ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಯಲಗೂರು ಯಲಗೂರೇಶ್ವರ ಕಾರ್ತಿಕೋತ್ಸವದ ಎರಡನೇ ದಿನ ವಿವಿಧ ಧಾಮರ್uಟಿಜeಜಿiಟಿeಜಕ, ಸಂಗೀತ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದವು.
ಯಲಗೂರೇಶನ ಉತ್ಸವ ಮೂರ್ತಿ ಪಲ್ಲಕ್ಕಿಯೊಂದಿಗೆ ಕೃಷ್ಣಾ ನದಿಗೆ ತೆರಳಿ ನದಿ ಸ್ನಾನಗೈದು ಮರಳಿ ದೇವಸ್ಥಾನಕ್ಕೆ ನೂರಾರು ಭಕ್ತರ ಸಮ್ಮುಖದಲ್ಲಿ ನಸುಕಿನ ಜಾವ ೫ ಕ್ಕೆ ತರಲಾಯಿತು. ನಂತರ ದೇವರಿಗೆ ಅಭಿಷೇಕ, ಅಲಂಕಾರಗಳು ನಡೆದವು. ನಂತರ ದಿಂಡಿನ ಸ್ಪಧರ್uಟಿಜeಜಿiಟಿeಜ ಜರುಗಿದವು.
ಎರಡನೇ ದಿನವೂ ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆದವು.
ಸಂಗೀತ ಕಾರ್ಯಕ್ರಮ:
ವಿದೂಷಿ ಸಂಗೀತಾ ಕಟ್ಟಿ ಕುಲಕಣರ್uಟಿಜeಜಿiಟಿeಜ, ಕುಮಾರ ಮರಡೂರ, ಜಯತೀರ್ಥ ಮೇವುಂಡಿ, ಅವರ ಗಾಯನ, ರಾಜೇಂದ್ರ ನಾಕೋಡ ಅವರ ತಬಲಾ ಸೋಲೋ, ಚಿದಾನಂದ ಕುಲಕರ್ಣಿ ಅವರ ನೃತ್ಯರೂಪಕ ಗಮನಸೆಳೆಯಿತು.
ಪಂಡಿತ ಕಿರಣ ಯಾವಗಲ್, ಗುರುನಾಯಕ, ಪ್ರಶಾಂತ, ಗಣಾಚಾರಿ, ಶೇಷಗಿರಿ, ಕೇಶವ ಜೋಷಿ, ಪ್ರಮೋದ ಹರಿಮಂದಿರ, ಭರತ ಹೆಗಡೆ, ಮಧು ಕೊಪ್ಪ, ಅಕ್ಷಯ ಜೋಷಿ, ಶ್ರೀಹರಿ ದಿಗ್ಗಾವಿ, ಬಿಂಧು ಕಡಿವಾಲ ತಬಲಾ ಸಾಥ್ ನೀಡಿದರು.
ಅನುಗ್ರಹ ಪ್ರಶಸ್ತಿ:
ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ನೀಡುವ `ಯಲಗೂರೇಶ್ವರ ಅನುಗ್ರಹ ಪ್ರಶಸ್ತಿ’ಯನ್ನು ಶನಿವಾರ ರಾತ್ರಿ ಬಾಲಚಂದ್ರ ನಾಕೋಡ, ಶುಭದಾ ದೇಶಪಾಂಡೆ ಅವರಿಗೆ ಪ್ರದಾನ ಮಾಡಲಾಯಿತು. ಭಾನುವಾರ, ತಬಲಾ ವಾದಕ ರಾಜೇಂದ್ರ ನಾಕೋಡ ಅವರಿಗೆ ಪ್ರದಾನ ಮಾಡಲಾಯಿತು.
ಮಧ್ಯಾಹ್ನ ಸರ್ವಧರ್ಮ ಜನಾಂಗದವರು ಸ್ವೀಕರಿಸುವ ಹರಶಾವಿಗೆ ನೇವೇದ್ಯ ಸ್ವೀಕರಿಸುವ ಸಂಪ್ರದಾಯವೂ ಸಹಸ್ರಾರು ಜನರ ಮಧ್ಯೆ ಜರುಗಿತು.
ಭಾನುವಾರ ಸಂಜೆ ಸಹಸ್ರಾರು ಭಕ್ತಾಧಿಗಳ ಮಧ್ಯೆ ರಥೋತ್ಸವ ಜರುಗಿತು. ಕೀಲುಗೊಂಬೆಗಳು, ಬಾಜಾ ಭಜಂತ್ರಿ, ಕರಡಿ ಮಜಲಿನ ನಿನಾದ ಗಮನಸೆಳೆಯಿತು. ರಾತ್ರಿ ಹೊಂಡ ಪೂಜೆ ಜರುಗಿತು.
ಏಳೂರು ಒಡೆಯ ಶ್ರೀ ಯಲಗೂರೇಶ್ವರ ಸೇವಾ ಸಮಿತಿಯವರು ಬಂದ ಭಕ್ತಾದಿಗಳಿಗೆ, ಪಾದಯಾತ್ರಿಗಳಿಗೆ ಬೆಳಿಗ್ಗೆ ಉಪಹಾರದ ವ್ಯವಸ್ಥೆ ಮಾಡಿದ್ದರು. ಯಲಗೂರೇಶ್ವರ ಅನ್ನದಾಸೋಹ ಸಮಿತಿಯವರು ನಿರಂತರ ಅನ್ನದಾಸೋಹ ಏರ್ಪಡಿಸಿದ್ದರು.
ರಾತ್ರಿ ಅಕ್ಕ ಅಪರಂಜಿ ತಂಗಿ ಗುಲಗಂಜಿ ನಾಟಕ ಪ್ರದರ್ಶನಗೊಂಡಿತು.

