ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಜಾತಿ-ಜಾತಿಗಳ ನಡುವಿನ ವೈಷಮ್ಯ ಮೀರಿ ಬೆಳೆದ ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸಂದೇಶ ಕೊಟ್ಟವರು ರೇಣುಕಾಚಾರ್ಯರು ಎಂದು ಬಸಯ್ಯ ಘಾಳಿಮಠ ಅವರು ಹೇಳಿದ್ದರು ಪಟ್ಟಣದ ತಾಲೂಕಾ ದಂಡಾಧಿಕಾರಿಗಳ ಕಾರ್ಯಲಯದಲ್ಲಿ ಹಮ್ಮಿಕೊಂಡಿದ್ದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು
ಆಲಮೇಲ ತಾಲೂಕಾ ದಂಡಾದಿಕಾರಿಗಳಾದ ವಿಜಯಕುಮಾರ ಮಾತನಾಡಿ ಎಲ್ಲ ಧರ್ಮದವರು ಸಾಮರಸ್ಯದಿಂದ ಬದುಕಬೇಕು ಎಂದು ಹೇಳಿಕೊಟ್ಟವರು ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ಎಲ್ಲರೂ ನಡೆಯೋಣ ಎಂದು ಹೇಳಿದರು
ಮುಖಂಡರಾದ ಶ್ರೀಶೈಲ ಮಠಪತಿ ಮಾತನಾಡಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಸಾರಿದವರು ರೇಣುಕಾಚಾರ್ಯರು ಸಾರಿದ್ದಾರೆ ಎಂದರು
ರೇಣುಕಾಚಾರ್ಯ ಪೋಟೋ ಪೂಜೆಯನ್ನು ಆಲಮೇಲ ಹೀರೇಮಠದ ಪೂಜ್ಯರಾದ ಶ್ರೀ ವಿರುಪಾಕ್ಷöಯ್ಯ ಹೀರೇಮಠ ಅವರು ನೇರವೇರಿಸಿದ್ದರು
ಈ ಕಾರ್ಯಕ್ರಮದಲ್ಲಿ ಮುಖಂಡರಾದ ಪ್ರಭು ವಾಲಿಕಾರ, ಮಲ್ಲು ಅಚಲೇರಿ, ವಿಶ್ವನಾಥ ಹೀರೇಮಠ, ಸಿದ್ದು ಮುಗಳಿ, ಈರಯ್ಯ ಮಠ, ಪ್ರಭುಗೌಡ ಪಾಟೀಲ, ಚನ್ನಯ್ಯ ಅಳೋಳ್ಳಿಮಠ, ರುದ್ರುಸ್ವಾಮಿ, ಸಿದಯ್ಯ ಮಠ, ಸಿದ್ದಪ್ಪ ಕುಂಬಾರ, ಕಾರ್ಯಲಯದ ಸಿಬ್ಬಂದಿಗಳು ಇದ್ದರು.