ಕಪನಿಂಬರಗಿಯಲ್ಲಿ ಮಾನಸಿಕ ಆರೋಗ್ಯ ತಿಳುವಳಿಕೆ ಜಾಗೃತಿ ಜಾಥಾ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಿಮ್ಮ ಮನಸ್ಸನ್ನು ಶಾಂತಗೊಳಿಸಲು, ಒತ್ತಡವನ್ನು ಕಡಿಮೆ ಮಾಡಲು, ಉತ್ತಮ ಮಾನಸಿಕ ಯೋಗಕ್ಷೇಮಕ್ಕಾಗಿ ಭಾವನಾತ್ಮಕ ಅರಿವನ್ನು ಹೆಚ್ಚಿಸಲು ಸಾವಧಾನತೆ ಅಥವಾ ಧ್ಯುಆನಕ್ಕೆ ಪ್ರತಿದಿನ ಕೆಲವು ನಿಮಿಷಗಳನ್ನು ಮೀಸಲಿಡುವುದು ಬಹಳ ಮುಖ್ಯ. ದೈಹಿಕ ಚಟುವಟಿಕೆಗಳು ಮಾನಸಿಕ ಸ್ವಾಸ್ಥ್ಯವನ್ನು ಉತ್ತಮವಾಗಿಸಲು ಸಹಾಯ ಮಾಡುತ್ತದೆ ಎಂದು ಕಪ ನಿಂಬರಗಿ ಗ್ರಾಪಂ ಅಧ್ಯಕ್ಷರಾದ ಪ್ರತಿಭಾ ಠೋಕೆಯವರು ಹೇಳಿದರು.
ಶನಿವಾರದಂದು ಕಪನಿಂಬರಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ತಿಳುವಳಿಕೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ಮನಸ್ಸೆಂಬ ಕನ್ನಡಿಯಲ್ಲಿ ಬಿಂಬಿತವಾಗುವ ಶಾಂತಿ, ಸಮಾಧಾನ, ಬದುಕಿನ ಸೊಗಸು ಎಲ್ಲವೂ ನಮ್ಮ ಅರಿವಿಗೆ, ಅನುಭವಕ್ಕೆ ಬರುವುದು ಮನಸ್ಸಿನ ಮೂಲಕವೇ. ಹೀಗಾಗಿ ಮಾನಸಿಕ ಆರೋಗ್ಯವೇ ನಮ್ಮ ಜೀವನದ ಸಂತೋಷಗಳಿಗೆ ಬುನಾದಿಯಾಗಿದೆ ಎಂದರು.
ಈ ವೇಳೆ ಸಿಬಿಐಡಿ ಸಂಯೋಜಕರಾದ ಹಣಮಂತರಾಯಗೌಡ ಪಾಟೀಲರು ಮಾತನಾಡುತ್ತ. ನಿಮ್ಮ ದೇಹವನ್ನು ಪೋಷಿಸಲು, ಮೆದುಳಿನ ಆರೋಗ್ಯವನ್ನು ಉತ್ತಮವಾಗಿಸಲು, ದೇಹ ಮತ್ತು ಮನಸ್ಸಿನ ಸರಿಯಾದ ಯೋಗಕ್ಷೇಮಕ್ಕಾಗಿ ಹಣ್ಣುಗಳು, ತರಕಾರಿಗಳು, ಧ್ಯಾನಗಳು ಮತ್ತು ಕಡಿಮೆ ಕೊಬ್ಬಿನ ಪ್ರೋಟೀನ್‌ಗಳಿಂದ ತುಂಬಿದ ಸಮತೋಲಿನ ಆಹಾರ ಸೇವನೆಗೆ ಆದ್ಯತೆ ನೀಡಿರಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕ ಸಹದೇವ ಠೋಕೆ, ನಬಿಲಾಲ ಹರ್ನಾಳ, ಸಂತೋಷ ಜಾಧವ, ಶಂಕರ ಜಾಧವ, ಎಂಆರ್‌ಡಬ್ಲೂö್ಯ ಸಿದ್ದಪ್ಪ ಗುಲ್ಲೆ, ವ್ಹಿಆರ್‌ಡಬ್ಲೂö್ಯ ಜ್ಞಾನೇಶ್ವರ ಠೋಕೆ, ಸುಭಾಶ ಡೋಣಗಿ, ಪವಿತ್ರಾ ಮಸಳಿ, ನಾಗಮ್ಮ ಮೇತ್ರೆ, ನಿಂಗರಾಜು ಬಿಸಿನಾಳ, ಮಲ್ಲೇಸೆಪ್ಪ ಸೇರಿದಂತೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

