Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಕ್ಕಳಲ್ಲಿ ಸಂಸ್ಕೃತಿ ಮತ್ತು ಸುಸಂಸ್ಕೃತಿ

ಗೂಂಡಾ ಕಾಯ್ದೆಯಡಿ ಕುಖ್ಯಾತ ರೌಡಿ ಬಂಧನಕ್ಕೆ ಜಿಲ್ಲಾಧಿಕಾರಿ ಆದೇಶ

ಜು.೧೩ರಿಂದ ಸೋಮದೇವರಹಟ್ಟಿ ದುರ್ಗಾದೇವಿ ಜಾತ್ರಾ ಮಹೋತ್ಸವ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಪುಟ್ಟರಾಜ ಸಮಿತಿ ನಾಡ-ನುಡಿ ಸೇವೆ ಅನನ್ಯ :ಡಾ.ಬಸವರಾಜ ಶ್ರೀ
(ರಾಜ್ಯ ) ಜಿಲ್ಲೆ

ಪುಟ್ಟರಾಜ ಸಮಿತಿ ನಾಡ-ನುಡಿ ಸೇವೆ ಅನನ್ಯ :ಡಾ.ಬಸವರಾಜ ಶ್ರೀ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕರ್ನಾಟಕ ನಾಮಕರಣ ಸುರ್ವಣ ಮಹೋತ್ಸವ ಸ್ಮರಣೆ | ಕವಿಗೋಷ್ಠಿ | ಕಾವ್ಯಗಾಯನ | ನೃತ್ಯ ನಮನ | ಸುವರ್ಣಸಿರಿ ಸಮ್ಮಾನ

ಉದಯರಶ್ಮಿ ದಿನಪತ್ರಿಕೆ

ಧಾರವಾಡ: ಪಂ.ಪುಟ್ಟರಾಜ ಗವಾಯಿಗಳ ಆಶಯದಂತೆ ಸಂಗೀತ, ಸಾಹಿತ್ಯ ಸೇವೆ ನಿರಂತರವಾಗಿ ನಡೆಸುತ್ತಾ, ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಿ ಕೊಟ್ಟು, ಅವರ ಕಲಾಪ್ರದರ್ಶನ ಸಾರ್ವತ್ರಿಕ ಗೊಳಿಸುತ್ತಿರುವ ಡಾ. ಪಂ.ಪುಟ್ಟರಾಜ ಸೇವಾ ಸಮಿತಿಯ ನಾಡ ನುಡಿಯ ಸೇವೆ ಅನನ್ಯ ಎಂದು ಮನ್ಸೂರಿನ ರೇವಣಸಿದ್ಧೇಶ್ವರ ಮಠದ ಡಾ. ಬಸವರಾಜ ದೇವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮನ್ಸೂರ ಗ್ರಾಮದ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಮಠದ ಸಭಾಭವನದಲ್ಲಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಜೊತೆಯಾಗಿ ಹಮ್ಮಿಕೊಂಡಿದ್ದ ಕರ್ನಾಟಕ ನಾಮಕರಣ ಸುರ್ವಣ ಮಹೊತ್ಸವ ಸ್ಮರಣೆಯಲ್ಲಿ ಹೆಸರಾಯಿತು ಕರ್ನಾಟಕ ಕವಿಗೋಷ್ಠಿ, ಕಾವ್ಯಗಾಯನ, ನೃತ್ಯ ನಮನ ಮತ್ತು ಸುವರ್ಣಸಿರಿ ಸಮ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಹೆಸರಾಯಿತು ಕರ್ನಾಟಕ ಉಪನ್ಯಾಸ ನೀಡಿದ ಸುರೇಶ ಕಡೆಮನಿಯವರು, ಕನ್ನಡ ಭಾಷೆಯ ಪ್ರಾಚೀನತೆ,ಇತಿಹಾಸ ಕರ್ನಾಟಕ ಏಕೀಕರಣದ ಹೋರಾಟ ದಿನಗಳನ್ನು ಮೆಲುಕು ಹಾಕುತ್ತಾ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ಸ್ಮರಿಸಿದರು. ಮತ್ತೊಬ್ಬ ಅತಿಥಿ ವಿಭೂತಿ ಪತ್ರಿಕೆ ಸಂಪಾದಕ ಅಂದಾನೆಪ್ಪ ವಿಭೂತಿ ಮಾತನಾಡುತ್ತಾ, ಇತ್ತೀಚಿನ ದಿನಗಳಲ್ಲಿ ಕನ್ನಡಿಗರಲ್ಲಿ ಹೆಚ್ಚಾಗಿರುವ ಇಂಗ್ಲಿಷ್ ವ್ಯಾಮೋಹಕ್ಕೆ ಕನ್ನಡ ಕನಿಷ್ಠ ಎನ್ನುವ ಭ್ರಮೆಯೇ ಕಾರಣ ಎಂದು ಅನೇಕ ಉದಾಹರಣೆಗಳೊಂದಿಗೆ ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾ.ಸಂಗೀತ ವಿಭಾಗದ ಪ್ರಾಧ್ಯಾಪಕ ಹಾಗೂ ಅಧ್ಯಕ್ಷ, ಕಲಾ ನಿಖಾಯದ ಡೀನ್ ಡಾ.ಮ್ರತ್ಯುಂಜಯ ಅಗಡಿ ತಮ್ಮ ಗಾಯನದ ಮೂಲಕ ಹಿಂದೂಸ್ತಾನಿ ಸಂಗೀತ ದಿಗ್ಗಜ ಪಂಡಿತ ಮಲ್ಲಿಕಾರ್ಜುನ ಮನ್ಸೂರ್ ಮತ್ತು ಪಂ. ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ ಅವರನ್ನು ನೆನಪಿಸಿದರು.
ಪ್ರಾರಂಭದಲ್ಲಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕ, ಕಲಾ ವಿಕಾಸ ಪರಿಷತ್ ಅಧ್ಯಕ್ಷ ಸಿ.ಕೆ.ಎಚ್.ಕಡಣಿ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಿತಿಯ ಸಾಧನೆಗಳನ್ನು ತಿಳಿಸಿದರು.
ಡಾವಣಗೇರಿಯ ಡಾ. ಪಂ.ಪುಟ್ಟರಾಜ ಸೇವಾ ಸಮಿತಿಯ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಸೌಮ್ಯ ಸತೀಶ್ ಧಾರವಾಡ, ಮತ್ತು ಗಂಗಾಧರ ಎಮ್ಮಿಗನೂರ ಮಾತನಾಡಿದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹೂವಿನಹಡಗಲಿಯ ಎಂ ಪಿ ಎಂ ಕೊಟ್ರಯ್ಯ ವಹಿಸಿದ್ದರು.
ಡಾ.ಭೀಮಾಶಂಕರ ಎಂ.ಆರ್. ಧಾರವಾಡ ಆಶಯ ನುಡಿಗಳನ್ನಾಡಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕವಿ, ಕವಿತ್ರಿಯರು ತಮ್ಮ ಕವನ ವಾಚಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪಂ. ಫಕೀರೇಶ್ವರ ಶಾಸ್ತ್ರಿಗಳು ವಹಿಸಿದ್ದರು.
ಬಾಲ ಕಲಾವಿರಾದ ಅಮೂಲ್ಯ ಮತ್ತು ಐಶ್ವರ್ಯ ಸ್ವಾಗತ ನೃತ್ಯ ಮಾಡಿದರು.
ವಾರುಣಿ ದೇಶಪಾಂಡೆ ಪ್ರಾರ್ಥನೆ ನಡೆಸಿಕೊಟ್ಟರು. ಶರಣ ಬಡ್ಡಿ ಸಿಗ್ಗಾಂವ ಇವರಿಂದ ಭರತನಾಟ್ಯ ಡಾ. ಶರ್ಮಿಳಾ ಹಾಗೂ ಶಿಷ್ಯವೃಂದದವರಿಂದ ಮತ್ತು ಸುಮಾ ಹಡಪದ ಇವರ ಗಾಯನ, ಪ್ರೇಕ್ಷಕರನ್ನು ರಂಜಿಸಿದವು. ಸಂಚಾಲಕರಾಗಿ ಡಾ. ಸುಮಾ ಬಸವರಾಜ ಹಡಪದ ಮತ್ತು ಅವರೆಲ್ಲಾ ಬಳಗದವರು ಸಮಾರಂಭದ ಯಶಸ್ವಿಗೆ ಕಾರ್ಯ ನಿರ್ವಹಿಸಿದರು.
ಬಸವರಾಜ ಹಡಪದ, ವೀರೇಶರಡ್ಡಿ ಕಾಮರಡ್ಡಿ, ಸ್ವಾಗತಿಸಿದರು ಯಮನಪ್ಪ ಜಾಲಗಾರ ಮತ್ತು ಏ.ಬಿ.ರುದ್ರಮ್ಮ ನಿರೂಪಿಸಿದರು. ದಾನಮ್ಮ ಅಂಗಡಿ ವಂದಿಸಿದರು.

“ಸುವರ್ಣ ಕರ್ನಾಟಕ ಸಿರಿ” ರಾಜ್ಯ ಪ್ರಶಸ್ತಿ ಪ್ರದಾನ

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಸ್. ಕೆ. ಮೇಲ್ಮುರಿ, ಕಸ್ತೂರೆಮ್ಮ ಹಿರೇಮಠ, ಎಂ. ಪಿ. ಎಂ. ಕೊಟ್ರಯ್ಯ, ಚಂದ್ರಕಲಾ ಜನಗೌಡ, ಡಾ. ಶ್ರೀದೇವಿ ಸುವರ್ಣಖಂಡಿ, ಹೆಚ್. ಆರ್. ಬಾಗವಾನ, ಸೌಮ್ಯಶ್ರೀ ಹಿರೇಮಠ ಶಶಿಧರ ಸ್ವಾಮಿ ಹಿರೇಮಠ, ಹಾಲಪ್ಪ ಚಿಗಟೇರಿ, ಪ್ರತಿಷ್ಠಾ ಸಮಾಜ ಸೇವಾ ಟ್ರಸ್ಟ ಕೂಡ್ಲಗಿ, ಬಸವರಾಜ ಹಡಪದ ಹಳಿಯಾಳ ಡಾ. ಬಿ. ಎ. ರಾಜಪ್ಪ, ಮಹಾಂತೇಶ ಕುಂಬಾರ, ಅನ್ನಪೂರ್ಣ ಜವಳಿ ಇವರುಗಳಿಗೆ ಸುವರ್ಣ ಕರ್ನಾಟಕ ಸಿರಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಕ್ಕಳಲ್ಲಿ ಸಂಸ್ಕೃತಿ ಮತ್ತು ಸುಸಂಸ್ಕೃತಿ

ಗೂಂಡಾ ಕಾಯ್ದೆಯಡಿ ಕುಖ್ಯಾತ ರೌಡಿ ಬಂಧನಕ್ಕೆ ಜಿಲ್ಲಾಧಿಕಾರಿ ಆದೇಶ

ಜು.೧೩ರಿಂದ ಸೋಮದೇವರಹಟ್ಟಿ ದುರ್ಗಾದೇವಿ ಜಾತ್ರಾ ಮಹೋತ್ಸವ

ಪ್ರತಿ ಎಕರೆಗೆ ೨೫ ಸಾವಿರ ರೂ. ಪರಿಹಾರ ಪ್ಯಾಕೇಜ್ ಬಿಡುಗಡೆಗೊಳಿಸಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಕ್ಕಳಲ್ಲಿ ಸಂಸ್ಕೃತಿ ಮತ್ತು ಸುಸಂಸ್ಕೃತಿ
    In ವಿಶೇಷ ಲೇಖನ
  • ಗೂಂಡಾ ಕಾಯ್ದೆಯಡಿ ಕುಖ್ಯಾತ ರೌಡಿ ಬಂಧನಕ್ಕೆ ಜಿಲ್ಲಾಧಿಕಾರಿ ಆದೇಶ
    In (ರಾಜ್ಯ ) ಜಿಲ್ಲೆ
  • ಜು.೧೩ರಿಂದ ಸೋಮದೇವರಹಟ್ಟಿ ದುರ್ಗಾದೇವಿ ಜಾತ್ರಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ಪ್ರತಿ ಎಕರೆಗೆ ೨೫ ಸಾವಿರ ರೂ. ಪರಿಹಾರ ಪ್ಯಾಕೇಜ್ ಬಿಡುಗಡೆಗೊಳಿಸಿ
    In (ರಾಜ್ಯ ) ಜಿಲ್ಲೆ
  • ಕಾಲುವೆಗಳಿಗೆ ನೀರು ಹರಿಸಲು ಆಗ್ರಹಿಸಿ ರೈತಸಂಘ ಮನವಿ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆ ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸಿ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಸೈಕ್ಲಿಂಗ್ ಗ್ರೂಪ್ ನಿಂದ ಪಂಡರಪುರಕ್ಕೆ ಸೈಕಲ್ ಯಾತ್ರೆ ಇಂದು
    In (ರಾಜ್ಯ ) ಜಿಲ್ಲೆ
  • ರೈತರ ಸಾಲ ಸಂಪೂರ್ಣ ಮನ್ನಾ ಮಾಡಲು ಹಸಿರು ಸೇನೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ಕನ್ನಡಪ್ರಭ ಸಂಪಾದಕ ಜೋಗಿಗೆ ಕೆಯುಡಬ್ಲ್ಯೂಜೆ ಅಭಿನಂದನೆ
    In (ರಾಜ್ಯ ) ಜಿಲ್ಲೆ
  • ನಾಗಠಾಣ ಉಪಕಾಲುವೆಗೆ ನೀರು ಹರಿಸಲು ರೈತರ ಆಗ್ರಹ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.