ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಆಧುನಿಕ ಯುಗದಲ್ಲಿ ಜಾತಿಯಂಬುವುದು ಒಂದು ಪಿಡುಗಾಗಿ ಬೃಹತ್ ಹೆಮ್ಮರವಾಗಿ ಬೆಳೆದಿದೆ. ಇಂತಹ ಜಾತಿ ಸಂಕೋಲೆಯಿಂದ ಹೊರಬಂದು ನಾವೇಲ್ಲರೂ ಒಂದಾಗಿ ಒಗ್ಗಟಾಗಿ ಜೀವಿಸಬೇಕಾಗಿದೆ. ಆಗ ಮಾತ್ರ ಸಮಾಜದಲ್ಲಿ ಎಲ್ಲರು ನೆಮ್ಮದಿ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಮಾನವನ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಧೈಯ ವಾಕ್ಯದೊಂದಿಗೆ ಇಂದು ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸುತ್ತಿದ್ದೇವೆ. ಯಾವುದೇ ಮಹಾಪುರುಷರ ಜಯಂತಿಗಳು ಹಾಗೂ ಉತ್ಸವಗಳನ್ನ ಒಂದೇ ಜಾತಿಯಿಂದ ಆಚರಿಸುವುದಾಗಬಾರದು ಅಂಬೇಡ್ಕರ್ ಎಂದರೆ ಬರಿ ದಲಿತರೂ, ಸಂಗೊಳ್ಳಿ ರಾಯಣ್ಣ ಹಾಲುಮತದ ಸಮಾಜ, ಶಿವಾಜಿ ಜಯಂತಿಯನ್ನು ಬರಿ ಮರಾಠ ಸಮುದಾಯ ಹೀಗೆ ಎಲ್ಲ ಶರಣರು,ಕ್ರಾಂತಿಕಾರಿಗಳು ಸೇರಿದಂತೆ ನಮ್ಮ ಹಿಂದು ಧರ್ಮದಲ್ಲಿ ನೂರಾರು ಜಾತಿ ಪಂಗಡಗಳು ಬರುತ್ತವೆ ಈ ಜೊತೆಯಲ್ಲಿ ಏಕತೆಯನ್ನು ಕಾಣುವುದೇ ನಮ್ಮ ಹಿಂದೂ ಧರ್ಮದ ಸಂಕೇತ ಎಲ್ಲರೂ ಎಲ್ಲ ಸಮಾಜದ ಜಯಂತಿಗಳನ್ನು ಉತ್ಸವಗಳನ್ನ ಎಲ್ಲರೂ ಸೇರಿ ಆಚರಿಸುವ ಕೆಲಸವಾಗಬೇಕು ಎಂದರು.
ವೇದಿಕೆ ಮೇಲೆ ಹಿರೇಮಠದ ಪಡದಯ್ಯ ಸ್ವಾಮಿಗಳು, ಕೈಲಾಸನಾಥ ಸ್ವಾಮಿಗಳು, ಸಿ ಎಂ ಗಣಕುಮಾರ, ಶಂಕ್ರಯ್ಯ ಚಿಕ್ಕಮಠ, ಚಿನ್ನಪ್ಪ ಗಿಡ್ಡಪ್ಪಗೊಳ, ಸುರೇಶ ಕೆರಿಗೊಂಡ, ಸಿದ್ದು ಮೇಟಿ, ಈರಯ್ಯ ಮಠಪತಿ, ಶ್ರೀಶೈಲ ಕಂಬಿ ಶೇರಿದಂತೆ ಇತರರು ಇದ್ದರು.