Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆನೆಕಾಲು ರೋಗ ತಡೆಗೆ ಡಿ.ಈ.ಸಿ ಮಾತ್ರೆ ನುಂಗುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿ, ಜಾಗೃತಿ ಮೂಡಿಸುವ ಕಾರ್ಯ ಸಂಬಂಧಿಸಿದ್ದ ಇಲಾಖೆಗಳು ಯಶಸ್ವಿಯಾಗಿ ಮಾಡಬೇಕೆಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.ಫೆ.೧೦ ರಿಂದ ಸಿಂದಗಿ ಹಾಗೂ ಮುದ್ದೇಬಿಹಾಳ ತಾಲೂಕಿನಲ್ಲಿ ಸಾಮೂಹಿಕ ಆನೆಕಾಲು ರೋಗದ ಔಷದ ನುಂಗಿಸುವ ಕಾರ್ಯಕ್ರಮದ ಕುರಿತು ಗುರುವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಆಯೋಜಿಸಿದ ಆರೋಗ್ಯ ಇಲಾಖೆಯ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಆನೇಕಾಲು ರೋಗ, ವೃಷಣಬಾವು ರೋಗಗಳ ಲಕ್ಷಣಗಳ, ಹರುಡಿವಿಕೆ, ತಡೆಗಟ್ಟುವಿಕೆ ಮತ್ತು ಮುಂಜಾಗ್ರತೆ ಕ್ರಮವಾಗಿ ಮಾತ್ರೆಗಳನ್ನು ಸೇವಿಸುವಂತೆ ಸಾರ್ವಜನಿಕರಿಗೆ ಮನವರಿಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಅವರು ಹೇಳಿದರು.ಈ ಕಾರ್ಯಕ್ರಮಕ್ಕೆ ಸಂಬಂದಿಸಿದಂತೆ ಜಿಲ್ಲಾ ಮಟ್ಟದ ಒಬ್ಬ ನೋಡಲ್ ಅಧಿಕಾರಿಯನ್ನು ಗುರುತಿಸಿ, ಅಧಿಕಾರಿಯು ತಮ್ಮ ಅಧೀನ ಕಾರ್ಯಾಲಯಗಳಿಗೆ ಅವಶ್ಯಕ ಅಗತ್ಯತೆಗಳನ್ನು ಪೂರೈಸುವಂತೆ ನಿರ್ದೇಶನಗಳನ್ನು ನಿಡಬೇಕು. ಆರೋಗ್ಯ ಇಲಾಖೆಯು ಪ್ರಾ.ಆ. ಕೇಂದ್ರ, ತಾಲೂಕು ಮಟ್ಟದಲ್ಲಿ ಕೈಗೊಳ್ಳವ ಪೂರ್ವಬಾವಿ ಮತ್ತು ಎಂಡಿಎ ಸಮಯದಲ್ಲಿ ಭಾಗವಹಿಸಿ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕಿನ ಇಂಗಳಗಿ- ಚಟ್ಟರಕಿ ಗ್ರಾಮಗಳ ಮಧ್ಯೆದಲ್ಲಿಯ ಜಮೀನು ರಸ್ತೆ ದೊರಕಿಸಿಕೊಡಲು ಆಗ್ರಹಿಸಿ ಇಂಗಳಗಿ ಗ್ರಾಮಸ್ಥರು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಮಾಡಿದರು.ಪಟ್ಟಣದ ತಹಶೀಲ್ದಾರ ಕಚೇರಿಗೆ ಶುಕ್ರವಾರ ಆಗಮಿಸಿದ ರೈತರು ತಮ್ಮ ಗ್ರಾಮದಿಂದ ಚಟ್ಟರಕಿಗೆ ತೆರಳುವ ಹಾಗೂ ಸುಮಾರು ೧೫೦ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಪುನಃ ದೊರಕಿಸಿಕೊಡಲು ಆಗ್ರಹಿಸಿದರು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಬೆಳಗಾವಿ ವಿಭಾಗೀಯ ಸಂಚಾಲಕ ರಾವುತ ತಳಕೇರಿ ಮಾತನಾಡಿ, ತಾಲ್ಲೂಕಿನಲ್ಲಿ ರೈತರೇ ರೈತರಿಗೆ ಸಹಕಾರ ನೀಡುತ್ತೀಲ್ಲ. ಈಗ ಇಂಗಳಗಿ ಗ್ರಾಮದ ರೈತರೊಬ್ಬರು ತಮ್ಮ ಜಮೀನುಗಳ ಮೂಲಕ ತೆರಳುವ ರಸ್ತೆಯನ್ನು ಬಂದ್ ಮಾಡಿ ಯಾರು ತೆರಳದಂತೆ ಮಾಡಿದ್ದಾರೆ. ಈ ರಸ್ತೆ ಸಾಕಷ್ಟು ವರ್ಷಗಳಿಂದ ಬಳಕೆಯಲ್ಲಿದ್ದು ಗ್ರಾಮದ ಬಹುತೇಕರು ತಮ್ಮ ಜಮೀನುಗಳಿಗೆ ತೆರಳಲು ಇದೇ ರಸ್ತೆಯನ್ನು ಬಳಕೆ ಮಾಡುತ್ತಿದ್ದರು. ಈಗ ಏಕಾಏಕಿ ರಸ್ತೆ ಬಂದ್ ಮಾಡಿ ಇಲ್ಲಿ ರಸ್ತೆಯಿಲ್ಲ ಎನ್ನುತ್ತಿದ್ದಾರೆ. ಇನ್ನೂ ಗ್ರಾಮದ ನಕಾಶೆಯಲ್ಲಿಯೂ ಸ್ಪಷ್ಟವಾಗಿ ರಸ್ತೆ ತೋರಿಸಲಾಗಿದೆ. ಈಗ ರಸ್ತೆಯಿಲ್ಲ ಅಂದರೆ…
ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ. ಟಿ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾತ್ಮ ಗಾಂಧೀಜಿಯವರ ಆತ್ಮಚರಿತ್ರೆಯನ್ನು ವಿದ್ಯಾರ್ಥಿಗಳು ಓದಿ ಅವರ ತತ್ವಗಳನ್ನು ಅರಿಯಬೇಕು ಎಂದು ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ. ಟಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಆಯೋಸಿದ್ದ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.ದೇಶಕ್ಕಾಗಿ ಅನೇಕ ಸೈನಿಕರು ತಮ್ಮ ಪ್ರಾಣತ್ಯಾಗ ಮಾಡಿ ಹುತಾತ್ಮರಾಗುತ್ತಾರೆ ಮತ್ತು ಅನೇಕ ಸಂಕಟಗಳನ್ನು ಎದುರಿಸುತ್ತಾರೆ. ಅವರ ತತ್ವಗಳಲ್ಲಿ ಸತ್ಯ ಮತ್ತು ಅಹಿಂಸೆ ಪ್ರಮುಖವಾಗಿವೆ. ಗಾಂಧೀಜಿಯವರು ಹೇಗೆ ಹುತಾತ್ಮರಾದರು ಹಾಗೂ ಅವರ ಆತ್ಮಚರಿತ್ರೆಯ ಮಹತ್ವವನ್ನು ಅರ್ಥೈಸಲು, ಅವರ ಜೀವನವನ್ನು ಅಧ್ಯಯನ ಮಾಡುವುದು ಅವಶ್ಯಕ. ಅವರ ಜೀವನದ ಮೌಲ್ಯಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ, ಸಮರ್ಪಕ ಮತ್ತು ಶ್ರೇಷ್ಠ ಸಮಾಜವನ್ನು ನಿರ್ಮಿಸಬಹುದು ಎಂದರು.ಇದೇ ಸಂದರ್ಭದಲ್ಲಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ವಿದ್ಯಾರ್ಥಿನಿಯರು ಗಾಂಧೀಜಿಯವರ ಸತ್ಯ ಮತ್ತು ಅಹಿಂಸಾ ತತ್ವಗಳನ್ನು ಪಾಲಿಸಿ ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಮಹಾತ್ಮ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಇತ್ತೀಚೆಗೆ ಮನೆಗಳ್ಳತನ, ಸುಲಿಗೆ ಪ್ರಕರಣಗಳು ಮೀತಿ ಮೀರಿದ್ದು, ಇದರಿಂದ ಜನರು ಭಯದಲ್ಲಿ ದಿನ ಕಳೆಯುಂತ ಸ್ಥಿತಿ ಬಂದಿದೆ. ಅದು ಹೋಗಲಾಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜೈನಾಪುರ ಪುನರ್ವಸತಿ ಕೇಂದ್ರದಲ್ಲಿ ಮನೆಗೆ ನುಗ್ಗಿದ್ದ ದರೋಡೆಕೋರರು ತಡೆಯಲು ಬಂದ ಮನೆಯ ಮಾಲೀಕನಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆಯಿಂದ ಜನರಲ್ಲಿ ಭಯ ಸೃಷ್ಟಿ ಆಗಿದೆ. ಅನೇಕ ಬಡಾವಣೆ, ಕಾಲೊನಿಗಳಲ್ಲಿ ಮಧ್ಯರಾತ್ರಿ ನಾಲ್ಕೈದು ಜನರ ತಂಡ ಕಟ್ಟಿಕೊಂಡು ದರೋಡೆಕೋರರು ಓಡಾಡುತ್ತಿದ್ದಾರೆ ಎಂದು ಅನೇಕರು ದೂರು ನೀಡಿದ್ದಾರೆ.ಕೊಲೆ, ಸುಲಿಗೆ, ಕಳ್ಳತನದ ಘಟನೆಗಳಿಂದ ನಗರದಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಭಯಬೀತರಾಗಿದ್ದಾರೆ. ಭಯದಲ್ಲಿರುವ ಸಾರ್ವಜನಿಕರನ್ನು ಭಯ ಮುಕ್ತಗೊಳಿಸುವಂತೆ ಮಾಡುವುದು, ರಕ್ಷಣೆ ನೀಡುವುದು ಪೊಲೀಸ್ ಇಲಾಖೆಯ ಕರ್ತವ್ಯ. ನಗರದ ಎಲ್ಲ ಭಾಗಗಳಲ್ಲಿ ಹಾಗೂ ವಿಶೇಷವಾಗಿ ನಗರ ಹೊರವಲಯದಲ್ಲಿ ಹೊಸದಾಗಿ ಅಭಿವೃದ್ಧಿಗೊಂಡಿರುವ ಬಡಾವಣೆ,…
ರಾಷ್ಟ್ರೀಯ ಮಿಲಿಟರಿ ಶಾಲೆಗೆ ಆಯ್ಕೆಯಾದ ಎಕ್ಸಲಂಟ್ ಶಾಲೆ ವಿದ್ಯಾರ್ಥಿಗಳಿಗೆ ಸನ್ಮಾನ *ಉದಯರಶ್ಮಿ ದಿನಪತ್ರಿಕೆ* ವಿಜಯಪುರ: ರಾಷ್ಟ್ರೀಯ ಮಿಲಟರಿ ಶಾಲೆಗೆ ಮಕ್ಕಳನ್ನು ತಯಾರು ಮಾಡಿ ಕಳಿಸುವುದೆಂದರೆ ದೇಶವನ್ನು ಕಾಯುವುದಕ್ಕೆ ಯೋಧನನ್ನು ಸಜ್ಜು ಮಾಡಿ ಕಳಿಸಿದಂತೆ. ಅದರಲ್ಲೂ ಮಕ್ಕಳಲ್ಲಿ ನೀನು ಹುಟ್ಟಿರುವುದೇ ಜನನಿ ಹಾಗೂ ಜನ್ಮ ಭೂಮಿಯ ಋಣ ತೀರಿಸುವುದಕ್ಕೆಂದು ಹೇಳಿ ದೇಶಭಕ್ತಿಯನ್ನು ತುಂಬಿ ಕಳುಹಿಸುವುದು ಈ ದೇಶಕ್ಕೆ ನಾವು ನೀಡುವ ದೊಡ್ಡ ಕೊಡಗೆಯಾಗುತ್ತದೆ. ಅಂಥ ಕೊಡುಗೆಯನ್ನು ನೀಡುತ್ತಿರುವ ಎಕ್ಸಲಂಟ್‌ನ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ಅತ್ಯಂತ ಕಠಿಣ ಸ್ಫರ್ಧೆಯಿಂದ ಕೂಡಿರುವ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರಾಷ್ಟಿçÃಯ ಮಿಲಿಟರಿ ಶಾಲೆಗೆ ಒಬ್ಬ ವಿದ್ಯಾರ್ಥಿಯನ್ನು ಕಳುಹಿಸುವುದೇ ಕಷ್ಟಕರವಾಗಿರುವ ಕಾಲಘಟ್ಟದಲ್ಲಿ ಐದೈದು ವಿದ್ಯಾರ್ಥಿಗಳನ್ನು ಆಯ್ಕೆಯಾಗುವಂತ ತರಬೇತಿ ನೀಡುವುದೆಂದರೆ ಅಸಾಮಾನ್ಯವೇ ಸರಿ. ಇದರ ಮಧ್ಯದಲ್ಲಿ ಅಸಾಧ್ಯವನ್ನು ಸಾಧ್ಯವಾಗಿಸುತ್ತ ಹೆಜ್ಜೆ ಹಾಕುತ್ತಿರುವ ಎಕ್ಸಲಂಟ್ ಸಂಸ್ಥೆಯ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿಸಿದಂತಾಗಿದೆ ಎಂದು ಭೂಸೇನೆಯ ನಿವೃತ್ತ ಹವಾಲ್ದಾರ ಮತ್ತು ದ್ರೋಣಾ ಅಕಾಡೆಮಿಯ ಮುಖ್ಯಸ್ಥರಾದ ಕಲ್ಮೇಶ ಆಸಂಗಿ ಹೇಳಿದರು.ನಗರದ ಇಟ್ಟಂಗಿಹಾಳ ರಸ್ತೆಯಲ್ಲಿರುವ ಎಕ್ಸಲಂಟ್ ಕೋಚಿಂಗ್…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಶ್ವ ಕ್ಯಾನ್ಸರ್ ರೋಗ ದಿನವನ್ನು ಫೆ. 4 ರಂದು ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರ ಸಂಘ ಹಾಗೂ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ವೈಜ್ಞಾನಿಕ, ಶೈಕ್ಷಣಿಕ ಹಾಗೂ ಸಂಶೋಧನೆ ಸೊಸೈಟಿ ಸಂಯುಕ್ತಾಶ್ರಯದಲ್ಲಿ ನಾನಾ ಕಾರ್ಯಕ್ರಮ ಆಯೋಜಿಸಲಾಗಿದೆ.ಫೆ. 3ರಿಂದ ಫೆ. 8ರ ವರೆಗೆ ಸಪ್ತಾಹ ಆಚರಿಸಲಾಗುತ್ತಿದ್ದು, ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5ರ ವರೆಗೆ ಸಪ್ತಾಹದ ಅಂಗವಾಗಿ ಶಸ್ತ್ರಚಿಕಿತ್ಸೆ ಓಪಿಡಿ ನಂ.10 ರಲ್ಲಿ ಕ್ಯಾನ್ಸರ್ ರೋಗಗಳ ಉಚಿತ ತಪಾಸಣೆ ಶಿಬಿರ ನಡೆಯಲಿದೆ. ಅವಶ್ಯವಿರುವ ರೋಗಿಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಿ, ಉಚಿತ ಇಲ್ಲವೇ ರಿಯಾಯಿತಿ ದರದಲ್ಲಿ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗುವುದು. ವಿಜಯಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಜನತೆ ಶಿಬಿರದ ಸದುಪಯೋಗವನ್ನು ಪಡೆಯಬಹುದಾಗಿದೆ.ಫೆ. 4 ರಂದು ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ವಿಜಯಪುರದ ವೈದ್ಯಕೀಯ ಮಹಾವಿದ್ಯಾಲಯಗಳ ಸ್ನಾತಕ ಮತ್ತು…
ರಚನೆಡಾ.ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಹುಡುಕುತ್ತಿದ್ದೇನೆಶರಣರು ಕಂಡ ಕಲ್ಯಾಣಹೊಸ ನೆಲ ಜಲ ಆಕಾಶಗಾಳಿ ಬೆಳಕು ಸಿಗುತ್ತಿಲ್ಲಸಿಕ್ಕರೂಹೊಸ ಮನುಜರಗುರುತು ಸಿಗುತ್ತಿಲ್ಲಶರಣರ ರುಂಡ ಚೆಂಡಾಡಿದಖಡ್ಗ ಕಠಾರಿ ಚೂರಿಸಿಕ್ಕರೂ ಕೊಲೆಗಾರರಗುರುತು ಸಿಗುತ್ತಿಲ್ಲವಚನಗಳಿಗೆ ಕಿಚ್ಚುಹಚ್ಚಿದ ಹಿಲಾಲುದೀವಿಗೆ ಸಿಕ್ಕಿವೆ,ಕಟ್ಟುಗಳ ಕೆಂಡಕ್ಕೆಸುರುವಿದ ಮುಖಗಳುಸಿಗುತ್ತಿಲ್ಲಅಣ್ಣ ಸಿಗಬಹುದೆಂದುಹುಡುಕುತ್ತಿದ್ದೇನೆ ಕಲ್ಯಾಣವದೇವರ ಸಿಕ್ಕರೂಸಿಗಲಿಲ್ಲ ಬಸವಣ್ಣಅವರು ಕೊಡುವಪ್ರಸಾದ ಬೊನಕ್ಕೆತಟ್ಟೆಯೊಡ್ಡಿದೆಹುಗ್ಗಿ ಹೋಳಿಗೆ ಸಿಕ್ಕಿತುಸಿಗಲಿಲ್ಲ ಪ್ರಸನ್ನತೆಬಸವಣ್ಣನವರ ಕೊಂದವರೇಇಂದು ಅವನ ಪುರಾಣಪ್ರವಚನ ಮಾಡಿಹಾಡಿ ಹೊಗಳುವ ಕಾವಿಮಠಗಳು ಸಿಕ್ಕಿವೆ.ದಾರಿಯುದ್ದಕ್ಕೂಬಿಕ್ಕುವ ಧ್ವನಿ ಅಳುವ ಮಕ್ಕಳುಎಳೆಹೂಟಿಗೆ ಸಿಲುಕಿದರಕ್ತದ ಕಲೆಗಳು ಸಿಕ್ಕಿವೆಹುಡುಕುತ್ತೀದ್ದೇನೆಕಲ್ಯಾಣ ಅನುಭವ ಮಂಟಪಬಸವನ ಮಹಾಮನೆ
ಲೇಖನವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಇನ್ನೇನು ಕೆಲವೇ ದಿನಗಳಲ್ಲಿ ಪರೀಕ್ಷೆಗಳು ಪ್ರಾರಂಭವಾಗುತ್ತವೆ.. ಮನೆ ಮನೆಗಳಲ್ಲೂ ಬಿಸಿಯಾದ ವಾತಾವರಣ. ಟಿವಿ ವೀಕ್ಷಣೆ ಮತ್ತು ಮೊಬೈಲ್ ಗಳಿಗೆ ಕಡಿವಾಣ, ಹೊರಗಿನ ಸುತ್ತಾಟಗಳು ಬಂದ್, ಇದುವರೆಗೂ ಹಾಜರಾಗುತ್ತಿದ್ದ ಪಠ್ಯೇತರ ಚಟುವಟಿಕೆಗಳ ತರಗತಿಗಳಿಗೆ ಕಳಿಸುವುದನ್ನು ಕೂಡ ನಿಲ್ಲಿಸಿ ಬಿಡುವ ಪಾಲಕರು.. ಒಟ್ಟಿನಲ್ಲಿ ಅಘೋಷಿತ ಬಂದ್ ನ ವಾತಾವರಣ. ಡೋಂಟ್ ಡು ದಿಸ್, ಡೋಂಟ್ ಡು ಥಟ್ ಎಂಬ ಪಾಲಕರ ಆಜ್ಞೆಗಳಿಗೆ ಮಕ್ಕಳು ಹೂ ಆರ್ ಯು ಟು ಟೆಲ್ ಮಿ ದಾಟ್…ಇಟ್ಸ್ ಮೈ ಲೈಫ್ ಎಂದು ಮರು ಉತ್ತರ ನೀಡುವ… ಕೊನೆಗೆ ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ದೂಷಿಸುವುದು ಪ್ರತಿ ಮನೆಗಳಲ್ಲಿ ನಡೆಯುತ್ತಿರುತ್ತದೆ.’ಯುದ್ಧಕಾಲೇ ಶಸ್ತ್ರಾಭ್ಯಾಸ’ ಎಂಬಂತೆ ಮೈಚಳಿ ಕೊಡವಿಕೊಂಡು ಪಾಲಕರು, ಶಿಕ್ಷಕರು ಎದ್ದೇಳುವರು. ಪರೀಕ್ಷೆ ಬಂತು ಓದಿಕೊಳ್ಳಿ ಎಂದು ತಂದೆ ತಾಯಿಯರ ವರಾತ, ಮಕ್ಕಳ ಅವಗಣನೆ, ಶಾಲೆಯಲ್ಲಿ ಎಲ್ಲ ಪಾಠಗಳು ಪ್ರಶ್ನೋತ್ತರಗಳು ಪುನರಾವರ್ತನೆಯಾಗಿ ಮಕ್ಕಳು ಓದಿ ಓದಿ ರೋಸಿ ಹೋಗುವುದರಲ್ಲಿ ಸಂಶಯವೇ ಇಲ್ಲ. ಮತ್ತೆ…
ಬಿಜೆಪಿ ಪಕ್ಷದ ರಾಜ್ಯ ಚುನಾವಣಾಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರಿಂದ ನೂತನ ಅಧ್ಯಕ್ಷರ ಹೆಸರು ಘೋಷಣೆ ಬೆಂಗಳೂರು: ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಭಾರತೀಯ ಜನತಾ ಪಾರ್ಟಿ ರಾಜ್ಯದ 23 ಸಂಘಟನಾ ಜಿಲ್ಲೆಗಳಿಗೆ ಪಕ್ಷದ ಅಧ್ಯಕ್ಷರನ್ನು ಘೋಷಿಸಿದೆ.ಮೈಸೂರು ನಗರಕ್ಕೆ ಚಾಮರಾಜ ಶಾಸಕ ಎಲ್.ನಾಗೇಂದ್ರ, ಬೆಂಗಳೂರು ಕೇಂದ್ರಕ್ಕೆ ಮಾಜಿ ಸಚಿವ ರಾಮಚಂದ್ರೇಗೌಡ ಅವರ ಪುತ್ರ ಎ.ಆರ್.ಸಪ್ತಗಿರಿಗೌಡ, ಉತ್ತರ ಕನ್ನಡಕ್ಕೆ ನಾರಾಯಣ ಶ್ರೀನಿವಾಸ ಹೆಗಡೆ, ಶಿವಮೊಗ್ಗಕ್ಕೆ ಎನ್.ಕೆ.ಜಗದೀಶ್, ಬೆಳಗಾವಿಗೆ ಗೀತಾ ಸುತಾರ್, ಕಲಬುರಗಿ ನಗರಕ್ಕೆ ಚಂದ್ರಕಾಂತ ಬಿ.ಪಾಟೀಲ್, ಕಲಬುರಗಿಗೆ ಅಶೋಕ್ ಬಗಲಿ. ಗ್ರಾಮಾಂತರ ಹಾಗೂ ಬೀದರ್‌ಗೆ ಸೋಮನಾಥ ಪಾಟೀಲ ಆಯ್ಕೆಯಾಗಿದ್ದಾರೆ.ಪಟ್ಟಿಯಲ್ಲಿ ಸಿ.ಎಸ್.ನಿರಂಜನಕುಮಾರ್ (ಚಾಮರಾಜನಗರ), ಸತೀಶ್ ಕುಂಪಲ (ದಕ್ಷಿಣ ಕನ್ನಡ), ದೇವರಾಜ ಶೆಟ್ಟಿ (ಚಿಕ್ಕಮಗಳೂರು), ತಿಪ್ಪಣ್ಣ ಮಜ್ಜಗಿ (ಹುಬ್ಬಳ್ಳಿ-ಧಾರವಾಡ), ನಿಂಗಪ್ಪ ಡಿ.ಸುತಗಟ್ಟಿ (ಧಾರವಾಡ ಗ್ರಾಮಾಂತರ), ಸುಭಾಷ್ ದುಂಡಪ್ಪ ಪಾಟಿ (ಬೆಳಗಾವಿ ಗ್ರಾಮಾಂತರ), ಸತೀಶ್ ಅಪ್ಪಾಜಿಗೋಳ ಇದ್ದಾರೆ. ಚಿಕ್ಕೋಡಿ), ಬಸವರಾಜಪ್ಪಗೌಡ ವಿ (ಯಾದಗಿರಿ), ದಡೇಸಾಗೂರು ಬಸವರಾಜ್ (ಕೊಪ್ಪಳ), ಅನಿಲ್ ಕುಮಾರ್ ಮೋಕಾ (ಬಳ್ಳಾರಿ), ಸಂಜೀವ್ ರೆಡ್ಡಿ (ವಿಜಯನಗರ),…
ಉದಯರಶ್ಮಿ ದಿನಪತ್ರಿಕೆ ಧಾರವಾಡ: ಉತ್ತರದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ದಕ್ಷಿಣಕ್ಕೆ ತಂದ, ಅರಮನೆಯ ಸಂಗೀತಕ್ಕೆ ಗುರು ಮನೆಯ ಗೌರವವನ್ನು ದೊರಕಿಸಿಕೊಟ್ಟ, ವಚನ ಸಾಹಿತ್ಯವನ್ನು ಮೊಟ್ಟಮೊದಲಿಗೆ ಸಂಗೀತಕ್ಕೆ ಅಳವಡಿಸಿ ಹಾಡಿದ, ಗದಗು ಸಂಗೀತದ ಗದ್ದಿಗೆಯನ್ನಾಗಿ ಮಾಡಿದ, ಪಂಡಿತ ಪಂಚಾಕ್ಷರಿ ಗವಾಯಿಗಳವರ ಜಯಂತೋತ್ಸವವು, ಗದುಗಿನ ಕಲಾ ವಿಕಾಸ ಪರಿಷತ್ತು, ಧಾರವಾಡದ ಡಾ. ದ. ರಾ. ಬೇಂದ್ರೆ ಭವನದಲ್ಲಿ ಫೆಬ್ರವರಿ ೦೨ ರಂದು ಹಮ್ಮಿಕೊಂಡಿದೆ. ಬೆಳಿಗ್ಗೆ ೧೦-೩೦ ರಿಂದ ರಾತ್ರಿ ೮ ಗಂಟೆಯವರೆಗೆ ನಡೆಯುವ ಒಂದು ದಿನದ ಈ ಸಮಾರೋಹದ ಉದ್ಘಾಟನೆಯನ್ನು, ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಗಾಯಕರಾದ ಡಾ. ಶಾಂತಾರಾಮ ಹೆಗಡೆ ಇವರು ಉದ್ಘಾಟನೆ ಮಾಡಲಿದ್ದಾರೆ. ಧಾರವಾಡದ ಹಿರಿಯ ರಂಗಕರ್ಮಿ ಡಾ. ಶಶಿಧರ ನರೇಂದ್ರ ಇವರು ಸಮಾರಂಭದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಧಾರವಾಡದ ಶ್ರೀ ಸಾಯಿ ಪ. ಪೂ. ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾಲಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕರು ಆಗಿರುವ ಡಾ. ವೀಣಾ ಬಿರಾದಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶ್ರೀ ಸಿ. ಕೆ. ಹೆಚ್. ಶಾಸ್ತ್ರೀ…
