ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಅನಾದಿ ಕಾಲದಿಂದಲೂ ಸಮಾಜ ಸುಧಾರಣೆಯ ಕೆಲಸವನ್ನು ಮಠಮಾನ್ಯಗಳು, ಮಠಾಧೀಶರು ಮಾಡಿಕೊಂಡು ಬಂದಿದ್ದಾರೆ, ಸಮಾಜ ಸುಧಾರಣೆಯಲ್ಲಿ ಮಠ, ಮಠಾಧೀಶರ ಕೊಡುಗೆ ಅಪಾರವಾಗಿದೆ ಎಂದು ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ಹೇಳಿದರು.
ಅಫಜಲಪುರ ತಾಲೂಕಿನ ಸುಕ್ಷೇತ್ರ ನಿಲೂರ ಗ್ರಾಮದ ಶ್ರೀಗುರು ರಾಚೋಟೇಶ್ವರ ಮಠದ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ಸೊಲ್ಲಾಪುರದ ಸಿದ್ದರಾಮೇಶ್ವರರ ಪುರಾಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ನಮ್ಮ ತಾಲೂಕಿನಲ್ಲಿ ಅನೇಕ ಮಠಗಳು ಭಕ್ತರಿಗೆ ಅನ್ನ, ಅಕ್ಷರ ಆಧ್ಯಾತ್ಮಗಳನ್ನು ಕರುಣ ಸುವ ಮೂಲಕ ತ್ರಿವಿಧ ದಾಸೋಹಗಳನ್ನು ಮಾಡುತ್ತಿವೆ. ನಿಜಕ್ಕೂ ಮಠಗಳು, ಮಠಾಧೀಶರ ಸಮಾಜ ಸುಧಾರಣೆ ಕಾರ್ಯ ಶ್ಲಾಘನೀಯ ಎಂದರು.
ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ ಮಠಗಳು ಕೇವಲ ಧಾರ್ಮಿಕ ಕೇಂದ್ರಗಳಾಗಿಲ್ಲ, ಅಲ್ಲಿ ಬಡವರ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯುತ್ತಿದೆ, ಹಸಿದು ಬಂದವರಿಗೆ ಅನ್ನ ದಾಸೋಹ ನಡೆಯುತ್ತಿದೆ, ಕಷ್ಟವೆಂದು ಬರುವವರಿಗೆ ಕಷ್ಟ ನಿವಾರಿಸುವ ಕೆಲಸವನ್ನು ಮಠಾಧೀಶರು ಮಾಡುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ಸರ್ಕಾರಗಳು ಮಾಡಬೇಕಾಗಿರುವ ಅನೇಕ ಕೆಲಸಗಳನ್ನು ಇಂದು ಯಾವುದೇ ಫಲಾಪೇಕ್ಷವಿಲ್ಲದೆ ಮಠಗಳು, ಮಠಾಧೀಶರು ಮಾಡುತ್ತಿದ್ದಾರೆ ಎಂದರು.
ಮಠದ ಶಿವಬಸವ ಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ, ಮಠಕ್ಕೆ ಬರುವ ಭಕ್ತರು ತಮ್ಮ ಕಷ್ಟಗಳನ್ನು ಗದ್ದುಗೆಯಲ್ಲಿನ ಶಕ್ತಿಸ್ವರೂಪ ದೈವದ ಮುಂದೆ ಹೇಳಿಕೊಳ್ಳುತ್ತಾರೆ. ಶಕ್ತಿಸ್ವರೂಪ ಭಗವಂತ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಅರಿತು ಅದಕ್ಕೆ ಸಮಾಧಾನ ನೀಡುವ ಶಕ್ತಿ ಮಠದ ಪೂಜ್ಯರಿಗೆ ನೀಡುತ್ತಾರೆ ಹೀಗಾಗಿ ನಾವು ಭಕ್ತರು ಮತ್ತು ಭಗವಂತನ ನಡುವಿನ ಸೇತುವೆಯ ರೀತಿಯಲ್ಲಿ ಕೆಲಸ ಮಾಡುತ್ತೇವೆ. ನಿಲೂರಿನ ರಾಚೋಟೇಶ್ವರ ಮಠಕ್ಕೆ ಭಕ್ತರೇ ಶಕ್ತಿ ಮತ್ತು ಆಸ್ತಿಯಾಗಿದ್ದಾರೆ ಭಕ್ತರ ಸಹಕಾರದಿಂದಲೇ ಪ್ರತಿಯೊಂದು ಕಾರ್ಯಕ್ರಮಗಳು ಸಾಂಗವಾಗಿ ನೇರವೇರುತ್ತಿವೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಹಣಮಂತ್ರಾವ ಪಾಟೀಲ್, ಸಾತಲಿಂಗಪ್ಪ ಲೋಣ , ಮಹಾನಿಂಗಪ್ಪ ನಾಯ್ಕೋಡಿ, ಸಾತಲಿಂಗಪ್ಪ ಪೊಲೀಸಪಾಟೀಲ್, ಗುಂಡುರಾವ ಕುಂಬಾರ, ಜಗದೇವಪ್ಪ ಪಾಟೀಲ್, ಬಸವರಾಜ ಕುಕಮಳ್ಳಿ, ಬಸಲಿಂಗಪ್ಪ ಪಾಟೀಲ್, ಡಾ. ಬಾಬುರಾವ್ ಕುಲಕಣ ð, ನಾಗಪ್ಪ ಠಕ್ಕಾ, ರಾಜಶೇಖರ ಪಾಟೀಲ್, ಶರಣು ಹಾಳಮಳ್ಳಿ, ಶಾತಯ್ಯ ಮಠಪತಿ, ಮಹಾಂತೇಶ ಹೂಗಾರ, ಸಿದ್ದಾರಾಮ ಗುರುನಂಜಿ, ಭೀಮಣ್ಣ ಬಡದಾಳ ಸೇರಿದಂತೆ ಅನೇಕರು ಇದ್ದರು.

