Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಬೇಸಿಗೆಯ ಮುನ್ನವೇ ನೀರಿಲ್ಲದೇ ಒಣಗಿ ನಿಂತಿರುವ ಗ್ರಾಮದ ಕೆರೆಗೆ ನೀರು ಹರಿಸಿ ಜನ, ಜಾನುವಾರಗಳಿಗೆ ಅನುಕೂಲ ಕಲ್ಪಿಸುವಂತೆ ಹುಣಶ್ಯಾಳ ಗ್ರಾಮಸ್ಥರು ಆಗ್ರಹಿಸಿದ್ದಾರೆ.ತಾಲ್ಲೂಕಿನ ಹುಣಶ್ಯಾಳ ಗ್ರಾಮದ ಕೆರೆ ಬರುವ ಬೇಸಿಗೆಯ ಮುನ್ನವೇ ಹನಿ ನೀರು ಇಲ್ಲದೇ ಒಣಗಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಪ್ರತಿ ವರ್ಷ ಬೇಸಿಗೆಯ ಬಿಸಿಲು ಹೆಚ್ಚಾಗುತ್ತಲೇ ಇದ್ದು, ಬರುವ ಬೇಸಿಗೆಯ ಪ್ರಖರತೆ ಈಗಲೇ ಆರಂಭಗೊಂಡಿದೆ. ಒಂದು ವೇಳೆ ಬಿಸಿಲು ಹೆಚ್ಚಾದಲ್ಲಿ ಗ್ರಾಮದಲ್ಲಿ ನೀರಿನ ತಾಪತ್ರಯ ತಪ್ಪಿದ್ದಲ್ಲ. ಆದ್ದರಿಂದ ಬೇಸಿಗೆಯ ಆರಂಭಕ್ಕೆ ಮುನ್ನವೇ ಕೆರೆಗೆ ನೀರು ಹರಿಸುವುದು ಅಗತ್ಯವಾಗಿದೆ. ಈ ಬಗ್ಗೆ ಗ್ರಾಮದ ಯುವಧುರೀಣ ಮೈನೂದ್ಧಿನ್ ಬಾಗವಾನ ಹಾಗೂ ಶಾಂತಗೌಡ ಕೋಟಿಖಾನಿ ಮಾತನಾಡಿ, ನಮ್ಮೂರಿನ ಕೆರೆ ಬೂದಿಹಾಳ ಪೀರಾಪೂರ ಏತ ನೀರಾವರಿ ಯೋಜನೆಯ ಪೈಪ ಲೈನ್‌ನಿಂದ ಕೇವಲ ಒಂದು ಕಿಲೋಮೀಟರ್ ಅಂತರದಲ್ಲಿದೆ. ರಾಂಪೂರ ಕ್ರಾಸ್ ಹತ್ತಿರ ವಾಲ್ ಅಳವಡಿಸುವುದರ ಮೂಲಕ ಕೆರೆಗೆ ನೀರು ಪೂರೈಸಲು ಅವಕಾಶವಿದೆ. ಇದಕ್ಕೆ ಕೆಬಿಜೆಎನ್‌ಎಲ್ ಅಧಿಕಾರಿಗಳು ಕ್ರಮವಹಿಸಬೇಕಾಗಿದೆ.೨೦೧೯ರಲ್ಲಿ ಹುಣಶ್ಯಾಳ ಕೆರೆಗೆ ನೀರು ತುಂಬಿಸಲು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ಹಾಗೂ ಹುಬ್ಬಳ್ಳಿ ವಿದ್ಯುತ ಸರಬರಾಜು ಕಂಪನಿ ನಿಯಮಿತ ವತಿಯಿಂದ ಇಂಡಿ ತಾಲೂಕಿನ ಅಗಸನಾಳ ಗ್ರಾಮದಲ್ಲಿ ೩೩ ಕೆ.ವ್ಹಿ ೧೬ ಸಣ್ಣ ನೀರಾವರಿ ಕೆರೆ ತುಂಬುವ ಯೋಜನೆಯ ಏತ ನೀರಾವರಿ ಮುಖ್ಯ ಸ್ಥಾವರಕ್ಕೆ ೩೩ ಕೆ.ವ್ಹಿ ವಿದ್ಯುತ್ ಮಾರ್ಗ ವನ್ನು ಹಾಗೂ ಈಗಾಗಲೇ ಇರುವ ೩೩ ಕೆ.ವ್ಹಿ ಹೊರ್ತಿ ವಿದ್ಯುತ್ ವಿದ್ಯುತ್ ಕೇಂದ್ರದಲ್ಲಿ ಒಂದು ಟರ್ಮಿನಲ್ ಬೇ. ನಿರ್ಮಿಸುವ ಮೂಲಕ ೮.೨೫ ಕಿ.ಮೀ ೩೩ ಕೆವ್ಹಿ ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡಿದೆ.ಶೀಘ್ರದಲ್ಲೇ ಈ ಮಾರ್ಗದಲ್ಲಿ ವಿದ್ಯುಧೀಕರಸಲಾಗುತ್ತಿದ್ದು, ಸಾರ್ವಜನಿಕರು ಹೊರ್ತಿ, ಅಗಸನಾಳ ಗ್ರಾಮಗಳ ವಿವಿಧ ಸರ್ವೆ ನಂಬರ ಮಾರ್ಗಗಳಲ್ಲಿನ ವಿದ್ಯುತ್ ಕಂಬಗಳನ್ನು ಹತ್ತುವುದು, ಕಂಬಗಳ ಮೇಲೆ ಕೊಂಬೆ ಅಥವಾ ಬಳ್ಳಿಗಳನ್ನು ನೆಡುವುದು, ವಿದ್ಯುತ್ ಪ್ರವಹಿಸುವ ವಸ್ತುಗಳನ್ನು ವಿದ್ಯುತ್ ತಂತಿ ಮೇಲೆ ಎಸೆಯುವುದು ಅಥವಾ ದನಕರುಗಳನ್ನು ಕಂಬಗಳಿಗೆ ಕಟ್ಟುವುವುದು ಮಾಡಿರುವುದರಿಂದ ಆಗುವಂತಹ ಅನಾಹುತಗಳಿಗೆ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ಹಾಗೂ ಹುಬ್ಬಳ್ಳಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ “ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ” ಕಾರ್ಯಕ್ರಮದ ಅಂಗವಾಗಿ ಜ.೩೦ರ ಬೆಳಿಗ್ಗೆ ೯ಗಂಟೆಗೆ ಜನಜಾಗೃತಿ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ರ‍್ಯಾಲಿಯು ನಗರದ ಸಿದ್ದೇಶ್ವರ ದೇವಸ್ಥಾನದಿಂದ ಗಾಂಧಿಚೌಕ ಮಾರ್ಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯಕ್ಕೆ ಬಂದು ಮುಕ್ತಾಯವಾಗಲಿದೆ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆಧಾರ ದಾಖಲಾತಿಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಆಧಾರ ಉಸ್ತುವಾರಿ ಸಮಿತಿ ಸಭೆಯಲ್ಲಿ ಚರ್ಚಿಸಿದಂತೆ ಶಾಲೆ/ ಕಾಲೇಜಿನಲ್ಲಿರುವ ೫ರಿಂದ ೧೭ ವರ್ಷ ಪೂರೈಸಿದ ಮಕ್ಕಳ ಆಧಾರ ತಿದ್ದುಪಡಿ (ಶಾಲಾ ದಾಖಲಾತಿಯಂತೆ), ಜೈವಿಕ ಅಪಡೇಟ್ ನ್ನು ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿಯುವುದರಲ್ಲಿ ಮಾಡಿಕೊಳ್ಳಲು ಸೂಚಿಸಿದೆ.ಜಿಲ್ಲೆಯಲ್ಲಿ ೨,೫೦,೩೧೭ ಮಕ್ಕಳಲ್ಲಿ ೫ ರಿಂದ ೭ ವರ್ಷದ ೧,೫೬,೫೮೨ ಮಕ್ಕಳು ಹಾಗೂ ೧೫ ರಿಂದ ೧೭ ವರ್ಷದ ೯೩,೭೩೫ ಮಕ್ಕಳ ಕಡ್ಡಾಯ ಜೈವಿಕ ಅಪಡೇಟ್ ಗೆ ಬಾಕಿ ಇದೆ. ಪಾಲಕರು ಹತ್ತಿರದ ಆಧಾರ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಮಕ್ಕಳ ಕಡ್ಡಾಯ ಜೈವಿಕ ಅಪಡೇಟ್ ಮಾಡಿಕೊಳ್ಳಬಹುದು.೧೦ ವರ್ಷಗಳ ಹಿಂದೆ ಆಧಾರ ಸೃಜಿಸಲಾದ ನಾಗರಿಕರು ತಮ್ಮ ಗುರುತಿನ ಹಾಗೂ ವಿಳಾಸದ ಪುರಾವೆಗಳನ್ನು ಕಾಲೋಚಿತಗೊಳಿಸಲು ಅಪಡೇಟ್ ಮಾಡಿಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ೧,೮೬,೬೭೫ ಆಧಾರ ಸಂಖ್ಯೆಗಳ ಗುರುತಿನ ಹಾಗೂ ವಿಳಾಸದ ಪುರಾವೆಗಳನ್ನು ಅಪಡೇಟ್ ಮಾಡಬೇಕಾದ ಒಟ್ಟು ೧,೮೬,೬೭೫ ಆಧಾರ ಕಾರ್ಡ್ಗಳಿದ್ದು, ಸದರಿ ಸೇವೆಯನ್ನು ಸಾರ್ವಜನಿಕರು ಆಧಾರ ಕೇಂದ್ರಗಳಿಗೆ ಭೇಟಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಕೇಂದ್ರ ಕಾರಾಗೃಹದ ತೋಟದಲ್ಲಿರುವ ಹುಣಸೇ ಹಣ್ಣಿನ ಮರಗಳಲ್ಲಿ ಬಿಟ್ಟಿರುವ ಹಣ್ಣನ್ನು ಫೆ.೫ ರ ಬೆಳಿಗ್ಗೆ ೧೧ಗಂಟೆಗೆ ಬಹಿರಂಗ ಹರಾಜು ಮಾಡಲು ನಿರ್ಧರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೦೮೩೫೨-೨೭೨೦೪೪ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಕೇಂದ್ರ ಕಾರಾಗೃಹ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ ವತಿಯಿಂದ ಫೆ.೧ರಂದು ಮಡಿವಾಳ ಮಾಚಿದೇವ, ಫೆ.೫ ರಂದು ಸವಿತಾ ಮಹರ್ಷಿ ಜಯಂತಿ ಹಾಗೂ ಫೆ.೧೦ರಂದು ಕಾಯಕ ಶರಣರ ಜಯಂತಿ ಕಾರ್ಯಕ್ರಮಗಳನ್ನು ಅತ್ಯಂತ ಅರ್ಥಪೂರ್ಣ ಹಾಗೂ ವ್ಯವಸ್ಥಿತವಾಗಿ ಆಚರಿಸಲು ನಿರ್ಧರಿಸಲಾಯಿತು.ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ, ಫೇಬ್ರವರಿ ೧ರಂದು ಮಡಿವಾಳ ಮಾಚಿದೇವ ಹಾಗೂ ಫೆಬ್ರವರಿ ೧೦ ರಂದು ಕಾಯಕರ ಶರಣರ ಜಯಂತಿ ಕಾರ್ಯಕ್ರಮಗಳನ್ನು ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಮಹನೀಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮವನ್ನು ನಗರದ ರಂಗಮಂದಿರ ದಲ್ಲಿ ಆಯೋಜಿಸಲಾಗಿದೆ.ಬೆಳಿಗ್ಗೆ ೧೦ ಘಂಟೆಗೆ ಸಿದ್ದೇಶ್ವರ ದೇವಸ್ಥಾನದಿಂದ ರಂಗಮಂದಿರದವರೆಗೆ ಮೆರವಣಿಗೆ ಆಯೋಜನೆ ಮಾಡಲಾಗಿದೆ. ನಂತರ ವೇದಿಕೆ ಕಾರ್ಯಕ್ರಮ ಮಾಡುವ ಮೂಲಕ ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಉಪನ್ಯಾಸ ಸಂಗೀತ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಯಿತು.ಜಿಲ್ಲಾಡಳಿತದಿಂದ ಆಚರಿಸಲಾಗುವ ಈ ಎಲ್ಲ ಮಹನಿಯರ ಜಯಂತಿ ದಿನಗಳಂದು, ಜಯಂತಿ ಕಾರ್ಯಕ್ರಮ ಹಾಗೂ ಮೆರವಣಿಗೆ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಸ್ವಚ್ಛತೆ, ಸಮರ್ಪಕ ವಿದ್ಯುತ್…

Read More

ಕಲ್ಪವೃಕ್ಷ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ | ವೀರ ಮಹಾಂತ ಶ್ರೀ ಅಭಿಮತ ಉದಯರಶ್ಮಿ ದಿನಪತ್ರಿಕೆ ಮೋರಟಗಿ: ಇಂದಿನ ಯುವಶಕ್ತಿ ಈ ದೇಶದ ಸಂಪತ್ತು ಭಾರತದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ ಎಂದುಚಿನ್ಮಯಗಿರಿಯ ವೀರ ಮಹಾಂತ ಶಿವಾಚಾರ್ಯ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದ ಕಲ್ಪವೃಕ್ಷ ಪದವಿ ಪೂರ್ವ ಕಾಲೇಜಿನಲ್ಲಿ ರವಿವಾರ ಹಮ್ಮಿಕೊಂಡ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ, ಸಾನಿಧ್ಯ ವಹಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಸರಿಯಾದ ಮಾರ್ಗದಲ್ಲಿ ಕ್ರಮಿಸಿದರೆ ಭಾರತದ ಉನ್ನತಿಗೆ ಒಂದು ಅದ್ಭುತ ಶಕ್ತಿ ಸಿಗಬಹುದು ದಯವಿಟ್ಟು ವೇದಿಕೆ ಮುಖಾಂತರ ಕಳಕಳಿ ಮಾಡಿಕೊಳ್ಳುತ್ತೇನೆ ಮೊಬೈಲ್ ಗಿಳಿಯ ಹಿಂದೆ ಬಿದ್ದು ಹಾಳಾಗಬೇಡಿ ಅವಶ್ಯಕತೆ ಮಾತ್ರ ಮೊಬೈಲ್ ಬಳಕೆ ಮಾಡಿ ಅನಾವಶ್ಯಕ ದೃಶ್ಯಗಳು ವೀಕ್ಷಿಸಿ ಬಂಗಾರದಂತ ವಿದ್ಯಾರ್ಥಿ ಜೀವನ ಹಾಳು ಮಾಡಿಕೊಳ್ಳಬೇಡಿ ನಿಮ್ಮನ್ನೇ ನಂಬಿರುವ ಪಾಲಕರು ನನ್ನ ಮಗ ಡಾಕ್ಟರ್ ಆಗ್ತಾನೆ ಇಂಜಿನಿಯರ್ ಆಗ್ತಾನೆ ಉನ್ನತ ಹುದ್ದೆ ಅಲಂಕರಿಸಿ ನಮ್ಮ ಹೆಸರು ತರುತ್ತಾನೆ ಎಂದು ಕೂಲಿನಾಲಿ ಮಾಡಿ ಶಿಕ್ಷಣ ಕೊಡಿಸುತಿದ್ದಾರೆ ಅವರ ಆಶೆಗೆ…

Read More

ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ತಪ್ಪಿನಿಂದ ಮದ್ಯಂತರ ತೊಗರಿ ಪರಿಹಾರದಿಂದ ವಂಚಿತರಾದ ರೈತರು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ ಬೆಳೆಗೆ ವಿಮಾ ಕಂಪನಿಯಿಂದ ಮದ್ಯಂತರ ಪರಿಹಾರ ಬರದೆ ವಿಜಯಪುರ ಜಿಲ್ಲೆಯ ರೈತರು ವಂಚಿತರಾಗಿದ್ದಾರೆ ಇದಕ್ಕೆ ಮೂಲ ಕಾರಣ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಸಕಾಲಕ್ಕೆ ವರದಿ ಕಳುಹಿಸದ ಕಾರಣ ರೈತರಿಗೆ ಮದ್ಯಂತರ ಪರಿಹಾರ ಬರದೆ ವಂಚಿತರನ್ನಾಗಿ ಮಾಡಿದ್ದಾರೆ ಮತ್ತು ಅನಧಿಕೃತವಾಗಿ ರಜೆ ಪಡೆಯದೆ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ನಿಯಮ ಬಾಹಿರವಾಗಿ ರಜೆ ಹೋಗಿರುವುದರಿಂದ ಇವರನ್ನು ಸೇವೆಯಿಂದ ಅಮಾನತ್ತು ಮಾಡಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಮಂಗಳವಾರದಂದು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಪತ್ರಿಕಾ ಗೊಷ್ಠಿ ಹಮ್ಮಿಕೊಂಡ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ೧,೨೬,೦೦೦ ಸಾವಿರ ರೈತರು ವಿಮೆ ಮಾಡಿಸಿದ್ದಾರೆ ೯೦% ರಷ್ಟು ಬೆಳೆ ಹಾನಿಯಾಗಿದೆ, ಹವಾಮಾನದ ವೈಪರಿತ್ಯದಿಂದಾಗಿ ಹಾಗೂ ಜಿ.ಆರ್.ಜಿ ೧೫೨ ಹಾಗೂ ಜಿ.ಆರ್.ಜಿ ೮೧೧…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶ್ರೀ ಪುರಂದರ ದಾಸರ ಆರಾಧನಾ ನಿಮಿತ್ಯ ಭಜನಾ ಮಂಡಳಿಗಳ ಸ್ಪರ್ಧೆಪುರಂದರ ಗಾನವೈಭವ ೨ ದಿನಗಳ ವಿಜೃಂಭಣೆಯಿಂದ ಜರುಗಿತು. ಜ.೨೫ ಮತ್ತು ೨೬ ರಂದು ದೀವಟಗೇರಿ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಸನ್ನಿಧಾನದ ಅಡಿಯಲ್ಲಿ ಹಾಗೂ ತಿರುಪತಿ ತಿರುಮಲ ದಾಸ ಸಾಹಿತ್ಯ ಪ್ರೊಜೆಕ್ಟ್ ಇವರ ಸಹಯೋಗದಲ್ಲಿ ಭಜನಾ ಮಂಡಳಿಗಳ ಸ್ಪರ್ಧೆ ವಿಜೃಂಭಣೆಯಿಂದ ನೇರವೇರಿತು.೨೦ ಕ್ಕೂ ಹೆಚ್ಚು ಭಜನಾ ಮಂಡಳಿಗಳು ಭಾಗವಹಿಸದ್ದವು. ಸಾವಿರಾರು ಸಂಖ್ಯೆಯಲ್ಲಿ ಮಾತೆಯರು ಶ್ರೀಪುರಂದರ ದಾಸರ ಕೃತಿಗಳನ್ನು ಹಾಡುವ ಮೂಲಕ ಅವರನ್ನು ನೆನೆಸಿಕೊಂಡರು.ಕಾರ್ಯಕ್ರಮದ ಸಮಾರೋಪದಲ್ಲಿ ಭಾಗವಹಿಸಿ ಪಂಡಿತರಾದ ಮಧ್ವಾಚಾರ್ಯ ಮೊಖಾಶಿ ಮಾತನಾಡುತ್ತಾ, ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠನಾಗಿರತಕ್ಕಂತಹ ಪರಮ ಸವೋತ್ತಮನಾಗಿರತಕ್ಕಂತಹ ನಾರಾಯಣನು ಸಾಕ್ಷಾತ್ ಲಕ್ಷ್ಮೀದೇವಿ ಮೊದಲು ದಾಸಿ ಆಗಿದ್ದಾರೆೆ. ಆಮೇಲೆ ಶ್ರೀ ಮುಖ್ಯಪ್ರಾಣದೇವರು ಶ್ರೀ ರಾಮದೇವರು ದಾಸರಿಗೆ ಜಗತ್ತಿಗೆ ದಾಸತ್ವ ಹೇಗೆ ಮಾಡಬೇಕೆಂದು ತೋರಿಸಿಕೊಟ್ಟಿದ್ದಾರೆ. ಮುಂದೆ ವ್ಯಾಸರಾಯರ ಕಾಲದಲ್ಲಿ ಪುರಂದರದಾಸರನ್ನುವಂತಹ ಶಿರೋರತ್ನವನ್ನು ಪಡೆದಂತಹ ನಾವೆಲ್ಲರೂ. ಧನ್ಯರು. ಅಂತಹ ಶ್ರೇಷ್ಠರ ದಾಸರ ಆರಾಧನೆ ಬಗ್ಗೆ ಮಾತನಾಡಿದರು. ಮುಂದಿನ ದಿನಗಳಲ್ಲಿ ಇನ್ನು ಮಹತ್ವದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎಲ್ಲರಿಗೂ ಸರ್ಕಾರಿ ನೌಕರಿ ಕೊಡಿಸಲು ಸಾಧ್ಯವಿಲ್ಲ. ಹಾಗಾಗಿ ಸ್ವ ಉದ್ಯೋಗ ಮಾಡುವುದರತ್ತ ಯುವಕರು ಪ್ರಯತ್ನಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಕುಲಕರ್ಣಿ ಆಕ್ಸಿಜನ್ ಪ್ಲಾಂಟ್ ನಲ್ಲಿ ನಿರ್ಮಿಸಲಾಗಿರುವ ನೂತನ ಛಿo೨ ಕಾರ್ಬನ್ ಡೈ ಆಕ್ಸೈಡ್ ಘಟಕ ಉದ್ಘಾಟಿಸಿ ಮಾತನಾಡಿದ ಅವರು ಕುಲಕರ್ಣಿ ಆಕ್ಸಿಜನ್ ಪ್ಲಾಂಟ್ ಕೋವಿಡ್ ಸಂದರ್ಭದಲ್ಲಿ ಬಹಳಷ್ಟು ಶ್ರಮ ಹಾಕಿದಿದೆ. ಆರೋಗ್ಯ್ ತುರ್ತು ಪರಸ್ಥಿತಿ ಇದ್ದಾಗ ಜಿಲ್ಲೆಯಲ್ಲಿ ದೊಡ್ಡ ಇಂಡಸ್ಟ್ರಿ ಪ್ರಾರಂಭಿಸಲು ಸಾಧ್ಯವಿಲ್ಲ. ಕಾರಣ ಕಾರ್ಖಾನೆಗಳಿಗೆ ಕಚ್ಚಾ ಸಾಮಗ್ರಿಗಳು ಈ ಭಾಗದಲ್ಲಿ ಸಿಗುವುದಿಲ್ಲ. ಹಾಗಾಗಿ ವಿಜಯಪುರದಲ್ಲಿ ಕೃಷಿಗೆ ಪೂರಕವಾಗಿರುವಂತಹ ಕಾರ್ಖಾನೆಗಳನ್ನು ಪ್ರಾರಂಭಿಸಬೇಕಿದೆ. ಯುವಕರು ಸ್ವ ಉದ್ಯೋಗ ಮಾಡಬೇಕು. ಸರ್ಕಾರ ಯುವಕರಿಗಾಗಿಯೇ ಸಾಲ ಸೌಲಭ್ಯ ಒದಗಿಸುತ್ತಿದೆ. ಆ ಸೌಲಭ್ಯ ಬಳಸಿಕೊಂಡು ಸ್ವಾವಲಂಬಿ ಜೀವನ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.ಕುಲಕರ್ಣಿ ಆಕ್ಸಿಜನ್ ಅಧ್ಯಕ್ಷ ವಿ.ಬಿ.ಕುಲಕರ್ಣಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಮಹತ್ವ ಎಲ್ಲರಿಗೂ ಅರ್ಥವಾಗಿದೆ. ಅo೨ ಕಾರ್ಬನ್ ಡೈ ಆಕ್ಸೈಡ್ ಉತ್ಪಾದನೆ ಕೇವಲ ಹುಬ್ಬಳ್ಳಿ…

Read More