ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದ ಎನ್ ಎಸ್ ಎಸ್ ಕೋಷ್ ವಿದ್ಯಾರ್ಥಿಯಾದ ಸಚೀನ್ ಅರ್ಜುಣಗಿ ನ್ಯಾಷನಲ್ ಇಂಟಿಗ್ರೇಟೆಡ್ ಕ್ಯಾಂಪ್(ಏನ್ ಐ ಸಿ) ಯಲಹಂಕ ಬೆಂಗಳೂರು ಫೆಬ್ರವರಿ 11 ರಿಂದ 17 ರವರೆಗೆ ನಡೆಯುವ ಕ್ಯಾಂಪ್ ಗೆ ಆಯ್ಕೆ ಆಗಿದ್ದಾರೆ. ಮತ್ತು ಮಹಾವಿದ್ಯಾಲಯದ ಡಾ.ಮಿಲನ್ ರಾಠೋಡ್ ಅವರು ಎನ್ ಎಸ್ ಎಸ್ ಕಾರ್ಯಕ್ರಮದ ಅಧಿಕಾರಿಯಾಗಿ, ಪವನಕುಮಾರ ಪಟ್ಟಣಶೆಟ್ಟಿ ಹಾಗೂ ಶ್ವೇತಾ ಕೊಡತೆ ಇವರು ಎನ್ ಎಸ್ ಎಸ್ ಸ್ವಯಂ ಸೇವಕರಾಗಿ ಓಡಿಸ್ಸಾದ ಭೂಬನೇಶ್ವರ ಅಲ್ಲಿ ಫೆಬ್ರವರಿ 21 ರಿಂದ 27 ರವರೆಗೆ 7 ದಿನಗಳ ಕಾಲ ನಡೆಯಲಿರುವ ಕ್ಯಾಂಪ್ ಗೆ ಆಯ್ಕೆ ಆಗಿದ್ದಾರೆ, ಹಾಗೂ ವಿದ್ಯಾರ್ಥಿ ರಾಹುಲ್ ಅರಕೇರಿ ಬೆಂಗಳೂರಿನಲ್ಲಿ ಫೆಬ್ರವರಿ 28 ರಿಂದ ಮಾರ್ಚ್ 4 ರವರೆಗೆ ನಡೆಯುವ ಯುವಜನೋತ್ಸವ ಕಾರ್ಯಕ್ರಮಕ್ಕೆ ಎನ್ ಎಸ್ ಎಸ್ ಸ್ವಯಂಸೇವಕರಾಗಿ ಆಯ್ಕೆ ಆಗಿದ್ದಾರೆ. ಮಹಾವಿದ್ಯಾಲಯದ ಡಾ.ಎಸ್ ಎಸ್ ಅಧಿಕಾರಿ ಡಾ.ಮಿಲನ್ ರಾಥೋಡ್ ಹಾಗೂ ವಿದ್ಯಾರ್ಥಿಗಳಿಗೆ ಬಿ ಎಲ್ ಡಿ ಇ ಸಂಸ್ಥೆಯ ಆಡಳಿತಾಧಿಕಾರಿಗಳು ಡಾ.ವಿ ಎಸ್ ಬಗಲಿ, ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್ ಎಮ್ ಮಿರ್ದೆ ಹಾಗೂ ಎನ್ ಎಸ್ ಎಸ್ ಅಧಿಕಾರಿ ಡಾ. ತರನ್ನಂ ಜಬೀನ್ ಖಾನ್ ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

ಡಾ.ಮಿಲನ್ ರಾಠೋಡ್

ಸಚಿನ್ ಅರ್ಜುಣಗಿ

ರಾಹುಲ್ ಅರಕೇರಿ

ಶ್ವೇತಾ ಕೊಡತೆ

ಪವನಕುಮಾರ ಪಟ್ಟಣಶೆಟ್ಟಿ

