ಉದಯರಶ್ಮಿ ದಿನಪತ್ರಿಕೆ
ಇಂಡಿ: ಡೋಹರ್ ಸಮುದಾಯವನ್ನು ೪ ನೇ ಗುಂಪಿನಲ್ಲಿ ಇರಿಸಲಾಗಿರುವ ಕ್ರಮವನ್ನು ಆಗ್ರಹಿಸಿ ಸಮಾಜಕ್ಕೆ ಆಗಿರುವ ಅನ್ಯಾಯಕ್ಕೆ ಮಿನಿ ವಿಧಾನಸೌಧ ಎದುರು ಸಮಾಜ ಬಾಂಧವರು ಪ್ರತಿಭಟಿಸಿದರು.
ಭೀಮಾಶಂಕರ ಸಕ್ಕರೆ ಕಾರ್ಖಾನೆ ನಿರ್ದೇಶಕ ಮತ್ತು ನ್ಯಾಯವಾದಿ ಅಶೋಕ ಗಜಾಕೋಶ ಮಾತನಾಡಿ ಪರಿಶಿಷ್ಠ ಜಾತಿ ವರ್ಗೀಕರಣದಲ್ಲಿ ಡೋಹರ್ ಕಕ್ಕಯ್ಯ ಸಮುದಾಯವನ್ನು ಅವೈಜ್ಞಾನಿಕವಾಗಿ ೪ ನೇ ಗುಂಪಿನಲ್ಲಿ ಇರಿಸಲಾಗಿದೆ. ಸಮುದಾಯವು ಚರ್ಮ ಸಂಬಂದಿತ ಸಮುದಾಯವಾಗಿದ್ದು ಚರ್ಮ ಸಂಬಂದಿತ ಕಸಬು ಮಾಡುವ ಮಾದಿಗ ಹಾಗೂ ಸಮಗಾರ, ಚಮ್ಮಾರ ಮೋಚಿ ಜಾತಿಗಳಿದ್ದು ಅವರಿಗೆ ಒಂದನೇಯ ಗುಂಪಿನಲ್ಲಿ ಸೇರಿಸಿ ೬ ಪ್ರತಿಶತ ಮೀಸಲಾತಿ ನೀಡಿದ್ದಾರೆ ಎಂದರು.
ನಿವೃತ್ತ ಉಪನ್ಯಾಸಕ ಸುರೇಶ ಕಟಕಕೊಂಡ ಮಾತನಾಡಿ, ಡೋಹರ್ ಕಕ್ಕಯ್ಯ ಸಮುದಾಯವನ್ನು ಅತಿ ಸಣ್ಣ ಮತ್ತು ಅಲೆಮಾರಿ ಜನಾಂಗ ಎಂದು ತಿಳಿದು ೮೯ ಸಮುದಾಯದಲ್ಲಿ ಸೇರ್ಪಡೆ ಮಾಡಿದ್ದಾರೆ ಕಾರಣ ಒಂದನೇಯ ಗುಂಪಿನಲ್ಲಿರಿಸಿ ಶೇಕಡಾ ೬ ಮಿಸಲಾತಿ ಒದಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್.ಆರ್.ಪೋಳ , ಮಳಸಿದ್ದ ಗಜಾಕೋಶ, ಮಾರುತಿ ಇಂಗಳೆ, ಜಗದೀಶ ಗಜಾಕೋಶ, ಶಿವಾಜಿ ನಾರಾಯಣಕರ, ಶರತ ಗಜಾಕೋಶ, ಅಮೀತ ಇಂಗಳೆ, ತುಳಜಾರಾಮ ಇಂಗಳೆ, ಸುಧೀರ ಕಟಕದೊಂಡ, ಕಿರಣ ಕಟಕದೊಂಡ, ಮಾನಪ್ಪ ಹೊಟಕರ, ,ಕಲ್ಲು ಚಾಂದಕವಟೆ, ಆನಂದಪ್ಪಾ ಹೊಟಕರ ಮತ್ತಿತರಿದ್ದರು.