Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದಲ್ಲಿ ಸರಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ದಶಮಾನೋತ್ಸವ ಕಾರ್ಯಕ್ರಮ ವನ್ನು ಹೆಣ್ಣು ಮಗುವಿನ ಹುಟ್ಟು ಹಬ್ಬಮಾಡುವದರ ಮೂಲಕ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸಿಡಿಪಿಒ ಶಂಭುಲಿಂಗ ಹಿರೇಮಠ ಜಯಶ್ರೀ ದೋಡಮನಿ ಅನುರಾದ ರಜಪೂತ ಮತ್ತು ಅಂಗವಾಡಿ ಶಿಕ್ಷಕರು ಶಾಲ ಶಿಕ್ಷಕರು ಇದ್ದರು.

Read More

ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪ | ಆಪ್ತ ಸ್ನೇಹಿತ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ಬೆಂಗಳೂರು: ಒಂದು ಕಾಲದಲ್ಲಿ ತಮ್ಮ ಆಪ್ತ ಸ್ನೇಹಿತರಾಗಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ವಿರುದ್ಧವೇ ವಾಗ್ದಾಳಿ ನಡೆಸಿದ ಮಾಜಿ ಸಚಿವ ಬಿ ಶ್ರೀರಾಮುಲು ಅವರು, ನನ್ನನ್ನು ರಾಜಕೀಯವಾಗಿ ಮುಗಿಸಲು ಜನಾರ್ದನ ರೆಡ್ಡಿ ಯತ್ನಿಸುತ್ತಿದ್ದಾರೆ ಎಂದು ಬುಧವಾರ ಗಂಭೀರ ಆರೋಪ ಮಾಡಿದ್ದಾರೆ.ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದೆ. ಹೀಗಾಗಿ ರಾಜ್ಯಕ್ಕೆ ಬಂದಿರುವ ಕರ್ನಾಟಕ ಉಸ್ತುವಾರಿ ರಾಧಾ ಮೋಹನ್ ದಾಸ್ ಅವರು ನಿನ್ನೆ ಸಂಜೆ ಕೋರ್ ಕಮಿಟಿ ಸಭೆ ನಡೆಸಿದರು.ಕೋರ್ ಕಮಿಟಿ ಸಭೆಯಲ್ಲಿ ಸಂಡೂರು ವಿಧಾನಸಭೆ ಉಪಚುನಾವಣೆ ಸೋಲಿನ ಬಗ್ಗೆ ಚರ್ಚೆಯಾಗಿದ್ದು, ಈ ವೇಳೆ ನೀವು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಶ್ರೀರಾಮುಲು ವಿರುದ್ಧವೇ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಇದರಿಂದ ತೀವ್ರ ಅಸಮಾಧಾನಗೊಂಡ ಶ್ರೀರಾಮುಲು, ಇನ್ನೂ ಕೂಡ ಉಪಚುನಾವಣೆ ಸೋಲಿನ ಕುರಿತ…

Read More

ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ರಾಮ ಮಾಳಿಚಡಚಣ: ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದ ಹಲವಾರು ಭಾಗ್ಯಗಳು ಅವಶ್ಯಕತೆ ಇಲ್ಲ, ಎಂದು ಹಲವಾರು ಜನರು ಈ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಆದರೆ ಈ ಭಾಗ್ಯಗಳನ್ನೇ ಸದುಪಯೋಗಪಡಿಸಿಕೊಂಡು ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಹಲವಾರು ನಿದರ್ಶನಗಳಿವೆ. ಈ ನಿಟ್ಟಿನಲ್ಲಿ ಸಮೀಪದ ಕರ್ನಾಟಕ-ಮಹಾರಾಷ್ಟçದ ಗಡಿ ಅಂಚಿನ ಗ್ರಾಮದಲ್ಲಿ ಮಹಿಳೆಯೋಬ್ಬರು ಗೃಹಲಕ್ಷ್ಮಿ ಹಣದಿಂದ ಪತ್ರಾಸ್ ಮನೆಕಟ್ಟಿಕೊಂಡಿದ್ದಾರೆ ಎಂದರೆ ಭಾಗ್ಯಗಳು ಹೇಗೆ ಬಡವರ ಪಾಲಿಗೆ ಆಶಾಕಿರಣವಾಗಿವೆ ಎಂಬುದಕ್ಕೆ ಸಾಕ್ಷಿ.ಶಿರಾಡೋಣ ಗ್ರಾಮದ ನೀಲಾಬಾಯಿ ಗಂಗಣ್ಣ ಪಾಂಡ್ರೆ ಎಂಬ ಗೃಹಿಣಿ ತಮಗೆ ಬಂದ ಸುಮಾರು ೩೦ ಸಾವಿರ ರೂಪಾಯಿ ಗೃಹಲಕ್ಷ್ಮಿ ಹಣದೊಂದಿಗೆ ಇನ್ನಷ್ಟು ಹಣವನ್ನು ಹೊಂದಿಸಿಕೊಂಡು ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಪತ್ರಾಸ್ ಮನೆ ನಿರ್ಮಿಸಿಕೊಂಡಿದ್ದಾರೆ.ಮನೆಗೆ “ಗೃಹಲಕ್ಷ್ಮಿ ನಿಲಯ” ಎಂದು ನಾಮಕರಣ ಮಾಡಿದ್ದೂ ಅಲ್ಲದೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಭಾವಚಿತ್ರವನ್ನು ಅಂಟಿಸಿ. ಕೆಳಗಡೆ ಸಿದ್ಧರಾಮಯ್ಯ ಕೃಪೆ ಎಂದು ಬರೆಸಿದ್ದಾರೆ.ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ನೀಲಾಬಾಯಿ ದಂಪತಿ, ನಿತ್ಯ ಕೂಲಿ ಮಾಡಿ ಬದುಕುವ ನಮಗೆ ಸ್ವಂತ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಬೆಳಗಾವಿಯಲ್ಲಿ ಇದೇ ಜ.೨೬ರಂದು ಹಮ್ಮಿಕೊಳ್ಳಲಾಗಿದೆ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.ದೇಶದ ಯುವಜನತೆ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದು, ಇದು ಕರ್ನಾಟಕದಲ್ಲಿಯೂ ಮತ್ತಷ್ಟು ವ್ಯಾಪಕವಾಗಿದೆ. ರಾಜ್ಯದ ಯುವಜನರಿಗೆ ಹೆಚ್ಚಿನ ಉದ್ಯೋಗವಕಾಶಗಳು, ಲಭ್ಯವಾಗುವಂತೆ ಮಾಡುವ ಕೆಲಸ ನಮ್ಮೆಲ್ಲರ ಮುಂದಿದೆ. ಇದನ್ನು ನಿರ್ವಹಿಸಬೇಕಾದ ಸರ್ಕಾರಕ್ಕೆ ತನ್ನ ಜವಾಬ್ದಾರಿಯನ್ನು ನೆನಪಿಸಿ, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವಂತೆ ಮಾಡುವ ಬಗ್ಗೆ ಸ್ವಾಮಿ ವಿವೇಕಾನಂದರ ಜಯಂತಿಯ ಸಂದರ್ಭದಲ್ಲಿ “ಉದ್ಯೋಗಕ್ಕಾಗಿ ಕನ್ನಡಿಗರು – ಯುವಜನರ ಹಕ್ಕೊತ್ತಾಯ ಸಮಾವೇಶವನ್ನು” – ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಬೆಳಗಾವಿಯಲ್ಲಿ ಜ.೨೬ರಂದು ಹಮ್ಮಿಕೊಳ್ಳಲಾಗಿದ್ದು, ಈ ಸಮಾವೇಶಕ್ಕೆ ರಾಜ್ಯದ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಮಿತಿ ಜಿಲ್ಲಾಧ್ಯಕ್ಷ ಅಶೋಕ್ ಜಾಧವ್. ಪ್ರದಾನ ಕಾರ್ಯದರ್ಶಿ ಲಕ್ಷ್ಮಣ ಚಡಚಣ. ಇಂಡಿ ಉಪಾಧ್ಯಕ್ಷ ಮಲ್ಲು ಬಿರಾದಾರ, ಸುರೇಶ್ ನಿಂಬೊಣಿ. ದೇಸು ಚವ್ಹಾಣ್ ಸದಸ್ಯರು ಕೋರಿದ್ದಾರೆ.

Read More

ಕಪ್ಪತಗುಡ್ಡದ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: “ಸೋಹಂ ಎಂದಿನಸದೇ ದಾಸೋಹಂ ಎಂದೆನಿಸಯ್ಯ” ಎಂಬ ಪ್ರಭುದೇವರ ಮಾತು ನಮಗೆಲ್ಲ ಮಾದರಿ ಮತ್ತು ಆದರ್ಶವಾಗಿದೆ ಎಂದು ಗದಗ ನ ಕಪ್ಪತಗುಡ್ಡದ ನಂದಿವೇರಿ ಮಠದ ಶಿವಕುಮಾರ ಮಹಾಸ್ವಾಮಿಗಳು ನುಡಿದರು.ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಹೇಮರೆಡ್ಡಿ ಮಲ್ಲಮ್ಮ ವೃತ್ತದ ಬಳಿಯ ಗಾರ್ಡನ್ ಜಾಗೆಯಲ್ಲಿ ವಿಶ್ವ ದಾಸೋಹ ದಿನಾಚರಣೆ ಅಂಗವಾಗಿ ಲಿಂ.ಹಾನಗಲ್ಲ ಕುಮಾರೇಶ್ವರ ಮಹಾಸ್ವಾಮಿಗಳು, ಸಿದ್ಧಗಂಗಾ ಮಠದ ಲಿಂ.ಶಿವಕುಮಾರ ಮಹಾಸ್ವಾಮಿಗಳು, ತಾಲೂಕಿನ ಮಡಿಕೇಶ್ವರ ಗ್ರಾಮದ ಲಿಂ.ಚನ್ನಣ್ಣ ದೇಸಾಯಿ ಅವರ ಪುಣ್ಯ ಸ್ಮರಣೋತ್ಸವದ ನಿಮಿತ್ಯ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ವೀರಶೈವ ಲಿಂಗಾಯತ ಸಮಾಜ ಮತ್ತು ಜೆಸಿ ಗೆಳೆಯರ ಬಳಗದಿಂದ ಹಮ್ಮಿಕೊಳ್ಳಲಾಗಿದ್ದ ಅನ್ನಸಂತರ್ಪಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಶರಣ ಪರಂಪರೆಯಲ್ಲಿ ಕಾಯಕ ಮತ್ತು ದಾಸೋಹ ಎರಡೂ ಜೊತೆ ಜೊತೆಯಾಗಿ ಸಾಗುತ್ತವೆ. ಶರಣರು ತಮ್ಮ ಸುತ್ತಮುತ್ತಲಿನ ಸಮಾಜದ ಕೊಳೆಯನ್ನು ಅಂಟಿಸಿಕೊಳ್ಳದೇ ಪರಿಶುದ್ಧ ಜೀವನವನ್ನು ಸಾಗಿಸಿ ಕಾಯಕ ಮತ್ತು ದಾಸೋಹದ ಮೂಲಕ ಅನುಭಾವದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಉತ್ತರ ಕರ್ನಾಟಕದಲ್ಲಿ ಅನೇಕ ಪ್ರತಿಭೆಗಳಿದ್ದು, ಅವರ ಪ್ರತಿಭೆಗೆ ತಕ್ಕಂತೆ ಚಲನಚಿತ್ರದಲ್ಲಿ ಅವಕಾಗಳು ಸಿಗುತ್ತಿಲ್ಲ. ಸೂಕ್ತ ವೇದಿಕೆ ಸಿಕ್ಕರೆ ಉತ್ತರ ಕರ್ನಾಟಕದ ಕಲಾವಿದರು ತಾವು ಯಾರಿಗೂ ಕಮ್ಮಿಯಿಲ್ಲ ಎಂಬುದನ್ನು ತೋರಿಸುತ್ತಾರೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ, ಚಲನಚಿತ್ರ ನಿರ್ದೇಶಕ ಪವನಕುಮಾರ ಒಡೆಯರ ಹೇಳಿದರು.ಅವರು ನಗರದ ಖಾಸಗಿ ಹೋಟೇಲ್‌ನಲ್ಲಿ ಪರಿಸರ ವೇದಿಕೆ ಹಾಗೂ ಶಿವಶರಣ ಶೈಕ್ಷಣಿಕ ಗ್ರಾಮೀಣಾಭಿವೃದ್ಧಿ ಹಾಗೂ ವಿವಿದ್ಧೋದ್ಧೇಶಗಳ ಸಂಸ್ಥೆಯ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಉತ್ತರ ಕರ್ನಾಟಕದ ಭಾಗದಲ್ಲಿ ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರ ಹಾಗೂ ಆದಿಲ್ ಶಾಹಿ ಸಾಮ್ರಾಜ್ಯ ಕಾಲದ ಅನೇಕ ಸ್ಮಾರಕಗಳಿದ್ದು ಜೊತೆಗೆ ದೇಶಗತಿ ಮನೆತನದ ಕೋಟೆ ಕೊತ್ತಲುಗಳಿದ್ದು, ಪ್ರಾಕೃತಿಕವಾಗಿ ಬಯಲುಸೀಮೆ ನಾಡಾಗಿರುವ ಉತ್ತರ ವಲಯವು ಚಲನ ಚಿತ್ರ ನಿರ್ಮಾಣಕ್ಕೆ ಪೂರಕವಾಗಿದೆ.ಇಲ್ಲಿನ ಸ್ಮಾರಕಗಳನ್ನು ಹಾಗೂ ಸಾಹಿತ್ಯ ಸಂಸ್ಕೃತಿ ಮತ್ತು ಜವಾರಿ ಭಾಷೆಯನ್ನು ಬಳಸಿಕೊಂಡು ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕ ಕೇಂದ್ರಿಕೃತ ಚಲನಚಿತ್ರ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದು, ಇಲ್ಲಿನ ಪ್ರತಿಭೆಗಳಿಗೆ ಸೂಕ್ತ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.ಪರಿಸರ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಡೋಹರ್ ಸಮುದಾಯವನ್ನು ೪ ನೇ ಗುಂಪಿನಲ್ಲಿ ಇರಿಸಲಾಗಿರುವ ಕ್ರಮವನ್ನು ಆಗ್ರಹಿಸಿ ಸಮಾಜಕ್ಕೆ ಆಗಿರುವ ಅನ್ಯಾಯಕ್ಕೆ ಮಿನಿ ವಿಧಾನಸೌಧ ಎದುರು ಸಮಾಜ ಬಾಂಧವರು ಪ್ರತಿಭಟಿಸಿದರು.ಭೀಮಾಶಂಕರ ಸಕ್ಕರೆ ಕಾರ್ಖಾನೆ ನಿರ್ದೇಶಕ ಮತ್ತು ನ್ಯಾಯವಾದಿ ಅಶೋಕ ಗಜಾಕೋಶ ಮಾತನಾಡಿ ಪರಿಶಿಷ್ಠ ಜಾತಿ ವರ್ಗೀಕರಣದಲ್ಲಿ ಡೋಹರ್ ಕಕ್ಕಯ್ಯ ಸಮುದಾಯವನ್ನು ಅವೈಜ್ಞಾನಿಕವಾಗಿ ೪ ನೇ ಗುಂಪಿನಲ್ಲಿ ಇರಿಸಲಾಗಿದೆ. ಸಮುದಾಯವು ಚರ್ಮ ಸಂಬಂದಿತ ಸಮುದಾಯವಾಗಿದ್ದು ಚರ್ಮ ಸಂಬಂದಿತ ಕಸಬು ಮಾಡುವ ಮಾದಿಗ ಹಾಗೂ ಸಮಗಾರ, ಚಮ್ಮಾರ ಮೋಚಿ ಜಾತಿಗಳಿದ್ದು ಅವರಿಗೆ ಒಂದನೇಯ ಗುಂಪಿನಲ್ಲಿ ಸೇರಿಸಿ ೬ ಪ್ರತಿಶತ ಮೀಸಲಾತಿ ನೀಡಿದ್ದಾರೆ ಎಂದರು.ನಿವೃತ್ತ ಉಪನ್ಯಾಸಕ ಸುರೇಶ ಕಟಕಕೊಂಡ ಮಾತನಾಡಿ, ಡೋಹರ್ ಕಕ್ಕಯ್ಯ ಸಮುದಾಯವನ್ನು ಅತಿ ಸಣ್ಣ ಮತ್ತು ಅಲೆಮಾರಿ ಜನಾಂಗ ಎಂದು ತಿಳಿದು ೮೯ ಸಮುದಾಯದಲ್ಲಿ ಸೇರ್ಪಡೆ ಮಾಡಿದ್ದಾರೆ ಕಾರಣ ಒಂದನೇಯ ಗುಂಪಿನಲ್ಲಿರಿಸಿ ಶೇಕಡಾ ೬ ಮಿಸಲಾತಿ ಒದಗಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಎಸ್.ಆರ್.ಪೋಳ , ಮಳಸಿದ್ದ ಗಜಾಕೋಶ, ಮಾರುತಿ ಇಂಗಳೆ, ಜಗದೀಶ ಗಜಾಕೋಶ, ಶಿವಾಜಿ ನಾರಾಯಣಕರ, ಶರತ ಗಜಾಕೋಶ,…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಹಾಗೂ ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಧಾರವಾಡದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಜರುಗಿದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ತಾಲೂಕಿನ ಶಿರಕನಹಳ್ಳಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ೭ನೇ ವರ್ಗದ ವಿದ್ಯಾರ್ಥಿನಿ ಪೂರ್ಣಿಮಾ ಕೆಂಭಾವಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ.ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಹಾಗೂ ಯೋಜನಾಧಿಕಾರಿ ಭಾರತಿ ಶೆಟ್ಟರ ಅವರು ವಿಜೇತ ಪೂರ್ಣಿಮಾಳಿಗೆ ಪ್ರಶಸ್ತಿ ಪತ್ರ ಹಾಗೂ ೨೫೦೦೦ ರೂ.ಗಳ ಚೆಕ್ ನೀಡಿ ಗೌರವಿಸಿದ್ದಾರೆ.ರೈತರಾದ ತಂದೆ ರಮೇಶ ಹಾಗೂ ತಾಯಿ ಮಲ್ಲಮ್ಮಳ ಸುಪುತ್ರಿಯಾದ ಪೂರ್ಣಿಮಾ ಕೆಂಭಾವಿ-ಈ ವಿದ್ಯಾರ್ಥಿನಿಯ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಆಲಗೂರ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್. ನಡಗಡ್ಡಿ, ಶಿಕ್ಷಣ ಸಂಯೋಜಕ ಪ್ರಕಾಶ ನಾಯಕ, ಬಿಆರ್‌ಪಿ ಎ.ಜಿ. ಚೌಧರಿ, ಸಿಆರ್‌ಪಿ ಸಂತೋಷ ನೆರಕಿ, ಮುಖ್ಯ…

Read More

ಭೂ ಪರಿಹಾರ ಬರದಿದ್ದರೂ ಕಾಮಗಾರಿ ಆರಂಭ | ಆತಂಕದಲ್ಲಿ ಭೂ ಮಾಲೀಕರು | ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ! ಉದಯರಶ್ಮಿ ದಿನಪತ್ರಿಕೆ ಇಂಡಿ: ಮಹಾರಾಷ್ಟ್ರ ಕರ್ನಾಟಕ ಸಂಪರ್ಕಿಸುವ ೫೪೮ (ಬಿ) ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, ಭೂ ಮಾಲೀಕರಿಗೆ ಇದುವರೆಗೂ ಭೂ ಪರಿಹಾರವೇ ಜಮಾ ಮಾಡಿಲ್ಲ. ಆದರೆ ಕಾಮಗಾರಿ ಪ್ರಾರಂಭವಾಗಿದ್ದು ನಮಗೆ ಪರಿಹಾರ ಬರುತ್ತದೋ ಇಲ್ಲವೋ ಎಂಬ ಬಗ್ಗೆ ಭೂ ಮಾಲೀಕರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.ಈಗಾಗಲೇ ಮಹಾರಾಷ್ಟ್ರ ರಾಜ್ಯದ ಮುರಮ್ ಗ್ರಾಮದಿಂದ ಕರ್ನಾಟಕದ ವಿಜಯಪುರ ನಗರದವರೆಗೆ ರಸ್ತೆ ಕಾಮಗಾರಿ ಪ್ರಾರಂಭ ಮಾಡಲಾಗಿದೆ. ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ಜಿಸಿಬಿ ಹಿಟಾಚಿ ಯಂತ್ರಗಳ ಮುಖಾಂತರ ಮಣ್ಣು ತೆಗೆದು ಅದಕ್ಕೆ ಗರಸು ತುಂಬುವ ಪ್ರಕ್ರಿಯೆ ನಡೆದಿದೆ. ಇನ್ನೂ ಹಲವೆಡೆ ಗರಸು ಸಿಗದೇ, ಮಣ್ಣು, ಗುಂಡುಕಲ್ಲುಗಳನ್ನು ತುಂಬಲಾಗುತ್ತಿದೆ.ಭೂ ಮಾಲೀಕರಿಗೆ ಪರಿಹಾರ ನೀಡದೆ ಕಾಮಗಾರಿ ಪ್ರಾರಂಭಿಸಬಾರದು ಎಂದು ಸುಪ್ರೀಂ ಕೋರ್ಟ್ ಒಂದು ಪ್ರಕರಣದಲ್ಲಿ ಆದೇಶ ನೀಡಿದೆ. ಆದರೂ ಸಹಿತ ಈ ರಸ್ತೆ ಹಿಡಿದ ಗುತ್ತಿಗೆದಾರ ಭೂ ಮಾಲೀಕರಿಗೆ ಪರಿಹಾರ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ನಾವು ತಂತ್ರಜ್ಞಾನದಿಂದ ಎಷ್ಟೇ ಮುಂದುವರೆದರು ನಮ್ಮನ್ನು ನಾವು ಮೈಮರೆಯುತ್ತಿದ್ದೇವೆ ಈ ಮಾಯಾ ಜಗತ್ತಿಗೆ ನಾವು ಬಲೆಯಾಗಿದ್ದೇವೆ ಪ್ರತಿ ನಿಮಿಷಕ್ಕೆ ಒಂದು ಮಗು ಕಾಣಿಸುತ್ತದೆ ಹಾಗೆ ಪ್ರತಿ ನಿಮಿಷಕ್ಕೂ ಒಂದು ಹೆಣ್ಣು ಮಗು ಅತ್ಯಾಚಾರಕ್ಕೆ ಒಳಪಡುತ್ತದೆ ನಿಯಂತ್ರಿಸಲು ಜಾರಿಯಲ್ಲಿರುವ ಕಾನೂನುಗಳು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ವಿಜಯಪುರದ ಕುಮಾರೇಶ್ವರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ರಮೇಶ ಎಚ್ ಸಂಗಾತಿ ಹೇಳಿದರು.ಪಟ್ಟಣದ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಕುಮಾರೇಶ್ವರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ವಿಜಯಪುರ ಹಾಗೂ ಮೈ ಚಾಯ್ಸ್ ಫೌಂಡೇಶನ್ ರೆಡ್ ಅಲರ್ಟ್ ಹೈದರಾಬಾದ್ ಇವರ ಸಯೋಗದಲ್ಲಿ ಸುರಕ್ಷಿತ ಗ್ರಾಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರುದೇಶದಲ್ಲಿ ಮಕ್ಕಳ ಹಕ್ಕುಗಳ ಪರಿಸ್ಥಿತಿ ಚಿಂತಾ ಜನಕವಾಗಿದೆ ಹೀಗಾಗಿ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಮಕ್ಕಳನ್ನು ದೌರ್ಜನದಿಂದ ರಕ್ಷಿಸುವ ನಿಟ್ಟಿನಲ್ಲಿ ಸರಕಾರ ಮತ್ತು ಸಂಘ ಸಂಸ್ಥೆಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದರು.ಯಾರಾದರೂ ಅಪರಿಚಿತರು ತೊಂದರೆ ಕೊಟ್ಟರೆ…

Read More