ಉತ್ಕೃಷ್ಟ ಯೋಜನೆಗಳ ಜನಪರ ಬಜೆಟ್
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ದಾಖಲೆಯ ೧೬ನೇ ಬಜೆಟ್ ಮಂಡಿಸಿ ಉತ್ಕೃಷ್ಟ ಯೋಜನೆಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮ್ಯನವರು ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಅಬ್ದುಲ್‌ಹಮೀದ ಮುಶ್ರೀಫ್ ತಿಳಿಸಿದ್ದಾರೆ.
ಇದು ಅಭಿವೃದ್ಧಿ, ಜನಪರ ಬಜೆಟ್ ಆಗಿದ್ದು, ಗ್ಯಾರಂಟಿಗಳ ಜೊತೆಗೆ ಸರ್ವತೋಮುಖ ಪ್ರಗತಿಗೂ ಜೈ ಎಂದಿದ್ದಾರೆ.
೨೦೨೫-೨೦೨೬ ರ ಬಜೆಟ್ ರಾಜ್ಯದ ಸಮಗ್ರ ಅಭಿವೃದ್ಧಿಯ ಮುನ್ನೊಟದೊಂದಿಗೆ ಸಿದ್ದಪಡಿಸಿರುವ ಹಾಗೂ ಕನ್ನಡಿಗರ ಪರವಾಗಿದೆ. ಕರ್ನಾಟಕವನ್ನು ಸಶಕ್ತಿ, ಸಮೃದ್ಧಿ, ಸ್ವಾವಲಂಬನೆಯ ಹಾದಿಯಲ್ಲಿ ಐತಿಹಾಸಿಕ ಬಜೆಟ್‌ನ್ನು ಮಂಡಿಸಿದ್ದಾರೆ. ವಿಜಯಪುರ ಜಿಲ್ಲೆಗೂ ಹಲವಾರು ಯೋಜನೆಗಳು ಸೌಲಭ್ಯಗಳನ್ನು ನೀಡುವ ಮೂಲಕ ಸರ್ವಜನಾಂಗದ ಸಿದ್ಧರಾಮಯ್ಯ ಎನಿಸಿಕೊಂಡಿದ್ದಾರೆ ಎಂದು ಅಬ್ದುಲ್‌ಹಮೀದ ಮುಶ್ರೀಫ್ ತಿಳಿಸಿದ್ದಾರೆ.

