Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪುರ್ನವಸತಿ ಕೇಂದ್ರವಾದ ಕೊಲ್ಹಾರ ಪಟ್ಟಣವು ತಾಲೂಕು ಕೇಂದ್ರವಾಗಿರುವದರಿಂದ ಪಟ್ಟಣಕ್ಕೆ ಇನ್ನೂ ಬರಬೇಕಾದ ತಾಲೂಕು ಕಛೇರಿಗಳನ್ನು ಮಂಜೂರಿ ಮಾಡಿಸಲು ಸಚಿವ ಕ್ಷೇತ್ರದ ಶಾಸಕರಾದ ಶಿವಾನಂದ ಪಾಟೀಲ ಗಮನಕ್ಕೆ ತಂದು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಪಟ್ಟಣ ಪಂಚಾಯತ ನೂತನ ಅಧ್ಯಕ್ಷ ಚನಮಲ್ಲಪ್ಪ ಶಿವಪ್ಪ ಗಿಡ್ಡಪ್ಪಗೋಳ ಹೇಳಿದರು.ಕೊಲ್ಹಾರ ತಾಲೂಕು ರಚನಾ ಹೋರಾಟ ಸಮಿತಿ ಪದಾಧಿಕಾರಿಗಳು ಸಲ್ಲಿಸಿದ ಮನವಿ ಸ್ವಿಕರಿಸಿ ಮಾತನಾಡಿದ ಅವರು ಸಚಿವ ಶಿವಾನಂದ ಪಾಟೀಲರು ಕೊಲ್ಹಾರ ಪಟ್ಟಣದ ಅಭಿವ್ರದ್ದಿಗಾಗಿ ಯುಕೆಪಿ ಇಲಾಖೆ ಮತ್ತು ಸರಕಾರದ ವಿವಿಧ ಇಲಾಖೆಗಳ ಮೂಲಕ ಅನುದಾನವನ್ನು ಕಾಮಗಾರಿ ಪ್ರಾರಂಬಿಸಲು ಮಂಜೂರಿ ಮಾಡಿಸಿದ್ದು ಕೆಲವು ಅಡಚಣೆಗಳು ಬಗೆಹರಿದರೆ ಎಲ್ಲ ಕೆಲಸಗಳು ಚಾಲು ಆಗುವದರಲ್ಲಿ ಸಂಶಯವಿಲ್ಲ ಪಟ್ಟಣದ ಎಲ್ಲ ಸಂಘಟನೆಯವರ ಜನರ ಸಹಕಾರ ಪ್ರಾಮುಖ್ಯತೆ ಅತಿ ಅವಶ್ಯ ಎಂದರು.ಪಟ್ಟಣದಲ್ಲಿರುವ ಕೆಲವು ರಸ್ತೆಗಳನ್ನು ದ್ವಿಪಥ ರಸ್ತೆಯನ್ನಾಗಿ ಮಾರ್ಪಡಿಸಿ ವಿಭಜಕದ ಮದ್ಯ ವಿದ್ಯುತ್ ಕಂಬ ಅಳವಡಿಸಿ ಬೆಳಕಿನ ವ್ಯವಸ್ಥೆ ಮಾಡಲಾಗುವದು ಪಟ್ಟಣದ ಸರ್ವಾಂಗೀಣ ಅಭಿವ್ರದ್ದಿಗಾಗಿ ಸದ್ಯಸ್ಯರ ಅಧಿಕಾರಗಳ ಮತ್ತು…

Read More

ಕಪನಿಂಬರಗಿಯಲ್ಲಿ ಮಾನಸಿಕ ಆರೋಗ್ಯ ತಿಳುವಳಿಕೆ ಜಾಗೃತಿ ಜಾಥಾ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಿಮ್ಮ ಮನಸ್ಸನ್ನು ಶಾಂತಗೊಳಿಸಲು, ಒತ್ತಡವನ್ನು ಕಡಿಮೆ ಮಾಡಲು, ಉತ್ತಮ ಮಾನಸಿಕ ಯೋಗಕ್ಷೇಮಕ್ಕಾಗಿ ಭಾವನಾತ್ಮಕ ಅರಿವನ್ನು ಹೆಚ್ಚಿಸಲು ಸಾವಧಾನತೆ ಅಥವಾ ಧ್ಯುಆನಕ್ಕೆ ಪ್ರತಿದಿನ ಕೆಲವು ನಿಮಿಷಗಳನ್ನು ಮೀಸಲಿಡುವುದು ಬಹಳ ಮುಖ್ಯ. ದೈಹಿಕ ಚಟುವಟಿಕೆಗಳು ಮಾನಸಿಕ ಸ್ವಾಸ್ಥ್ಯವನ್ನು ಉತ್ತಮವಾಗಿಸಲು ಸಹಾಯ ಮಾಡುತ್ತದೆ ಎಂದು ಕಪ ನಿಂಬರಗಿ ಗ್ರಾಪಂ ಅಧ್ಯಕ್ಷರಾದ ಪ್ರತಿಭಾ ಠೋಕೆಯವರು ಹೇಳಿದರು.ಶನಿವಾರದಂದು ಕಪನಿಂಬರಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ತಿಳುವಳಿಕೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ಮನಸ್ಸೆಂಬ ಕನ್ನಡಿಯಲ್ಲಿ ಬಿಂಬಿತವಾಗುವ ಶಾಂತಿ, ಸಮಾಧಾನ, ಬದುಕಿನ ಸೊಗಸು ಎಲ್ಲವೂ ನಮ್ಮ ಅರಿವಿಗೆ, ಅನುಭವಕ್ಕೆ ಬರುವುದು ಮನಸ್ಸಿನ ಮೂಲಕವೇ. ಹೀಗಾಗಿ ಮಾನಸಿಕ ಆರೋಗ್ಯವೇ ನಮ್ಮ ಜೀವನದ ಸಂತೋಷಗಳಿಗೆ ಬುನಾದಿಯಾಗಿದೆ ಎಂದರು.ಈ ವೇಳೆ ಸಿಬಿಐಡಿ ಸಂಯೋಜಕರಾದ ಹಣಮಂತರಾಯಗೌಡ ಪಾಟೀಲರು ಮಾತನಾಡುತ್ತ. ನಿಮ್ಮ ದೇಹವನ್ನು ಪೋಷಿಸಲು, ಮೆದುಳಿನ ಆರೋಗ್ಯವನ್ನು ಉತ್ತಮವಾಗಿಸಲು, ದೇಹ ಮತ್ತು ಮನಸ್ಸಿನ ಸರಿಯಾದ ಯೋಗಕ್ಷೇಮಕ್ಕಾಗಿ ಹಣ್ಣುಗಳು, ತರಕಾರಿಗಳು, ಧ್ಯಾನಗಳು ಮತ್ತು…

Read More

ನಿವರಗಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಆಚರಣೆಯಲ್ಲಿ ಬಿಇಓ ಸುಜಾತಾ ಹುನ್ನೂರ ಅಭಿಮತ ಉದಯರಶ್ಮಿ ದಿನಪತ್ರಿಕೆ ಚಡಚಣ: ವಿದ್ಯಾರ್ಥಿಗಳಿಗೆ ನಾವೀನ್ಯತೆ ಹಾಗೂ ಒಳಗೊಳ್ಳುವಿಕೆ ಭೋಧನೆಗೆ ಪ್ರೋತ್ಸಾಹ ನೀಡುವುದು. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಕುತೂಹಲ ಮೂಡಿಸಿ ಅವರಲ್ಲಿ ಪ್ರಶ್ನೆ ಮೂಡುವಂತೆ ಮಾಡುವುದು. ಕಲಿಯುವ ಪ್ರಕ್ರಿಯೆಯನ್ನು ಸಂತಸದಾಯಕಗೊಳಿಸುವುದು, ವಿದ್ಯಾರ್ಥಿಗಳಿಗೆ ಆತ್ಮ ವಿಶ್ವಾಸ ಹೆಚ್ಚಿಸಲು ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಚಡಚಣ ಬಿಇಓ ಶ್ರೀಮತಿ ಸುಜಾತಾ ಹುನ್ನೂರ ಹೇಳಿದರು.ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ಷೇತ್ರ ಸಮನ್ವಯ ಅಧಿಕಾರಿಗಳು ಕಾರ್ಯಾಲಯ ಚಡಚಣ ತಾಲೂಕು ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಸಾಮರ್ಥ್ಯದ ಆಂದೋಲನ ನಿವರಗಿ ಕ್ಲಸ್ಟರ್ ವ್ಯಾಪ್ತಿಯ ಉಮರಜದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ‘ಕಲಿಕಾ ಹಬ್ಬ’ವನ್ನು ಸರಸ್ವತಿ ಮಾತೆ ಭಾವಚಿತ್ರ ಪೂಜೆ ನೆರವೇರಿಸಿ ಮಾತನಾಡಿದ ಅವರು. ಮಕ್ಕಳು ಚಟುವಟಿಕೆ ಮೂಲಕ ಸಂತೋಷದಾಯಕ ಕಲಿಕೆಯನ್ನು ಮಕ್ಕಳು ಕಲಿಯಬೇಕು ಎಂಬ ಹಿನ್ನಲೆಯಿಂದ ಸರ್ಕಾರ ಚಿಂತನೆ ಮಾಡಿದ್ದು, ಈ ಚಿಂತನೆ, ಸಲಹೆ ಹಾಗೂ ಮಾರ್ಗದರ್ಶನದಡಿಯಲ್ಲಿ…

Read More

ಲೇಖನ:- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ,ಪಟ್ರಮೆ ಗ್ರಾಮ ಮತ್ತು ಅಂಚೆ,ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಮನುಷ್ಯನ ದೇಹದಲ್ಲಿ ಹೃದಯವನ್ನು ಬಿಟ್ಟರೆ ಮೆದುಳು ಅತ್ಯಂತ ಭಾಗ. ಮೆದುಳನ್ನು ದೇಹದ ಅತ್ಯಂತ ಶಕ್ತಿಶಾಲಿ ಭಾಗವೆಂದು ಪರಿಗಣಿಸಲಾಗುತ್ತದೆ. ಆದರೆ ಬಹುತೇಕ ಜನರು ತಮ್ಮ ಮೆದುಳನ್ನು ದೇಹದ ಪ್ರಮುಖ ಅಂಗವೆಂದು ಪರಿಗಣಿಸಿಲ್ಲ ಮತ್ತು ಹೆಚ್ಚಿನವರು ಯಾವತ್ತೂ ತಮ್ಮ ಮೆದುಳಿನ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸುವುದೇ ಇಲ್ಲ ಎನ್ನಬಹುದು. ಮೆದುಳು ಸ್ವಲ್ಪ ಆರೋಗ್ಯ ತಪ್ಪಿದರೆ ಮನುಷ್ಯ ಜೀವಂತ ಶವದಂತೆಯೇ ಸರಿ. ಹಾಗಾಗಿ ಮೆದುಳಿನ ಆರೋಗ್ಯ ಕಾಪಾಡಲು ಹೆಚ್ಚಿನ ಗಮನವನ್ನು ಹರಿಸಬೇಕು. ಪ್ರಾತಃಕಾಲದಲ್ಲೇ ಏಳುವುದು, ಸೂರ್ಯ ಸ್ನಾನ ಮಾಡುವುದು, ನಿತ್ಯವೂ ನಿಯಮಿತ ಧ್ಯಾನ ಮಾಡುವುದು, ಆರೋಗ್ಯ ಹಾಗೂ ತೂಕ ನಿಯಂತ್ರಣ ಮತ್ತು ಉತ್ತಮ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವ ಮೂಲಕ ಮೆದುಳಿನ ಆರೋಗ್ಯ ಕಾಪಾಡಬಹುದು. ನಮ್ಮ ಮೆದುಳಿನ ಆರೋಗ್ಯದ ಮೇಲೆ ನಮಗೆ ಅರಿವಿಲ್ಲದಂತೆ ನಮ್ಮ ಅಭ್ಯಾಸಗಳೇ ಪರಿಣಾಮ ಬೀರುತ್ತವೆ. ಮೆದುಳಿನ ಆರೋಗ್ಯವನ್ನು ಕಾಪಾಡುವ ಅಂಶಗಳೆಂದರೆ,ಸಾಕಷ್ಟು ನಿದ್ರೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜನವಾಣಿ ಬೇರು ಕವಿವಾಣಿ ಹೂ. ಶಿಷ್ಯ ಸಾಹಿತ್ಯಕ್ಕೆ ಮೂಲ ಜನಪದ ಸಾಹಿತ್ಯ ಜನಪದ ಹಾಡು -ಕಥೆಗಳಲ್ಲಿ ಜೀವನಾನುಭವವಿದೆ. ಅನಕ್ಷರಸ್ಥರಿಂದ ರಚಿಸಲ್ಪಟ್ಟಿದ್ದರೂ ಅದು ಸಂಸ್ಕೃತಿಯ ವೈಭವವನ್ನು ಹೊಂದಿದೆಯೆಂದು ಜನಪದ ಕಲೆಗಾರ ಡಾ. ಜ್ಯೋತಿರ್ಲಿಂಗ ಹೊನಕಟ್ಟಿ ಹೇಳಿದರು.ಅವರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಡಾ. ಎಂ.ಎನ್. ವಾಲಿ ಪ್ರತಿಷ್ಠಾನ ಮತ್ತು ಡಾ. ಸರಸ್ವತಿ ಚಿಮ್ಮಲಗಿ ಅವರ ಯುಗದರ್ಶಿನಿ ಪ್ರತಿಷ್ಠಾನಗಳ ದತ್ತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಜಿಲ್ಲಾ ವೀರಶೈವ ಲಿಂಗಾಯತ ಸಮುದಾಯ ಭವನದ ಜ್ಞಾನಜ್ಯೋತಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸ, ಜನಪದ ಹಾಡಿಕೆ, ಸಾಧಕರಿಗೆ ಸನ್ಮಾನಗಳ ಕಾರ್ಯಕ್ರಮ ಜರುಗಿದವು. ಪ್ರೊ. ಲಕ್ಷ್ಮಿ ಅನುಭವ ಮಂಟಪದಲ್ಲಿ ಶಿವಶರಣೆಯರು ವಿಷಯ ಕುರಿತು ಉಪನ್ಯಾಸ ನೀಡಿದರು. ವೇದಕಾಲದಲ್ಲಿ ಹೆಣ್ಣಿಗೆ ಸ್ವಾತಂತ್ರ್ಯ ವಿದ್ದಿದ್ದಿಲ್ಲ. ಹೆರಿಗೆ ಯಂತ್ರದಂತೆ ಯಾತನೆ ಅನುಭವಿಸುತ್ತಿದ್ದ ಹೆಣ್ಣಿಗೆ ಗಂಡಿಗೆ ಸಮಾನವಾದ ಸ್ಥಾನ ನೀಡಿ ದೈವತ್ವಕ್ಕೇರಿಸಿದ ಖ್ಯಾತಿ ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದು ಹೇಳಿದರು.ತಾಳಿಕೋಟಿಯ ಶಿವಲೀಲಾ ಮುರಾಳ ಅವರು ಜಾನಪದಲ್ಲಿ ಗರತಿ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಯಲಗೂರು ಯಲಗೂರೇಶ್ವರ ಕಾರ್ತಿಕೋತ್ಸವದ ಎರಡನೇ ದಿನ ವಿವಿಧ ಧಾಮರ್‌uಟಿಜeಜಿiಟಿeಜಕ, ಸಂಗೀತ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದವು.ಯಲಗೂರೇಶನ ಉತ್ಸವ ಮೂರ್ತಿ ಪಲ್ಲಕ್ಕಿಯೊಂದಿಗೆ ಕೃಷ್ಣಾ ನದಿಗೆ ತೆರಳಿ ನದಿ ಸ್ನಾನಗೈದು ಮರಳಿ ದೇವಸ್ಥಾನಕ್ಕೆ ನೂರಾರು ಭಕ್ತರ ಸಮ್ಮುಖದಲ್ಲಿ ನಸುಕಿನ ಜಾವ ೫ ಕ್ಕೆ ತರಲಾಯಿತು. ನಂತರ ದೇವರಿಗೆ ಅಭಿಷೇಕ, ಅಲಂಕಾರಗಳು ನಡೆದವು. ನಂತರ ದಿಂಡಿನ ಸ್ಪಧರ್‌uಟಿಜeಜಿiಟಿeಜ ಜರುಗಿದವು.ಎರಡನೇ ದಿನವೂ ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆದವು.ಸಂಗೀತ ಕಾರ್ಯಕ್ರಮ:ವಿದೂಷಿ ಸಂಗೀತಾ ಕಟ್ಟಿ ಕುಲಕಣರ್‌uಟಿಜeಜಿiಟಿeಜ, ಕುಮಾರ ಮರಡೂರ, ಜಯತೀರ್ಥ ಮೇವುಂಡಿ, ಅವರ ಗಾಯನ, ರಾಜೇಂದ್ರ ನಾಕೋಡ ಅವರ ತಬಲಾ ಸೋಲೋ, ಚಿದಾನಂದ ಕುಲಕರ್ಣಿ ಅವರ ನೃತ್ಯರೂಪಕ ಗಮನಸೆಳೆಯಿತು.ಪಂಡಿತ ಕಿರಣ ಯಾವಗಲ್, ಗುರುನಾಯಕ, ಪ್ರಶಾಂತ, ಗಣಾಚಾರಿ, ಶೇಷಗಿರಿ, ಕೇಶವ ಜೋಷಿ, ಪ್ರಮೋದ ಹರಿಮಂದಿರ, ಭರತ ಹೆಗಡೆ, ಮಧು ಕೊಪ್ಪ, ಅಕ್ಷಯ ಜೋಷಿ, ಶ್ರೀಹರಿ ದಿಗ್ಗಾವಿ, ಬಿಂಧು ಕಡಿವಾಲ ತಬಲಾ ಸಾಥ್ ನೀಡಿದರು.ಅನುಗ್ರಹ ಪ್ರಶಸ್ತಿ:ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ನೀಡುವ `ಯಲಗೂರೇಶ್ವರ ಅನುಗ್ರಹ ಪ್ರಶಸ್ತಿ’ಯನ್ನು ಶನಿವಾರ…

Read More

ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅಭಿಮತ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಸಮಾಜದ ಸ್ವಾಸ್ಥ್ಯ ಕಾಪಾಡಲು ಶಿಕ್ಷಣ ಮತ್ತು ಆರೋಗ್ಯ ಇವೆರಡು ಬಹಳ ಮುಖ್ಯ. ಅದರ ಜೊತೆಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಕೊಡಿಸುವ ಕೆಲಸ ನ್ಯಾಯವಾದಿಗಳು ಮಾಡುವ ಮೂಲಕ ಸಾರ್ವಜನಿಕರು ನ್ಯಾಯಾಂಗದ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅವರು ಹೇಳಿದರು.ಪಟ್ಟಣದ ನ್ಯಾಯಾಲಯದಲ್ಲಿ ಜಿಲ್ಲಾ ನ್ಯಾಯಾಂಗ, ಲೊಕೋಪಯೋಗಿ ಇಲಾಖೆ, ಮತ್ತು ನ್ಯಾಯವಾದಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನವಾಗಿ ಸೃಜಿಸಲ್ಪಟ್ಟ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯದ, ನ್ಯಾಯಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಲಾ ಛೇಂರ‍್ಸ್ ಮತ್ತು ಸಹಾಯಕ ಸರ್ಕಾರಿ ಅಭಿಯೋಜಕರ ಕಚೇರಿ ಕಟ್ಟಡಗಳ ಉದ್ಘಾಟನಾ ಸಮಾರಂಭದ ಘನ ಉಪಸ್ಥಿತಿ ವಹಿಸಿ ಅವರು ಮಾತನಾಡಿದರು.ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ ಸಂಘಟನೆ ಮಾಡಿದಾಗ ಎಷ್ಟೋ ವಕೀಲರು ತಮ್ಮ ವೃತ್ತಿಯನ್ನು ಬಿಟ್ಟು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿದ್ದರು. ಸ್ವಾತಂತ್ರö್ಯ ಬಂದು ಇಷ್ಟು ವರ್ಷಗಳಾದರೂ…

Read More

ಸಿಂದಗಿಯಲ್ಲಿ ಮಂದಾರ ಶಿಕ್ಷಣ ಸಂಸ್ಥೆಯ ಲಿಟಲ್ ವಿಂಗ್ಸ್ ಫೆಸ್ಟಿವಲ್ ಗೆ ಚಾಲನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪಾಲಕರು ಚಿಕ್ಕಂದಿನಲ್ಲಿ ಮಕ್ಕಳಿಗೆ ಆಧ್ಯಾತ್ಮಿಕ ಚಿಂತನೆಗಳನ್ನು ಅಳವಡಿಸುವುದರ ಜೊತೆಗೆ ಸನಾತನ ಭಾರತೀಯ ಸಂಸ್ಕೃತಿಯನ್ನು ಬಿತ್ತಬೇಕು ಎಂದು ವಿಜಯಪುರದ ಅನುಗ್ರಹ ಆಸ್ಪತ್ರೆಯ ನೇತೃ ತಜ್ಞ ಡಾ.ಪ್ರಭುಗೌಡ ಪಾಟೀಲ ಹೇಳಿದರು.ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಮಾಂಗಲ್ಯ ಭವನದಲ್ಲಿ ಮಂದಾರ ಶಿಕ್ಷಣ ಸಂಸ್ಥೆಯ ಲಿಟಲ್ ವಿಂಗ್ಸ್ ಫೆಸ್ಟಿವಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಯಾವುದೇ ಒಬ್ಬ ವ್ಯಕ್ತಿಯ ಉನ್ನತ ವ್ಯಕ್ತಿತ್ವದ ಹಿಂದೆ ತಂದೆ ತಾಯಿ ಸಂಸ್ಕಾರ ಜೊತೆಗೆ ಗುರುವಿನ ಮಾರ್ಗದರ್ಶನ ಅವಶ್ಯವಿರುತ್ತದೆ ಇಂತಹ ಸ್ನೇಹ ಸಮ್ಮೇಳನದಲ್ಲಿ ಭಾಗವಹಿಸುವುದರಿಂದ ಅವರಲ್ಲಿ ಅಡಗಿದ ಪ್ರತಿಭೆ ಹೊರ ಹೊರಹಮ್ಮಿಸಲು ಸಾಧ್ಯವಿದೆ ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ಬಿ ಎನ್ ಬಿ ಫೌಂಡೇಶನ್ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಮಾತನಾಡಿ ಅವರು, ಮಕ್ಕಳಿಗೆ ಬಾಲ್ಯದಿಂದಲೇ ಮಾತೃಭಾಷೆಯಲ್ಲಿ ಶಿಕ್ಷಣವನ್ನು ನೀಡಿದಾಗ ಮಗು ಬಹುಬೇಗ ವಿಷಯವನ್ನು ಗ್ರಹಿಸುವುದಲ್ಲದೆ ಕಲಿಕೆಯಲ್ಲಿ ಮುಂದಿರುತ್ತದೆ. ಮಗುವಿನ ಚಿಂತನಾ ಕ್ರಮ, ಕ್ರಿಯಾಶೀಲತೆ, ವಾಕ್‌ ಚಾತುರ್ಯ, ಅರಿವು ಉತ್ತಮಗೊಳ್ಳುತ್ತದೆ.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದ ಎನ್ ಎಸ್ ಎಸ್ ಕೋಷ್ ವಿದ್ಯಾರ್ಥಿಯಾದ ಸಚೀನ್ ಅರ್ಜುಣಗಿ ನ್ಯಾಷನಲ್ ಇಂಟಿಗ್ರೇಟೆಡ್ ಕ್ಯಾಂಪ್(ಏನ್ ಐ ಸಿ) ಯಲಹಂಕ ಬೆಂಗಳೂರು ಫೆಬ್ರವರಿ 11 ರಿಂದ 17 ರವರೆಗೆ ನಡೆಯುವ ಕ್ಯಾಂಪ್ ಗೆ ಆಯ್ಕೆ ಆಗಿದ್ದಾರೆ. ಮತ್ತು ಮಹಾವಿದ್ಯಾಲಯದ ಡಾ.ಮಿಲನ್ ರಾಠೋಡ್ ಅವರು ಎನ್ ಎಸ್ ಎಸ್ ಕಾರ್ಯಕ್ರಮದ ಅಧಿಕಾರಿಯಾಗಿ, ಪವನಕುಮಾರ ಪಟ್ಟಣಶೆಟ್ಟಿ ಹಾಗೂ ಶ್ವೇತಾ ಕೊಡತೆ ಇವರು ಎನ್ ಎಸ್ ಎಸ್ ಸ್ವಯಂ ಸೇವಕರಾಗಿ ಓಡಿಸ್ಸಾದ ಭೂಬನೇಶ್ವರ ಅಲ್ಲಿ ಫೆಬ್ರವರಿ 21 ರಿಂದ 27 ರವರೆಗೆ 7 ದಿನಗಳ ಕಾಲ ನಡೆಯಲಿರುವ ಕ್ಯಾಂಪ್ ಗೆ ಆಯ್ಕೆ ಆಗಿದ್ದಾರೆ, ಹಾಗೂ ವಿದ್ಯಾರ್ಥಿ ರಾಹುಲ್ ಅರಕೇರಿ ಬೆಂಗಳೂರಿನಲ್ಲಿ ಫೆಬ್ರವರಿ 28 ರಿಂದ ಮಾರ್ಚ್ 4 ರವರೆಗೆ ನಡೆಯುವ ಯುವಜನೋತ್ಸವ ಕಾರ್ಯಕ್ರಮಕ್ಕೆ ಎನ್ ಎಸ್ ಎಸ್ ಸ್ವಯಂಸೇವಕರಾಗಿ ಆಯ್ಕೆ ಆಗಿದ್ದಾರೆ. ಮಹಾವಿದ್ಯಾಲಯದ…

Read More

ಮುದ್ದೇಬಿಹಾಳ ತಾಲೂಕು ೫ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಜಾಗತೀಕರಣದ ಪ್ರಭಾವದಿಂದ ವಿಶ್ವದ ಎಲ್ಲ ಭಾಷೆಗಳು ನಶಿಸಿ ಹೋಗುವ ದಿನಮಾನಗಳಲ್ಲಿ ಉಳಿಯುವ ಮುನ್ನೂರು ಭಾಷೆಗಳ ಪೈಕಿ ಅತೀ ಗಟ್ಟಿಯಾಗಿ ನಿಲ್ಲುವ ಭಾಷೆ ಕನ್ನಡ ಮಾತ್ರ ಎಂದು ಕುಂಟೋಜಿ ಸಂಸ್ಥಾನ ಭಾವೈಕ್ಯತಾ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ಹೇಳಿದರು.ಪಟ್ಟಣದ ವಿಬಿಸಿ ಹೈಸ್ಕೂಲ ಮೈದಾನದಲ್ಲಿ ನಡೆದ ತಾಲೂಕು ೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಕೆಲವರು ತಮ್ಮ ಮನೆಗಳಲ್ಲಿ ಇಂಗ್ಲೀಷ್ ಮಾತನಾಡುವದರಿಂದ ತಮ್ಮ ಯೋಗ್ಯತೆ ಹೆಚ್ಚಾಗುತ್ತದೆ ಅಂದುಕೊಂಡಿದ್ದಾರೆ. ಇಂಗ್ಲೀಷ್ ಮಾತನಾಡುವ ಮನೆಗಳಲ್ಲಿ ಹೆಚ್ಚು ವಿವಾಹ ವಿಚ್ಛೇದನಗಳು ನಡೆಯುತ್ತಿವೆ. ಕನ್ನಡ ಉಳಿಸಲು ನಾವು ನೀವು ಸಾಕಷ್ಟು ಪ್ರಯತ್ನಿಸುತ್ತಿರುವ ಮಧ್ಯೆ ಸರ್ಕಾರದ ಮಟ್ಟದಲ್ಲಿ ಕನ್ನಡ ಉಳಿಸುವ ಚಿಂತನೆ ನಡೆದಾಗ ಮಾತ್ರ ಕನ್ನಡ ಉಳಿಸಲು ಸಾಧ್ಯ ಎಂದರು.ಸಮಾರಂಭವನ್ನು ಉದ್ಘಾಟಿಸಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಮಾತನಾಡಿ, ಹಿಂದೆ ನಮ್ಮನ್ನು ಆಳಿದ ಆದಿಲ್ ಶಾಹಿ ಅವರು…

Read More