ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ನಾವು ತಂತ್ರಜ್ಞಾನದಿಂದ ಎಷ್ಟೇ ಮುಂದುವರೆದರು ನಮ್ಮನ್ನು ನಾವು ಮೈಮರೆಯುತ್ತಿದ್ದೇವೆ ಈ ಮಾಯಾ ಜಗತ್ತಿಗೆ ನಾವು ಬಲೆಯಾಗಿದ್ದೇವೆ ಪ್ರತಿ ನಿಮಿಷಕ್ಕೆ ಒಂದು ಮಗು ಕಾಣಿಸುತ್ತದೆ ಹಾಗೆ ಪ್ರತಿ ನಿಮಿಷಕ್ಕೂ ಒಂದು ಹೆಣ್ಣು ಮಗು ಅತ್ಯಾಚಾರಕ್ಕೆ ಒಳಪಡುತ್ತದೆ ನಿಯಂತ್ರಿಸಲು ಜಾರಿಯಲ್ಲಿರುವ ಕಾನೂನುಗಳು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ವಿಜಯಪುರದ ಕುಮಾರೇಶ್ವರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ರಮೇಶ ಎಚ್ ಸಂಗಾತಿ ಹೇಳಿದರು.
ಪಟ್ಟಣದ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಕುಮಾರೇಶ್ವರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ವಿಜಯಪುರ ಹಾಗೂ ಮೈ ಚಾಯ್ಸ್ ಫೌಂಡೇಶನ್ ರೆಡ್ ಅಲರ್ಟ್ ಹೈದರಾಬಾದ್ ಇವರ ಸಯೋಗದಲ್ಲಿ ಸುರಕ್ಷಿತ ಗ್ರಾಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು
ದೇಶದಲ್ಲಿ ಮಕ್ಕಳ ಹಕ್ಕುಗಳ ಪರಿಸ್ಥಿತಿ ಚಿಂತಾ ಜನಕವಾಗಿದೆ ಹೀಗಾಗಿ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಮಕ್ಕಳನ್ನು ದೌರ್ಜನದಿಂದ ರಕ್ಷಿಸುವ ನಿಟ್ಟಿನಲ್ಲಿ ಸರಕಾರ ಮತ್ತು ಸಂಘ ಸಂಸ್ಥೆಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದರು.
ಯಾರಾದರೂ ಅಪರಿಚಿತರು ತೊಂದರೆ ಕೊಟ್ಟರೆ ಮಕ್ಕಳ ಸಹಾಯ ವಾಣಿ 1098 ತುರ್ತು ಸೇವಾಗಾಗಿ 112 ಗೆ ಕರೆ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ತಹಶೀಲ್ದಾರ ಎಸ್
ಎಸ್. ನಾಯಕಲಮಠ ಮಾತನಾಡಿ ಬಾಲಕಾರ್ಮಿಕ ಮಕ್ಕಳನ್ನು ವಿಶೇಷವಾಗಿ ಅವರು ಶಾಲೆಯಲ್ಲಿ ಇರಬೇಕಾದ ಸಮಯದಲ್ಲಿ ಕೆಲಸ ಮಾಡಲು ಕೋರುವುದು ಅಥವಾ ಒತ್ತಾಯ ಮಾಡುವುದು ಮಕ್ಕಳು ಶಾಲೆಯಲ್ಲಿ ಇರಬೇಕಾದ ಸಮಯದಲ್ಲಿ ಅವರನ್ನು ಕೆಲಸಕ್ಕೆ ನಡೆಸುವುದು ಕಾನೂನು ವಿರುದ್ಧ ಅಪರಾಧ. ಮಕ್ಕಳಿಗೆ ಶಿಕ್ಷಣವನ್ನು ಕೊಡಿ ಅವರನ್ನು ಸಮಾಜದಲ್ಲಿ ಒಬ್ಬ ಒಳ್ಳೆಯ ವ್ಯಕ್ತಿಯನ್ನಾಗಿ ಮಾಡಬೇಕಾದ ಕರ್ತವ್ಯ ನಮ್ಮೆಲ್ಲರದ್ದು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ಯಶೋದ ಜೋಶಿ ಮಾತನಾಡಿ ಬಾಲ್ಯ ವಿವಾಹ ಮಾಡುವುದು ಕಾನೂನಿನ ಪ್ರಕಾರ ಅಪರಾಧ 18 ಹಾಗೂ 21 ವಯಸ್ಸಿಗಿಂತ ಮುಂಚಿತವಾಗಿ ವಿವಾಹ ಮಾಡುವುದು ತಪ್ಪು ಮತ್ತು ಕಾನೂನು ಬಾಹಿರವಾಗಿದೆ ಆದ್ದರಿಂದ ನಾವೆಲ್ಲರೂ ಒಟ್ಟಾಗಿ ಬಾಲ್ಯ ವಿವಾಹ ಮತ್ತು ಮಕ್ಕಳ ಕಳ್ಳ ಸಾಗಣಿಕೆ ಅನ್ನು ನಿಲ್ಲಿಸಬೇಕು ಎಂದು ಹೇಳಿದರು.
ಅತಿಥಿಗಳಾಗಿ ಉಮೇಶ ಚಲವಾದಿ. ಎಎಸ್ಐ ಎಸ್.ಎಸ್. ಬಡಿಗೇರ, ಮುಖ್ಯ ಶಿಕ್ಷಕ ಎಂ.ಕೆ. ಚೌದ್ರಿ, ಡಾ.ಅಬ್ದುಲ್, ಭೀಮಪ್ಪ ಬೀಳಗಿ, ಮಲ್ಲಪ್ಪ ಗಣಿ, ಸಿದ್ದಪ್ಪ ಗಣಿ, ರೂಪ ಗಿಡ್ಡಪ್ಪಗೋಳ, ಅಶೋಕ ಕೊಲ್ಹಾರ ಉಪಸ್ಥಿತರಿದ್ದರು.