ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಿಜಯಪುರ ವತಿಯಿಂದ ಜನೆವರಿ ೨೩ ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಕಂದಗಲ್ಲ ಶ್ರೀ ಹನಮಂತರಾಯ ರಂಗಮಂದಿರದಲ್ಲಿ ರಸ್ತೆ ಸುರಕ್ಷತಾ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ .ಅಟೋಚಲಕರ ಸಂಘ, ಮ್ಯಾಕ್ಷಿಕ್ಯಾಬ, ಟ್ಯಾಕ್ಸಿ, ಲಾರಿ ಮಾಲಿಕರ ಸಂಘಗಳ ಪದಾಧಿಕಾರಿಗಳು ಇನ್ನೀತರ ಎಲ್ಲಾ ವಾಹನಗಳ ಸವಾರರು ಮತ್ತು ರೋಟರಿ ಕ್ಲಬ್, ರೆಡ್ ಕ್ರಾಸ ಸಂಸ್ಥೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರಿಗಾಗಿ ಭಾಗವಹಸಿ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
