Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಗೋಲಗೇರಿ: ವಚನಗಳಲ್ಲಿ ತಮ್ಮ ಸಾತ್ವಿಕ ಕೋಪತಾಪಗಳನ್ನು ವ್ಯಕ್ತಪಡಿಸುವ ಅಂಬಿಗರ ಚೌಡಯ್ಯ ಮಾನವೀಯ ಮೌಲ್ಯಗಳನ್ನು ಬೆಳಸಿಕೊಂಡಿದ್ದ ಶರಣರು ಎಂದು ಯುವ ಮುಖಂಡ ಮಡಿವಾಳ ನಾಯ್ಕೋಡಿ ಹೇಳಿದರು.ಸಿಂದಗಿ ತಾಲ್ಲೂಕಿನ ಗೋಲಗೇರಿ ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಈ ಸಂದರ್ಭದಲ್ಲಿ ಡಿ.ಎಸ್.ಎಸ್ ಸಂಚಾಲಕ ಶ್ರೀಶೈಲ ಜಾಲವಾದಿ, ರಮೇಶ ತಳವಾರ, ಸಲೀಮ ಮುಲ್ಲಾ ಶರಣರ ಜೀವನ ಕುರಿತು ಮಾತನಾಡಿದರುಈ ಕಾರ್ಯಕ್ರಮದಲ್ಲಿ ಗೋಲಗೇರಿ ಗ್ರಾಪಂ ಸದಸ್ಯರಾದ ಸೈಪನ್ ಕೋರವಾರ, ಮಲ್ಲಣ್ಣ ನಾಯ್ಕೋಡಿ ಬೆಂಗಳೂರು, ಭಾಗಣ್ಣ ಕೋಟೆಗೋಳ, ದವಲಸಾಬ ನಾಗಾವಿ, ಬಸವರಾಜ ತಳವಾರ, ಮೈಬೂಬ ಜೋಗುರ, ಅಬೂಬಕರ ಶಾಬಾದಿ, ಗೋಲ್ಲಾಳ ನಾಯ್ಕೋಡಿ, ಗೋಲ್ಲಾಳ ತಳವಾರ, ಮಹಾಂತೇಶ ನಾಯ್ಕೋಡಿ, ಮಲ್ಲಪ್ಪ ಪೂಜಾರಿ, ರವಿ ಯಡ್ರಾಮಿ, ರಾಜು ಯಂಕಂಚಿ, ವಿರೇಶ ನಾಯ್ಕೋಡಿ, ಪ್ರಕಾಶ ನಾಯ್ಕೋಡಿ, ರಾವುತ ನಾಯ್ಕೋಡಿ, ಬಂದಗಿಸಾಬ ಮೋಮಿನ್, ಮಾಂತು ನಾಯ್ಕೋಡಿ, ಲಾಲಸಾಬ ಶಾಬಾದಿ, ಖಾದಿರ ಶಾಬಾದಿ, ವಿರೇಶ ನಾಯ್ಕೋಡಿ, ಮಲ್ಲು ನಾಯ್ಕೋಡಿ, ಸುನೀಲ ಕೋಟೆಗೋಳ, ಮಡಿವಾಳಪ್ಪ ನಾಯ್ಕೋಡಿ ಸೇರಿದಂತೆ…

Read More

ಧುಮಕನಾಳದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನೂತನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಅನಾವರಣ ಉದಯರಶ್ಮಿ ದಿನಪತ್ರಿಕೆ ಚಡಚಣ: ಕಾಯಕ ನಿಷ್ಠೆಯ, ನೇರ, ನಿಷ್ಠುರ, ಸಮಾಜದಲ್ಲಿನ ಮೂಡ ನಂಬಿಕೆಗಳನ್ನು ಹೋಗಲಾಡಿಸಲು ಶ್ರಮಿಸಿದ ಮಹಾನ್ ವಚನಕಾರ ನಿಜಶರಣ ಅಂಬಿಗರ ಚೌಡಯ್ಯನವರ ವಿಚಾರಧಾರೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದು ವೇದಮೂರ್ತಿ ಸಂಗಯ್ಯ ಮಠ ಹೇಳಿದರು.ಸಮೀಪದ ಧುಮಕನಾಳ ಗ್ರಾಮದಲ್ಲಿ ನೂತನ ಮೂರ್ತಿ ಪ್ರತಿಷ್ಥಾಪನೆ ಹಾಗೂ ಅನಾವರಣ ಹಾಗೂ ಜಯಂತಿ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ೧೨ ನೇ ಶತಮಾನದ ಮಹಾನ್ ಚೇತನ, ಖ್ಯಾತ ವಚನಕಾರರು ಸಮಾಜದಲ್ಲಿನ ಅನಿಷ್ಠ ಪದ್ದತಿಗಳನ್ನು ತಮ್ಮ ವಚನಗಳ ಮೂಲಕ ತಿದ್ದುವ ಕಾರ್ಯ ಮಾಡಿದ್ದಾರೆ. ಅಂತಹ ಮಹಾನ್ ಶರಣದ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾಜಿ ತಾ.ಪಂ ಸದಸ್ಯ ರಾಜಶೇಖರ ಝಳಕಿ ದ್ವಜಾರೋಹಣ ನೆರವೇರಿಸಿ ಮಾತನಾಡಿ, ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ್ದಾರೆ ಅಂತಹ ಮಹಾನ್ ನಿಜಶರಣ ಅಂಬಿಗರ ಚೌಡಯ್ಯ ರವರ ಪುತ್ಥಳಿ ನಿರ್ಮಾಣ ಮಾಡಿದ್ದೀರಿ ನಿಜಕ್ಕೂ ಶ್ಲಾಘನೀಯ ಎಂದು…

Read More

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ ಲೇಖನ- ವಿವೇಕಾನಂದ. ಎಚ್. ಕೆ.ಬೆಂಗಳೂರುಮೊ: 9844013068 ಉದಯರಶ್ಮಿ ದಿನಪತ್ರಿಕೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಗಂಗಾ ಯಮುನಾ ಸರಸ್ವತಿ ಎಂಬ ತ್ರಿವಳಿ ನದಿಗಳ ಸಂಗಮದಲ್ಲಿ ಮಿಂದು ಮೀಯುವ ಉತ್ಸವ, ನಾನಾ ಕಾರಣಗಳಿಗಾಗಿ ಇಡೀ ರಾಷ್ಟ್ರದಾದ್ಯಂತ ಗಮನ ಸೆಳೆದಿದೆ.ಮಹಾ ಕುಂಭಮೇಳ ಒಂದು ಸಾಂಸ್ಕೃತಿಕ ಉತ್ಸವವೇ ಅಥವಾಧಾರ್ಮಿಕ ಆಚರಣೆಯೇ? ಅಥವಾ ನಂಬಿಕೆಯ ಸಂಪ್ರದಾಯವೇ? ಅಥವಾ ದೈವಭಕ್ತಿಯ ಉತ್ತುಂಗವೇ? ಅಥವಾ ಮೌಢ್ಯವೇ? ಅಥವಾ ಪುಣ್ಯ ಸ್ನಾನವೇ? ಅಥವಾ ದೇಹ ಮತ್ತು ಮನಸ್ಸುಗಳ ಶುದ್ಧೀಕರಣವೇ?ಅಥವಾ ವೈಚಾರಿಕ ಪ್ರಜ್ಞೆಯೇ? ಅಥವಾ ವೈಜ್ಞಾನಿಕ ಅರ್ಥವೇ?ಅಥವಾ ಪ್ರಾಕೃತಿಕ ಸಹಜತೆಯೇ?ಅಥವಾ ಶೋಷಣೆಯ ಮೂಲವೇ? ಅಥವಾ ಗುಲಾಮಗಿರಿಯ ಸಂಕೇತವೇ? ಅಥವಾ ಸಾಮಾನ್ಯ ಜನರ ಸಹಜ ಜೀವನ ಶೈಲಿಯೇ..?ಈ ಪ್ರಶ್ನೆಗಳಿಗೆ ಆಂತರಿಕವಾಗಿ ಒಂದಷ್ಟು ಉತ್ತರಗಳನ್ನು ಕಂಡುಕೊಳ್ಳಬೇಕಾಗಿದೆ.ಮೂಲಭೂತವಾಗಿ ಈ ಮೂರು ಬೃಹತ್ ನದಿಗಳ ಸಂಗಮ ಒಂದು ಪ್ರಾಕೃತಿಕ ವಿಸ್ಮಯ. ಆ ದೃಶ್ಯ ನಯನ ಮನೋಹರ, ಸೌಂದರ್ಯ ಲಹರಿಯ ಅದ್ಭುತ ನೋಟ. ತೀರಾ ಅಪರೂಪಕ್ಕೆ ಏರ್ಪಟ್ಟಿರುವ ನೈಸರ್ಗಿಕ ವಿಶೇಷತೆ. ಅಂತಹ…

Read More

ಅಭಿಮತ ಲೇಖನ ಉದಯರಶ್ಮಿ ದಿನಪತ್ರಿಕೆ ವೀರಶೈವರಿಗೆ ಪರ್ಯಾಯ ಸಂಘಟನೆಯೊಂದೇ ಪರಿಹಾರವಲ್ಲ. ಅಖಿಲ ಭಾರತ ವೀರಶೈವ ಮಹಾಸಭೆ ಸ್ಥಾಪಿತವಾಗಿ 121 ವರ್ಷಗಳು ಕಳೆದಿವೆ .ಅಂದಿನ ಕಾಲಕ್ಕನುಗುಣವಾಗಿ ವೀರಶೈವ ಲಿಂಗಾಯತ ಒಂದೇ ಎನ್ನುವ ಭಾವವಿತ್ತು ಅಭಿಪ್ರಾಯಗಳು ಒಂದೇ ಇದ್ದವು. ಉತ್ತರ ಕನ್ನಡ ಭಾಷೆಯಲ್ಲಿ ಕೇವಲ ಲಿಂಗಾಯತ ಇತ್ತು 1978 ರ ಈಚೆಗೆ ವೀರಶೈವ ದಕ್ಷಿಣದಿಂದ ಉತ್ತರ ಗಂಡು ಕನ್ನಡಿಗರ ಹೆಗಲ ಮೇಲೇರಿತು.ಇಂದು ಪರ್ಯಾಯ ಸಂಘಟನೆ ಮಾಡಿ ಸಂಘರ್ಷಕ್ಕಿಳಿಯುತ್ತೇವೆ ಎಂದೆನ್ನುವುದು ಒಂದು ಭ್ರಾ೦ತಿ ಭ್ರಮೆ.ಎಲ್ಲವೂ ಕೊನೆಗೊಳ್ಳುವುದು ರಾಜಕೀಯ ಲೆಕ್ಕಾಚಾರ.ನನ್ನ ಕೆಲವು ಪ್ರಶ್ನೆಗಳು ಸಂಬಂಧಿತರು ಉತ್ತರಿಸಲಿನ್ಯಾಯಮೂರ್ತಿ ಶ್ರೀ ನಾಗಮೋಹನದಾಸ ಅವರು ಸಲ್ಲಿಸಿದ ವರದಿ ಆಧಾರದ ಮೇಲೆ ಕರ್ನಾಟಕ ಅಂದಿನ ಸರಕಾರವು ಕೇಂದ್ರ ಮೈನಾರಿಟಿ ಇಲಾಖೆಗೆ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ಮೇಲೆ ಸಂಬಂಧಿತ ಲಿಂಗಾಯತ ಮಠಗಳು ಸಂಘಟನೆಗಳು ಕಳೆದ ಏಳು ವರ್ಷಗಳಿಂದ ಮತ್ತೆ ಪುಸ್ಟಿಕರಿಸಿದ ಅರ್ಜಿಯನ್ನು ಏಕೆ ಸಲ್ಲಿಸಲಿಲ್ಲ.ಅವತ್ತಿನ ಸಮ್ಮಿಶ್ರ ಸರಕಾರ ಕೇಂದ್ರ ಸರಕಾರಕ್ಕೆ ಏಕೆ ಮತ್ತೆ ಮೆಲ್ಮನವಿ ಸಲ್ಲಿಸಲಿಲ್ಲ.ಲಿಂಗಾಯತ ಧರ್ಮದ ಮಾನ್ಯತೆ ಮತ್ತು ಅಲ್ಪ ಸಂಖ್ಯಾತ ಮಾನ್ಯತೆಗೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ “ವುಮೆನ್ ಮೀಡಿಯಾ ಕ್ಲಬ್” ಉದ್ಘಾಟನಾ ಕಾರ್ಯಕ್ರಮವನ್ನು ಇದೇ ದಿ. ೨೧ ರಂದು ಮಂಗಳವಾರ ಬೆಳಿಗ್ಗೆ ೧೧:೩೦ ಗಂಟೆಗೆ ವಿಭಾಗದಲ್ಲಿ ಆಯೋಜಿಸಲಾಗಿದೆ.ಕಾರ್ಯಕ್ರಮವನ್ನು ಕೆನಡಾದ ಟೊರೊಂಟೊನ ಸಂವಹನ ತಜ್ಞೆ ಗೀತಾ ನಾಗರಾಜು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೆನಡಾದ ಟೊರೊಂಟೊನ ಬಿ.ವಿ ನಾಗ್ ಕಮ್ಯುನಿಕೇಶನ್ಸ್ನ ಅಧ್ಯಕ್ಷ ಹಾಗೂ ಇಂಡಿಯಾ ಅಬ್ಸರ್ವರ್ ಪತ್ರಿಕೆಯ ಸಂಪಾದಕ ಬಿ.ವಿ ನಾಗರಾಜು ಭಾಗವಹಿಸಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ವಹಿಸಲಿದ್ದಾರೆ.ಅತಿಥಿಗಳಾಗಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ತಹಮೀನಾ ಕೋಲಾರ ಮತ್ತು ಸಂದೀಪ ನಾಯಕ ಭಾಗವಹಿಸಲಿದ್ದು, ಬೋಧಕ ಬೋದಕೇತರ ಸಿಬ್ಬಂದಿವರ್ಗದವರು, ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕೋತರ ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ ಎಂದು ಮೀಡಿಯಾ ಕ್ಲಬ್ ಅಧ್ಯಕ್ಷೆ ಶಿಲ್ಪಾ ಪವಾರ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.ಪದಾಧಿಕಾರಿಗಳ ಆಯ್ಕೆ: ಇತ್ತೀಚೆಗೆ ನಡೆದ ವುಮೆನ್ ಮೀಡಿಯಾ ಕ್ಲಬ್ ಸಭೆಯಲ್ಲಿ ೨೦೨೪-೨೫ನೆಯ ಸಾಲಿನ ಪದಾಧಿಕಾರಿಗಳನ್ನು…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಕಳ್ಳರ ಸುಳ್ಳು ವದಂತಿ ಜನತೆ ಕಿವಿಗೊಡದೇ ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದರೆ, ರಾತ್ರಿ ವೇಳೆ ತಮ್ಮ ಸುತ್ತಮುತ್ತ ಸಂಶಯಾಸ್ಪದ ವ್ಯಕ್ತಿಗಳು ಓಡಾಟ ನಡೆಸುತ್ತಿರುವುದ ಕಂಡುಬಂದರೆ ತಕ್ಷಣವೇ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಬೇಕು. ಜನರ ರಕ್ಷಣೆಗೆ ಸದಾ ಪೊಲೀಸ್ ಇಲಾಖೆಯ ಸದಾ ಇದೆ. ಪೊಲೀಸ್ ಇಲಾಖೆಯೊಂದಿಗೆ ಜನರು ಸಹಕಾರ ನೀಡಬೇಕೆಂದು ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಹೇಳಿದರು.ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಸೋಮವಾರ ಸಂಜೆ ಕರೆದ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಬಡಾವಣೆಗಳಲ್ಲಿ ರಾತ್ರಿ ವೇಳೆ ಯಾರೂ ಅನಗತ್ಯವಾಗಿ ಬೈಕ್‌ನಲ್ಲಿ ಸಂಚರಿಸಿ ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡಬಾರದು. ಕಳ್ಳರು ಬರುತ್ತಾರೆ ಎಂದು ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕೆಲವರು ರಾತ್ರಿ ವೇಳೆಯಲ್ಲಿ ಕಾವಲು ಕಾಯುತ್ತಿರುವದರಿಂದಾಗಿ ಬಡವಾಣೆ ನಿವಾಸಿಗಳಿಗೆ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಈ ನಿಟ್ಟಿನಲ್ಲಿ ಹಿರಿಯರು ಗಮನ ಹರಿಸಿ ಈ ರೀತಿಯಾಗದಂತೆ ನೋಡಿಕೊಳ್ಳುವ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಔಷಧ ಅಂಗಡಿ ಹೊರತು ಪಡಿಸಿ ರಾತ್ರಿ ೧೦ ಯೊಳಗೆ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದಲ್ಲಿ ಫೆ. ೪ ರಂದು ಐತಿಹಾಸಿಕವಾಗಿ ಜರುಗಲಿರುವ ಕ್ರಾಂತಿವೀರ ಬ್ರಿಗೇಡ್ ಕರ್ನಾಟಕ ಉದ್ಘಾಟನೆ ಕಾರ್ಯಕ್ರಮದ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಸೋಮವಾರ ಬಸವೇಶ್ವರ ದೇವಸ್ಥಾನ ಮುಂಭಾಗ ಮಖನಾಪೂರದ ಸೋಮಲಿಂಗ ಮಹಾರಾಜರು,ಜಕ್ಕನೂರಿನ ಡಾ. ಮಾದುಲಿಂಗ ಮಹಾರಾಜರು, ಅರಳಿಚಂಡಿಯ ಪರಮಾನಂದ ಮಹಾರಾಜರು ಸೇರಿದಂತೆ ವಿವಿಧ ಶ್ರೀಗಳು, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಭವ್ಯರಥ ಯಾತ್ರೆಗೆ ಚಾಲನೆ ನೀಡಿದರು.ಭವ್ಯ ರಥ ಯಾತ್ರೆಗೆ ಚಾಲನೆ ನೀಡುವ ಮೊದಲು ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ ದೇವರಿಗೆ ಕ್ರಾಂತಿವೀರ ಬ್ರಿಗೇಡ್ ಸಂಸ್ಥಾಪಕ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಿವಿಧ ಶ್ರೀಗಳೊಂದಿಗೆ ಪೂಜೆ, ಮಂಗಳಾರತಿ ನೆರವೇರಿಸಿದರು. ಭವ್ಯ ರಥಯಾತ್ರೆ ಚಾಲನೆಗೊಂಡ ನಂತರ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದು ಧರ್ಮ ಹಾಗೂ ದೇಶದ ರಕ್ಷಣೆ, ಹಿಂದುಳಿದ ವರ್ಗ ಸೇರಿದಂತೆ ಎಲ್ಲ ಜನರಿಗೂ ನ್ಯಾಯ ಒದಗಿಸುವದು ಕ್ರಾಂತಿವೀರ ಬ್ರಿಗೇಡ್ ಸಂಘಟನೆಯ ಉದ್ದೇಶವಾಗಿದೆ. ಈ ಸಂಘಟನೆಯು ಜಾತ್ಯಾತೀತ, ಪಕ್ಷಾತೀತವಾಗಿದೆ. ಬಸವೇಶ್ವರ ಜನ್ಮಸ್ಥಳ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಸಮೀಪದ ನಿವರಗಿ ಗ್ರಾಮದ ಸಂಗಮೇಶ್ವರಪ್ರೌಢ ಶಾಲೆಯ ವಿದ್ಯಾರ್ಥಿಗಳು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಶಾಲಾ ವಿದ್ಯಾರ್ಥಿಗಳಿಗಾಗಿ 2024ನೇ ಸಾಲಿನಲ್ಲಿ ಸ್ವಾತಂತ್ರ್ಯ ಚಳುವಳಿಗೆ ವಿಷಯಕ್ಕೆ ಸಂಬಂಧಿಸಿದಂತೆ ಆನ್‌ಲೈನ್ ಮೂಲಕ ನಡೆಸಿದ ಮೂರನೇ ವರ್ಷದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಂಗಮೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ರವಿಶಂಕರ ಪೋಲಾದಿ ಜಿಲ್ಲೆಗೆ ಪ್ರಥಮ, ಸಂಗಮೇಶ ವಿಠ್ಠಲ್ ತೇಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ.ವಿದ್ಯಾರ್ಥಿಗಳ ಇವರ ಸಾಧನೆಗೆ , ಶಾಲೆಯ ಆಡಳಿತ ಮಂಡಳಿ, ಮುಖ್ಯ ಗುರುಗಳು, ಸಿಬ್ಬಂದಿ ವರ್ಗ ಮತ್ತು ಊರಿನ ಗ್ರಾಮಸ್ಥರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜ.20 ಸೋಮವಾರ ರಂದು ಸಂಜೆ ನಗರದ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ರಾಮನಗೌಡ ಹಟ್ಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು (ಅಪರಾಧ), ಸುನೀಲ್ ಕಾಂಬಳೆ, ಡಿಎಸ್‌ಪಿ ಸಿ.ಇ.ಎನ್ ಪೊಲೀಸ್ ಠಾಣೆ ಹಾಗೂ ನರೇಂದ್ರ ಬಾಬು, ಲೀಡ್ ಬ್ಯಾಂಕ್ ಮ್ಯಾನೇಜರ್ ವಿಜಯಪುರ ಇವರ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯ ಎಲ್ಲ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಬ್ಯಾಂಕ್‌ಗಳಲ್ಲಿ ಭದ್ರತೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.ಈ ಕಾರ್ಯಾಗಾರದಲ್ಲಿ ಬ್ಯಾಂಕ್‌ಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು, ಎ.ಟಿ.ಎಮ್ ಗಳಿಗೆ ಭದ್ರತೆ, ಬ್ಯಾಂಕ್ ಗ್ರಾಹಕರಿಗೆ ಜಾಗೃತಿ ಮೂಡಿಸುವುದು ಸೇರಿದಂತೆ ಇನ್ನಿತರ ಸೂಚನೆಗಳನ್ನು ನೀಡಲಾಯಿತು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಗರದ ಖೇಮು ರಾಠೋಡ ಎಂಬುವವರ ಮಾಲೀಕತ್ವದ ಇಟ್ಟಂಗಿ ಭಟ್ಟಿಯಲ್ಲಿ ಕಾರ್ಮಿಕರಾಗಿ, ಅಲ್ಲಿರೇ ವಾಸವಾಗಿದ್ದ ಸದಾಶಿವ ಬಸಪ್ಪ ಮಾದರ ಸದಾಶಿವ ಚಂದ್ರಪ್ಪ ಬಬಲಾದಿ ಹಾಗೂ ಉಮೇಶ ಮಾಳಪ್ಪ ಮಾದರ ಅವರ ಮೇಲೆ ಮನಸೋಯಿಚ್ಛೆ ಥಳಿಸಿ, ಮಾರಣಾಂತಿಕ ಹಲ್ಲೆಗೈದ ಮಾಲೀಕ ಖೇಮು ರಾಠೋಡ ಸೇರಿದಂತೆ ಐವರು ಆರೋಪಗಳನ್ನು ಪೋಲೀಸರು ಸೋಮವಾರ ಬಂಧಿಸಿದ್ದಾರೆ.ಘಟನೆ ಹಿನ್ನೆಲೆ: ಜ.13ರಂದು ಸಂಕ್ರಮಣ ಹಬ್ಬದ ನಿಮಿತ್ಯ ಎಲ್ಲ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಿದ್ದರು. ಜ.15 ರಂದು ಇಟ್ಟಂಗಿ ಭಟ್ಟಿ ಮಾಲೀಕರು ಕಾರ್ಮಿಕರಿಗೆ ಫೋನ್ ಮಾಡಿ ಕೆಲಸಕ್ಕೆ ಮರಳಿ ಬರುವಂತೆ ತಿಳಿಸಿದ್ದು, ಆಗ ಕಾರ್ಮಿಕರು ಹಬ್ಬದ ಖರ್ಚಿಗೆ 10 ಸಾವಿರ ಹಣ ಕೇಳಿದ್ದು, ಮಾಲೀಕ ಕೊಡುತ್ತೇನೆ ಅಂತಾ ಹೇಳಿ ಇಟ್ಟಂಗಿ ಭಟ್ಟಿಗೆ ಬರಲು ಹೇಳಿದ್ದು, ಅದರಂತೆ ಮೂವರು ಕಾರ್ಮಿಕರು ಜ.15 ರಂದು ಬೆಳಗ್ಗೆ ಇಟ್ಟಂಗಿ ಭಟ್ಟಿಗೆ ಬಂದಿದ್ದರು. ಆಗ ಮಾಲೀಕ ಖೇಮು ರಾಠೋಡ, ಆತನ ಮಗ ರೋಹನ ರಾಠೋಡ ಹಾಗೂ ಇನ್ನೂ…

Read More