ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ೧೨ ವರ್ಷಗಳ ಹಿಂದೆ ಹೊಸ ತಾಲುಕು ಕೇಂದ್ರಗಳನ್ನು ರಚನೆ ಮಾಡಿ ಕಾರ್ಯಾರಂಭ ಮಾಡಿರುವ ಸರಕಾರ ತಾಲೂಕಾ ಆಡಳಿತದ ಎಲ್ಲ ಕಚೇರಿಗಳು ಹೊಸ ತಾಲೂಕು ಕೇಂದ್ರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತಮ್ಮ ಕಾರ್ಯವ್ಯಾಪ್ತಿಯನ್ನು ಪ್ರಾರಂಭಿಸಲು ಅನುವು ಮಾಡಿಕೊಡದೆ ಇರುವದು ಸರಕಾರ ಜನರಿಗೆ ಇತ್ತ ಅನುಕೂಲ ಮಾಡದೇ ಅತ್ತ ಅನುಕೂಲ ಮಾಡಿದ್ದೇವೆ ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವದು ಎಷ್ಟು ಸರಿ ಎಂದು ಜನರು ಪ್ರಶ್ನಿಸುವಂತಾಗಿದೆ.
ಅಧಿಕಾರ ವಿಕೇಂಧ್ರಿಕರಣದ ಮೂಲ ಮಂತ್ರ ಜನರ ಬಳಿ ಆಢಳಿತ ವ್ಯವಸ್ಥೆಯನ್ನು ತರುವದು ಆದರೆ ಸರಕಾರ ರಚಣೆ ಮಾಡಿರುವ ಹೊಸ ತಾಲೂಕು ಕೇಂದ್ರಗಳಲ್ಲಿ ಕೆಲವೇ ಕೆಲವು ತಾಲೂಕಾ ಆಡಳಿತದ ಕಚೇರಿಗಳನ್ನು ಮಂಜೂರು ಮಾಡಿದ್ದು ಜನರಿಗೆ ಹತ್ತಿರವಾಗುವ ಕಂದಾಯ ಇಲಾಖೆಯ ವಿಭಜನೆ ಅಂದರೆ ಉಪನೊಂದಣಿ ಇಲಾಖೆ, ಎಡಿಎಲ್‌ಆರ ಕಚೇರಿ, ಭೂ ಧಾಖಲೆಗಳ ಪಡಸಾಲೆ ಹಾಗೂ ರೆಕಾರ್ಡ ರೂಮ್, ಶಿಕ್ಷಣಾಧಿಕಾರಿಗಳ ಕಚೇರಿ, ನ್ಯಾಯಾಲಯಗಳ ಸಂಕೀರ್ಣ, ಕೃಷಿ ತೋಟಗಾರಿಕೆ, ಅರಣ್ಯ, ಸಮಾಜಕಲ್ಯಾಣ, ಶಿಸು ಅಭಿವೃದ್ದಿ ಇಲಾಖೆ, ಇನ್ನೀತರ ತಾಲೂಕಾ ಆಡಳಿತದ ಕಚೇರಿಗಳು ತೆರೆಯಲು ಮತ್ತು ಹುದ್ದೆ ಸಹಿತ ಮಂಜೂರು ಮಾಡಲು ಮೀನಾಮೇಷ ಎನಿಸುತ್ತಿರುವದು ಯಾವ ಪುರುಷಾರ್ಥಕ್ಕೆ ಎನ್ನುವಂತಾಗಿದೆ.
ತಾಲೂಕಾ ಹೋರಾಟಗಾರರು ಪ್ರತಿವರ್ಷ ಬಜೆಟ ಮಂಡನೆ ವೇಳೆ ಒಂದು ಆಶಾ ಭಾವನೆಯನ್ನು ಹೊಂದಿರುತ್ತಾರೆ ಹೊಸ ತಾಲೂಕು ಕೇಂಧ್ರಗಳಲ್ಲಿ ತಾಲೂಕಾ ಆಡಳಿತದ ೩೩ ಕಚೇರಿಗಳು ಕಾರ್ಯಾರಂಭ ಮಾಡುತ್ತವೆ ಎನ್ನುವದನ್ನು ಕಳೆದ ೧೦-೧೨ ವರ್ಷಗಳಿಂದ ಆಡಳಿತ ನಡೆಸುವ ಸರಕಾರಗಳು ಸಾರ್ವಜನಿಕರ ಬಾಯಿಗೆ ತುಪ್ಪ ಸವರುತ್ತಿವೆ ಅಲ್ಲದೇ ನಿರಾಶೆಯನ್ನೇ ಮೂಡಿಸುತ್ತಿವೆ ಸಾರ್ವಜನಿಕರು ತಮ್ಮ ಹಲವಾರು ಜ್ವಲಂತ ಸಮಸ್ಯೆಗಳನ್ನು ಕಚೇರಿ ಕೆಲಸಗಳನ್ನು ಮಾಡಿಸಿಕೊಳ್ಳಲು ಇದುವರೆಗೂ ಮೂಲ ತಾಲೂಕು ಕೇಂದ್ರಕ್ಕೆ ತೆರಳಿಯೇ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಒದಗಿದೆ ಇದರಿಂದ ಜನರಿಗೆ ಸಮಯ ವ್ಯರ್ಥವಾಗುವದು ಕೆಲಸ ವಿಳಂಬವಾಗುವದು ಇದರಿಂದ ಜನರು ಬೇಸತ್ತು ಮಧ್ಯವರ್ತಿಗಳ ದುಂಬಾಲು ಬೀಳುವಂತಾಗಿದ್ದು ಈ ಸಲದ ಬಜೆಟ್‌ನಲ್ಲಿಯಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವಕಾಶ ಒದಗಿಸಿಕೊಡುವರೇ ಎಂದು ಜನರು ಕಾತುರದಿಂದ ಕಾಯುತ್ತಿದ್ದಾರೆ.
ಬ್ರಷ್ಟಾಚಾರ ಮುಕ್ತ ಸರಕಾರಿ ಕೆಲಸ ಸಾಗಬೇಕಾದರೆ ಆಡಳಿತ ವ್ಯವಸ್ಥೆಯಲ್ಲಿ ಸುಲಲಿತ ಕಾರ್ಯಗಳು ನಡೆಯಲು ಆಡಳಿತ ವ್ಯವಸ್ಥೇಯ ವಿಭಜನೆ ಮಾಡಿರುವ ಸರಕಾರ ಹೊಸ ತಾಲೂಕು ಕೇಂದ್ರಗಳಲ್ಲಿ ಎಲ್ಲ ಕಚೇರಿಗಳು ಕಾರ್ಯಾರಂಬವಾದಾಗ ಮಾತ್ರ ಸರಳಿಕರಣದ ಮೂಲಕ ಜನರ ಹತ್ತಿರಕ್ಕೆ ಸರಕಾರ ಬಂದಂತಾಗಿ ಆಡಳಿತ ವ್ಯವಸ್ಥೆ ಸುಗಮವಾಗಿ ಸರ್ವರಿಗೂ ಸರ್ವರೀತಿಯಿಂದಲೂ ಅನುಕೂಲಕರವಾಗುವದು. ಎನ್ನುವದು ಜನರ ಅಭಿಪ್ರಾಯವಾಗಿದ್ದು ಇದಕ್ಕೆ ಜನಪ್ರತಿನಿಧಿಗಳಾದ ಶಾಸಕರು, ಸಚಿವರು, ನಿಸ್ವಾರ್ಥ ಮನೋಭಾವದಿಂದ ತಾವು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಬರುವ ಹೊಸ ತಾಲೂಕು ಕೇಂದ್ರಗಳಲ್ಲಿ ತಾಲೂಕು ಆಡಳಿತದ ಕಚೇರಿಗಳನ್ನು ಪ್ರಾರಂಭವಾಗಲು ಅನುವು ಮಾಡಿಕೊಡಬೇಕು ಇಲ್ಲದಿದ್ದರೆ ಜನರು ಹೋರಾಟ ಮಾಡಿ ತಾಲುಕು ಕೇಂಧ್ರಗಳನ್ನು ಪಡೆದಂತೆ ಕಚೇರಿಗಳನ್ನು ಮಂಜೂರು ಮಾಡಿಸುವ ಹಂತಕ್ಕೆ ಬಂದರೂ ಬರಬಹುದು.
“ಈ ಬಾರಿಯ ಆಯವ್ಯಯದ ಮುಂಗಡಪತ್ರದಲ್ಲಿ ಹೊಸತಾಲೂಕು ಕೇಂದ್ರಗಳಲ್ಲಿ ತಾಲೂಕು ಆಡಳಿತದ ಎಲ್ಲ ಇಲಾಖೆಗಳನ್ನು ಹುದ್ದೆ ಸಮೇತ ಕಟ್ಟಡ ಕಾಮಗಾರಿಗಾಗಿ ಮಂಜೂರು ಮಾಡಿ ಅನುದಾನ ಮೀಸಲಿಡಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವದು.”
– ಈರಣಗೌಡ ಬ ಕೋಮಾರ
ನೂತನ ೪೩ ತಾಲೂಕು ರಚನಾ ಹೋರಾಟ ಸಮೀತಿ ರಾಜ್ಯ ಕಾರ್ಯದರ್ಶಿ

