ಷದಿಂದ ೪೦ ವರ್ಷದೊಳಗಿನ ಪ.ಜಾತಿ ಯುವಕ/ ಯುವತಿಯರು ಅರ್ಜಿಗಳನ್ನು ಸಲ್ಲಿಸಬಹುದು. ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ತರಬೇತಿ ನಡೆಯಲಿದೆ.
ನಿರೂಪಣಾ ಮತ್ತು ವಾರ್ತಾ ವಾಚಕ ತರಬೇತಿ ಅರ್ಜಿ ಸಲ್ಲಿಸಬಯಸುವವರು ದಿನಾಂಕ ೧೧ ಫೆಬ್ರವರಿಯಿಂದ ೧೮ ಫೆಬ್ರವರಿ ವರೆಗೆ ೮ ದಿನಗಳ ತರಬೇತಿ ನಡೆಯಲಿದೆ. ದ್ವೀತೀಯ ಪಿ.ಯು.ಸಿ ತೇರ್ಗಡೆ ಹೊಂದಿದ ೧೮ವರ್ಷದಿಂದ ೪೦ ವರ್ಷದೊಳಗಿನ ಪ.ಜಾತಿ ಯುವಕ/ ಯುವತಿಯರು ಅರ್ಜಿಗಳನ್ನು ಸಲ್ಲಿಸಬಹುದು. ಯುವನಿಕ ಸಭಾಂಗಣ ಆಯುಕ್ತರ ಕಚೇರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಜ್ಯ ಯುವ ಕೇಂದ್ರ ನೃಪತುಂಗ ರಸ್ತೆ ಬೆಂಗಳೂರು ಇಲ್ಲಿ ತರಬೇತಿ ನಡೆಯಲಿದೆ.
ಆಸಕ್ತರು ಜನವರಿ ೨೩ರ ಸಾಯಂಕಾಲ ೫ಗಂಟೆ ವರೆಗೆ ಅರ್ಜಿಗಳನ್ನು ಸಲ್ಲಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂ.ಸಂ. ೦೮೩೫೨-೨೫೧೦೮೫/ ೮೭೯೨೧೮೫೧೪೧ ಸಂಪರ್ಕಿಸಬಹುದಾಗಿದೆ ಎಂದು ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ ಇವರು ಪ್ರಕಟಣೆಲ್ಲಿ ತಿಳಿಸಿದ್ದಾರೆ.