ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹೆಣ್ಣು ಸಮಾಜದ ಕಣ್ಣು. ಸಮಾಜಕ್ಕೆ ಮಹಿಳೆಯರ ಕೊಡುಗೆ ಸಾಕಷ್ಟಿದೆ. ಪ್ರತಿಯೊಬ್ಬರೂ ಮಹಿಳೆಯರನ್ನು ಗೌರವದಿಂದ ಕಾಣಬೇಕು ಎಂದು ವಿಜಯಪುರ ನ್ಯಾಯವಾದಿಗಳ ಸಂಘದ ಜಂಟಿ ಕಾರ್ಯದರ್ಶಿಗಳು ಹಾಗೂ ಹಿರಿಯ ವಕೀಲ ಉಸ್ಮಾನ ಭಾಷಾ ಆಲಗೂರ ಹೇಳಿದರು.
ವಿಜಯಪುರದ ಅಂಜುಮನ್ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇದ್ದೇ ಇರುತ್ತಾಳೆ. ತಾಯಿಯಾಗಿ, ಹೆಂಡತಿಯಾಗಿ, ಅಕ್ಕ ತಂಗಿಯಾಗಿ ಅಥವಾ ಸ್ನೇಹಿತೆಯಾಗಿ ಪುರುಷರ ಏಳ್ಗಿಗೆಗಾಗಿ ಶ್ರಮಿಸುವ ಮಹಿಳೆಯರನ್ನು ನಾವು ಗೌರವಿಸಬೇಕು. ಹೆಣ್ಣಿನ ಮೇಲಾಗುತ್ತಿರುವ ಶೋಷಣೆಗಳು ನಮ್ಮ ಅರಿವಿಗೆ ಬಂದಾಗ ಕೂಡಲೇ ತಡೆಗಟ್ಟುವವರಾಗಬೇಕು. ಅಂದಾಗ ಮಾತ್ರ ಬಲಿಷ್ಠ ಭಾರತ ನಿರ್ಮಿಸಲು ಸಾಧ್ಯ ಎಂದರು.
ಬಿ.ಎಚ್.ಅವಟಿ ಪ್ರಸ್ತಾವಿಕವಾಗಿ ಮಾತನಾಡಿದರು.
ಶಾರದಾಮಣಿ ಹುನಶ್ಯಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಿಲ್ಪಾ ಭಸ್ಮೆ, ಡಾ.ದಿಲಶಾದ ನದಾಫ, ನಾಹೀದಾ ಅಂಜುಮ ಬಗಲಿ, ಆಸ್ಮಾ ಜಂಬಗಿ, ನ್ಯಾಯವಾದಿಗಳಾದ ಮುತ್ತು ಕಾಳೆ, ಅಬ್ದುಲ್ ನದಾಫ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.