ಸರ್ವರಿಗೂ ಸಮ ಬಾಳು-ಸಮ ಪಾಲು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸರ್ವರಿಗೂ ಸಮ ಬಾಳು ಸಮ ಪಾಲು ಎನ್ನುವ ಧ್ಯೇಯ ವಾಕ್ಯವನ್ನು ಅಕ್ಷರ ಸಹ ತಮ್ಮ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನುಷ್ಠಾನಕ್ಕೆ ತಂದಿದ್ದಾರೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ತಿಳಿಸಿದ್ದಾರೆ.
ನಾಡಿನ ಸಮಸ್ತ ಜನತೆಯ ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಬಜೆಟ್ ಇದಾಗಿದ್ದು ಅವರ ದೂರದೃಷ್ಟಿತ್ವ ಮತ್ತು ಬದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ. ಆದರೆ ಮಕ್ಕಳು ನಾಡಿನ ನಾಳಿನ ಭವಿಷ್ಯದ ಭರವಸೆಯ ಆಶಾ ಕಿರಣಗಳಾಗಿರುವುದರಿಂದ ಮುಂಬರುವ ದಿನಗಳಲ್ಲಿ ಮಕ್ಕಳಿಗಾಗಿಯೇ” ಮಕ್ಕಳ ಬಜೆಟ್”ಮಂಡಿಸುವಂತಾಗಲಿ ಎನ್ನುವದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅದ್ಧ್ಯಕ್ಷನಾಗಿ ನನ್ನ ಮತ್ತು ಈ ನಾಡಿನ ಮಕ್ಕಳ ಸದಾಶಯವಾಗಿದೆ. ನಾಡಿನ ಮಕ್ಕಳ ಈ ಬೇಡಿಕೆಯನ್ನು ತಾಯಿ ಹೃದಯದ ಮುಖ್ಯಮಂತ್ರಿ ಈಡೇರಿಸುತ್ತಾರೆಂಬ ನಂಬಿಕೆ ನನಗಿದೆ ಎಂದು ಸಂಗಮೇಶ ಬಬಲೇಶ್ವರ ತಿಳಿಸಿದ್ದಾರೆ.

