ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪುರ್ನವಸತಿ ಕೇಂದ್ರವಾದ ಕೊಲ್ಹಾರ ಪಟ್ಟಣವು ತಾಲೂಕು ಕೇಂದ್ರವಾಗಿರುವದರಿಂದ ಪಟ್ಟಣಕ್ಕೆ ಇನ್ನೂ ಬರಬೇಕಾದ ತಾಲೂಕು ಕಛೇರಿಗಳನ್ನು ಮಂಜೂರಿ ಮಾಡಿಸಲು ಸಚಿವ ಕ್ಷೇತ್ರದ ಶಾಸಕರಾದ ಶಿವಾನಂದ ಪಾಟೀಲ ಗಮನಕ್ಕೆ ತಂದು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಪಟ್ಟಣ ಪಂಚಾಯತ ನೂತನ ಅಧ್ಯಕ್ಷ ಚನಮಲ್ಲಪ್ಪ ಶಿವಪ್ಪ ಗಿಡ್ಡಪ್ಪಗೋಳ ಹೇಳಿದರು.
ಕೊಲ್ಹಾರ ತಾಲೂಕು ರಚನಾ ಹೋರಾಟ ಸಮಿತಿ ಪದಾಧಿಕಾರಿಗಳು ಸಲ್ಲಿಸಿದ ಮನವಿ ಸ್ವಿಕರಿಸಿ ಮಾತನಾಡಿದ ಅವರು ಸಚಿವ ಶಿವಾನಂದ ಪಾಟೀಲರು ಕೊಲ್ಹಾರ ಪಟ್ಟಣದ ಅಭಿವ್ರದ್ದಿಗಾಗಿ ಯುಕೆಪಿ ಇಲಾಖೆ ಮತ್ತು ಸರಕಾರದ ವಿವಿಧ ಇಲಾಖೆಗಳ ಮೂಲಕ ಅನುದಾನವನ್ನು ಕಾಮಗಾರಿ ಪ್ರಾರಂಬಿಸಲು ಮಂಜೂರಿ ಮಾಡಿಸಿದ್ದು ಕೆಲವು ಅಡಚಣೆಗಳು ಬಗೆಹರಿದರೆ ಎಲ್ಲ ಕೆಲಸಗಳು ಚಾಲು ಆಗುವದರಲ್ಲಿ ಸಂಶಯವಿಲ್ಲ ಪಟ್ಟಣದ ಎಲ್ಲ ಸಂಘಟನೆಯವರ ಜನರ ಸಹಕಾರ ಪ್ರಾಮುಖ್ಯತೆ ಅತಿ ಅವಶ್ಯ ಎಂದರು.
ಪಟ್ಟಣದಲ್ಲಿರುವ ಕೆಲವು ರಸ್ತೆಗಳನ್ನು ದ್ವಿಪಥ ರಸ್ತೆಯನ್ನಾಗಿ ಮಾರ್ಪಡಿಸಿ ವಿಭಜಕದ ಮದ್ಯ ವಿದ್ಯುತ್ ಕಂಬ ಅಳವಡಿಸಿ ಬೆಳಕಿನ ವ್ಯವಸ್ಥೆ ಮಾಡಲಾಗುವದು ಪಟ್ಟಣದ ಸರ್ವಾಂಗೀಣ ಅಭಿವ್ರದ್ದಿಗಾಗಿ ಸದ್ಯಸ್ಯರ ಅಧಿಕಾರಗಳ ಮತ್ತು ಸಾರ್ವಜನಿಕರ ಸಲಹೆಯನ್ನು ಪಡೆದು ನನ್ನ ಅಧಿಕಾರ ಅವದಿಯಲ್ಲಿ ನಿಮ್ಮೆಲರ ಸೇವಕನಾಗಿ ಅವಿರತವಾಗಿ ಶ್ರಮಿಸುತ್ತೆನೆ ಎಂದರು.
ಹೋರಾಟ ಸಮಿತಿ ಅಧ್ಯಕ್ಷ ಈರಣಗೌಡ ಕೋಮಾರ ಶಶಿಧರ ದೇಸಾಯಿ ದುಂಡಪ್ಪ ಕೊಠಾರಿ ರಾಜು ಬಡಿಗೇರ ಪ್ರಭುಕುಮಾರ ಗಣಿ ಈರಣ್ಣ ಬಾಗಿ ಪರಶುರಾಮ ಗಣಿ ಅನೇಕರು ಇದ್ದರು ಇದೇ ಸಂಧರ್ಬದಲ್ಲಿ ಅಧ್ಯಕ್ಷರನ್ನು ಸರ್ವರೂ ಕೂಡಿ ಸನ್ಮಾನಿಸಿದರು.

