ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಸರ್ವಾಂಗಿಣ ಅಭಿವೃದ್ಧಿಯೇ ಶಿಕ್ಷಣ ಸಂಸ್ಥೆಗಳ ಗುರಿಯಾಗಿರಲಿ ಎಂದು ಆಫಜಲಪುರ ಸಂಸ್ಥಾನ ಹಿರೇಮಠದ ವಿಶ್ವರಾಧ್ಯ ಮಳೆಂದ್ರ ಶಿವಾಚಾರ್ಯರು ಹೇಳಿದರು. ಅವರು ಅಪಜಲಪುರ ಪಟ್ಟಣದ ಸರಸಂಬಾ ಕಲ್ಯಾಣ ಮಂಟಪದಲ್ಲಿ ಶ್ರೀ ರೇವಣಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ವಿದ್ಯಾಭಾರತಿ ಹಿರಿಯ ಪ್ರಾಥಮಿಕ ಶಾಲೆ ಅಕ್ಕಮಹಾದೇವಿ ನಗರ ಅಫಜಲಪುರದ 16ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ ಇಂದು ಶಿಕ್ಷಣ ಸಂಸ್ಥೆ ನಡೆಸುವುದು ಸುಲಭದ ಮಾತಲ್ಲ, ಮಕ್ಕಳ ಸರ್ವಾಂಗಿಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಸಂಸ್ಕಾರದೊಂದಿಗೆ ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಪಾಲಕರಿಗೂ ಕೂಡ ಸಂಸ್ಥೆಯ ಬಗ್ಗೆ ಹೆಮ್ಮೆ ಬರುತ್ತದೆ, ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಗಳು ಕೂಡ ಬೆಳಕಿಗೆ ಬರುತ್ತವೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಅವಶ್ಯಕ ಎಂದು ಹೇಳಿದರು.
ಬ್ರಹ್ಮಾನಂದ ಮಹಾಸ್ವಾಮಿಗಳು ಮೂರು ಜಾವದೀಶ್ವರ ಮಠ ಅಪಜಲಪುರ ಇವರು ಮಾತನಾಡುತ್ತಾ ಇಂದಿನ ಮಕ್ಕಳೇ ನಾಳಿನ ನಾಗರಿಕರು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರಿಂದ ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡುತ್ತದೆ, ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವುದು ಅತ್ಯಂತ ಅವಶ್ಯಕತೆ ಇದೆ ಎಂದು ಹೇಳಿದರು. ಕೋಳಿ ಕಬ್ಬಲಿಗೆ ಹೋರಾಟ ಸಮಿತಿ ಬೆಂಗಳೂರಿನ ರಾಜ್ಯಾಧ್ಯಕ್ಷ ಲಚ್ಚಪ್ಪ ಎಸ್ ಜಮಾದಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಇಂದಿನ ಪಾಲಕರಲ್ಲಿ ಮಕ್ಕಳ ಶಿಕ್ಷಣದ ಬಗ್ಗೆ ಜಾಗೃತಿ ಮೂಡುತ್ತಿರುವುದು ಸಂತಸದ ವಿಷಯವಾಗಿದೆ, ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತಲೂ, ಮಕ್ಕಳನ್ನೇ ಆಸ್ತಿ ಮಾಡಿ ಎಂದು ಪಾಲಕರಲ್ಲಿ ಮನವಿ ಮಾಡಿದರು,
ಈ ಭಾಗದ ನಡೆದಾಡುವ ದೇವರು ಎಂದೇ ಪ್ರಸಿದ್ಧರಾದ, ಸರ್ವ ಜಾತಿ ಜನಾಂಗದ ನೆಚ್ಚಿನ ಗುರುಗಳಾದ ವಿಶ್ವರಾಧ್ಯ ಮಳೆಂದ್ರ ಶಿವಾಚಾರ್ಯರು ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಪ್ರಜ್ವಲಿಸುತ್ತಿರುವ ಸೂರ್ಯನಂತೆ ಎಂದು ಹೇಳಿದರು, ಮಕ್ಕಳಲ್ಲಿರುವ ಪ್ರತಿಭೆಗೆ ವಾರ್ಷಿಕ ಸ್ನೇಹ ಸಮ್ಮೇಳನ ಸೂಕ್ತ ವೇದಿಕೆಯಾಗಿದೆ ಎಂದು ಹೇಳಿದರು. ಶರಣ ಸಾಹಿತ್ಯ ಪರಿಷತ್ತು ಬಡದಾಳ ವಲಯದ ಅಧ್ಯಕ್ಷರಾದ ಸಿದ್ದರಾಮ ಶಿವಣಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆ ನಡೆದು ಬಂದ ದಾರಿಯನ್ನು ವಿವರಿಸಿದರು ಹಾಗೂ ಸಂಸ್ಥೆಯ ಮುಂದಿನ ದೈಯೊದ್ದೇಶಗಳನ್ನು ಎಳೆ ಎಳೆಯಾಗಿ ಪಾಲಕರ ಮುಂದೆ ಪ್ರಸ್ತುತಪಡಿಸಿದರು. ಕಾರ್ಯಕ್ರಮದ ನೇತೃತ್ವವನ್ನು ಅಪಜಲಪುರದ ಕೋಲಿ ಸಮಾಜದ ಮಾಜಿ ಅಧ್ಯಕ್ಷ ಶಂಕರ್ ಮ್ಯಾಕೇರಿ ವಹಿಸಿದ್ದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇವಣಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಸಿದ್ದು ಎಸ್ ಪೂಜಾರಿ ವಹಿಸಿದ್ದರು, ಕಾರ್ಯಕ್ರಮದ ಜ್ಯೋತಿಯನ್ನು ಅಪಜಲಪುರ ತಾಲೂಕ ಕುರುಬ ಸಮಾಜದ ಅಧ್ಯಕ್ಷ ಬೀರಣ್ಣ ಕನಕಟೇಲರ್, ಪೌರಕಾರ್ಮಿಕ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಚಲವಾದಿ, ಮುಖ್ಯ ಗುರುಗಳಾದ ಮಡಿವಾಳಪ್ಪ ಬಾಗೇವಾಡಿ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ದೇಸಾಯಿಕಲ್ಲೂರು ಗ್ರಾಪಂ ಅಧ್ಯಕ್ಷ ಕಲ್ಯಾಣಿ ಸಿಂದಗೇರಿ, ಅಪಜಲಪುರ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ಚಾಂದಕವಟೆ, ಗೌರ್ ಬಿ ಗ್ರಾಪಂ ಅಧ್ಯಕ್ಷ ಇಮಾಮ್ ಸಾಬ್ ಶೇಕ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಹಿರೇಮಠ, ಸಾಂಚಿ ಪ.ಪೂ.ಕಾಲೇಜ್ ಪ್ರಾಚಾರ್ಯ ಚಂದ್ರಕಾಂತ್ ಸಿಂಗೆ, ಶಿವಪುರ ಗ್ರಾಪಂ ಸದಸ್ಯ ಪ್ರಭು ಜಮಾದಾರ್, ಕಾಂಗ್ರೆಸ್ ಮುಖಂಡ ಶ್ರೀಕಾಂತ್ ಮಾಶಾಳಕರ್, ಶಿವಾನಂದ್ ಪದಕಿ, ಸಿದ್ದಪ್ಪ ಸಿನ್ನೂರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ತನಗೆ ಕಲಿಸಿದ ಗುರುಗಳ ಋಣ ತೀರಿಸಲು ನಿವೃತ್ತ ಶಿಕ್ಷಕರಾದ ವಿಜಯ್ ಕುಮಾರ ಸಾಲಿಮಠ ಹಾಗೂ ಗಿರಿಧರ ಪ್ರಶಸ್ತಿ ಪುರಸ್ಕೃತರಾದ ಶಕೀಲ್ ಚೌದರಿಯವರಿಗೆ ವಿಶೇಷ ಸನ್ಮಾನ ಜರುಗಿತು.
ಇದೇ ಸಂದರ್ಭದಲ್ಲಿ ರೇವಣಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿದ್ದು ಎಸ್ ಪೂಜಾರಿ ದಂಪತಿಗಳಿಗೆ ಶ್ರೀಗಳಿಂದ ವಿಶೇಷ ಸನ್ಮಾನ ಜರುಗಿತು.
ಶಾಲಾ ಮಕ್ಕಳ ಭರತನಾಟ್ಯ ದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು, ಶಿಕ್ಷಕಿ ರೂಪಾ ಮೂರುಜಾವದೀಶ್ವರ ಮಠ ಸರ್ವರನ್ನು ಸ್ವಾಗತಿಸಿದರು, ಮುದ್ದು ಮಕ್ಕಳಾದ ಕೀರ್ತಿ ಮತ್ತು ಗಾಯತ್ರಿ ನಿರೂಪಣೆ ಮಾಡಿದರು, ಶಿಕ್ಷಕಿ ವಿಶಾಲಾಕ್ಷಿ ನಾಯ್ಕೋಡಿ ವಂದಿಸಿದರು.
ನಂತರ ಶಾಲಾ ಮಕ್ಕಳಿಂದ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಪಾಲಕರ ಮನಸೂರೆಗೊಂಡವು.

