ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಬೆಳಗಾವಿಯಲ್ಲಿ ಇದೇ ಜ.೨೬ರಂದು ಹಮ್ಮಿಕೊಳ್ಳಲಾಗಿದೆ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ದೇಶದ ಯುವಜನತೆ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದು, ಇದು ಕರ್ನಾಟಕದಲ್ಲಿಯೂ ಮತ್ತಷ್ಟು ವ್ಯಾಪಕವಾಗಿದೆ. ರಾಜ್ಯದ ಯುವಜನರಿಗೆ ಹೆಚ್ಚಿನ ಉದ್ಯೋಗವಕಾಶಗಳು, ಲಭ್ಯವಾಗುವಂತೆ ಮಾಡುವ ಕೆಲಸ ನಮ್ಮೆಲ್ಲರ ಮುಂದಿದೆ. ಇದನ್ನು ನಿರ್ವಹಿಸಬೇಕಾದ ಸರ್ಕಾರಕ್ಕೆ ತನ್ನ ಜವಾಬ್ದಾರಿಯನ್ನು ನೆನಪಿಸಿ, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವಂತೆ ಮಾಡುವ ಬಗ್ಗೆ ಸ್ವಾಮಿ ವಿವೇಕಾನಂದರ ಜಯಂತಿಯ ಸಂದರ್ಭದಲ್ಲಿ “ಉದ್ಯೋಗಕ್ಕಾಗಿ ಕನ್ನಡಿಗರು – ಯುವಜನರ ಹಕ್ಕೊತ್ತಾಯ ಸಮಾವೇಶವನ್ನು” – ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಬೆಳಗಾವಿಯಲ್ಲಿ ಜ.೨೬ರಂದು ಹಮ್ಮಿಕೊಳ್ಳಲಾಗಿದ್ದು, ಈ ಸಮಾವೇಶಕ್ಕೆ ರಾಜ್ಯದ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಮಿತಿ ಜಿಲ್ಲಾಧ್ಯಕ್ಷ ಅಶೋಕ್ ಜಾಧವ್. ಪ್ರದಾನ ಕಾರ್ಯದರ್ಶಿ ಲಕ್ಷ್ಮಣ ಚಡಚಣ. ಇಂಡಿ ಉಪಾಧ್ಯಕ್ಷ ಮಲ್ಲು ಬಿರಾದಾರ, ಸುರೇಶ್ ನಿಂಬೊಣಿ. ದೇಸು ಚವ್ಹಾಣ್ ಸದಸ್ಯರು ಕೋರಿದ್ದಾರೆ.

