ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಹೋಳಿ ಹಬ್ಬವನ್ನು ಶಾಂತಿ ಮತ್ತು ಸೌಹಾರ್ಧಯುತವಾಗಿ ಯಾರಿಗೂ ತೊಂದರೆ ನೀಡದೇ ಆಚರಿಸಬೇಕು ಎಂದು ಸಿಪಿಐ ಮೊಹಮ್ಮದ ಫಸಿಯುದ್ಧೀನ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಶಾಂತಿ ಸಭೆ ನಡೆಸಿ ಅವರು ಮಾತನಾಡಿದರು.
ದೇಶದ ವಿಜಯದ ಸಂಕೇತವಾದ ಹೋಲಿ ಹಬ್ಬವನ್ನು ಎಲ್ಲ ಸಮಾದವರು ಒಂದಾಗಿ ಆಚರಿಸಿದರೆ ಯಾವುದೇ ತಪ್ಪಿಲ್ಲ. ಆದಷ್ಟು ಬೇಗ ಬಣ್ಣದಾಟವನ್ನು ಅಂತ್ಯಗೊಳಿಸಿ ಬೇರೆ ಕಾರ್ಯಕ್ರಮಗಳಿಗೆ ವ್ಯಾಪಾರಸ್ಥರಿಗೆ ಅವಕಾಶ ಕಲ್ಪಿಸಿ ಕೊಡಬೇಕು ಎಂದರು.
ಪಿಎಸ್‌ಐ ಸಂಜಯ ತಿಪರೆಡ್ಡಿ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಹೋರಾಟಗಾರ ಬಸಯ್ಯ ನಂದಿಕೇಶ್ವರಮಠ, ಬೋವಿ ಸಮಾಜದ ಮಾಜಿ ಅಧ್ಯಕ್ಷ ಪರಶುರಾಮ ನಾಲತವಾಡ, ಪ್ರಮುಖರಾದ ರಾಜಶೇಖ ಹೊಳಿ, ರಫೀಕ ಶಿರೋಳ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿದರು.
ಸಂಗಣ್ಣ ಮೇಲಿನಮನಿ, ಹುಸೇನ ಮುಲ್ಲಾ, ಸದಾಶಿವ ಮಠ, ಶರಣು ಚಲವಾದಿ, ಸಂಜು ಬಾಗೇವಾಡಿ, ರವೀಂದ್ರ ಬಿರಾದಾರ, ಸಂತೋಷ ಬಾದರಬಂಡಿ, ಬಲಭೀಮ ನಾಯಕಮಕ್ಕಳ, ಶಿವಾಜಿ ಬಿಜಾಪೂರ, ಉದಯಸಿಂಗ್ ರಾಯಚೂರ ಸೇರಿದಂತೆ ಮತ್ತೀತರರು ಇದ್ದರು.