ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಿಂದಗಿ ಉಪ-ವಿಭಾಗದ ಗೋಲಗೇರಿ ಶಾಖಾ ವ್ಯಾಪ್ತಿಯ ಕೋರವಾರ ವಿದ್ಯುತ್ ವಿತರಣಾ ಕೇಂದ್ರ ಮೇಲೆ ಹೊಸ ಲಿಂಕ್ ಲೈನ್ ಕಾಮಗಾರಿ ಕೈಗೊಳ್ಳುವುದರಿಂದ ಮಾ.೦೭,೦೮ ಮತ್ತು ೦೯ರಂದು ಬೆಳಿಗ್ಗೆ ೯ಗಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ಹಂದಿಗನೂರ, ಪುರದಾಳ, ಎನ್.ಜೆ.ವಾಯ್ ವಿದ್ಯುತ್ ಮಾರ್ಗದ ಮೇಲೆ ಬರುವ ಗುಬ್ಬೇವಾಡ, ಬಸ್ತಿಹಾಳ, ಹಡಗಿನಾಳ, ಹಾಗೂ ಕಣ್ಣಗುಟ್ಟಿಹಾಳ, ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯೆಯ ಉಂಟಾಗುವುದರಿಂದ ವಿದ್ಯುತ್ ಗ್ರಾಹಕರು ಸಹಕರಿಸಬೇಕು.
ಮುಂದುವರೆದು, ಪುರದಾಳ ಕೆರಿ ವಿದ್ಯುತ್ ಮಾರ್ಗವನ್ನು ಬೆಳಿಗ್ಗೆ ೦೯:೦೦ ಗಂಟೆಯಿಂದ ಮಧ್ಯಾಹ್ನ ೧೨:೦೦ ಗಂಟೆಯವರೆಗೆ ಹಾಗೂ ಮಧ್ಯಾಹ್ನ ೦೩:೦೦ ಗಂಟೆಯಿAದ ೦೬:೦೦ ಗಂಟೆಯವರೆಗೆ, ಗುಬ್ಬೇವಾಡ ಐಪಿ ವಿದ್ಯುತ್ ಮಾರ್ಗವನ್ನು ಬೆಳಿಗ್ಗೆ ೦೬:೦೦ ಗಂಟೆಯಿಂದ ೦೯:೦೦ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ಸಮಯ ಬದಲಾವಣೆ ಮಾಡಿ ಸದರಿ ದಿನಾಂಕಗಳಂದು ವಿದ್ಯುತ್ ಸರಬರಾಜು ಮಾಡಲಾಗುವದು. ಆದ್ದರಿಂದ ಸದರಿ ಮಾರ್ಗಗಳ ಮೇಲೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
