ಉದಯರಶ್ಮಿ ದಿನಪತ್ರಿಕೆ
ಚಡಚಣ: ರಂಗು ರಂಗಿನ ಹೋಳಿ ಹಬ್ಬ, ಎಲ್ಲರ ಮನ-ಮನಸ್ಸುಗಳನ್ನು ಪುಳಕಿತಗೊಳಿಸುವ ಹಬ್ಬವಾಗಿದೆ. ಹೋಳಿ ಹಬ್ಬ ಎನ್ನುವುದು ಭಾರತದ ಸಂಸ್ಕೃತಿಯ ಸಂಕೇತವಾಗಿದೆ ಎಂದು ಶಿಕ್ಷಕ ಎಸ್.ಜೆ.ಬಿಜ್ಜರಗಿ ಹೇಳಿದರು.
ರೇವತಗಾಂವ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶುಕ್ರವಾರದಂದು ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಲಾಯಿತು.
ಈ ವೇಳೆಯಲ್ಲಿ ಮಾತನಾಡಿದ ಅವರು. ಭಾರತದ ಹೋಳಿ ಹಬ್ಬವು ಪ್ರಪಂಚದ ಅತ್ಯಂತ ಸುಂದರವಾದ ಆಚರಣೆಗಳಲ್ಲಿ ಒಂದಾಗಿದೆ. ಒಬ್ಬರು ಇನ್ನೊಬ್ಬರಿಗೆ ಬಣ್ಣದಿಂದ ಹೋಳಿ ಹಾಕುವುದು, ಮೈಗೆಲ್ಲ ಬಣ್ಣದ ಕಲರವು ಈ ದಿನ ಹೋಳಿ ಹಬ್ಬಕ್ಕೆ ಕಳೆಯನ್ನು ನೀಡುತ್ತದೆ ಎಂದರು.
ಈ ಸಂದರ್ಭದಲ್ಲಿ ಬಿ.ಎಸ್.ಪೂಜಾರಿಯವರು ಮಾತನಾಡುತ್ತ. ಸಂಭ್ರಮದ ಕ್ಷಣವನ್ನು ಹೋಳಿ ದಿನದಂದು ಆಚರಣೆ ಮಾಡುತ್ತಾರೆ. ಇದರ ಖುಷಿಗೆ ಮೀತಿಯಿಲ್ಲ. ಹೋಳಿ ಹಬ್ಬಕ್ಕೆ ಜನಸಾಗರವನ್ನು ಸೇರುವ ಹಬ್ಬ, ಭಾರತದಲ್ಲಿ ಇಂತಹ ಆಚರಣೆಗಳನ್ನು ಮಾತ್ರ ಕಾಣಬಹುದು ಎಂಬುದಕ್ಕೆ ಈ ಹೋಳಿ ಹಬ್ಬ ಸಾಕ್ಷಿಯಾಗಿದೆ ಎಂದು ಹೇಳಿದರು.
ಈ ವೇಳೆಯಲ್ಲಿ ಎಸ್.ಡಿ.ಆದಿಗೊಂಡೆ, ಎಂ.ಕೆ.ಬಗಲಿ, ಪಿ.ಎ.ವಾಲಿಕಾರ, ಎ.ಎಚ್.ಬಗಲಿ, ಹೀನಾ ಸೈಯದ, ಸುಹಾಸಿನಿ ನಡಗೇರಿಯವರುಗಳು ಸೇರಿದಂತೆ ಶಿಕ್ಷಕ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.