Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಜೆಟ್ ಎಂಬುದು ಬರೀ ಹಾಳೆಗಳ ಮೇಲಿನ ಲೆಕ್ಕವಲ್ಲ, ಅದು ರಾಜ್ಯದ ಜನತೆಯ ಭವಿಷ್ಯ ರೂಪಿಸುವ ಕೈಪಿಡಿ ಎಂಬ ನಂಬಿಕೆಯನ್ನು ಮತ್ತೊಮ್ಮೆ ಮಾನ್ಯ ಸಿದ್ಧರಾಮಯ್ಯನವರು ಸಾಬೀತು ಪಡಿಸಿದ್ದಾರೆ ಎಂದು ಆಲಮೇಲ ಬ್ಲಾಕ್ ಕಾಂಗ್ರೆಸ್ ಡಾಕ್ಟರ್ ಸೆಲ್ ಅಧ್ಯಕ್ಷ ಡಾ.ಸಮೀರ ಹಾದಿಮನಿ ತಿಳಿಸಿದ್ದಾರೆ.ದಶಕಗಳ ನಿರೀಕ್ಷೆಯಾಗಿದ್ದ ವಿಜಯಪುರ ವಿಮಾನ ನಿಲ್ದಾಣ 2026 ರಲ್ಲಿ ಪ್ರಾರಂಭಗೊಳಿಸಲು ಹಸಿರು ನಿಶಾನೆ ದೊರೆತಿದ್ದು ಸಂತಸತಂದಿದೆ. ಮುದ್ದೇಬಿಹಾಳ ತಾಲೂಕಿನಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆಗೊಂಡಿದ್ದು ರೈತರಿಗೆ ಅನುಕೂಲವಾಗಲಿದೆ. ರಾಯಚೂರಿನಲ್ಲಿ ಕಿದ್ವಾಯಿ ಆಸ್ಪತ್ರೆ ನಿರ್ಮಾಣದಿಂದ ಕಲ್ಯಾಣಕರ್ನಾಟಕ ಮತ್ತು ಉತ್ತರ ಕರ್ನಾಟಕದ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಅನುಕೂಲವಾಗಲಿದೆ. ಕೈಗಾರಿಕೆಗಳ ಸ್ಥಾಪನೆ ಮತ್ತು ಕೆಐಎಡಿಬಿ ಜಾಗೆ ಹಂಚಿಕೆಯಲ್ಲಿ ಮುಸ್ಲಿಂ ಸಮುದಾಯಕ್ಕೆ 20% ಪ್ರತಿಶತ ಮೀಸಲು ನೀಡಿದ್ದು, ಸಮುದಾಯದ ಸರಳ ವಿವಾಹಗಳಿಗೆ 50 ಸಾವಿರ ಸಹಾಯ ಧನ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ, 169 ಹಾಸ್ಟೆಲ್ ಗಳು ಅಲ್ಲದೆ ಸಿಕ್, ಬೌದ್ಧ, ಜೈನ ಸಮುದಾಯದ ಅಭಿವೃದ್ಧಿಗೆ ಅನುದಾನ ಘೋಷಣೆಯ ಮೂಲಕ ಅಲ್ಪಸಂಖ್ಯಾತರ…
ಉತ್ಕೃಷ್ಟ ಯೋಜನೆಗಳ ಜನಪರ ಬಜೆಟ್ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ದಾಖಲೆಯ ೧೬ನೇ ಬಜೆಟ್ ಮಂಡಿಸಿ ಉತ್ಕೃಷ್ಟ ಯೋಜನೆಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮ್ಯನವರು ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಅಬ್ದುಲ್‌ಹಮೀದ ಮುಶ್ರೀಫ್ ತಿಳಿಸಿದ್ದಾರೆ.ಇದು ಅಭಿವೃದ್ಧಿ, ಜನಪರ ಬಜೆಟ್ ಆಗಿದ್ದು, ಗ್ಯಾರಂಟಿಗಳ ಜೊತೆಗೆ ಸರ್ವತೋಮುಖ ಪ್ರಗತಿಗೂ ಜೈ ಎಂದಿದ್ದಾರೆ.೨೦೨೫-೨೦೨೬ ರ ಬಜೆಟ್ ರಾಜ್ಯದ ಸಮಗ್ರ ಅಭಿವೃದ್ಧಿಯ ಮುನ್ನೊಟದೊಂದಿಗೆ ಸಿದ್ದಪಡಿಸಿರುವ ಹಾಗೂ ಕನ್ನಡಿಗರ ಪರವಾಗಿದೆ. ಕರ್ನಾಟಕವನ್ನು ಸಶಕ್ತಿ, ಸಮೃದ್ಧಿ, ಸ್ವಾವಲಂಬನೆಯ ಹಾದಿಯಲ್ಲಿ ಐತಿಹಾಸಿಕ ಬಜೆಟ್‌ನ್ನು ಮಂಡಿಸಿದ್ದಾರೆ. ವಿಜಯಪುರ ಜಿಲ್ಲೆಗೂ ಹಲವಾರು ಯೋಜನೆಗಳು ಸೌಲಭ್ಯಗಳನ್ನು ನೀಡುವ ಮೂಲಕ ಸರ್ವಜನಾಂಗದ ಸಿದ್ಧರಾಮಯ್ಯ ಎನಿಸಿಕೊಂಡಿದ್ದಾರೆ ಎಂದು ಅಬ್ದುಲ್‌ಹಮೀದ ಮುಶ್ರೀಫ್ ತಿಳಿಸಿದ್ದಾರೆ.
ಸರ್ವರಿಗೂ ಸಮ ಬಾಳು-ಸಮ ಪಾಲು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರ್ವರಿಗೂ ಸಮ ಬಾಳು ಸಮ ಪಾಲು ಎನ್ನುವ ಧ್ಯೇಯ ವಾಕ್ಯವನ್ನು ಅಕ್ಷರ ಸಹ ತಮ್ಮ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನುಷ್ಠಾನಕ್ಕೆ ತಂದಿದ್ದಾರೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ತಿಳಿಸಿದ್ದಾರೆ.ನಾಡಿನ ಸಮಸ್ತ ಜನತೆಯ ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಬಜೆಟ್ ಇದಾಗಿದ್ದು ಅವರ ದೂರದೃಷ್ಟಿತ್ವ ಮತ್ತು ಬದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ. ಆದರೆ ಮಕ್ಕಳು ನಾಡಿನ ನಾಳಿನ ಭವಿಷ್ಯದ ಭರವಸೆಯ ಆಶಾ ಕಿರಣಗಳಾಗಿರುವುದರಿಂದ ಮುಂಬರುವ ದಿನಗಳಲ್ಲಿ ಮಕ್ಕಳಿಗಾಗಿಯೇ” ಮಕ್ಕಳ ಬಜೆಟ್”ಮಂಡಿಸುವಂತಾಗಲಿ ಎನ್ನುವದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅದ್ಧ್ಯಕ್ಷನಾಗಿ ನನ್ನ ಮತ್ತು ಈ ನಾಡಿನ ಮಕ್ಕಳ ಸದಾಶಯವಾಗಿದೆ. ನಾಡಿನ ಮಕ್ಕಳ ಈ ಬೇಡಿಕೆಯನ್ನು ತಾಯಿ ಹೃದಯದ ಮುಖ್ಯಮಂತ್ರಿ ಈಡೇರಿಸುತ್ತಾರೆಂಬ ನಂಬಿಕೆ ನನಗಿದೆ ಎಂದು ಸಂಗಮೇಶ ಬಬಲೇಶ್ವರ ತಿಳಿಸಿದ್ದಾರೆ.
ಲೇಖನ- ಡಾ. ರಾಜಶೇಖರ ನಾಗೂರ(’ಕಥಾ ಅರಮನೆ’ ಬರಹಗಾರರು) ಸ್ತ್ರೀ ಎಂದರೆ ಅಷ್ಟೇ ಸಾಕೇ..? ಉದಯರಶ್ಮಿ ದಿನಪತ್ರಿಕೆ ಈ ಬದುಕೇ ವಿಸ್ಮಯ. ಇಲ್ಲಿ ಪ್ರಾರಂಭವು ಯಾವುದನ್ನೂ ನಿರ್ಧರಿಸುವುದಿಲ್ಲ. ನೆಲಕ್ಕೆ ಬೀಳುವ ಬೀಜ ಹೆಮ್ಮರವಾಗುತ್ತೋ, ಮಣ್ಣಿನಲ್ಲಿ ಮಣ್ಣಾಗುತ್ತೋ ಎನ್ನುವುದು ಯಾವ ನೆಲದಲ್ಲಿ ಅದು ಬೀಳುತ್ತೆ ಎನ್ನುವ ಅಂಶದ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ. ಈ ಭೂಮಿಯ ಮೇಲೆ ನಾವುಗಳು ಎಲ್ಲಿ ಹುಟ್ಟುತ್ತೇವೆ ಗೊತ್ತಿರುವುದಿಲ್ಲ ಆದರೆ ಎಲ್ಲಿ ಬೆಳೆಯುತ್ತೇವೆ, ಹೇಗೆ ಬೆಳೆದು ನಿಲ್ಲುತ್ತೇವೆ ಎಂಬುದು ನಮ್ಮ ಯೋಚನಾ ಕ್ರಮವನ್ನು ಅವಲಂಬಿಸಿದೆ.ಅದು 1979, ಆಗಸ್ಟ್ 13. ಯಾರೋ ಪುಣ್ಯಾತ್ಮರು ಪುಣೆಯ ಶ್ರೀವಾಸ್ತವ ಅನಾಥಶ್ರಮದ ಹತ್ತಿರ ಒಂದು ಕಸದ ತೊಟ್ಟಿಯೊಳಗೆ ಆಗ ತಾನೇ ಹುಟ್ಟಿರಬಹುದಾದ ಒಂದು ಹೆಣ್ಣು ಮಗುವನ್ನು ಎಸೆದು ಹೋಗಿರುತ್ತಾರೆ. ಇರುವೆಗಳು, ಹುಳಗಳು, ನೊಣ ಸೊಳ್ಳೆಗಳು ಮಗುವನ್ನು ಕಚ್ಚುತ್ತಾ ಇರುವಾಗ ಜೋರಾಗಿ ಮಗು ಅಳಲು ಪ್ರಾರಂಭಿಸುತ್ತದೆ. ಆ ಅನಾಥಾಶ್ರಮದ ಮ್ಯಾನೇಜರ್ ಆ ಮಗುವಿನ ಆಕ್ರಂದನ ಕೇಳಿ ಮಗುವನ್ನು ಎತ್ತಿಕೊಂಡು ಆಶ್ರಮಕ್ಕೆ ಬರುತ್ತಾನೆ. ಆ ಮಗುವಿನ ಕಣ್ಣುಗಳು ಹೊಳಪಿನಿಂದ ಕೂಡಿರುವುದನ್ನು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಿಎಂ ಸಿದ್ದರಾಮಯ್ಯರವರು 2025ರ ಬಜೆಟ್ ನಿರಾಶಾದಾಯಕವಾಗಿ ಮಂಡಿಸಿದ್ದಾರೆ ಎಂದು ರಾಷ್ಟೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಗೌತಮ್ ಆರ್ ಚೌಧರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಈ ಕುರಿತು ಶುಕ್ರವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಮೀನುಗಾರರ ಕಾಲೇಜುಗಳ ಸಂಖ್ಯೆ ಹೆಚ್ಚಿಸುವುದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀನುಗಾರರಿಗೆ 3 ಲಕ್ಷ ರೂಪಾಯಿಗಳವರೆಗೆ 4 ಚಕ್ರದ ವಾಹನ ಖರೀದಿಸಲು ಆರ್ಥಿಕ ನೆರವು ನೀಡಿದ್ದಾರೆ. 15 ವರ್ಷಕ್ಕಿಂತ ಹಳೆಯ ದೋಣಿಗಳಿಗೆ ಹೊಸ ಎಂಜಿನ್ ಅಳವಡಿಸಲು 1 ಲಕ್ಷ ರೂಪಾಯಿಗಳವರೆಗೆ ಸಹಾಯಧನ ನೀಡುವುದಾಗಿ ಘೋಷಿಸಿದ್ದಾರೆ. ಮೈಸೂರಿನಲ್ಲಿ ಮೀನುಗಾರಿಕೆಗೆ ಸಂಬಂಧಿಸಿದಂತೆ ಆಧುನಿಕ ಪ್ರದರ್ಶನ ಕೇಂದ್ರ ಸ್ಥಾಪನೆ ಮತ್ತು ಮಲ್ಪೆಯಲ್ಲಿ ಬಹುಮಹಡಿ ವಾಹನ ನಿಲುಗಡೆ ವ್ಯವಸ್ಥೆ ಹೊರತುಪಡಿಸಿ, ಮೀನುಗಾರರ ಮೂಲಭೂತ ಸೌಕರ್ಯಗಳು, ಸುರಕ್ಷತೆ ಮತ್ತು ಅವರ ಜೀವನೋಪಾಯಕ್ಕೆ ಸಂಬಂಧಿಸಿದ ಬೇಡಿಕೆಗಳನ್ನು ಈ ಬಜೆಟ್ ಪೂರೈಸುವಲ್ಲಿ ವಿಫಲವಾಗಿದೆ. ಇದು ಒಟ್ಟಾರೆಯಾಗಿ ಮೀನುಗಾರ ಸಮುದಾಯಕ್ಕೆ ನಿರಾಶೆ ತಂದಿದೆ ಎಂದು ಡಾ ಗೌತಮ್ ಆರ್ ಚೌಧರಿತಿಳಿಸಿದ್ದಾರೆ.
ಲೇಖನ- ಡಾ ಪೂರ್ಣಿಮಾ ಕೆ. ಧಾಮಣ್ಣವರಅತಿಥಿ ಉಪನ್ಯಾಸಕರುಕನ್ನಡ ಅಧ್ಯಯನ ವಿಭಾಗರಾಣಿ ಚನ್ನಮ್ಮ ವಿಶ್ವವಿದ್ಯಾಲಯಡಾ ಫ.ಗು ಹಳಕಟ್ಟಿ ಸ್ನಾತಕೋತ್ತರಕೇಂದ್ರ ವಿಜಯಪುರ ಉದಯರಶ್ಮಿ ದಿನಪತ್ರಿಕೆ ಮನೆಮನೆಯಲಿ ದೀಪ ಮುಡಿಸಿಹೊತ್ತು ಹೊತ್ತಿಗೆ ಅನ್ನ ಉಣಿಸಿತಂದೆ ಮಗುವ ತಬ್ಬಿದಾಕೆನಿನಗೆ ಬೇರೆ ಹೆಸರು ಬೇಕೆ?ಸ್ತ್ರೀ ಸ್ತ್ರೀ ಎಂದರೆ ಅಷ್ಟೇ ಸಾಕೆ.. ಕನ್ನಡದ ಖ್ಯಾತ ಸಾಹಿತಿ ಡಾ ಶಿವರುದ್ರಪ್ಪನವರ ಈ ಸಾಲು ಸಾರ್ಥಕನೆನ್ನಿಸುತ್ತದೆ. ಹೌದು ಸ್ತ್ರೀ ಕನಸು ಹೌದು, ವಾಸ್ತವವೂ ಹೌದು. ಸ್ತ್ರೀಗೂ ಪ್ರಕೃತಿಗೂ ಅವಿನಾಬವ ಸಂಬಂಧವಿದೆ. ಈಕೆ ಭೂಮಿಯಾಗಿ ಮಿಗಿಲಾಗಿ ಮೇರು ಪರ್ವತವಾಗಿ ಬೆಳೆದು ನಿಂತಿದ್ದಾಳೆ. ಹೀಗಾಗಿ ಸ್ತ್ರೀಯನ್ನು ಸಮೃದ್ಧಿಯ ಸಂಕೇತವೆಂದು ಪರಿಭಾವಿಸಲಾಗಿದೆ.ನಡುರಾತ್ರಿಯಲ್ಲಿ ಮಹಿಳೆಯೊಬ್ಬಳು ನಿರ್ಭಯದಿಂದ ಏಕಾಂಗಿಯಾಗಿ ನಡೆದಾಗ ಮಾತ್ರ ಈ ದೇಶಕ್ಕೆ ನಿಜವಾದ ಸ್ವಾತಂತ್ರ ಬಂದಂತೆ ಎಂಬ ಮಾತು ಮಹಾತ್ಮಾ ಗಾಂಧೀಜಿಯವರ ಹೇಳಿಕೆ ಪ್ರಸ್ತುತವೆನ್ನಿಸುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಪುರುಷರಷ್ಟೇ ಸಮಾನವಾಗಿ ಹಿಂದಿನ ಕಾಲಕ್ಕಿಂತಲೂ ಹೆಮ್ಮರವಾಗಿ ಬೆಳೆದು ನಿಂತಿದ್ದಾಳೆ. ಕೇವಲ ಭೋಗದ ವಸ್ತುವಾಗಿದ್ದ ಈ ಸ್ತ್ರೀ ಕ್ರಮೇಣ ಅಡುಗೆ ಮನೆಗೇ ಮೀಸಲಾಗಿ ತನ್ನ ಸರ್ವಸ್ವವನ್ನೇಲ್ಲ ನಾಲ್ಕು…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪ ಉದಯರಶ್ಮಿ ದಿನಪತ್ರಿಕೆ ಇಲ್ಲಿ ಒಬ್ಬರಂತೆ ಇನ್ನೊಬ್ಬರಿಲ್ಲ. ಆ ಸೃಷ್ಟಿಕರ್ತನ ಸೃಷ್ಟಿ ಕಾರ್ಯ ಅಚ್ಚರಿ, ಅನಂತ, ಅಗಾಧ. ಪ್ರತಿಯೊಬ್ಬರ ರೂಪ, ಗುಣ ನಡೆ, ನುಡಿ ಯೋಚನಾ ರೀತಿ ಎಲ್ಲವೂ ಭಿನ್ನ ಭಿನ್ನ. ಹೀಗೆ ಯೋಚಿಸುವಾಗ ಒಮ್ಮೊಮ್ಮೆ ನಾನಾ ಬಗೆಯ ಚಿಂತನೆಗಳು ಹೊರಹೊಮ್ಮುತ್ತವೆ. ಭಿನ್ನತೆಯ ಹಿಂದಿನ ಸ್ವಾರಸ್ಯ ಅರಿವಿಗೆ ಬರುತ್ತದೆ. ಆ ಭಿನ್ನತೆಯೇ ಈ ಜಗವನ್ನು ಇಷ್ಟು ಸುಂದರಗೊಳಿಸಿರುವುದು ಅಂತ ತಿಳಿದುಕೊಳ್ಳಲು ಬಹಳ ಹೊತ್ತು ಹಿಡಿಯುವುದಿಲ್ಲ. ಆದರೂ ಚಿಂತನೆಯ ಫಲವನ್ನು ಅಳವಡಿಸಿಕೊಳ್ಳುವುದು ನಮ್ಮಲ್ಲಿ ಕಂಡುಬರುವುದಿಲ್ಲ.ಒಂದು ಹೂದೋಟದಲ್ಲಿ ಕಾಲಿಡುತ್ತಿದ್ದಂತೆ ಅಲ್ಲಿ ಸುವಾಸನೆ ನಮ್ಮನ್ನು ಒಳಕ್ಕೆ ಹೋಗಲು ಪ್ರೇರೇಪಿಸುತ್ತದೆ. ನಮ್ಮನ್ನು ಕಂಡು ಅಲ್ಲಿಯ ಹೂಗಳು ಸ್ವಾಗತ ಕೋರುವಂತೆ ನಗೆ ಬೀರುವ ರೀತಿ ಚಿತ್ತಾಕರ್ಷಕ, ಚೇತೋಹಾರಿ. ಆ ಸುಂದರ ದೃಶ್ಯ ರಮ್ಯ! ಕೋಮಲ, ಮಕರಂದಭರಿತ, ಪರಿಮಳಯುಕ್ತ ಹೂಗಳನ್ನು ಕಂಡಾಗ ಎಂಥ ಕಲ್ಲು ಹೃದಯಿಗಳಾದರೂ ಮನಸ್ಸು ಹೂವಿನಂತೆ ಅರಳುತ್ತದೆ. ಅವುಗಳೆಂದೂ ಒಂದನ್ನೊಂದು ನೋಡಿ ಹೊಟ್ಟೆಕಿಚ್ಚು ಪಡುವುದಿಲ್ಲ. ನಿನಗಿಂತ ನಾ ಚೆನ್ನ, ನಿನ್ನ ಬಣ್ಣ…
ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಮಹಿಳಾ ಸಾಂಸ್ಕೃತಿಕ ಹಬ್ಬ-೨೦೨೫” ಕಾರ್ಯಕ್ರಮ ಉದ್ಘಾಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಾಧನೆಯು ನಿರಂತರ ಅದನ್ನು ಅರಿತರೆ ಮಹಿಳೆ ತನ್ನ ಜೀವನದಲ್ಲಿ ಯಶಸ್ಸು ಗಳಿಸಬಲ್ಲಳು ಎಂದು ಕಲಬುರಗಿಯ ಕರ್ನಾಟಕ ರಂಗಾಯಣ ನಿರ್ದೇಶಕಿ ಡಾ. ಸುಜಾತ ಜಂಗಮಶೆಟ್ಟಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಗುರುವಾರ ಆಯೋಜಿಸಿದ್ದ “ಮಹಿಳಾ ಸಾಂಸ್ಕೃತಿಕ ಹಬ್ಬ-೨೦೨೫” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳೆಯರು ಎಷ್ಟೇ ಉನ್ನತ ಸ್ಥಾನಕ್ಕೇರಿದರೂ, ಅವರನ್ನು ಕೇವಲ ಅಡುಗೆಮನೆಗೆ ಮಾತ್ರ ಸೀಮಿತಗೊಳಿಸುವ ಪರಂಪರೆ ಚಿಂತನೆ ಇನ್ನೂ ಮುಂದುವರಿಯುತ್ತಿದೆ. ಮಹಿಳೆಯರು ಧೈರ್ಯದಿಂದ ಜಗತ್ತನ್ನೇ ತಲುಪಬಲ್ಲ ಶಕ್ತಿ ಹೊಂದಿದ್ದಾರೆ. ಮಹಿಳೆಯರು ಮುಂದುವರಿಯಲು ಕೇವಲ ಸೌಂದರ್ಯವಷ್ಟೇ ಅಲ್ಲ, ಅವರ ಗುಣ, ಸಾಧನೆ ಹಾಗೂ ನಡೆ-ನುಡಿಗಳು ಮುಖ್ಯವಾಗಿವೆ. ನಮ್ಮ ಕಾರ್ಯಗಳು ನಮ್ಮ ಕುಟುಂಬ, ಸಮಾಜ ಹಾಗೂ ಸಂಸ್ಥೆಗೆ ಹೆಮ್ಮೆ ತಂದುಕೊಡಬೇಕು ಎಂದರು.ಇದೇ ಸಂದರ್ಭದಲ್ಲಿ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ರೂಮಿ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ೧೨ ವರ್ಷಗಳ ಹಿಂದೆ ಹೊಸ ತಾಲುಕು ಕೇಂದ್ರಗಳನ್ನು ರಚನೆ ಮಾಡಿ ಕಾರ್ಯಾರಂಭ ಮಾಡಿರುವ ಸರಕಾರ ತಾಲೂಕಾ ಆಡಳಿತದ ಎಲ್ಲ ಕಚೇರಿಗಳು ಹೊಸ ತಾಲೂಕು ಕೇಂದ್ರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತಮ್ಮ ಕಾರ್ಯವ್ಯಾಪ್ತಿಯನ್ನು ಪ್ರಾರಂಭಿಸಲು ಅನುವು ಮಾಡಿಕೊಡದೆ ಇರುವದು ಸರಕಾರ ಜನರಿಗೆ ಇತ್ತ ಅನುಕೂಲ ಮಾಡದೇ ಅತ್ತ ಅನುಕೂಲ ಮಾಡಿದ್ದೇವೆ ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವದು ಎಷ್ಟು ಸರಿ ಎಂದು ಜನರು ಪ್ರಶ್ನಿಸುವಂತಾಗಿದೆ.ಅಧಿಕಾರ ವಿಕೇಂಧ್ರಿಕರಣದ ಮೂಲ ಮಂತ್ರ ಜನರ ಬಳಿ ಆಢಳಿತ ವ್ಯವಸ್ಥೆಯನ್ನು ತರುವದು ಆದರೆ ಸರಕಾರ ರಚಣೆ ಮಾಡಿರುವ ಹೊಸ ತಾಲೂಕು ಕೇಂದ್ರಗಳಲ್ಲಿ ಕೆಲವೇ ಕೆಲವು ತಾಲೂಕಾ ಆಡಳಿತದ ಕಚೇರಿಗಳನ್ನು ಮಂಜೂರು ಮಾಡಿದ್ದು ಜನರಿಗೆ ಹತ್ತಿರವಾಗುವ ಕಂದಾಯ ಇಲಾಖೆಯ ವಿಭಜನೆ ಅಂದರೆ ಉಪನೊಂದಣಿ ಇಲಾಖೆ, ಎಡಿಎಲ್‌ಆರ ಕಚೇರಿ, ಭೂ ಧಾಖಲೆಗಳ ಪಡಸಾಲೆ ಹಾಗೂ ರೆಕಾರ್ಡ ರೂಮ್, ಶಿಕ್ಷಣಾಧಿಕಾರಿಗಳ ಕಚೇರಿ, ನ್ಯಾಯಾಲಯಗಳ ಸಂಕೀರ್ಣ, ಕೃಷಿ ತೋಟಗಾರಿಕೆ, ಅರಣ್ಯ, ಸಮಾಜಕಲ್ಯಾಣ, ಶಿಸು ಅಭಿವೃದ್ದಿ ಇಲಾಖೆ, ಇನ್ನೀತರ ತಾಲೂಕಾ ಆಡಳಿತದ ಕಚೇರಿಗಳು ತೆರೆಯಲು ಮತ್ತು…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸಿಂದಗಿ ಉಪ-ವಿಭಾಗದ ಗೋಲಗೇರಿ ಶಾಖಾ ವ್ಯಾಪ್ತಿಯ ಕೋರವಾರ ವಿದ್ಯುತ್ ವಿತರಣಾ ಕೇಂದ್ರ ಮೇಲೆ ಹೊಸ ಲಿಂಕ್ ಲೈನ್ ಕಾಮಗಾರಿ ಕೈಗೊಳ್ಳುವುದರಿಂದ ಮಾ.೦೭,೦೮ ಮತ್ತು ೦೯ರಂದು ಬೆಳಿಗ್ಗೆ ೯ಗಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ಹಂದಿಗನೂರ, ಪುರದಾಳ, ಎನ್.ಜೆ.ವಾಯ್ ವಿದ್ಯುತ್ ಮಾರ್ಗದ ಮೇಲೆ ಬರುವ ಗುಬ್ಬೇವಾಡ, ಬಸ್ತಿಹಾಳ, ಹಡಗಿನಾಳ, ಹಾಗೂ ಕಣ್ಣಗುಟ್ಟಿಹಾಳ, ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯೆಯ ಉಂಟಾಗುವುದರಿಂದ ವಿದ್ಯುತ್ ಗ್ರಾಹಕರು ಸಹಕರಿಸಬೇಕು.ಮುಂದುವರೆದು, ಪುರದಾಳ ಕೆರಿ ವಿದ್ಯುತ್ ಮಾರ್ಗವನ್ನು ಬೆಳಿಗ್ಗೆ ೦೯:೦೦ ಗಂಟೆಯಿಂದ ಮಧ್ಯಾಹ್ನ ೧೨:೦೦ ಗಂಟೆಯವರೆಗೆ ಹಾಗೂ ಮಧ್ಯಾಹ್ನ ೦೩:೦೦ ಗಂಟೆಯಿAದ ೦೬:೦೦ ಗಂಟೆಯವರೆಗೆ, ಗುಬ್ಬೇವಾಡ ಐಪಿ ವಿದ್ಯುತ್ ಮಾರ್ಗವನ್ನು ಬೆಳಿಗ್ಗೆ ೦೬:೦೦ ಗಂಟೆಯಿಂದ ೦೯:೦೦ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ಸಮಯ ಬದಲಾವಣೆ ಮಾಡಿ ಸದರಿ ದಿನಾಂಕಗಳಂದು ವಿದ್ಯುತ್ ಸರಬರಾಜು ಮಾಡಲಾಗುವದು. ಆದ್ದರಿಂದ ಸದರಿ ಮಾರ್ಗಗಳ ಮೇಲೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
